Published : May 20, 2026, 07:13 AM ISTUpdated : May 20, 2026, 09:47 PM IST

India Latest News Live: ಅವನ ಫ್ರೆಂಡ್ ಹುಡುಗಿ ತರ ದುಪಟ್ಟಾ ಹಾಕೊಂಡಿದ್ದ - ಬೀಚ್ ಘಟನೆ ಬಿಚ್ಚಿಟ್ಟ ನಟಿ ರಂಜಿನಿ!

ಸಾರಾಂಶ

ನವದೆಹಲಿ: ಭವಿಷ್ಯನಿಧಿ ಚಂದಾದಾರರು ಇಪಿಎಫ್‌ ಹಣವನ್ನು ಪಡೆಯಲಿರುವ ನಿಯಮವನ್ನು ಮತ್ತಷ್ಟು ಸರ್ಕಾರ ಸರಳಗೊಳಿಸಲಿದ್ದು, ಶೀಘ್ರ ಯುಪಿಐ ಮೂಲಕವೇ ಪಿಎಫ್‌ ಹಣ ವಿತ್‌ ಡ್ರಾ ಮಾಡಿಕೊಳ್ಳಬಹುದಾದ ನಿಯಮ ಜಾರಿಗೆ ತರಲು ಮುಂದಾಗಿದೆ.

ಮಂಗಳವಾರ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, ‘ಪಿಎಫ್ ಖಾತೆಯನ್ನು ಯುಪಿಐ ಮೂಲಕ ಬ್ಯಾಂಕ್‌ ಖಾತೆಗೆ ಸಂಯೋಜನೆ ಮಾಡಲು ಅವಕಾಶ ನೀಡಲಾಗುವುದು’ ಎಂದರು.

‘ನೌಕರರ ಆಧಾರ್‌ ಸಂಖ್ಯೆ ಇಪಿಎಫ್‌ ಖಾತೆ ಮತ್ತು ಅವರ ಬ್ಯಾಂಕ್‌ ಖಾತೆಯೊಂದಿಗೆ ಲಿಂಕ್‌ ಆಗಿರುವುದರಿಂದ ಅರ್ಜಿ ಸಲ್ಲಿಸಿದ ಬಳಿಕ ಹಣ ಯುಪಿಐ ಮೂಲಕ ಹಣ ಪಾವತಿಗೆ ಅನುವು ಮಾಡಿಕೊಡಲಾಗುವುದು. ಯುಪಿಐ ಪಾವತಿ ಗೇಟ್‌ ವೇ ಮೂಲಕ ಸದಸ್ಯರು ನೌಕರರ ಭವಿಷ್ಯ ನಿಧಿ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಗ್ರಾಹಕರು ವಿತ್‌ ಡ್ರಾ ಮಾಡಿಕೊಂಡ ಮೊತ್ತ ನೇರವಾಗಿ ಸದಸ್ಯರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತದೆ’ ಎಂದರು.

09:47 PM (IST) May 20

ಅವನ ಫ್ರೆಂಡ್ ಹುಡುಗಿ ತರ ದುಪಟ್ಟಾ ಹಾಕೊಂಡಿದ್ದ - ಬೀಚ್ ಘಟನೆ ಬಿಚ್ಚಿಟ್ಟ ನಟಿ ರಂಜಿನಿ!

ಕೋಯಿಕ್ಕೋಡ್ ಬೀಚ್‌ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಆದ ಗದ್ದಲದ ಬಗ್ಗೆ ನಟಿ ರಂಜಿನಿ ಹರಿದಾಸ್ ಈಗ ಮಾತನಾಡಿದ್ದಾರೆ. ಮಕ್ಕಳು ತಪ್ಪಿಹೋದ ಗಂಭೀರ ವಿಚಾರವನ್ನು ಕೆಲವರು ತಮಾಷೆ ಮಾಡಿದ್ದಕ್ಕೆ ತಾನು ಗರಂ ಆಗಿದ್ದಾಗಿ ಹೇಳಿಕೊಂಡಿದ್ದಾರೆ.

Read Full Story

09:40 PM (IST) May 20

ಕಡಿಮೆ ಬೆಲೆ, ಶೂನ್ಯ ಮೇಂಟೆನೆನ್ಸ್ - ಭಾರತದಲ್ಲಿ ಮಿಂಚಿದ ಎರಡು ಹೀರೊ ಬೈಕ್‌ಗಳು; ಒಂದೇ ತಿಂಗಳಲ್ಲಿ 4 ಲಕ್ಷ ಜನ ಖರೀದಿ!

