ಕೋಯಿಕ್ಕೋಡ್ ಬೀಚ್‌ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಆದ ಗದ್ದಲದ ಬಗ್ಗೆ ನಟಿ ರಂಜಿನಿ ಹರಿದಾಸ್ ಈಗ ಮಾತನಾಡಿದ್ದಾರೆ. ಮಕ್ಕಳು ತಪ್ಪಿಹೋದ ಗಂಭೀರ ವಿಚಾರವನ್ನು ಕೆಲವರು ತಮಾಷೆ ಮಾಡಿದ್ದಕ್ಕೆ ತಾನು ಗರಂ ಆಗಿದ್ದಾಗಿ ಹೇಳಿಕೊಂಡಿದ್ದಾರೆ.

ಕೋಯಿಕ್ಕೋಡ್ ಬೀಚ್‌ನಲ್ಲಿ ನಡೆದ ಸಿನಿಮಾ ಪ್ರೊಮೋಷನ್ ವೇಳೆ ಮಕ್ಕಳು ಕಾಣೆಯಾದ ಘಟನೆ ಬಗ್ಗೆ ನಟಿ ಮತ್ತು ನಿರೂಪಕಿ ರಂಜಿನಿ ಹರಿದಾಸ್ ಸ್ಪಷ್ಟನೆ ನೀಡಿದ್ದಾರೆ. 'ಅಥಿರಡಿ' ಅನ್ನೋ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು. ಕಾರ್ಯಕ್ರಮದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಅನೇಕ ಮಕ್ಕಳು ತಮ್ಮ ಪೋಷಕರಿಂದ ತಪ್ಪಿಸಿಕೊಂಡಿದ್ದರು. ಈ ಮಕ್ಕಳ ಹೆಸರನ್ನು ಮೈಕ್‌ನಲ್ಲಿ ಅನೌನ್ಸ್ ಮಾಡುವಾಗ, ಕೆಲವರು ಬೇಕಂತಲೇ ಕಾಮೆಂಟ್ ಮಾಡಿ ಗಲಾಟೆ ಎಬ್ಬಿಸಿದ್ದರು. ಅವರಿಗೆ ರಂಜಿನಿ ಕೊಟ್ಟ ಉತ್ತರ ಸಖತ್ ವೈರಲ್ ಆಗಿತ್ತು. ಇದರ ಬೆನ್ನಲ್ಲೇ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಂದು ನಡೆದಿದ್ದೇನು ಅಂತ ರಂಜಿನಿ ವಿವರಿಸಿದ್ದಾರೆ.

Add Asianetnews Kannada as a Preferred SourcegooglePreferred

"ಅಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ರು. ಸಂಜೆ 6:30ಕ್ಕೆ ಕಾರ್ಯಕ್ರಮ ಶುರುವಾಗಬೇಕಿತ್ತು. ನಾನು ಹೋಟೆಲ್‌ನಿಂದ 6 ಗಂಟೆಗೆ ಹೊರಟೆ. ಅಲ್ಲಿಂದ ಕೇವಲ 15 ನಿಮಿಷದ ದಾರಿ. ಆದರೆ, ಸಿಕ್ಕಾಪಟ್ಟೆ ಟ್ರಾಫಿಕ್ ಬ್ಲಾಕ್‌ನಲ್ಲಿ ಸಿಕ್ಕಿಹಾಕಿಕೊಂಡೆ. ನಾನು ಸ್ಟೇಜ್ ಹತ್ತುವಾಗ 7:30 ಆಗಿತ್ತು. ಹಾಗಾಗಿ, ವೇದಿಕೆ ಮೇಲೆ ಬಂದು ಮೊದಲು ಎಲ್ಲರಲ್ಲೂ ಕ್ಷಮೆ ಕೇಳಿದೆ. ಶೋ ಶುರುವಾದ ಮೇಲೆ ಗೊತ್ತಾಯ್ತು, ಸುಮಾರು 10-20 ಮಕ್ಕಳು ಕಾಣೆಯಾಗಿದ್ದಾರೆ ಅಂತ. ನನ್ನ ಹತ್ತಿರ ಒಂದು ಲಿಸ್ಟ್ ಕೂಡ ಇತ್ತು. ನಾನು ಆ ಮಕ್ಕಳ ಹೆಸರುಗಳನ್ನು ವೇದಿಕೆ ಮೇಲೆ ಅನೌನ್ಸ್ ಮಾಡ್ತಿದ್ದೆ."

