ಪ್ರಧಾನಿ ನರೇಂದ್ರ ಮೋದಿಯ ಪ್ರವಾಸದಲ್ಲಿ ಇಟಲಿ ಭೇಟಿ ಭಾರಿ ಚರ್ಚೆಯಾಗುತ್ತಿದೆ. ಕೊಲೊಸಿಯಂ ಭೇಟಿ ಹಾಗೂ ಮಾತುಕತೆ ಬೆನ್ನಲ್ಲೇ ಇದೀಗ ಖುದ್ದು ಇಟಲಿ ಪ್ರಧಾನಿ ಸೆಲ್ಫಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೋದಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ.

ರೋಮ್ (ಮೇ.20) ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸದಲ್ಲಿ ಇಟಲಿ ಭೇಟಿ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಕೋಲೋಸಿಯಂನಲ್ಲಿ ದ್ವಿಪಕ್ಷೀಯ ಮಾತುಕತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ. ಎರಡು ರಾಷ್ಟ್ರಗಳ ಸಂಬಂಧವನ್ನು ಪ್ರಧಾನಿ ಮೋದಿ 2 ರೂಪಾಯಿ ಚಾಕೋಲೋಟ್ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೆಲೋನಿಗೆ ಮೆಲೋಡಿ ಗಿಫ್ಟ್

ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದಲ್ಲಿ ಭಾರತದ ಕರಕುಶಲತೆ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಭಾರತದ ಪರಂಪರೆ, ಐತಿಹಾಸಕ ಹಿನ್ನಲೆಯ ವಸ್ತುಗಳನ್ನು ಮೋದಿ ಗಿಫ್ಟ್ ಆಗಿ ನೀಡಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ವಿಶೇಷ ಗಿಫ್ಟ್ ಕೊಂಡೊಯ್ದಿದ್ದರು. ಬಳಿಕ ಮೆಲೋನಿ ಭೇಟಿ ವೇಳೆ ಈ ಗಿಫ್ಟ್ ನೀಡಿದ್ದಾರೆ. ಮೆಲೋನಿಗೆ ಮೋದಿ ಮೆಲೋಡಿ ಟೋಫಿ ಗಿಫ್ಟ್ ನೀಡಿದ್ದಾರೆ. ಮೆಲೋಡಿ ಚಾಕೋಲೇಟ್‌ಗಳನ್ನು ಮೆಲೋಡಿಗೆ ಗಿಫ್ಟ್ ನೀಡಿದ್ದಾರೆ.

ಮೊದಲು ಮಲೋಡಿ ಪದ ಬಳಸಿ ಸಂಚಲನ ಮೂಡಿಸಿದ್ದ ಮೆಲೋನಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಮೆಲೋನಿ ಹಲವು ಭಾರಿ ಉಭಯ ರಾಷ್ಟ್ರಗಳ ಮಾತುಕತೆ ವೇಳೆ ಭೇಟಿಯಾಗಿದ್ದಾರೆ. ಕಳೆದ ಬಾರಿ ಮೋದಿ ಹಾಗೂ ಮೆಲೋನಿ ಭೇಟಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಮತ್ತೊಂದು ಕಾರಣ ಇಟಲಿ ಪ್ರಧಾನಿ ಮೋದಿ ಹಾಗೂ ಮೆಲೋನಿ ಭೇಟಿಯನ್ನು ಮೆಲೋಡಿ ಎಂದು ಕರೆದಿದ್ದರು. ಇದೀಗ ಮೋದಿ ಮೆಲೋಡಿ ಚಾಕೋಲೇಟ್ ನೀಡಿ ಭಾರತ ಹಾಗೂ ಇಟಲಿ ನಡುವಿನ ದ್ವಿಪಕ್ಷೀಯ ಸಂಬಂಧ ಜೊತೆ ಭಾವನಾತ್ಮಕವಾಗಿಯೂ ಬೆಸೆದಿದ್ದಾರೆ.

Scroll to load tweet…

ವಿಡಿಯೋ ಮಾಡಿ ಸಂಭ್ರಮಿಸಿದ ಮೆಲೋನಿ

ಪ್ರಧಾನಿ ಮೋದಿ ನೀಡಿದ ಗಿಫ್ಟ್ ಕುರಿತು ಜಾರ್ಜಿಯಾ ಮೆಲೋನಿ ವಿಡಿಯೋ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ನನಗೆ ವಿಶೇಷ ಉಡುಗೊರೆಯೊಂದನ್ನು ತಂದಿದ್ದಾರೆ. ಈ ಉಡುಗೊರೆ ವಿಶೇಷ ಹಾಗೂ ಅತ್ಯುತ್ತಮವಾಗಿದೆ ಎಂದು ಮೆಲೋನಿ ಹೇಳಿದ್ದಾರೆ. ಮೋದಿ ಜೊತೆಗೆ ನಿಂತು ಕೊಂಡ ವಿಡಿಯೋ ಮಾಡಿದ್ದಾರೆ. ವಿಶೇಷ ಅಂದರೆ ಮೋದಿ ವಿಶೇಷ ಉಡುಗೊರೆ ನನಗೆ ತಂದಿದ್ದಾರೆ ಎಂದಾಗ ಮೋದಿ, ಮೆಲೋಡಿ ಎಂದಿದ್ದಾರೆ. ಬಳಿಕ ಇಬ್ಬರ ನಗು ಈ ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ದ್ವಿಪಕ್ಷೀಯ ಮಾತಕತೆಯೂ ಭಾರಿ ಚರ್ಚೆಯಾಗುತ್ತಿದೆ. ಮೆಲೋನಿ ಜೊತೆಗೆ ಡಿನ್ನರ್ ಸವಿದ ಮೋದಿ, ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿದ್ದಾರೆ. ಭಾರತ ಹಾಗೂ ಇಟಲಿ ನಡುವಿನ ಸಂಬಂಧ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ದ್ವಿಪಕ್ಷೀಯ ವ್ಯವಹಾರಗಳ ಕುರಿತು ಚರ್ಚಿಸಿದ್ದಾರೆ. ರೋಮ್‌ನ ಹಲವು ಐತಿಹಾಸಿಕ ತಾಣಗಳಲ್ಲಿ ಮೋದಿ ಹಾಗೂ ಮೆಲೋನಿ ಭೇಟಿ ಹಾಗೂ ನಡೆಸಿದ ಮಾತುಕತೆ ಫೋಟೋಗಳು ವೈರಲ್ ಆಗಿದೆ.

ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ನೀಡಿದ ಮೆಲೋನಿ

ಪ್ರಧಾನಿ ಮೋದಿ ಇಟಲಿಗೆ ಬಂದಿಳಿಯುತ್ತಿದ್ದಂತೆ ಜಾರ್ಜಿಯಾ ಮೆಲೋನಿ ಅದ್ಧೂರಿ ಸ್ವಾಗತ ನೀಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ರೋಮ್‌ಗೆ ಬಂದಿಳಿದ ನನ್ನ ಆತ್ಮೀಯ ಸ್ನೇಹಿತನಿಗೆ ಸ್ವಾಗತ ಎಂದು ಮೆಲೋನಿ ಪೋಸ್ಟ್ ಮಾಡಿದ್ದರು.

ಇಟಲಿಯಲ್ಲಿರುವ ಭಾರತೀಯ ಸಮುದಾಯವನ್ನು ಮೋದಿ ಭೇಟಿಯಾಗಿದ್ದಾರೆ. ಮೋದಿ ಭೇಟಿ, ಜಾರ್ಜಿಯಾ ಮೆಲೋನಿಗೆ ನೀಡಿದ ಗಿಫ್ಟ್ ಹಾಗೂ ಕೊಲೊಸಿಯಂನಲ್ಲಿನ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಲವು ಮೀಮ್ಸ್ ಕೂಡ ಹರಿದಾಡುತ್ತಿದೆ.