ಕಳೆದ ಎರಡು ತಿಂಗಳಲ್ಲಿ ಹೀರೊ ಸ್ಪ್ಲೆಂಡರ್ ಮತ್ತು ಎಚ್‌ಎಫ್ ಡಿಲಕ್ಸ್ ಬೈಕ್‌ಗಳು 4 ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಕೈಗೆಟುಕುವ ಬೆಲೆಯೇ ಈ ಯಶಸ್ಸಿಗೆ ಕಾರಣವಾಗಿದೆ.

Read Full Story

09:13 PM (IST) May 20

ರಶ್ಮಿಕಾ ಕೈ ಮೇಲಿದೆ 'ಆ' ಸೀಕ್ರೆಟ್ ಟ್ಯಾಟೂ? ವಿಜಯ್‌ ದೇವರಕೊಂಡಗಾಗಿಯೇ ಹಾಕಿಸಿಕೊಂಡ್ರಾ?

ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು.

Read Full Story

08:31 PM (IST) May 20

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಳಪತಿ ವಿಜಯ್ ಸಹಕಲಾವಿದ ಜೈ - ಶೀಘ್ರದಲ್ಲೇ ಹೆಸರು ಬದಲಾಸಿಕೊಳ್ತೀನಿ ಎಂದ ನಟ

‘ಭಗವತಿ’ ಚಿತ್ರದಲ್ಲಿ ದಳಪತಿ ವಿಜಯ್ ಅವರ ಸಹೋದರನಾಗಿ ನಟಿಸಿದ್ದ ತಮಿಳು ನಟ ಜೈ ಸಂಪತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 2011ರಿಂದಲೇ ಇಸ್ಲಾಂ ಆಚರಣೆಗಳನ್ನು ಪಾಲಿಸುತ್ತಿರುವ ಅವರು, ಮಸೀದಿಯಲ್ಲಿ ತಮಗೆ ದೊರೆತ ಸಮಾನತೆ ಮತ್ತು ಶಾಂತಿಯೇ ಈ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.

Read Full Story

08:19 PM (IST) May 20

'ದೇವರೇ, ನನಗೆ ಮಗಳು ಬೇಡ' ಅಂತ ಹರಕೆ ಹೊತ್ತಿದ್ದರು? ತಾಯಿ ಬಗ್ಗೆ ಜೂ.ಎನ್‌ಟಿಆರ್‌ ಭಾವುಕ ಮಾತು

ಜೂ.ಎನ್‌ಟಿಆರ್‌ ತಮ್ಮ ತಾಯಿಯ ಬಗ್ಗೆ ಕೆಲವು ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಶಾಲಿನಿ ಮತ್ತು ತಂದೆ ಹರಿಕೃಷ್ಣ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಎನ್‌ಟಿಆರ್ ಏನೆಲ್ಲಾ ಹೇಳಿದ್ದಾರೆ.

Read Full Story

07:49 PM (IST) May 20

Giorgia Meloni ಜೀವನಕಥೆ - ನೈಟ್‌ ಕ್ಲಬ್‌ನಲ್ಲಿ ಬಾರ್‌ ಟೆಂಡರ್‌ ಆಗಿದ್ದ ಹುಡುಗಿ ನಂತರ ಆಗಿದ್ದು ಇಟಲಿಯ ಮೊದಲ ಮಹಿಳಾ ಪ್ರಧಾನಿ

ಇಟಲಿಯ ಮೊದಲ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೀವನ ಸಾಮಾನ್ಯವಾದುದಲ್ಲ. ಮುರಿದ ಸಂಸಾರ, ಬಡತನ, ನೈಟ್‌ಕ್ಲಬ್‌ನಲ್ಲಿ ಬಾರ್ಟೆಂಡರ್ ಕೆಲಸದಂತಹ ಕಠಿಣ ಹಾದಿಗಳನ್ನು ದಾಟಿ, ತಮ್ಮ ಛಲ ಮತ್ತು ಪರಿಶ್ರಮದಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಅವರ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ.

Read Full Story

07:10 PM (IST) May 20

ಮಳೆಗಾಲ ಆರಂಭವಾಗುತ್ತಿದ್ದಂತೆ 5 ದಿನ ಬಿಸಿಗಾಳಿ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಮಾನ್ಸೂನ್ ಆರಂಭಗೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಕೆಲೆವಡೆ ಭಾರಿ ಮಳೆಯಾಗುತ್ತಿದೆ. ಉತ್ತರ ಪ್ರದೇಶದ ಬಿರುಗಾಳಿ ಮಳೆ ಅವಾಂತರ ಆತಂಕ ತರಿಸಿದೆ. ಇದರ ಬೆನ್ನಲ್ಲೆ ಹವಾಮಾನ ಇಲಾಖೆ ಬಿಸಿಗಾಳಿ ಎಚ್ಚರಿಕೆ ನೀಡಿದೆ.

Read Full Story

06:59 PM (IST) May 20

Divorce-Shocking - ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೊರಟ ʻಜಯಂʼ ರವಿ; ಮುಂದೇನು..?

ಪತ್ನಿ ಆರತಿಯೊಂದಿಗಿನ ಕಾನೂನು ಹೋರಾಟದ ನಡುವೆ ಜಯಂ ರವಿ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಿರ್ಬಂಧಗಳ ಆರೋಪ ಮಾಡಿರುವ ಅವರು, ಈಗ ಮನಸ್ಸಿನ ಶಾಂತಿಗಾಗಿ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ. ಮುಂದೇನು ಗತಿ?

Read Full Story

06:41 PM (IST) May 20

ಟೆಲಿಗ್ರಾಂನಲ್ಲೊಂದು '350 ಸೀಕ್ರೆಟ್ ವಿಡಿಯೋ' ಜಾಲ - ಬಯಲಾಯ್ತು ಟೆಕ್ಕಿ ಕರಾಳ ದಂಧೆ

ಉತ್ತರ ಪ್ರದೇಶದಲ್ಲಿ, ಟೆಲಿಗ್ರಾಂ ಮೂಲಕ ಅಪ್ರಾಪ್ತರನ್ನು ಗುರಿಯಾಗಿಸಿ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ. AI-ರಚಿತ ವಿಡಿಯೋವೊಂದರ ಬಗ್ಗೆ ದೂರು ಬಂದಾಗ ಈ ಜಾಲ ಬೆಳಕಿಗೆ ಬಂದಿದ್ದು, ಆರೋಪಿಯ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ.
Read Full Story

06:38 PM (IST) May 20

8 ವರ್ಷದಲ್ಲಿ 15 ಸಿನಿಮಾ, ಕೊನೆಯ 5 ಚಿತ್ರಗಳು ಫ್ಲಾಪ್! ಹಾಕಿದ ದುಡ್ಡು ವಾಪಸ್ ಬಂದಿಲ್ಲ - ಯಾರು ಆ ನಟಿ!

ಜಾನ್ವಿ ಕಪೂರ್ ಸದ್ಯ 'ಪೆದ್ದಿ' ಸಿನಿಮಾದಿಂದಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇದರ ಟ್ರೇಲರ್ ರಿಲೀಸ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ ಜೂನ್ 4 ರಂದು ತೆರೆಗೆ ಬರಲಿದೆ. ಇದಕ್ಕೂ ಮುನ್ನ ಜಾನ್ವಿ ಅವರ ಬಾಕ್ಸ್ ಆಫೀಸ್ ರೆಕಾರ್ಡ್ ಹೇಗಿದೆ ನೋಡೋಣ.

Read Full Story

06:19 PM (IST) May 20

Jr NTR ‘ಡ್ರ್ಯಾಗನ್’ ಟೀಸರ್‌ನಲ್ಲಿ ಮಿಂಚಿದ ಏಕೈಕ ಕನ್ನಡತಿ ಯಾರು? ಇಲ್ಲಿಯವರೆಗೆ ಎಷ್ಟು ಸಿನಿಮಾ ಮಾಡಿದ್ದಾರೆ?

ಜೂ.ಎನ್‌ಟಿಆರ್‌ ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್‌ನಲ್ಲಿ ಸುಮಾರು 12 ಸ್ಟಾರ್‌ಗಳು ಕಾಣಿಸಿಕೊಂಡಿದ್ದು, ಅವರಲ್ಲಿ ಒಬ್ಬ ನಟಿಯೂ ಇದ್ದಾರೆ. ಆ ನಟಿ ಯಾರು, ಅವರು ಇಲ್ಲಿಯವರೆಗೆ ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

Read Full Story

05:53 PM (IST) May 20

ಸಿಕ್ಸರ್‌ಗಳ 'ಹಾಫ್ ಸೆಂಚುರಿ' ಬಾರಿಸಿದ ವೈಭವ್ ಸೂರ್ಯವಂಶಿ; ಈ ಸಾಧನೆ ಮಾಡಿದ ಮೊದಲ ಭಾರತೀಯ! ಮುಂದಿನ ಟಾರ್ಗೆಟ್ ಗೇಲ್

ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಒಂದೇ ಐಪಿಎಲ್ ಸೀಸನ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಲಖನೌ ವಿರುದ್ಧ 93 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಅವರು, ಇದೀಗ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ಸಿಕ್ಸರ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
Read Full Story

05:48 PM (IST) May 20

25 ವರ್ಷದಲ್ಲಿ 3750% ಹೆಚ್ಚಾಯ್ತು ಜೂ.ಎನ್‌ಟಿಆರ್‌ ಸಂಬಳ - ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ?

