MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • ಕಡಿಮೆ ಬೆಲೆ, ಶೂನ್ಯ ಮೇಂಟೆನೆನ್ಸ್: ಭಾರತದಲ್ಲಿ ಮಿಂಚಿದ ಎರಡು ಹೀರೊ ಬೈಕ್‌ಗಳು; ಒಂದೇ ತಿಂಗಳಲ್ಲಿ 4 ಲಕ್ಷ ಜನ ಖರೀದಿ!

ಕಡಿಮೆ ಬೆಲೆ, ಶೂನ್ಯ ಮೇಂಟೆನೆನ್ಸ್: ಭಾರತದಲ್ಲಿ ಮಿಂಚಿದ ಎರಡು ಹೀರೊ ಬೈಕ್‌ಗಳು; ಒಂದೇ ತಿಂಗಳಲ್ಲಿ 4 ಲಕ್ಷ ಜನ ಖರೀದಿ!

ಕಳೆದ ಎರಡು ತಿಂಗಳಲ್ಲಿ ಹೀರೊ ಸ್ಪ್ಲೆಂಡರ್ ಮತ್ತು ಎಚ್‌ಎಫ್ ಡಿಲಕ್ಸ್ ಬೈಕ್‌ಗಳು 4 ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಕೈಗೆಟುಕುವ ಬೆಲೆಯೇ ಈ ಯಶಸ್ಸಿಗೆ ಕಾರಣವಾಗಿದೆ.

2 Min read
Author : Santosh Naik
Published : May 20 2026, 09:40 PM IST
Share this Photo Gallery
  • FB
  • TW
  • Linkdin
  • Whatsapp
16
4 ಲಕ್ಷ ಜನರಿಂದ ಬೈಕ್‌ ಖರೀದಿ
Image Credit : stockPhoto

4 ಲಕ್ಷ ಜನರಿಂದ ಬೈಕ್‌ ಖರೀದಿ

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮೈಲೇಜ್ ಬೈಕ್‌ಗಳ (Commuter Bikes) ಬಗ್ಗೆ ಮಾತನಾಡುವುದಾದರೆ ಇಂದಿಗೂ ಹೀರೊ ಮೊಟೊಕಾರ್ಪ್‌ (Hero MotoCorp) ಸಂಸ್ಥೆಯದ್ದೇ ಏಕಸ್ವಾಮ್ಯ ಹಾಗೂ ಪರಮಾಧಿಕಾರ ಮುಂದುವರಿದಿದೆ. ಇದಕ್ಕೆ ಪೂರಕವೆಂಬಂತೆ, ಕಳೆದೆರಡು ತಿಂಗಳ ಅವಧಿಯಲ್ಲಿ ಹೀರೊ ಸ್ಪ್ಲೆಂಡರ್ ಮತ್ತು ಹೀರೊ ಎಚ್‌ಎಫ್ ಡಿಲಕ್ಸ್ ಎಂಬ ಈ ಎರಡು ಬೈಕ್‌ಗಳನ್ನು ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಗ್ರಾಹಕರು ಖರೀದಿಸಿ ಹೊಸ ದಾಖಲೆ ಬರೆದಿದ್ದಾರೆ. ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ (Zero Maintenance) ಹಾಗೂ ಸಾಮಾನ್ಯ ಜನರ ಬಜೆಟ್‌ಗೆ ಸಿಗುವ ಬೆಲೆಯೇ ಈ ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣಗಳಾಗಿವೆ.  

Add Asianetnews Kannada as a Preferred SourcegooglePreferred
26
ಹೀರೋ ಸ್ಪ್ಲೆಂಡರ್ ಮಾರ್ಕೆಟ್‌ ಲೀಡರ್‌
Image Credit : Asianet News

ಹೀರೋ ಸ್ಪ್ಲೆಂಡರ್ ಮಾರ್ಕೆಟ್‌ ಲೀಡರ್‌

ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಬೈಕ್‌ಗಳನ್ನು ಖರೀದಿಸಲು ಇಷ್ಟಪಡುವ ಗ್ರಾಹಕರಿಗೆ ಹೀರೊ ಹೊರತಾಗಿ ಹೋಂಡಾ, ಟಿವಿಎಸ್ ಮತ್ತು ಬಜಾಜ್‌ನಂತಹ ಕಂಪನಿಗಳ ಆಯ್ಕೆಗಳಿದ್ದರೂ ಸಹ, ಅತಿ ಹೆಚ್ಚು ಮಾರಾಟವಾಗುವ ಬೈಕ್‌ಗಳ ರೇಸ್‌ಗೆ ಬಂದಾಗ ಹೀರೊ ಸ್ಪ್ಲೆಂಡರ್ ಎದುರು ಯಾರೂ ನಿಲ್ಲಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Related Articles

