ವಿವಿಧ ದೇಶಗಳ ವಿರೋಧ ಕಟ್ಟಿಕೊಂಡಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯಸ್ಸು ಇನ್ನು ಕೇವಲ 6-8 ತಿಂಗಳು ಎಂದಿದ್ದಾರೆ ವೈದ್ಯರೊಬ್ಬರು. ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಏನಿದೆ ನೋಡಿ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈಗ 79 ವರ್ಷ ವಯಸ್ಸು. ವಯಸ್ಸು ಇಷ್ಟಾದರೂ ಇದೇ ವಯಸ್ಸಿನಲ್ಲಿಯೇ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಗದ್ದುಗೆ ಏರಿದ್ದಾರೆ. ಆದರೆ ಈ ಬಾರಿ ಅವರು ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಹುಚ್ಚು ಹುಚ್ಚು ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಮೆರಿಕವನ್ನು ಮುಗಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವ ನಡುವೆಯೇ, ಆಘಾತಕಾರಿ ಎನ್ನುವಂತೆ ಇದೀಗ ವೈದ್ಯರೊಬ್ಬರು ಅವರ ಆಯಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ, ಕೆಲ ದಿನಗಳ ಹಿಂದೆ ಟ್ರಂಪ್ ಅವರು ನಿಧನರಾದರು ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಅದು ನಿಜವಲ್ಲ, ಟ್ರಂಪ್ ಆರೋಗ್ಯವಂತರಾಗಿದ್ದಾರೆ ಎಂದು ವೈಟ್ಹೌಸ್ ಸ್ಪಷ್ಟಪಡಿಸಿತ್ತು.
ಭಾರತಕ್ಕೂ ಸಂಕಟ ತಂದ ಟ್ರಂಪ್:
ಇದೀಗ ಸದ್ಯ ಟ್ರಂಪ್ ಅವರು ಭಾರತದ ಮೇಲೆ ಶೇ.50ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವುದು (Trump's 50% tariff on India) ಗೊತ್ತೇ ಇದೆ. ಇದೇ ಕಾರಣಕ್ಕೆ ಇದಾಗಲೇ ಭಾರತವು ಬೇರೆ ದೇಶಗಳ ಜತೆ ವ್ಯಾಪಾರ-ವಹಿವಾಟಿಗೆ ಮುಂದಾಗಿದೆ. ಜಪಾನ್, ಚೀನಾ ಜತೆ ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚೆಗೆ ಪ್ರಧಾನಿ ಆ ರಾಷ್ಟ್ರಗಳಿಗೆ ತೆರಳಿದ್ದಾರೆ. ಇದರ ಹೊರತಾಗಿಯೂ ಅಮೆರಿಕದ ಸುಂಕದ ಹೇರಿಕೆಯಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ ಎಂದು ಪ್ರಧಾನಿ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ. ಆದರೆ ಕುತೂಹಲ ಎಂದರೆ, ಇವೆಲ್ಲಾ ಗದ್ದಲಗಳ ನಡುವೆಯೇ ವೈದ್ಯರ ಈ ವಿಡಿಯೋ ವೈರಲ್ ಆಗಿದೆ.
ಡಿವೋರ್ಸ್ ದಿನವೇ ನನ್ನನ್ನು ಟ್ರಂಪ್ ಡೇಟಿಂಗ್ಗೆ ಕರೆದಿದ್ರು, ಅಂದು ನಾನು ಹೋಗಿದ್ದರೆ... ನಟಿ ಹೇಳಿದ್ದೇನು?
