MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬೆಂಬಲ ವಾಪಸ್ ಪಡೀತೀವಿ; ಸಿಎಂ ವಿಜಯ್ ಟಿವಿಕೆ ಸರ್ಕಾರಕ್ಕೆ ಸಿಪಿಎಂ ಖಡಕ್ ಎಚ್ಚರಿಕೆ!

ಬೆಂಬಲ ವಾಪಸ್ ಪಡೀತೀವಿ; ಸಿಎಂ ವಿಜಯ್ ಟಿವಿಕೆ ಸರ್ಕಾರಕ್ಕೆ ಸಿಪಿಎಂ ಖಡಕ್ ಎಚ್ಚರಿಕೆ!

ಟಿವಿಕೆ ಸರ್ಕಾರಕ್ಕೆ ಎಐಎಡಿಎಂಕೆ ಶಾಸಕರು ಬೆಂಬಲ ನೀಡಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.  ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಿಎಂ ವಿಜಯ್ ಸರ್ಕಾರಕ್ಕೆ ಸಿಪಿಎಂ ಖಡಕ್ ಸಂದೇಶವೊಂದನ್ನು ರವಾನಿಸಿದೆ ಎಂದು ವರದಿಯಾಗುತ್ತಿದೆ.

1 Min read
Author : Mahmad Rafik
Published : May 20 2026, 08:31 AM IST
Share this Photo Gallery
  • FB
  • TW
  • Linkdin
  • Whatsapp
14
ತಮಿಳುನಾಡು ರಾಜಕೀಯ
Image Credit : X

ತಮಿಳುನಾಡು ರಾಜಕೀಯ

ತಮಿಳುನಾಡು ವಿಧಾನಸಭೆಯ ವಿಶ್ವಾಸಮತ ಯಾಚನೆ ವೇಳೆ, ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದಲ್ಲಿ ಎಐಎಡಿಎಂಕೆಯ 25 ಶಾಸಕರು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಇದರಿಂದಾಗಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಸಿ.ವಿ. ಷಣ್ಮುಗಂ ನಡುವೆ ಪಕ್ಷದಲ್ಲಿ ಆಂತರಿಕ ಸಂಘರ್ಷ ಶುರುವಾಗಿದೆ. ಇನ್ನೊಂದೆಡೆ, ಟಿವಿಕೆಯನ್ನು ಬೆಂಬಲಿಸಿದ ಎಐಎಡಿಎಂಕೆ ಬಣಕ್ಕೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎಂಬ ವದಂತಿ ಹಬ್ಬಿದೆ.
Add Asianetnews Kannada as a Preferred SourcegooglePreferred
24
ಎಐಎಡಿಎಂಕೆ ಶಾಸಕರ ಒಂದು ಬಣ
Image Credit : our own

ಎಐಎಡಿಎಂಕೆ ಶಾಸಕರ ಒಂದು ಬಣ

ಒಂದು ವೇಳೆ ಟಿವಿಕೆ ಪಕ್ಷವು ಎಐಎಡಿಎಂಕೆಯ ಒಂದು ಬಣವನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದರೆ, ನಾವು ಖಂಡಿತವಾಗಿಯೂ ನಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುತ್ತೇವೆ ಎಂದು ಸಿಪಿಎಂ ಸ್ಪಷ್ಟಪಡಿಸಿದೆ.

Related Articles

Related image1
ತಮಿಳುನಾಡು ಟಿವಿಕೆ ಸರ್ಕಾರಕ್ಕೆ ಕಂಟಕ, ವಿಜಯ್ ಆಡಳಿತ 6 ತಿಂಗಳಲ್ಲಿ ಕೊನೆ: ಭವಿಷ್ಯ ನುಡಿದ ರಾಧಾಕೃಷ್ಣನ್!
Related image2
ಸ್ನೇಹಿತ-ಸಿಎಂ ವಿಜಯ್‌ಗೇ ಶಾಕ್! 'ದಳಪತಿ' ಬದ್ಧ ವೈರಿಯ ಮಗನ ಜೊತೆ ಕೈಜೋಡಿಸಿದ ತ್ರಿಶಾ ಕೃಷ್ಣನ್
34
ಬೆಂಬಲ ನೀಡಿರುವ ಬಗ್ಗೆ ಮರುಚಿಂತನೆ
Image Credit : Asianet News

ಬೆಂಬಲ ನೀಡಿರುವ ಬಗ್ಗೆ ಮರುಚಿಂತನೆ

ತಿರುತ್ತರೈಪುಂಡಿಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದರು. 'ತಮಿಳುನಾಡಿನಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ಎಡಪಕ್ಷಗಳು ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಹೊರಗಿನಿಂದ ಬೆಂಬಲ ನೀಡಿವೆ. ಅದರಂತೆ ಟಿವಿಕೆ ಸರ್ಕಾರ ರಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಎಐಎಡಿಎಂಕೆ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನರ ತೀರ್ಪಿಗೆ ವಿರುದ್ಧವಾಗುತ್ತದೆ. ಹಾಗೇನಾದರೂ ನಡೆದರೆ, ಟಿವಿಕೆ ಸರ್ಕಾರಕ್ಕೆ ನೀಡಿದ ಬೆಂಬಲದ ಬಗ್ಗೆ ಮರುಚಿಂತನೆ ನಡೆಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Trisha Secret: ನಟಿ ತ್ರಿಶಾ 'ಗುಡ್ ಟೈಂ' ಸೀಕ್ರೆಟ್ ಹೊರಬಿತ್ತು; ವಿಜಯ್-ಸೂರ್ಯ ಲೈಫಲ್ಲಿ ಈ ನಟಿಯ 'ಕಾಲ್ಗುಣ' ಹಾಗೆಲ್ಲಾ ಇದ್ಯಾ?

44
ವಿಜಯ್ ಆ ಹಂತಕ್ಕೆ ಹೋಗಲ್ಲ ಎಂಬುವುದು ನಮ್ಮ ನಂಬಿಕೆ!
Image Credit : our own

ವಿಜಯ್ ಆ ಹಂತಕ್ಕೆ ಹೋಗಲ್ಲ ಎಂಬುವುದು ನಮ್ಮ ನಂಬಿಕೆ!

'ಜನರು ಎಐಎಡಿಎಂಕೆ ಮತ್ತು ಡಿಎಂಕೆ ವಿರುದ್ಧ ಮತ ಹಾಕಿದ್ದಾರೆ. ಹೀಗಿರುವಾಗ ಎಐಎಡಿಎಂಕೆಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಜನರ ತೀರ್ಪಿಗೆ ವಿರುದ್ಧ. ಉತ್ತಮ ಆಡಳಿತ ನೀಡುತ್ತೇನೆ ಎಂಬ ಮಾತಿಗೆ ಇದು ವಿರುದ್ಧವಾಗಿ ಬಿಡುತ್ತದೆ. ಮತ್ತೊಂದು ಚುನಾವಣೆಯನ್ನು ಎದುರಿಸಬಾರದು ಮತ್ತು ಹಿಂಬಾಗಿಲಿನಿಂದ ಬಿಜೆಪಿ ರಾಜ್ಯಪಾಲರ ಆಡಳಿತವನ್ನು ತರಬಾರದು ಎಂಬ ಕಾರಣಕ್ಕಾಗಿಯೇ ನಾವು ಟಿವಿಕೆಗೆ ಬೆಂಬಲ ನೀಡಿದ್ದೇವೆ. ಅವರು ಅಂತಹ ಹಂತಕ್ಕೆ ಹೋಗುವುದಿಲ್ಲ ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rambha Viral Post: ತಮಿಳುನಾಡಿನ ದೊರೆ ಆಗಿದ್ದಕ್ಕೆ ನಟ ವಿಜಯ್ ಜೋಸೆಫ್‌ಗೆ ನಟಿ ರಂಭಾ ಮಾಡಿರೋ ಪೋಸ್ಟ್ ಏನ್ ಗೊತ್ತಾ?

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತಮಿಳುನಾಡು
ತಮಿಳಗ ವೆಟ್ರಿ ಕಳಗಂ
ದಳಪತಿ ವಿಜಯ್

Latest Videos
Recommended Stories
Recommended image1
India Latest News Live: IPL 2026 - ನಿನ್ನೆ ನಡೆದ ಲಖನೌ ಸೂಪರ್ ಜೈಂಟ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Recommended image2
Economic Crisis: ದೇಶಕ್ಕೆ ಶೀಘ್ರದಲ್ಲೇ ಭಾರೀ ಆರ್ಥಿಕ ಸಂಕಷ್ಟ: ರಾಹುಲ್ ಗಾಂಧಿ ಎಚ್ಚರಿಕೆ!
Recommended image3
Mamata Banerjee: ಮೋದಿ ದಿನಗಳು ಮುಗಿದಿವೆ, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯುತ್ತೇವೆ: ಮಮತಾ ಬ್ಯಾನರ್ಜಿ ವಾಗ್ದಾಳಿ
Related Stories
Recommended image1
ತಮಿಳುನಾಡು ಟಿವಿಕೆ ಸರ್ಕಾರಕ್ಕೆ ಕಂಟಕ, ವಿಜಯ್ ಆಡಳಿತ 6 ತಿಂಗಳಲ್ಲಿ ಕೊನೆ: ಭವಿಷ್ಯ ನುಡಿದ ರಾಧಾಕೃಷ್ಣನ್!
Recommended image2
ಸ್ನೇಹಿತ-ಸಿಎಂ ವಿಜಯ್‌ಗೇ ಶಾಕ್! 'ದಳಪತಿ' ಬದ್ಧ ವೈರಿಯ ಮಗನ ಜೊತೆ ಕೈಜೋಡಿಸಿದ ತ್ರಿಶಾ ಕೃಷ್ಣನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved