ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಗೆ ಬಿರಿಯಾನಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಲೆ ಮಾಡಿದ್ದಾಳೆ. ನಂತರ ಇದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದರೂ, ಮೃತನ ಸ್ನೇಹಿತರ ಅನುಮಾನದಿಂದಾಗಿ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ಹೈದರಾಬಾದ್: ಪ್ರಿಯಕರನ ಸಹಾಯ ಪಡೆದು ಗಂಡನ ಉಸಿರು ನಿಲ್ಲಿಸಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನ ದುಗ್ಗಿರಾಲ ಮಂಡಲದ ಚಿಲುವೂರು ಗ್ರಾಮದಲ್ಲಿ ನಡೆದಿದೆ. ಕೊ*ಲೆಯ ನಂತರ ಸಹಜ ಸಾವು ಎಂದು ಬಿಂಬಿಸಲು ಮಹಿಳೆ ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿ ಲೋಕಂ ಶಿವ ನಾಗರಾಜು ಆಗಿದ್ದು, ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದರು. 2007 ರಲ್ಲಿ ಲಕ್ಷ್ಮಿ ಮಾಧುರಿ ಎಂಬಾಕೆಯನ್ನು ನಾಗರಾಜು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಮಂಗಳಗಿರಿ ಗ್ರಾಮೀಣ ಸಿಐ ವೆಂಕಟಬ್ರಹ್ಮಮ್ ಮತ್ತು ದುಗ್ಗಿರಾಲ ಎಸ್‌ಐ ವೆಂಕಟ ರವಿ ಹೇಳಿದ್ದಾರೆ.

ನಾಗರಾಜು ಪತ್ನಿ ಲಕ್ಷ್ಮೀ ಮಾಧುರಿ ವಿಜಯವಾಡದ ಸಿನಿಮಾ ಥಿಯೇಟರ್ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಸತ್ತೇನಪಲ್ಲಿ ನಿವಾಸಿ ಕಾರ್ ಚಾಲಕನಾಗಿದ್ದ ಗೋಪಿ ಎಂಬಾತನ ಪರಿಚಯವಾಗಿದೆ. ಗಂಡನಿದ್ರೂ ಗೋಪಿ ಜೊತೆ ಮಾಧುರಿ ಅಕ್ರಮ ಸಂಬಂಧ ಹೊಂದಿದ್ದಳು.

ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಉಳಿದುಕೊಂಡಿದ್ದ!

ಅಕ್ರಮ ಸಂಬಂಧ ಹಿನ್ನೆಲೆ ಗಂಡನಿಗೆ ಈರುಳ್ಳಿ ವ್ಯಾಪಾರ ತಡೆದ ಮಾಧುರಿ, ಆತನನ್ನ ಕೆಲಸಕ್ಕಾಗಿ ಹೈದರಾಬಾದ್‌ಗೆ ಕಳುಹಿಸುತ್ತಾಳೆ. ಆದ್ರೆ ನಾಗರಾಜು ಹೈದರಾಬಾದ್‌ನಿಂದ ಬಂದು ಚಿಲುವೂರಿನಲ್ಲಿಯೇ ಉಳಿದುಕೊಂಡಿದ್ದನು. ಇಂದು ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.

ಬಿರಿಯಾನಿಯಲ್ಲಿ ನಿದ್ದೆಮಾತ್ರೆ ಮಿಕ್ಸ್!

ಜನವರಿ 18ರಂದು ಮಾಧುರಿ ಮನೆಯಲ್ಲಿ ಬಿರಿಯಾನಿ ಮಾಡಿದ್ದಾನೆ. ಬಿರಿಯಾನಿಯಲ್ಲಿ 20 ನಿದ್ದೆಮಾತ್ರೆ ಸೇರಿಸಿದ್ದರಿಂದ ಇದನ್ನು ತಿಂದ ನಾಗರಾಜು ನಿದ್ದೆಗೆ ಜಾರಿದ್ದಾನೆ. ನಾಗರಾಜು ಗಾಢನಿದ್ದೆಯಲ್ಲಿದ್ದಾಗ ರಾತ್ರಿ ಸುಮಾರು 11.30ಕ್ಕೆ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ ಇಬ್ಬರು ಪ್ಲಾನ್ ಮಾಡಿ ನಾಗರಾಜುವಿನ ಉಸಿರು ನಿಲ್ಲಿಸಿದ್ದಾರೆ.

ನಾಗರಾಜು ಎದೆ ಮೇಲೆ ಗೋಪಿ ಕುಳಿತು ದೇಹ ಅಲ್ಲಾಡದಂತೆ ಹಿಡಿದಿದ್ದಾನೆ. ಮಾಧುರಿ ದಿಂಬಿನಿಂದ ಉಸಿರುಗಟ್ಟಿಸಿ ಗಂಡನನ್ನು ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಾಗರಾಜು ಶವದ ಪಕ್ಕವೇ ಇಬ್ಬರು ಅಶ್ಲೀಲ ಸಿನಿಮಾಗಳನ್ನು ನೋಡಿದ್ದಾರೆ. ನಾಗರಾಜು ಸಾವು ಖಚಿತವಾಗುತ್ತಿದ್ದಂತೆ ಗೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ನೆರೆಹೊರೆಯವರನ್ನು ಎಚ್ಚರಗೊಳಿಸಿ ಗಂಡ ಸಾವನ್ನಪ್ಪಿರುವ ವಿಷಯವನ್ನು ಮಾಧುರಿ ತಿಳಿಸಿದ್ದಾಳೆ.

ಕಿವಿ, ಮೂಗಿನಲ್ಲಿ ರಕ್ತಸ್ರಾವ ಗಮನಿಸಿದ ನಾಗರಾಜು ಗೆಳೆಯರು

ನಾಗರಾಜು ಮತ್ತು ಮಾಧುರಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಾಧುರಿಯ ಅಕ್ರಮ ಸಂಬಂಧ ವಿಷಯ ತಿಳಿದ ಸ್ಥಳೀಯರಿಗೆ ನಾಗರಾಜು ಸಾವಿನ ಬಗ್ಗೆ ಆರಂಭದಲ್ಲಿಯೇ ಅನುಮಾನ ವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆ ವೇಳೆ ಮೂಗು ಮತ್ತು ಕಿವಿಯಲ್ಲಿ ರಕ್ತ ಬಂದಿರೋದನ್ನು ನಾಗರಾಜು ಗೆಳೆಯರು ಆತನ ತಂದೆಗೆ ವಿಷಯ ತಿಳಿಸಿದ್ದಾರೆ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಾಗರಾಜು ತಂದೆ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು. ಅಂತ್ಯಕ್ರಿಯೆ ನಿಲ್ಲಿಸಿ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ: ಮೊದಲ ಹೆಂಡ್ತಿ ನನ್ನ ಕಸಿನ್​, 2ನೆಯವ್ಳು ರಾಂಗ್​ ನಂಬರ್​, 3ನೇಯವ್ಳು ಅವಳ ಫ್ರೆಂಡ್, ಕೋಪ ಬಂದಾಗ 4ನೆಯವ್ಳು!

ಮರಣೋತ್ತರ ಶವ ಪರೀಕ್ಷೆಯಲ್ಲಿ ಪಕ್ಕೆಲುಬುಗಳು ಮುರಿದಿರುವುದು ಮತ್ತು ಉಸಿರುಗಟ್ಟಿ ಸಾವನ್ನಪ್ಪಿರುವುದು ದೃಢವಾಗಿದೆ. ಅನುಮಾನದ ಮೇಲೆ ಮಾಧುರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಪ್ರಿಯಕರ ಗೋಪಿ ಜೊತೆ ಸೇರಿ ಕೃತ್ಯ ಎಸಗಿರೋದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ವಿಡಿಯೋ ಕಾಲ್‌ ಮಾಡಿದ ಆಂಟಿ ಭೇಟಿಗೆ ಹೊರಟಿದ್ದ ತುಂಟ ಪ್ರೇಮಿ; ಮರಕ್ಕೆ ಕಟ್ಟಿ ಥಳಿಸಿದ ಮಹಿಳೆ ಮನೆಯವರು!