ಟೀಂ ಇಂಡಿಯಾ ವೇಗಿ ಜಸ್‌ಪ್ರಿತ್ ಬುಮ್ರಾ ಜಪಾನ್ ಪ್ರವಾಸದ ವೇಳೆ ಕಸ್ಟಮೈಸ್ಡ್ ದಿಂಬು ಖರೀದಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಅವರ ಪತ್ನಿ ಸಂಜನಾ ಗಣೇಶನ್ ತಮಾಷೆಯಾಗಿ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದರು? ಸ್ಟೋರಿ ಓದಿ..
ಟೀಂ ಇಂಡಿಯಾ ವೇಗಿ ಜಸ್‌ಪ್ರಿತ್ ಬುಮ್ರಾಗೆ ಪತ್ನಿ ಸಂಜನಾ ಗಣೇಶನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಬುಮ್ರಾ ಜಪಾನಿನಲ್ಲಿ ಏನು ಮಾಡಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
ಟೀಂ ಇಂಡಿಯಾ ವೇಗಿ ಜಪ್‌ಪ್ರಿತ್ ಬುಮ್ರಾ ಅಂದ್ರೆ ಎದುರಾಳಿಗಳಿಗೆ ನಡುಕ ಹುಟ್ಟುತ್ತೆ. ಅಷ್ಟರಮಟ್ಟಿಗೆ ಮೈದಾನದಲ್ಲಿ ಅವರ ಅಬ್ಬರ ಇದ್ದೇ ಇರುತ್ತದೆ. ಸದ್ಯ ಜಪಾನ್ ಪ್ರವಾಸದಲ್ಲಿರುವ ಬುಮ್ರಾರನ್ನ ಪತ್ನಿಯೇ ಕಾಲೆಳೆದಿದ್ದು, ಭಾರೀ ಸುದ್ದಿ ಆಗ್ತಿದೆ. ಹೌದು, ಖ್ಯಾತ ನಿರೂಪಕಿ ಹಾಗೂ ಬುಮ್ರಾ ಪತ್ನಿ ಸಂಜನಾ ಗಣೇಶನ್ ಮಾಡಿದ ಕಾಮೆಂಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಸಂಜನಾ ಗಣೇಶನ್ ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಇಬ್ಬರ ಮಧ್ಯೆ ಆಗಿದ್ದೇನು?
ಭಾರತ ಮತ್ತು ಜಪಾನ್ ನಡುವಿನ ಏಕೈಕ ಟಿ20 ಪಂದ್ಯಕ್ಕಾಗಿ ಭಾರತ ತಂಡ ಅಲ್ಲಿಗೆ ತೆರಳಿತ್ತು. ಪ್ರವಾಸದ ವೇಳೆ ಸಿಕ್ಕ ಬಿಡುವಿನಲ್ಲಿ ಬುಮ್ರಾ ಮತ್ತು ಅಕ್ಷರ್ ಪಟೇಲ್ ಸ್ಥಳೀಯ ಅಂಗಡಿಗೆ ಭೇಟಿ ನೀಡಿದ್ದರು. ಅವರಿಬ್ಬರು ಮಲಗಲು ಬೇಕಾಗಿದ್ದ ವಸ್ತುಗಳನ್ನ ಖರೀದಿಸಲು ಅಲ್ಲಿಗೆ ಹೋಗಿದ್ದರು. ಅಲ್ಲಿ ಬುಮ್ರಾ ತಮ್ಮ ಕುತ್ತಿಗೆ ಮತ್ತು ನಿದ್ರೆಯ ಭಂಗಿಗೆ ತಕ್ಕಂತೆ ಕಸ್ಟಮೈಸ್ಡ್ ದಿಂಬನ್ನು ನೋಡುತ್ತಿದ್ದರು. ಆಗ ಅಂಗಡಿಯ ಸಿಬ್ಬಂದಿ ಬುಮ್ರಾರ ಕುತ್ತಿಗೆಯ ಅಳತೆ ಪಡೆದು ಗಂಭೀರವಾಗಿ ಪರೀಕ್ಷೆ ಮಾಡುತ್ತಿದ್ದರು. ಇದನ್ನು ಸಹ ಆಟಗಾರ ಅಕ್ಷರ್ ಪಟೇಲ್ ವಿಡಿಯೋ ಮಾಡುತ್ತಾ ನಗುತ್ತಿದ್ದರು.
ವಿಡಿಯೋದಲ್ಲಿ ಮಾತನಾಡಿದ ಬುಮ್ರಾ.. ನನ್ನ ನಿದ್ರೆಯ ಬಗ್ಗೆ ಇಷ್ಟೊಂದು ಆಳವಾಗಿ, ಇಷ್ಟು ವಿವರವಾಗಿ ನಾನೆಂದೂ ಯೋಚನೆಯೇ ಮಾಡಿರಲಿಲ್ಲ. ನನ್ನ ನಂತರ ಅಕ್ಷರ್ ಸರದಿ ಇದೆ ಎಂದು ಎಂದು ತಮಾಷೆಯಾಗಿ ಹೇಳಿದ್ದರು. ಅದಕ್ಕೆ ಪತ್ನಿ ಸಂಜನಾ ಕಾಮೆಂಟ್ ಮಾಡಿದ್ದಾರೆ. ಅಕ್ಷರ್ ಪಟೇಲ್ ಶೂಟ್ ಮಾಡಿದ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ.. ಬುಮ್ರಾ ಅವರ ಪತ್ನಿ ಸಂಜನಾ ಕಾಮೆಂಟ್ ಮಾಡಿದ್ದಾರೆ.
ತಮಾಷೆಯಾಗಿ ಪತಿಯ ಕಾಲೆಳೆದಿರುವ ಅವರು.. ಇದನ್ನ ಮಾಡೋಕೆ ನೀವು ಅಷ್ಟು ದೂರ ಜಪಾನ್‌ಗೆ ಹೋಗಿದ್ದು? ಎಂದು ಪ್ರಶ್ನೆ ಮಾಡಿದ್ದಾರೆ. ಗಂಡ-ಹೆಂಡತಿಯ ತಮಾಷೆಯ ಮಾತುಕತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ರಂಜಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ನಗಾಡುತ್ತ ತಾವು ಒಂದಿಷ್ಟು ಉಪ್ಪು-ಕಾರ ಸೇರಿಸಿದ್ದಾರೆ.
ಮ್ಯಾಚ್ ಏನಾಯ್ತು?
ಪಂದ್ಯದ ಅವಧಿಯಲ್ಲಿ ಮಳೆ ತುಂಬಾ ತೊಂದರೆ ನೀಡಿತು. ಹೀಗಾಗಿ ಮ್ಯಾಚ್ ಐದು ಓವರ್‍ಗಳಿಗೆ ಸೀಮಿತ ಮಾಡಲಾಗಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಜಪಾನ್ ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ 200 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಪಂದ್ಯದಲ್ಲಿ ಬುಮ್ರಾ ಆಡಲಿಲ್ಲ. ಆದರೆ ಪಂದ್ಯ ಮುಗಿದ ಬಳಿಕ ಜಪಾನ್ ಆಟಗಾರರಿಗೆ ತಮ್ಮ ಜೆರ್ಸಿ ನೀಡಿ ಕ್ರೀಡಾಸ್ಫೂರ್ತಿ ಮೆರೆದರು.


