- Home
- Karnataka Districts
- Bengaluru Urban
- ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ಟಿ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ..!
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ಟಿ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ..!
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪಾಸಣೆ ನೆಪದಲ್ಲಿ ಅಸಭ್ಯವಾಗಿ ಸ್ಪರ್ಶಿಸಿ ತಬ್ಬಿಕೊಂಡು ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿದೇಶಿ ಮಹಿಳೆಯೊಬ್ಬರಿಗೆ ವಿಮಾನಯಾನ ಸಂಸ್ಥೆಯ ಗ್ರೌಂಡ್-ಹ್ಯಾಂಡ್ಲಿಂಗ್ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಮೊಹಮ್ಮದ್ ಅಫ್ಘಾನ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ತನ್ನನ್ನು ತಪಾಸಣೆಯ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಲ್ಲದೇ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿ ಕೊನೆ ಧನ್ಯವಾದ ಹೇಳಿದ್ದಾನೆ ಎಂದು ದಕ್ಷಿಣ ಕೊರಿಯಾದ 32 ವರ್ಷದ ಉದ್ಯಮಿ ಆಗಿರುವ ಮಹಿಳೆಯೊಬ್ಬರು ದೂರು ನೀಡಿದ ನಂತರ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ತಪಾಸಣೆಯ ನೆಪದಲ್ಲಿ ಲೈಂಗಿಕ ಕಿರುಕುಳ
ನವೆಂಬರ್‌ನಲ್ಲಿ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿದ್ದ ಮಹಿಳೆ, ತನ್ನ ತಾಯ್ನಾಡಿಗೆ ಮರಳುತ್ತಿದ್ದಾಗ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಅಂತರರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಏರ್‌ಪೋರ್ಟ್‌ನಲ್ಲಿ ಗ್ರೌಂಡ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಮ್ಮನಹಳ್ಳಿಯ 25 ವರ್ಷದ ಮೊಹಮ್ಮದ್ ಅಫ್ಫಾನ್ ಅಹ್ಮದ್ ಎಂಬಾತನಿಗೆ ಪ್ರಯಾಣಿಕರಿಗೆ ತಪಾಸಣೆ ನಡೆಸಲು ಅಧಿಕಾರವಿರಲಿಲ್ಲ, ಆದರೂ ಆತ ಬೆಳಗ್ಗೆ 10.45ರ ಸುಮಾರಿಗೆ ಆಕೆ ಕರೆ ಮಾಡಿ ತಾನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಎಂದು ಹೇಳಿಕೊಂಡು ಆಕೆಯ ಬೋರ್ಡಿಂಗ್ ಪಾಸ್ ಅನ್ನು ಪರಿಶೀಲಿಸಿದ್ದಾನೆ. ಅಲ್ಲದೇ ಆಕೆಯ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದಾನೆ.
ಚೆಕ್-ಇನ್ ಬ್ಯಾಗೇಜ್‌ನಲ್ಲಿ ಸಮಸ್ಯೆ ಇದೆ ಎಂದು ಹೇಳಿ ಹಸ್ತಚಾಳಿತ ತಪಾಸಣೆಗೆ ಕರೆದ ಆರೋಪಿ
ಆಕೆಯ ಲಗೇಜನ್ನು ಸಾಮಾನುಗಳನ್ನು ಮರುಪರಿಶೀಲಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಆಕೆಗೆ ಹೇಳಿದ ಆರೋಪಿ, ಹಸ್ತಚಾಲಿತ ತಪಾಸಣೆಗೆ(manual frisking)ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದಾನೆ ನಂತರ ಆಕೆಯನ್ನು ಪುರುಷರ ಶೌಚಾಲಯದ ಬಳಿ ಕರೆದೊಯ್ದ ಆತ, ಹಸ್ತಚಾಲಿತ ತಪಾಸಣೆಯ ನೆಪದಲ್ಲಿ, ಆಕೆಯ ಎದೆಯನ್ನು ಹಲವು ಬಾರಿ ಮುಟ್ಟಿ, ತಿರುಗಲು ಹೇಳಿ ನಂತರ ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಪಾಸಣೆ ಮತ್ತು ವಲಸೆ ತಪಾಸಣೆಗಳನ್ನು ತೆರವುಗೊಳಿಸಿದ ನಂತರ ಈ ಘಟನೆ ನಡೆದಿದೆ ಎಂದು ಆಕೆ ಈ ಸಂಬಂಧ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆ ವಿರೋಧಿಸಿದಾಗ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ ಅರೋಪಿ
ತಪಾಸಣೆಗೆಂದು ಕರೆದು ಆತ ಅಸಭ್ಯವಾಗಿ ವರ್ತಿಸಿದಾಗ ಆ ದಕ್ಷಿಣ ಕೊರಿಯಾ ಮಹಿಳೆ ವಿರೋಧಿಸಿದ್ದಾಳೆ. ಈ ವೇಳೆ ಆಕೆಯನ್ನು ತಬ್ಬಿಕೊಂಡ ಆರೋಪಿ ಆಕೆಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಹೋಗುವಂತೆ ಹೇಳಿದ್ದಾನೆ. ಮಹಿಳೆಯ ದೂರಿನ ಮೇರೆಗೆ, ವಿಮಾನ ನಿಲ್ದಾಣದ ಅಧಿಕಾರಿಗಳು ಏರ್ ಇಂಡಿಯಾದ ನೆಲಮಟ್ಟದ ಸಿಬ್ಬಂದಿ ಅಹ್ಮದ್ ಅವರನ್ನು ವಶಕ್ಕೆ ಪಡೆದು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರಿಗೆ ಮಾಹಿತಿ ನೀಡಿದರು.
ಪ್ರಯಾಣಿಕರನ್ನು ದೈಹಿಕವಾಗಿ ಪರೀಕ್ಷಿಸುವ ಅಧಿಕಾರ ಅಹ್ಮದ್‌ಗೆ ಇಲ್ಲ
ಪ್ರಯಾಣಿಕರನ್ನು ದೈಹಿಕವಾಗಿ ಪರೀಕ್ಷಿಸುವ ಅಧಿಕಾರ ಅಹ್ಮದ್‌ಗೆ ಇಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆತನಿಗೆ ಅನುಮಾನ ಬಂದರೆ, ವಲಸೆ ಅಥವಾ ಸಿಐಎಸ್‌ಎಫ್ ಸಿಬ್ಬಂದಿಗೆ ಆತ ಪ್ರಯಾಣಿಕರಿಗೆ ಮಾಹಿತಿ ನೀಡುವುದು ಮತ್ತು ಅಧಿಕೃತ ಮಹಿಳಾ ಸಿಬ್ಬಂದಿಯಿಂದ ತಪಾಸಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ಮಹಿಳೆಯ ಹೇಳಿಕೆಯನ್ನು ದೃಢಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಅಹ್ಮದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