Related image1
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
Related image2
Hero Super Splendor XTEC: ಒಂದೇ ಒಂದು ಫುಲ್ ಟ್ಯಾಂಕ್‌ಗೆ 700 ಕಿ.ಮೀ ಓಡುತ್ತೆ! ಬೆಲೆ ಕಡಿಮೆ, ಮೈಲೇಜ್ ಸಿಕ್ಕಾಪಟ್ಟೆ!
36
ಮಾರಾಟದಲ್ಲಿ ಸ್ಪ್ಲೆಂಡರ್ ನಂ.1
Image Credit : stockPhoto

ಮಾರಾಟದಲ್ಲಿ ಸ್ಪ್ಲೆಂಡರ್ ನಂ.1

ಇತ್ತೀಚಿನ ಎಪ್ರಿಲ್ ತಿಂಗಳ ಮಾರಾಟದ ವರದಿಯ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಹೀರೊ ಸ್ಪ್ಲೆಂಡರ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ, ವಾರ್ಷಿಕ ಬೆಳವಣಿಗೆಯ (Annual Growth) ವಿಷಯದಲ್ಲಿ ಹೀರೊದ ಮತ್ತೊಂದು ಬಜೆಟ್ ಬೈಕ್ ಆದ 'ಎಚ್‌ಎಫ್ ಡಿಲಕ್ಸ್' ಎಲ್ಲಾ ಕಂಪನಿಗಳಿಗೂ ಭಾರಿ ಕೌಂಟರ್ ನೀಡಿದೆ. ಕೇವಲ ಒಂದೇ ತಿಂಗಳಲ್ಲಿ ಹೀರೊ ಸ್ಪ್ಲೆಂಡರ್‌ನ ಒಟ್ಟು 3,09,131 ಯೂನಿಟ್‌ಗಳು ಮಾರಾಟವಾಗಿದ್ದು, ಇದು ವಾರ್ಷಿಕವಾಗಿ ಶೇಕಡಾ 56.21 ರಷ್ಟು ಭಾರಿ ಬೆಳವಣಿಗೆಯನ್ನು ದಾಖಲಿಸಿದೆ.

46
91,977 ಯುನಿಟ್‌ ಮಾರಾಟ
Image Credit : Google

91,977 ಯುನಿಟ್‌ ಮಾರಾಟ

ಮತ್ತೊಂದೆಡೆ, ಹೀರೊ ಎಚ್‌ಎಫ್ ಡಿಲಕ್ಸ್ ಬೈಕ್‌ನ ಒಟ್ಟು 91,977 ಯೂನಿಟ್‌ಗಳು ಮಾರಾಟವಾಗಿದ್ದು, ಇದು ಬರೋಬ್ಬರಿ ಶೇಕಡಾ 120.86 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಬೈಕ್‌ಗಳ ಪಟ್ಟಿಯಲ್ಲಿ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದರೆ, ಎಚ್‌ಎಫ್ ಡಿಲಕ್ಸ್ ಆರನೇ ಸ್ಥಾನದಲ್ಲಿದೆ.

56
ಹೀರೊ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೆಲೆ ಮತ್ತು ವೈಶಿಷ್ಟ್ಯಗಳು
Image Credit : stockPhoto

ಹೀರೊ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೆಲೆ ಮತ್ತು ವೈಶಿಷ್ಟ್ಯಗಳು

ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಅತ್ಯಂತ ಕಡಿಮೆ ಮೇಂಟೆನೆನ್ಸ್ ವೆಚ್ಚದ ಕಾರಣದಿಂದಾಗಿ ಸ್ಪ್ಲೆಂಡರ್ ಬೈಕ್ ದೇಶದ ಕೆಳ ಮಧ್ಯಮ ವರ್ಗದ (Lower Middle Class) ಜನರ ಸಾರ್ವಕಾಲಿಕ ಫೇವರೆಟ್ ಬೈಕ್ ಎನಿಸಿಕೊಂಡಿದೆ. ಸ್ಪ್ಲೆಂಡರ್ ಪ್ಲಸ್ ಬೈಕ್‌ನ ಪ್ರಸ್ತುತ ಎಕ್ಸ್-ಶೋರೂಮ್ ಬೆಲೆ ರೂ. 77,557 ರಿಂದ ಆರಂಭವಾಗಿ ರೂ. 80,331 ರಷ್ಟಿದೆ. ಇದರಲ್ಲಿ 97.2 ಸಿಸಿ ಏರ್-ಕೂಲ್ಡ್, 4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಇದು 7.91 BHP ಪವರ್ ಮತ್ತು 8.05 NM ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ ಕನಿಷ್ಠ 65 ರಿಂದ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ (i3S ತಂತ್ರಜ್ಞಾನ), ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (CBS), ಟ್ಯೂಬ್‌ಲೆಸ್ ಟೈರ್‌ಗಳು, ಅಲಾಯ್ ವೀಲ್ಸ್, ಸೈಡ್-ಸ್ಟ್ಯಾಂಡ್ ಕಟ್-ಆಫ್ ಸೆನ್ಸರ್ ಮತ್ತು ಮೊಬೈಲ್ ಚಾರ್ಜ್ ಮಾಡಲು ಯುಎಸ್‌ಬಿ (USB) ಪೋರ್ಟ್ ಸೌಲಭ್ಯವನ್ನು ಇದು ಒಳಗೊಂಡಿದೆ.