"ಈ ಮಧ್ಯೆ, ಇದ್ದಕ್ಕಿದ್ದಂತೆ ಒಬ್ಬ ಹುಡುಗ, 'ಆ ಮಗು ಇಲ್ಲೇ ಇದೆ' ಅಂತ ಕೂಗಿ ಹೇಳಿದ. ಆದರೆ ಅದು ಸುಳ್ಳು. ಅವನು ಸುಮ್ಮನೆ ಅಟೆನ್ಷನ್‌ಗೋಸ್ಕರ ಹಾಗೆ ಮಾಡಿದ್ದ. ಅವನ ಫ್ರೆಂಡ್ ಒಬ್ಬ ಹುಡುಗಿ ತರ ದುಪಟ್ಟಾ ಹಾಕಿಕೊಂಡು ನಿಂತಿದ್ದ. ಅಷ್ಟು ಗಂಭೀರವಾದ ವಿಷಯವನ್ನು ಅವರು ತಮಾಷೆಯಾಗಿ ತೆಗೆದುಕೊಂಡರು. ಅದನ್ನು ನೋಡಿ ನನಗೆ ಸಿಕ್ಕಾಪಟ್ಟೆ ಕೋಪ ಬಂತು. 'ಇದೇನ್ರೀ ಬೋರಿಂಗ್ ಕೆಲಸ' ಅಂತ ನಾನು ಕೇಳಿದೆ. ಇದೇ ರೀತಿ, ನಂತರ ಟೊವಿನೊ ಥಾಮಸ್ ಸ್ಟೇಜ್‌ನಲ್ಲಿದ್ದಾಗಲೂ ನಡೆಯಿತು. ಟೊವಿನೊಗೂ ಕೋಪ ಬಂತು. ಆದರೆ ಅವರು ನನಗಿಂತ ಶಾಂತವಾಗಿ ಪರಿಸ್ಥಿತಿ ನಿಭಾಯಿಸಿದರು. ಆದರೂ ಅವರಿಗೂ ಸಿಟ್ಟು ಬಂದಿತ್ತು" ಎಂದು ರಂಜಿನಿ ಹೇಳಿದ್ದಾರೆ.

ಬೇಜವಾಬ್ದಾರಿ ಪೋಷಕರೇ ನೀವು?

"ನನಗೆ ಅರ್ಥವಾಗದ ಇನ್ನೊಂದು ವಿಷಯ ಅಂದ್ರೆ, ಇಷ್ಟೊಂದು ಜನ ಸೇರುವ ಜಾಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೇಗೆ ಕಳೆದುಕೊಳ್ಳುತ್ತಾರೆ? ಅವರೆಲ್ಲಾ ಐದು, ಆರು, ಏಳು ವರ್ಷದ ಮಕ್ಕಳು. ಅಷ್ಟೊಂದು ಬೇಜವಾಬ್ದಾರಿ ಪೋಷಕರೇ ನೀವು? ಇಷ್ಟು ಚಿಕ್ಕ ಮಕ್ಕಳನ್ನು ಇಂತಹ ಜನಜಂಗುಳಿ ಇರುವ ಜಾಗಕ್ಕೆ ಯಾಕೆ ಕರೆದುಕೊಂಡು ಬರುತ್ತೀರಿ? ಸ್ವಲ್ಪನಾದರೂ ಯೋಚಿಸಬೇಕಲ್ವಾ?" ಎಂದು ರಂಜಿನಿ ತಮ್ಮ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.