ತಾಂತ್ರಿಕ ದೋಷದಿಂದ IAF ವಿಮಾನ ಪತನ, ಪ್ರಯಾಗರಾಜ್‌ನಲ್ಲಿ ವಿಮಾನ ಪತನಗೊಂಡಿದೆ. ಸದ್ಧುಕೇಳಿ ಓಡೋಡಿ ಬಂದ ಸ್ಥಳೀಯರು ಸಾಹಸ ಮೆರೆದಿದ್ದಾರೆ. ಧೈರ್ಯದಿಂದ ಇಬ್ಬರು ಪೈಲೆಟ್ ರಕ್ಷಿಸಿದ್ದಾರೆ
ಪ್ರಯಾಗರಾಜ್ (ಜ.22) ಭಾರತೀಯ ವಾಯುಸೇನೆಯ ಲಘು ವಿಮಾನ ಪತನಗೊಂಡಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ಪತನಗೊಂಡಿದೆ. ವಾಯುಸೇನೆಯ ತರಬೇತಿ ವಿಮಾನ ಇದಾಗಿದ್ದು, ತಾಂತ್ರಿಕ ದೋಷದಿಂದ ಪತನಗೊಂಡಿದೆ. ಇಬ್ಬರು ಪೈಲೆಟ್ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ವಿಮಾನ ಕೆಸರು, ಎಲೆಗಳು ತುಂಬಿದ ಕೆರೆಯಲ್ಲಿ ಪತನಗೊಂಡಿದೆ. ಇದರಿಂದ ಅಪಾಯದ ಪ್ರಮಾಣ ಕಡಿಮೆಯಾಗಿದೆ. ವಿಮಾನ ಕೆರೆಯಲ್ಲಿ ಪತನವಾಗುತ್ತಿದ್ದಂತೆ ಭಾರಿ ಶಬ್ದ ಕೇಳಿಸಿದೆ. ಹೀಗಾಗಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರ ವಾಯುಸೇನೆಯ ಇಬ್ಬರು ಪೈಲೆಟ್‌ಗಳನ್ನು ರಕ್ಷಿಸಲಾಗಿದೆ.
ವಿಮಾನದ ಒಳಗೆ ಪೈಲೆಟ್ ಸಿಲುಕಿಕೊಂಡಿದ್ದರು
ವಾಯು ಸೇನೆ ವಿಮಾನ ದೊಡ್ಡ ಕೆರೆಯಲ್ಲಿ ಪತನಗೊಂಡಿದೆ. ಭಾರಿ ಶಬ್ದ ಕೇಳಿಸಿದ ಕಾರಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಕೆರೆಯ ಮಧ್ಯಭಾಗದಲ್ಲಿ ವಿಮಾನ ನಿಧಾನವಾಗಿ ಮುಳುಗಲು ಆರಂಭಿಸಿದೆ. ಕೆಸರು ನೀರು ತುಂಬಿದ ಕೆರೆಯಾಗಿದ್ದ ಕಾರಣ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿಲ್ಲ. ಇಷ್ಟೇ ಅಲ್ಲ ವಿಮಾನದೊಳಗಿನ ಪೈಲೆಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪತನಗೊಂಡ ವಿಮಾನದೊಳಗೆ ಪೈಲೆಟ್ ಲಾಕ್ ಆಗಿದ್ದರು. ಹೊರಬರಲು ಸಾಧ್ಯವಾಗಿಲ್ಲ. ಶಬ್ದಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕೆಸರು ನೀರು ತುಂಬಿದ ಕೆರೆಯ ಮಧ್ಯಭಾಗಗಕ್ಕೆ ತೆರಳಿ ಇಬ್ಬರು ಪೈಲೆಟ್‌ಗಳನ್ನು ವಿಮಾನದಿಂದ ಸುರಕ್ಷಿತವಾಗಿ ರಕ್ಷಿಸಿ ಹೊರ ತಂದಿದ್ದಾರೆ. ಬಳಿಕ ಇಬ್ಬರು ಪೈಲೆಟ್‌ಗಳನ್ನು ಕೆರೆಯ ದಡ ಸೇರಿಸಿದ್ದಾರೆ.
ವಾಯುಸೇನೆ ಅಧಿಕಾರಗಳ ಆಗಮನ
ಮಾಹಿತಿ ತಿಳಯುತ್ತಿದ್ದಂತೆ ವಾಯುಸೇನೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಕೆರೆಯ ಮಧ್ಯಭಾಗದಲ್ಲಿ ಮುಳುಗುತ್ತಿದ್ದ ವಾಯುಸೇನೆಯ ವಿಮಾನವನ್ನು ಹಗ್ಗದ ಸಹಾಯದಿಂದ ದಡಕ್ಕೆ ಎಳೆಯಲಾಗಿದೆ. ಸತತ ಪ್ರಯತ್ನಗಳ ಬಳಿಕ ವಿಮಾನವನ್ನು ದಡಕ್ಕೆ ಎಳೆದು ತಂದಿದ್ದಾರೆ.
ತಾಂತ್ರಿಕ ಸಮಸ್ಯೆ ಕಾರಣ ತುರ್ತು ಲ್ಯಾಂಡಿಂಗ್
ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಇಬ್ಬರು ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಮುಂದಾಗಿದ್ದಾರೆ. ಮೈದಾನದಲ್ಲಿ ಲ್ಯಾಂಡಿಗೆ್ ಮಾಡಿದರೆ ಪ್ರಾಣಾಪಾಯದ ಸಾಧ್ಯತೆ ಹೆಚ್ಚಿರುವ ಕಾರಣ ಕೆರೆಯಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಹೀಗಾಗಿ ಪೈಲೆಟ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆದರೆ ಸ್ಥಳೀಯರು ತಕ್ಕ ಸಮಯಕ್ಕೆ ಧಾವಿಸಿದ ಕಾರಣ ಕೆಸರು ನೀರಿನಲ್ಲಿ ಮುಳುಗಿ ಪ್ರಾಣಪಾಯವಾಗುವುದನ್ನು ತಪ್ಪಿಸಿದ್ದಾರೆ. ಸ್ಥಳೀಯರ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ವಾಯುಸೇನೆ ಅಧಿಕಾರಿಗಳು ವಿಮಾನ ಪತನ ಕುರಿತು ತನಿಖೆ ಆರಂಭಿಸಿದ್ದಾರೆ.


