ಅದೃಷ್ಟ ಬಂದರೆ ಹೀಗೆ ಬರಬೇಕು! ಒಬ್ಬ ಮಹಿಳೆ ರಸ್ತೆ ಬದಿಯಲ್ಲಿ ಒಂದು ಹಾರವನ್ನು ಖರೀದಿಸಿದ್ದಳು. ಈ ಆ ವಸ್ತುವಿನಿಂದ ಆಕೆಯ ಬದುಕೇ ಬದಲಾಗಿ ಹೋಗಿದೆ. ಇಂಟರೆಸ್ಟಿಂಗ್ ಆಗಿರುವ ಸ್ಟೋರಿ ಇಲ್ಲಿದೆ.
ಕೆಲವೊಮ್ಮೆ ಅದೃಷ್ಟಗಳು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತಲೂ ಉಹಿಸೋಕೆ ಆಗೋದಿಲ್ಲ. ಸಿಕ್ಕಾಗ ದೊಡ್ಡ ಸಪ್ರೈಸ್ ಸಿಕ್ಕಿಬಿಡುತ್ತದೆ. ಅದೇ ರೀತಿ ಇಲ್ಲೊಬ್ಬ ಮಹಿಳೆ 1250 ರೂಪಾಯಿಗೆ ಖರೀದಿಸಿದ್ದ ಒಂದು ವಸ್ತು ಬರೋಬ್ಬರಿ 2 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇದು ಅದೃಷ್ವವಲ್ಲದೇ ಮತ್ತಿನ್ನೇನು?
ಹೌದು.. ನಾರ್ಮಾ ಇಫಿಲ್ ಅದೃಷ್ಟವನ್ನು ತಂದುಕೊಂಡ ಮಹಿಳೆ. ಇವರು ಅಮೆರಿಕದ ಫಿಲಡೆಲ್ಫಿಯಾ ಮೂಲದವರು. ಇವರು ಕೆಲವು ವರ್ಷಗಳ ಬ್ರೂಕ್ಲಿನ್‌ನ ಫ್ಲೀ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಆಗ ಅವರ ಕಣ್ಣಿಗೆ ವಿಚಿತ್ರ ಹಾರವೊಂದು ಬಿದ್ದಿದೆ. ಅದು ಅವರಿಗೆ ತುಂಬಾನೇ ಇಷ್ಟವಾಗಿದೆ. ಕೊನೆಗೆ ಅದನ್ನು ಖರೀದಿಸಿದ್ದಾರೆ. ಬೆಳ್ಳಿ ತಂತಿ ಮತ್ತು ದಾರಗಳಿಂದ ಮಾಡಿದ ವಿನ್ಯಾಸ ಅದಾಗಿತ್ತು. ಅಂದಿನ ಮಾರುಕಟ್ಟೆಯಲ್ಲಿ ಆ ಸರವನ್ನು ಅವರು ಕೇವಲ 1250 ರೂಪಾಯಿ ನೀಡಿ ಖರೀದಿಸಿ ಮನೆಗೆ ತಂದಿದ್ದರು. ಅದು ಸಾಮಾನ್ಯ ವಿಂಟೇಜ್ ಸರ ಅಂದ್ಕೊಡಿದ್ದ ಮಹಿಳೆ, ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಹೋಗುವಾಗ ಹಾಕಿಕೊಂಡು ಹೋಗಿದ್ದಳು. ಈ ಸಂದರ್ಭದಲ್ಲಿ ಆಕೆಯ ಕತ್ತಿನಲ್ಲಿ ನೋಡಿದ ಸರವನ್ನು ಅದೆಷ್ಟೋ ಮಂದಿ ಇಷ್ಟಪಟ್ಟು ತುಂಬಾನೇ ವಿಚಾರಿಸುತ್ತಿದ್ದರು.
ಅಸಲಿ ರಹಸ್ಯ ಗೊತ್ತಾಗಿದ್ದು ಯಾವಾಗ
ಒಮ್ಮೆ ನಾರ್ಮಾಆಭರಣ ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಅದು ಪ್ರಸಿದ್ಧ ಶಿಲ್ಪಿ ಅಲೆಕ್ಸಾಂಡರ್ ಕ್ಯಾಲ್ಡರ್ ಅವರ ಅಭರಣ ಪ್ರದರ್ಶನವಾಗಿತ್ತು. ಅಲ್ಲಿನ ಕೆಲವು ಆಭರಣಗಳನ್ನ ವೀಕ್ಷಿಸುತ್ತಿದ್ದ ನಾರ್ಮಾಗೆ ಅಚ್ಚರಿಯೊಂದು ಕಾದಿತ್ತು. ಹೀಗೆ ವೀಕ್ಷಣೆ ಮಾಡುತ್ತಿದ್ದಾಗ ಅವಳಲ್ಲಿದ್ದ ಹಾರದ ಅನೇಕ ಮಾದರಿಗಳನ್ನ ಕಂಡುಕೊಂಡಳು. ಬಳಿಕ ಆಕೆಗೆ ತನ್ನ ಬಳಿಯಿದ್ದ ಹಾರದ ಮೇಲಿನ ಕುತೂಹಲ ಹೆಚ್ಚಾಗಿದೆ. ನಂತರ ಆಕೆ ತಜ್ಞರ ಭೇಟಿಯಾಗಿ ಸರದ ನಿಜವಾದ ವ್ಯಾಲ್ಯೂ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾರೆ.