ಜೂ.ಎನ್‌ಟಿಆರ್‌ ತಮ್ಮ ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್'ನ ಫಸ್ಟ್ ಲುಕ್ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

Read Full Story

05:42 PM (IST) May 20

ಇನ್ಮುಂದೆ ಗೋಹತ್ಯೆ ಮಾಡುವಂತಿಲ್ಲ - ಇಮಾಮ್​ ಮೌಲಾನಾ ವಿಶೇಷ ಆದೇಶ- ಅವರು ಹೇಳಿದ್ದೇನು

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕೋಲ್ಕತ್ತಾದ ಐತಿಹಾಸಿಕ ನಖೋಡಾ ಮಸೀದಿಯ ಇಮಾಮ್, ಈದ್ ಸಂದರ್ಭದಲ್ಲಿ ಗೋಹತ್ಯೆಯನ್ನು ತಪ್ಪಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಹೊಸ ಸರ್ಕಾರದ ಕಠಿಣ ಪ್ರಾಣಿ ವಧೆ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದಾರೆ.

Read Full Story

05:30 PM (IST) May 20

ಜೂ.ಎನ್‌ಟಿಆರ್‌ ‘ಡ್ರ್ಯಾಗನ್’ ಟೀಸರ್ ನೋಡಿದ್ರಾ - ಈ 3 ಪವರ್‌ಫುಲ್ ಡೈಲಾಗ್‌ ಕೇಳಿದ್ರೆ ಮೈ ಜುಮ್ ಅನ್ನುತ್ತೆ!

ಜೂ.ಎನ್‌ಟಿಆರ್‌ ಅಭಿನಯದ 'ಡ್ರ್ಯಾಗನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಧೂಳೆಬ್ಬಿಸುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಟೀಸರ್‌ನಲ್ಲಿ ಸುಮಾರು 12 ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ.

Read Full Story

05:14 PM (IST) May 20

ಮೊಬೈಲ್‌ ರಿಚಾರ್ಜ್‌ಗಿಂತಲೂ ಕಡಿಮೆ ಬೆಲೆಯಲ್ಲಿ ತಾಜ್‌ ಹೋಟೆಲ್‌ನಲ್ಲಿ ಸಿಗ್ತಿತ್ತು ರೂಮ್‌, 59 ವರ್ಷದ ಹಳೇ ಬಿಲ್‌ ವೈರಲ್‌!

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನ 59 ವರ್ಷ ಹಳೆಯ ಬಿಲ್ ಒಂದು ವೈರಲ್ ಆಗಿದ್ದು, 1966ರಲ್ಲಿ ಒಂದು ರಾತ್ರಿ ತಂಗಲು ಕೇವಲ ₹127 ವೆಚ್ಚವಾಗಿತ್ತು ಎಂದು ತೋರಿಸುತ್ತದೆ. ಅಂದಿನ ಚಿನ್ನದ ಬೆಲೆಗೆ ಹೋಲಿಸಿದಾಗ, ಆ ಕಾಲದಲ್ಲೂ ಇದು ಅತ್ಯಂತ ಐಷಾರಾಮಿ ತಾಣವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
Read Full Story

05:08 PM (IST) May 20

‘ಪೆದ್ದಿ’ ಟ್ರೇಲರ್‌ನಲ್ಲಿ ರಾಮ್ ಚರಣ್-ಶಿವಣ್ಣ ಅಬ್ಬರ - ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!

ನಟ ರಿಷಬ್ ಶೆಟ್ಟಿ ಅವರು ರಾಮ್ ಚರಣ್ ಅವರ 'ಪೆದ್ದಿ' ಚಿತ್ರದ ಟ್ರೇಲರ್ ಅನ್ನು 'ಅದ್ಭುತ' ಎಂದು ಬಣ್ಣಿಸಿದ್ದಾರೆ. ಜೂನ್ 4, 2026 ರಂದು ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ..

Read Full Story

05:02 PM (IST) May 20

ಸಿನಿಮಾ ಸ್ಟೈಲ್ ಆಡಳಿತ! ಲಂಚ ಕೇಳಿದ ಭ್ರಷ್ಟರನ್ನು ಸಾಕ್ಷಿ ಸಮೇತ ಹಿಡಿದರೆ 1 ಲಕ್ಷ ಬಹುಮಾನ, ಇದು ವಿಜಯ್ ಸರ್ಕಾರ!

ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಭಾರಿ ಬದಲಾವಣೆಗಳು ಕಾಣಿಸುತ್ತಿವೆ. ಅದರಲ್ಲೂ ಭ್ರಷ್ಟಾಚಾರ ತಡೆಗೆ ಸಿಎಂ ವಿಜಯ್ ಸರ್ಕಾರ ಖಡಕ್ ನಿಲುವು ತಳೆದಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಹೊಸ ನಿರ್ಧಾರವೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
Read Full Story

04:44 PM (IST) May 20

Dragon Glimpse - ನನ್ನ ಕನಸಿಗೆ ಬರಬೇಡಿ.. ಜೂ.ಎನ್‌ಟಿಆರ್ ಹೊಸ ಅವತಾರ ನೋಡಿ ಅಭಿಮಾನಿಗಳಿಗೆ ಶಾಕ್

ಜೂ.ಎನ್‌ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದ ಸ್ಪೆಷಲ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಭಿಮಾನಿಗಳ ನಿರೀಕ್ಷೆ ಮೀರಿ ಜೂ.ಎನ್‌ಟಿಆರ್‌ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

Read Full Story

04:27 PM (IST) May 20

Divorce Case - ಜಯಂ ರವಿ ಡಿವೋರ್ಸ್‌ ಕೇಸ್‌; ಹೆಂಡತಿ ಆರತಿ ಕೇಳಿರೋ ಜೀವನಾಂಶ ಎಷ್ಟು ಕೋಟಿ ಗೊತ್ತಾ?

ಜಯಂ ರವಿ ಮತ್ತು ಆರತಿ ನಡುವಿನ ಕದನ ಈಗ ಹಣದ ಹಾದಿ ಹಿಡಿದಿದೆ. ಮಾಸಿಕ 40 ಲಕ್ಷ ರೂಪಾಯಿಗಳ ಬೇಡಿಕೆಯು ಜಯಂ ರವಿ ಅವರ ವೃತ್ತಿಜೀವನದ ಗಳಿಕೆಗಿಂತ ಹೆಚ್ಚಿರುವಂತೆ ಕಾಣುತ್ತಿದೆ. ಈ ಕೌಟುಂಬಿಕ ಕಲಹವು ಕಾನೂನಾತ್ಮಕವಾಗಿ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read Full Story

04:18 PM (IST) May 20

ಯಶ್‌ ಹೊಸ ಅವತಾರ ನೋಡಿ ಶಾಕ್‌ ಆದ ಅಭಿಮಾನಿಗಳು - 'ಟಾಕ್ಸಿಕ್‌' BTS ಫೋಟೋ ವೈರಲ್‌!

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದ BTS ಫೋಟೋಗಳು ವೈರಲ್‌ ಆಗಿವೆ. ಹೊಸ ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಯಶ್‌ ಮಿಂಚಿದ್ದು, ಸಿನಿಮಾದ ಕಥೆ ಹಾಗೂ ರಿಲೀಸ್‌ ಡೇಟ್‌ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

Read Full Story

03:57 PM (IST) May 20

ಆಸ್ಪತ್ರೆ ಆವರಣದಲ್ಲೇ ಸಖತ್ 'ರಾಂಗ್' ಆದ ಸಲ್ಮಾನ್ ಖಾನ್; ನಟನ 'ದಬಾಂಗ್' ಅವತಾರ ಕಂಡು ಬೆಚ್ಚಿಬಿದ್ದ ಕ್ಯಾಮೆರಾ!

ಆಸ್ಪತ್ರೆಯಂತಹ ಸೂಕ್ಷ್ಮ ಜಾಗದಲ್ಲಿ, ಯಾರೋ ನೋವಿನಲ್ಲಿದ್ದಾಗ ಹೀಗೆ ಸಿನೆಮಾ ಹೆಸರನ್ನು ಕೂಗಿದ್ದು ಸಲ್ಲು ಭಾಯ್‌ಗೆ ಅತಿಯಾದ ಕೋಪ ತರಿಸಿತು. ತಕ್ಷಣವೇ ಪಾಪರಾಜಿಗಳತ್ತ ನಡೆದು ಬಂದ ಸಲ್ಮಾನ್, "ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?" ಎಂದಿದ್ದಾರೆ ನಟ..

Read Full Story

03:51 PM (IST) May 20

ಮೆಲೋನಿಗೆ ಪಾರ್ಲೆ 'ಮೆಲೋಡಿ' ಗಿಫ್ಟ್‌ ಕೊಟ್ಟ ಮೋದಿ, ಸಂಬಂಧವೇ ಇಲ್ಲದ ಪಾರ್ಲೆ ಷೇರಿಗೆ ಸುಗ್ಗಿಕಾಲ!

ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೊಡಿ ಚಾಕೊಲೇಟ್ ನೀಡಿದ ವಿಡಿಯೋ ವೈರಲ್ ಆದ ಬಳಿಕ, ಹೂಡಿಕೆದಾರರು ತಪ್ಪಾಗಿ 'ಪಾರ್ಲೆ ಇಂಡಸ್ಟ್ರೀಸ್' ಷೇರುಗಳನ್ನು ಖರೀದಿಸಿದರು. ಇದರಿಂದ ಷೇರು ಬೆಲೆ ಶೇ. 5ರಷ್ಟು ಏರಿಕೆಯಾಗಿದೆ.

Read Full Story

03:44 PM (IST) May 20

ಮೋದಿ ಕೊಟ್ಟ ಗಿಫ್ಟ್‌ನಿಂದ ಭಾರತದಲ್ಲಿ ಬದಲಾಯ್ತು ಪಾರ್ಲೆ ಲಕ್, ಮೆಲೋಡಿ ಔಟ್ ಆಫ್ ಸ್ಟಾಕ್

ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೋಲೇಟ್ ಗಿಫ್ಟ್ ನೀಡಿದ ಬೆನ್ನಲ್ಲೇ ಭಾರತದಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಪ್ರಮುಖವಾಗಿ ಪಾರ್ಲೆ ಜಿ ಕಂಪನಿಯ ಮೆಲೋಡಿ ಚಾಕೋಲೇಟ್ ಬ್ಲಿಂಕಿಟ್ ಸೇರಿದಂತೆ ಹಲವು ಇ ಕಾಮರ್ಸ್ ತಾಣದಲ್ಲಿ ಖಾಲಿಯಾಗಿದೆ.

Read Full Story

02:56 PM (IST) May 20

AI ಫೋಟೋ ಬಳಸಿ 1 ಕೋಟಿ ಬಿಲ್ ಕ್ಲಿಯರ್ ಮಾಡಿಕೊಂಡ ಗುತ್ತಿಗೆದಾರ; ಅಪಾಯದಲ್ಲಿ 12 ಗ್ರಾಮ

ಇಂಜಿನಿಯರ್‌ಗಳು ಎಐ ಬಳಸಿ ದೊಡ್ಡ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ಯಾವುದೇ ಕಾಮಗಾರಿ ನಡೆಸದೆ, ಎಐ ತಂತ್ರಜ್ಞಾನದಿಂದ ಸೃಷ್ಟಿಸಿದ ಫೋಟೋಗಳನ್ನು ಬಳಸಿ ಒಳಚರಂಡಿ ಮತ್ತು ಒಡ್ಡು ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬಿಲ್ ಕ್ಲಿಯರ್ ಮಾಡಿಕೊಂಡಿದ್ದಾರೆ. ಈ ಭ್ರಷ್ಟಾಚಾರದಿಂದಾಗಿ 12ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಅಪಾಯವನ್ನು ಎದುರಿಸುತ್ತಿವೆ.

Read Full Story

02:26 PM (IST) May 20

ಲಖನೌ ಎದುರು ರಾಜಸ್ಥಾನ ರಾಯಲ್ಸ್‌ ಗೆಲುವಿನಿಂದ ತಲೆಕೆಳಗಾದ ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ..!

ಬೆಂಗಳೂರು: 19ನೇ ಆವೃತ್ತಿಯ IPL ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಈಗಾಗಲೇ 3 ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಲಖನೌ ಎದುರು ರಾಜಸ್ಥಾನದ ಗೆಲುವು ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.

 

Read Full Story

01:02 PM (IST) May 20

Rishikesh - ಹಿಂದೂ ಆಗಿ ಗಂಗಾ ನದಿ ದಡದಲ್ಲಿ ಆ ರೀತಿ ಮಾಡಿದ್ದು ಸರೀನಾ? ವಿದೇಶಿ ಪ್ರವಾಸಿಗರಿಂದ ವಿಡಿಯೋ ವೈರಲ್!

ರಿಷಿಕೇಶದ ಸಾಯಿ ಘಾಟ್‌ನಲ್ಲಿ ಮಹಿಳೆಯೊಬ್ಬರು ಗಂಗಾ ನದಿ ದಡದಲ್ಲಿ ಪೂಜೆಯ ಕಸವನ್ನು ಹೂಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿದೇಶಿ ಪ್ರವಾಸಿಗರೊಬ್ಬರು ಸೆರೆಹಿಡಿದ ಈ ದೃಶ್ಯವು, ಪವಿತ್ರ ನದಿಗೆ ಪ್ಲಾಸ್ಟಿಕ್ ಸೇರಿ ಇತರ ಕರಗದ ವಸ್ತುಗಳನ್ನು ಸೇರಿಸುವ ಬೇಜವಾಬ್ದಾರಿ ವರ್ತನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

12:51 PM (IST) May 20

ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ 2 ರೂ ಚಾಕೋಲೇಟ್, ಮೆಲೋನಿಗೆ ಮೆಲೋಡಿ ಕೊಟ್ಟು ಮೋದಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿಯ ಪ್ರವಾಸದಲ್ಲಿ ಇಟಲಿ ಭೇಟಿ ಭಾರಿ ಚರ್ಚೆಯಾಗುತ್ತಿದೆ. ಕೊಲೊಸಿಯಂ ಭೇಟಿ ಹಾಗೂ ಮಾತುಕತೆ ಬೆನ್ನಲ್ಲೇ ಇದೀಗ ಖುದ್ದು ಇಟಲಿ ಪ್ರಧಾನಿ ಸೆಲ್ಫಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೋದಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ.

Read Full Story

12:08 PM (IST) May 20

ವಡೋದರಾ-ದಿಲ್ಲಿ ಇಂಡಿಗೋದಲ್ಲಿ ಏಕಾಏಕಿ ವಿದ್ಯುತ್‌ ವ್ಯತ್ಯಯ, 25 ನಿಮಿಷ ಪರದಾಡಿದ ಪ್ರಯಾಣಿಕರು

ವಡೋದರಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷದಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ಎಸಿ ಮತ್ತು ಲೈಟ್‌ಗಳಿಲ್ಲದೆ ಪ್ರಯಾಣಿಕರು ಕತ್ತಲೆ ಹಾಗೂ ಸೆಕೆಯಲ್ಲಿ ಪರದಾಡಿದರು. ಈ ಘಟನೆಯಿಂದ ವಿಮಾನ ಹಾರಾಟವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು.
Read Full Story

11:35 AM (IST) May 20

Minority Status - 'ಮುಸ್ಲಿಂ ಅಲ್ಪಸಂಖ್ಯಾತ ಸ್ಥಾನಮಾನ ಬಗ್ಗೆ ಕಿರಣ್ ರಿಜಿಜು ಮಾತಿಗೆ ಓವೈಸಿ ಕಿಡಿ! ಅಷ್ಟಕ್ಕೂ ಕೇಂದ್ರ ಸಚಿವ ಹೇಳಿದ್ದೇನು?

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರು ಮತ್ತು ಪಾರ್ಸಿಗಳ ಜನಸಂಖ್ಯೆಯನ್ನು ಹೋಲಿಸಿ ರಿಜಿಜು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಓವೈಸಿ ಆಕ್ಷೇಪ ವ್ಯಕ್ತಪಡಿಸಿದರು.

Read Full Story

10:42 AM (IST) May 20

Suriya-Trisha - ಕರುಪ್ಪು ಬಾಕ್ಸ್‌ಆಫೀಸ್‌ನಲ್ಲಿ ಸೂಪರ್ ಹಿಟ್.. ಆದರೂ ಕ್ಷಮೆ ಕೇಳಿದ್ಯಾಕೆ ಚಿತ್ರತಂಡ?

ಮೇ 15 ರಂದು ವಿಶ್ವಾದ್ಯಂತ ಬಿಡುಗಡೆಯಾದ 'ಕರುಪ್ಪು', ಸೂರ್ಯ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಿದೆ. ಸೂರ್ಯ ಇಲ್ಲಿ ಕರುಪ್ಪಸ್ವಾಮಿಯ ಅವತಾರದಲ್ಲಿ ನ್ಯಾಯಾಲಯದ ಅನ್ಯಾಯಗಳ ವಿರುದ್ಧ ಗುಡುಗಿದ್ದಾರೆ. ಆರ್.ಜೆ. ಬಾಲಾಜಿ ವಕೀಲನಾಗಿ ಸೂರ್ಯನಿಗೆ ಸಾಥ್ ನೀಡಿದ್ದು, ಸಿನಿಮಾ ಸೂಪರ್ ಹಿಟ್..

Read Full Story

10:33 AM (IST) May 20

ರೋಮ್‌ನಲ್ಲಿ ಪ್ರಧಾನಿ ಮೋದಿ-ಜಾರ್ಜಿಯಾ ಮೆಲೋನಿ ಭೇಟಿ, ಐತಿಹಾಸಿಕ ಕೊಲೋಸಿಯಂಗೆ ವಿಸಿಟ್!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ದೇಶಗಳ ಪ್ರವಾಸದ ಭಾಗವಾಗಿ ರೋಮ್‌ಗೆ ಭೇಟಿ ನೀಡಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದರು. ಇಬ್ಬರೂ ನಾಯಕರು ಕೊಲೋಸಿಯಂನಲ್ಲಿ ಸುದೀರ್ಘ ಚರ್ಚೆ ನಡೆಸಿ, ಭಾರತ-ಇಟಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕುರಿತು ಮಾತುಕತೆ ನಡೆಸಿದರು.

Read Full Story

10:08 AM (IST) May 20

ಚೆನ್ನೈ ಸೂಪರ್ ಕಿಂಗ್ಸ್ ಆತನ ಮೇಲೆ ವಿಶ್ವಾಸವಿಟ್ಟಿದ್ದಾದ್ರೂ ಹೇಗೆ? ಯುವ ಆಟಗಾರನ ಮೇಲೆ ಕಿಡಿಕಾರಿದ ಕೃಷ್ಣಮಾಚಾರಿ ಶ್ರೀಕಾಂತ್

ಐಪಿಎಲ್‌ನಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೋತ ನಂತರ, ತಂಡದ ಪ್ಲೇಆಫ್ ಕನಸು ಬಹುತೇಕ ಮುಗಿದಿದೆ. ಈ ಸೋಲಿನ ಬಗ್ಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ಸಿಎಸ್‌ಕೆ ಮ್ಯಾನೇಜ್‌ಮೆಂಟ್ 14 ಕೋಟಿ ಕೊಟ್ಟು ಖರೀದಿಸಿದ ಪ್ರಶಾಂತ್ ವೀರ್‌ಗೆ ಪದೇ ಪದೇ ಅವಕಾಶ ನೀಡುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತು ತಂತ್ರಗಾರಿಕೆಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

10:02 AM (IST) May 20

Rahul Gandhi - ಪತ್ರಕರ್ತರು ಪ್ರಶ್ನೆ ಕೇಳಿದಾಗ ಪ್ರಧಾನಿ ಮೋದಿ ಓಡಿಹೋಗಿದ್ದೇಕೆ? ರಾಹುಲ್ ಗಾಂಧಿ ವಾಗ್ದಾಳಿ

ನಾರ್ವೆಯ ಪತ್ರಕರ್ತೆಯೊಬ್ಬರು ತಮ್ಮ ಪ್ರಶ್ನೆಯನ್ನು ಪ್ರಧಾನಿ ಮೋದಿ ಸ್ವೀಕರಿಸಲಿಲ್ಲ ಎಂದು ಹೇಳಿದ ನಂತರ, ರಾಹುಲ್ ಗಾಂಧಿ ಅವರು 'ಕೆಲವು ಪ್ರಶ್ನೆಗಳಿಂದ ಓಡಿಹೋಗುತ್ತಿದ್ದಾರೆ' ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

08:31 AM (IST) May 20

ಬೆಂಬಲ ವಾಪಸ್ ಪಡೀತೀವಿ; ಸಿಎಂ ವಿಜಯ್ ಟಿವಿಕೆ ಸರ್ಕಾರಕ್ಕೆ ಸಿಪಿಎಂ ಖಡಕ್ ಎಚ್ಚರಿಕೆ!

ಟಿವಿಕೆ ಸರ್ಕಾರಕ್ಕೆ ಎಐಎಡಿಎಂಕೆ ಶಾಸಕರು ಬೆಂಬಲ ನೀಡಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.  ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಿಎಂ ವಿಜಯ್ ಸರ್ಕಾರಕ್ಕೆ ಸಿಪಿಎಂ ಖಡಕ್ ಸಂದೇಶವೊಂದನ್ನು ರವಾನಿಸಿದೆ ಎಂದು ವರದಿಯಾಗುತ್ತಿದೆ.

Read Full Story

08:20 AM (IST) May 20

IPL 2026 - ನಿನ್ನೆ ನಡೆದ ಲಖನೌ ಸೂಪರ್ ಜೈಂಟ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್, ಲಖನೌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ತಂಡವು ಪ್ಲೇ-ಆಫ್‌ಗೆ ಹತ್ತಿರವಾಗಿದ್ದು, ಮುಂಬೈ ವಿರುದ್ಧದ ಮುಂದಿನ ಪಂದ್ಯ ಗೆದ್ದರೆ ಇತರ ನಾಲ್ಕು ತಂಡಗಳು ಸ್ಪರ್ಧೆಯಿಂದ ಹೊರಬೀಳಲಿವೆ.
Read Full Story

More Trending News