66
ಹೀರೊ ಎಚ್‌ಎಫ್ ಡಿಲಕ್ಸ್ (Hero HF Deluxe) ಬೆಲೆ ವೈಶಿಷ್ಟ್ಯಗಳು
Image Credit : Google

ಹೀರೊ ಎಚ್‌ಎಫ್ ಡಿಲಕ್ಸ್ (Hero HF Deluxe) ಬೆಲೆ ವೈಶಿಷ್ಟ್ಯಗಳು

ಹೀರೊ ಮೋಟೋಕಾರ್ಪ್ ಸಂಸ್ಥೆಯ ಅತ್ಯಂತ ಅಗ್ಗದ ಹಾಗೂ ಬಲಿಷ್ಠ ಬಿಲ್ಡ್ ಕ್ವಾಲಿಟಿಗೆ ಹೆಸರಾಗಿರುವ ಬೈಕ್ ಎಂದರೆ ಅದು ಎಚ್‌ಎಫ್ ಡಿಲಕ್ಸ್. ಈ ಬೈಕ್‌ನ ಎಕ್ಸ್-ಶೋರೂಮ್ ಬೆಲೆ ಕೇವಲ ರೂ. 59,477 ರಿಂದ ಆರಂಭವಾಗಿ ಟಾಪ್ ಮಾಡೆಲ್‌ಗೆ ರೂ. 70,442 ರವರೆಗೆ ಇರುತ್ತದೆ. ಇದರಲ್ಲಿ 97.2 ಸಿಸಿ ಏರ್-ಕೂಲ್ಡ್ 4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ OHC ಎಂಜಿನ್ ಇದ್ದು, ಇದು 8.02 PS ಪವರ್ ಮತ್ತು 8.05 NM ಪೀಕ್ ಟಾರ್ಕ್ ಜನರೇಟ್ ಮಾಡುತ್ತದೆ. ಇದು 4-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಹೊಂದಿದೆ. ಈ ಬೈಕ್ ಕೂಡ ಪ್ರತಿ ಲೀಟರ್‌ಗೆ ಸರಿಸುಮಾರು 70 ಕಿಲೋಮೀಟರ್‌ವರೆಗೆ ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಹೀರೊದ ಪ್ರಸಿದ್ಧ i3S ತಂತ್ರಜ್ಞಾನ, ಉದ್ದ ಹಾಗೂ ಅಗಲವಾದ ಆರಾಮದಾಯಕ ಸೀಟುಗಳು, 18-ಇಂಚಿನ ಅಲಾಯ್ ವೀಲ್ಸ್, ಟ್ಯೂಬ್‌ಲೆಸ್ ಟೈರ್‌ಗಳು, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (CBS), ಅನಾಲಾಗ್ ಸ್ಪೀಡೋಮೀಟರ್ ಮತ್ತು ಫ್ಯುಯೆಲ್ ಗೇಜ್ ಕನ್ಸೋಲ್‌ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಬೈಕ್
ವ್ಯವಹಾರ
ವ್ಯಾಪಾರ ಸುದ್ದಿ
ಆಟೋಮೊಬೈಲ್
ಸುದ್ದಿ

Latest Videos
Recommended Stories
Recommended image1
ಬ್ರ್ಯಾಂಡೆಡ್‌ ಶೂ ಬೆಲೆಯಲ್ಲಿ ಸಿಗ್ತಿತ್ತು ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಇಂಟರ್ನೆಟ್‌ನಲ್ಲಿ ವೈರಲ್‌ ಆದ 1986ರ ಬಿಲ್‌!
Recommended image2
ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಕ್ಕ ಹೊಸ ಯೆಜ್ಡಿ ಬೈಕ್ ಏರಿ ಸಂಭ್ರಮಿಸಿದ ಡಿಸಿಎಂ ಡಿಕೆ ಶಿವಕುಮಾರ್
Recommended image3
ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಯೆಜ್ಡಿ ರೋಡ್ ಸ್ಟಾರ್ ಬೈಕ್ ಗಿಫ್ಟ್, ಕಾಲೇಜು ದಿನಕ್ಕೆ ಮರಳಿದ ಡಿಕೆಶಿ
Related Stories
Recommended image1
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
Recommended image2
Hero Super Splendor XTEC: ಒಂದೇ ಒಂದು ಫುಲ್ ಟ್ಯಾಂಕ್‌ಗೆ 700 ಕಿ.ಮೀ ಓಡುತ್ತೆ! ಬೆಲೆ ಕಡಿಮೆ, ಮೈಲೇಜ್ ಸಿಕ್ಕಾಪಟ್ಟೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved