ಅಲಸ್ಕಾದಲ್ಲಿ ವಿಮಾನ ಪತನಗೊಂಡಿದೆ. ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಪತಗೊಂಡಿದೆ. ಪರಿಣಾಮ ವಿಮಾನದಲ್ಲಿ ಎಲ್ಲಾ 8 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಸೆರೆಯಾಗಿದೆ.
ಅಲಸ್ಕಾ (ಆ.21) ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡ ಘಟನೆ ಅಲಸ್ಕಾದಲ್ಲಿ ನಡೆದಿದೆ. ಚಾರ್ಟೆಡ್ ವಿಮಾನ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಪಶ್ಚಿಮ ಅಲಸ್ಕಾದ ಮಿಲಿಟರಿ ರೇಡಾರ್ ಕೇಂದ್ರದ ಬಳಿ ಈ ಅಫಘಾತ ಸಂಭವಿಸಿದೆ. ರೇಡಾರ್ ಕೇಂದ್ರದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಸೇನಾ ಹೆಲಿಕಾಪ್ಟರ್ ಹಾರಾಟ ಆರಂಭಿಸಿದೆ. ಪರಿಣಾಮ ವಿಮಾನ ನೇರವಾಗಿ ಹೆಲಿಕಾಪ್ಟರ್‌ಗೆ ಡಿಕ್ಕಿಯಾಗಿ ಪತನಗೊಂಡಿದೆ.
ಲ್ಯಾಂಡಿಂಗ್ ವೇಳೆ ಡಿಕ್ಕಿ
ಸಣ್ಣ ಚಾರ್ಟೆಟೆಡ್ ಫ್ಲೈಟ್ 441 (Cessna 441) ಅಲಸ್ಕಾದ ಆಂಕೋರೇಜ್‌ನಿಂದ ಕೇಪ್ ನ್ಯೂವೆನ್ ಹ್ಯಾಮ್‌ಗೆ ಪ್ರಯಾಣ ಬೆಳೆಸಿತ್ತು. 8 ಮಂದಿ ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಯಾವುದೇ ಅಡೆ ತಡೆ ಇಲ್ಲದೆ ಹಾರಾಟ ನಡೆಸಿದ ವಿಮಾನ, ಕೇಪ್ ನ್ಯೂವೆನ್‌ಹ್ಯಾಮ್ ಮಿಲಿಟರಿ ಕೇಂದ್ರ ಬಳಿ ಲ್ಯಾಂಡಿಂಗ್ ಮಾಡಲು ಯತ್ನಿಸಿದೆ. ಇಲ್ಲಿ ಲ್ಯಾಂಡಿಂಗ್ ಮಾಡಲು ತಾಂತ್ರಿಕ ಕಾರಣವಿತ್ತಾ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಚಾರ್ಟೆಡ್ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ಇದರ ಅರಿವಿಲ್ಲದ ಮಿಲಿಟರಿ ಹೆಲಿಕಾಪ್ಟರ್ ಹೆಲಿಪ್ಯಾಡ್‌ನಿಂದ ಆಗಸಕ್ಕೆ ಹಾರಿದೆ. ಇದರಿಂದ ಚಾರ್ಟೆಡ್ ವಿಮಾನ ನೇರವಾಗಿ ಹೆಲಿಕಾಪ್ಟರ್‌ಗೆ ಡಿಕ್ಕಿಯಾಗಿದೆ. ಈ ವಿಮಾನದಲ್ಲಿ ಸೇನಾ ಸಿಬ್ಬಂದಿಗಳು ಅಧಿಕಾರಿಗಳು ಪ್ರಯಾಣಿಸುತ್ತಿದ್ದರು.
ಮಿಲಿಟರಿ ಸಿಬ್ಬಂದಿಗಳ ಪ್ರಯಾಣ ದುರಂತದಲ್ಲಿ ಅಂತ್ಯ
ಮಿಲಿಟರಿ ರೇಡಾರ್ ಕೇಂದ್ರದ ಸಿಬ್ಬಂದಿಗಳ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಮಿಲಿಟರಿ ಸಿಬ್ಬಂದಿಗಳಿಗೆ ಗಾಯವಾಗಿದೆ. ಗಾಯಗೊಂಡ ಮಿಲಿಟರಿ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ವಿಮಾನದಲ್ಲಿದ್ದ 8 ಮಂದಿ ದುರಂತ ಅಂತ್ಯಕೊಂಡಿದ್ದಾರೆ. ಹೆಲಿಕಾಪ್ಟರ್‌ಗೆ ಡಿಕ್ಕಿಯಾಗ ಮರುಕ್ಷಣದಲ್ಲೇ ಹೆಲಿಕಾಪ್ಟರ್ ಪುಡಿಪುಡಿಯಾಗಿ ಪತನಗೊಂಡಿದೆ.
ತಕ್ಷಣವೇ ಸೇನಾ ವಾಹನಗಳು,ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ. ಆದರೆ ಪರಿಸ್ಥಿತಿ ಗಂಭೀರವಾಗಿತ್ತು. ವಿಮಾನ ಪುಡಿ ಪುಡಿಯಾಗಿತ್ತು. ಈ ವಿಮಾನದಲ್ಲಿದ್ದವರ ದೇಹಗಳು ಗುರತು ಸಿಗದಂತೆ ಛಿದ್ರವಾಗಿತ್ತು. ಘಟನೆಗೆ ಮಿಲಿಟರಿ ರೇಡಾರ್ ಕೇಂದ್ರ ತೀವ್ರ ಸಂತಾಪ ಸೂಚಿಸಿದೆ. ಇದೇ ವೇಳೆ ಅಮರಿಕ ತನಿಖೆಗೆ ಆದೇಶಿಸಿದೆ.