ಸರ್ಪ್ರೈಸ್ ಕಾದಿತ್ತು
ತಜ್ಞರ ಬಳಿ ಹೋದಾಗ ಆ ಮಹಿಳೆಗೆ ನಿರೀಕ್ಷೆಯೇ ಮಾಡಿರದ ಅಚ್ಚರಿ ಕಾದಿತ್ತು. ತಾನು ಇಷ್ಟುದಿನ ಧರಿಸಿದ್ದ ಸರವನ್ನು 1940ರ ದಶಕದಲ್ಲಿ ಅಲೆಕ್ಸಾಂಡರ್ ಕ್ಯಾಲ್ಡರ್ ಸ್ವತಃ ಮಾಡಿದ್ದ ಎಂಬುದನ್ನು ತಿಳಿದಕೊಂಡಿದ್ದಾಳೆ. ಕ್ಯಾಲ್ಡರ್ ವಿನ್ಯಾಸಗೊಳಿಸಿದ ಅಪರೂಪದ ಆಭರಣ ಎಂದು ತಿಳಿದಾಗ ಆಕೆಗೆ ಅವಳನ್ನೇ ನಂಬಲು ಸಾಧ್ಯವಾಗಲಿಲ್ಲ. ಕೊನೆಗೆ ನಾರ್ಮಾ ಆ ಸರವನ್ನು ವಿಶ್ವಪ್ರಸಿದ್ಧ ಕ್ರಿಸ್ಟೀಸ್ ಹರಾಜು ಮನೆಗೆ ಹಸ್ತಾಂತರಿಸಲು ನಿರ್ಧರಿಸಿದಳು. 2013ರಲ್ಲಿ ನಡೆದ ಯುದ್ಧಾನಂತರದ ಮತ್ತು ಸಮಕಾಲೀನ ಕಲಾ ಹರಾಜಿನಲ್ಲಿ ಅನ್‌ಟೈಲ್ಡ್ ಹೆಸರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಹಾರವು $200,000 ರಿಂದ $300,000 ವರೆಗೆ ಬೆಲೆ ಬಾಳುತ್ತದೆ ಎಂದು ಭಾವಿಸಲಾಗಿತ್ತು. ತೀವ್ರ ಪೈಪೋಟಿಯಿಂದಾಗಿ ಯುರೋಪಿಯನ್ ಡೀಲರ್ ಒಬ್ಬರು ಅದನ್ನು 2.23 ಕೋಟಿಗೆ ಖರೀದಿಸಿದರು. ರಸ್ತೆ ಬದಿಯಲ್ಲಿ ಕಂಡು ಇಷ್ಟಪಟ್ಟು ತಂದಿದ್ದ ಹಾರವೊಂದು ಆಕೆಗೆ ಅದೃಷ್ಟವನ್ನು ತಂದುಕೊಟ್ಟಿದೆ. ಕೇವಲ 1250 ರೂಪಾಯಿಯ ಸರ 2ಕೋಟಿಗೆ ಬೆಲೆ ಬಾಳಿತು.
ಇಂದಿಗೂ ಕೂಡ ನಮ್ಮ ಪುರಾತನ ಕಾಲದ ಆಭರಣಗಳಿಗೆ ತುಂಬಾನೇ ವ್ಯಾಲ್ಯೂ ಇದೆ. ಅಲೆಕ್ಸಾಂಡರ್ ಕ್ಯಾಲ್ಡರ್ ಒಬ್ಬ ಆಭರಣ ಶಿಲ್ಪಿ ಆಗಿದ್ದ. ಅಮೆರಿಕದ ಮಹಾನ್ ಕಲಾವಿದ ಆಗಿದ್ದ. 1920 ಮತ್ತು 1930 ರ ದಶಕಗಳಲ್ಲಿ ಅವರು ಲೋಹಗಳು, ತಂತಿ ಮತ್ತು ವಿವಿಧ ವಸ್ತುಗಳನ್ನು ಬಳಸಿ ಕೈಯಿಂದ ಆಭರಣಗಳನ್ನು ರಚಿಸುತ್ತಿದ್ದರು. ನಂತರ ಅದನ್ನು ಸ್ನೇಹಿತರು, ನೃತ್ಯಗಾರರು ಮತ್ತು ಕಲಾವಿದರಿಗೆ ಉಡುಗೊರೆಯಾಗಿ ನೀಡುತ್ತಿದ್ದರು. ಹೀಗಾಗಿ ಅವರ ಆಭರಣಗಳು ವಾಣಿಜ್ಯ ಮಾರುಕಟ್ಟೆಗಳಲ್ಲಿ ಸಿಗೋದಿಲ್ಲ. ಬದಲಾಗಿ ವೈಯಕ್ತಿಕ ಸಂಪರ್ಕಗಳ ಮೂಲಕ ಕೈಗೆ ಬದಲಾದವು ಎಂದು ಹೇಳಲಾಗುತ್ತದೆ.