ವಿಡಿಯೋದಲ್ಲಿ ವೈದ್ಯರು ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಉತ್ತಮವಾಗಿದೆ ಎಂದು ಶ್ವೇತಭವನ ಹೇಳುತ್ತಿದ್ದರೂ, ವೈದ್ಯರೊಬ್ಬರ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು, ಟ್ರಂಪ್ ಹೆಚ್ಚೆಂದರೆ 6-8 ತಿಂಗಳು ಬದುಕಲಿದ್ದಾರೆ. ಟ್ರಂಪ್ ಅವರ ಆರೋಗ್ಯ ವೇಗವಾಗಿ ಕ್ಷೀಣಿಸುತ್ತಿದೆ ಎಂದಿದ್ದಾರೆ. ಎಂಡಿ ವೈದ್ಯ ಎಂದು ಹೇಳಿಕೊಂಡಿರುವ ಇವರು, ಅಮೆರಿಕದ ಅಧ್ಯಕ್ಷರಿಗೆ ದೀರ್ಘಕಾಲದ ರಕ್ತ ಹೀನತೆ ಇರುವುದು ಪತ್ತೆಯಾಗಿದೆ. ಇವರ ಕೈಮೇಲೆ ಇರುವ ಕಪ್ಪು ಕಲೆಗಳು ಇದನ್ನು ತೋರಿಸುತ್ತಿದೆ. ಇದರ ಬಗ್ಗೆ ಇದಾಗಲೇ ಶ್ವೇತಭವನ ಘೋಷಿಸಿದೆ. ಆದ್ದರಿಂದ ಅವರ ಆರೋಗ್ಯ ಕೆಲವೇ ತಿಂಗಳು ಎಂದು ವೈದ್ಯರು ಹೇಳಿದ್ದಾರೆ.
ಉತ್ತಮ ಆರೋಗ್ಯವಿದೆ ಎಂದ ಶ್ವೇತ ಭವನ
ಇತ್ತೀಚೆಗೆ, ದಕ್ಷಿಣ ಕೊರಿಯಾದ ಅಧ್ಯಕ್ಷರೊಂದಿಗಿನ ಟ್ರಂಪ್ ಅವರ ಭೇಟಿಯ ಸಮಯದಲ್ಲಿ ಕಪ್ಪು ಕಲೆಯ ಬಗ್ಗೆ ರಿವೀಲ್ ಆಗಿತ್ತು. ಆದರೆ ಇದರ ಹೊರತಾಗಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಅತ್ಯುತ್ತಮ ಆರೋಗ್ಯದಲ್ಲಿದ್ದಾರೆ" ಎಂದು ಶ್ವೇತಭವನವು ಸಮರ್ಥಿಸುತ್ತದೆ. ಏತನ್ಮಧ್ಯೆ, ಟಿಕ್‌ಟಾಕ್ ಹ್ಯಾಂಡಲ್ @epistemiccrisis ನಿಂದ ಹಂಚಿಕೊಳ್ಳಲಾದ ವೈರಲ್ ವೀಡಿಯೊದಲ್ಲಿ, ವೈದ್ಯರು ಎಂದು ಹೇಳಿಕೊಂಡಿರೋ ವ್ಯಕ್ತಿಯು "ನಾನು ಡಾಕ್ಟರೇಟ್ ಪಡೆದ ಗೃಹ ಆರೋಗ್ಯ ಭೌತಚಿಕಿತ್ಸಕ" ಎಂದು ಹೇಳಿಕೊಂಡಿದ್ದಾರೆ.
ಟ್ರಂಪ್ ಅವರಿಗೆ ಕಂಜೆಸ್ಟಿವ್ ಹಾರ್ಟ್ ಫೇಲ್ಯೂರ್ ಇದೆ ಎಂದು ನನಗೆ ತಿಳಿದಿರುವ ಕಾರಣ ಅವರ ಪಾದಗಳು ಮತ್ತು ಕಣಕಾಲುಗಳಲ್ಲಿನ ಊತ ಕಾಣಿಸಿಕೊಳ್ಳುತ್ತಿದೆ. ಅವರ ಹೃದಯ ಫೆಲ್ಯೂರ್ ಆಗುತ್ತಿದೆ. ಇದು ನನಗೆ ತಿಳಿದಿದೆ. ಏಕೆಂದರೆ ಅವರು ಊತದ ಮಟ್ಟವನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಮೇಜಿನ ಹಿಂದೆ ಕುಳಿತುಕೊಳ್ಳುತ್ತಾರೆ. ಅವರಿಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯೂ ಇದೆ, ಇದು ಪಾದಗಳು ಮತ್ತು ಕಣಕಾಲುಗಳಲ್ಲಿನ ಊತಕ್ಕೂ ಕಾರಣವಾಗಿದೆ ಎಂದಿದ್ದಾರೆ.
