ಯಶ್ ಹೊಸ ಅವತಾರ ನೋಡಿ ಶಾಕ್ ಆದ ಅಭಿಮಾನಿಗಳು: 'ಟಾಕ್ಸಿಕ್' BTS ಫೋಟೋ ವೈರಲ್!
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ BTS ಫೋಟೋಗಳು ವೈರಲ್ ಆಗಿವೆ. ಹೊಸ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಯಶ್ ಮಿಂಚಿದ್ದು, ಸಿನಿಮಾದ ಕಥೆ ಹಾಗೂ ರಿಲೀಸ್ ಡೇಟ್ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಫೋಟೋಗಳು ರಿವೀಲ್
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ತೆರೆಯ ಹಿಂದಿನ ಫೋಟೋಗಳು ರಿವೀಲ್ ಆಗಿವೆ. ಇದರಲ್ಲಿ ಯಶ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

ಒರಗಿ ನಿಂತಿರುವ ಯಶ್
ವಿಂಟೇಜ್ ಕಾರಿಗೆ ಒರಗಿ ನಿಂತಿರುವ ಯಶ್ ಸುತ್ತ ಗನ್ ಹಿಡಿದು ನಿಂತಿರುವ ಗೂಂಡಾಗಳಿದ್ದು, ಗ್ಯಾಂಗ್‌ಸ್ಟರ್ ಟೀಮ್‌ನ ನಾಯಕನಂತೆ ಅವರು ಕಂಗೊಳಿಸಿದ್ದಾರೆ.
ಗ್ಯಾಂಗ್‌ಸ್ಟರ್ ಒಬ್ಬನ ಸೇಡಿನ ಕಥೆ
ಇನ್ನೊಂದೆಡೆ ಹಾಲಿವುಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾದ ಕಥೆಯ ಬಗ್ಗೆ ವಿವರ ನೀಡಿದ್ದು, ಟಾಕ್ಸಿಕ್ ಸಿನಿಮಾ ಮೇಲ್ನೋಟಕ್ಕೆ ಗ್ಯಾಂಗ್‌ಸ್ಟರ್ ಒಬ್ಬನ ಸೇಡಿನ ಕಥೆ ಇರುವ ಕಮರ್ಷಿಯಲ್ ಸಿನಿಮಾದಂತೆ ಕಂಡರೂ ಅದಕ್ಕೂ ಮೀರಿದ ಅನೇಕ ಅಂಶಗಳು ಸಿನಿಮಾದಲ್ಲಿದೆ.
ಮಹತ್ವದ ಮೈಲಿಗಲ್ಲು
ಇದು ಮನುಷ್ಯ ಸ್ವಭಾವದ ದುಷ್ಟತನವನ್ನು ಆಳವಾಗಿ ತೀವ್ರವಾಗಿ ಹಿಡಿದಿಡುತ್ತದೆ. ಸಿನಿಮಾದಲ್ಲಿ ಇಂಥಾ ಪ್ರಯತ್ನ ಮಾಡಿದ್ದು ನಟನಾಗಿ ನನ್ನ ಬದುಕಿನ ಮಹತ್ವದ ಮೈಲಿಗಲ್ಲು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಹೊಸ ರಿಲೀಸ್ ಡೇಟ್ ಪ್ರಕಟಿಸುವಂತೆ ಅಭಿಮಾನಿಗಳು ಚಿತ್ರತಂಡವನ್ನು ಒತ್ತಾಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

