ಕ್ಯಾಬ್ ಚಾಲಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಪಾಕಿಸ್ತಾನದಲ್ಲಿದ್ದರೆ ನಿಮ್ಮನ್ನು ಮುಟ್ಟಲು ಕಿಡ್ನಾಪ್ ಮಾಡುತ್ತಿದ್ದೆಎಂದು ಉಬರ್ ಚಾಲಕ ಮಹಿಳೆಗೆ ಹೇಳಿದ್ದಾನೆ. 

ಮಹಿಳೆಯರು ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಕಿರುಕುಳ ಅನುಭವಿಸಿದ ಘಟನೆ ಅದೆಷ್ಟೋ ಬಾರಿ ನಡೆದಿದೆ. ಚಾಲಕರು ಅಸಭ್ಯವಾಗಿ ಮಾತನಾಡುವುದು, ಹಸ್ತಮೈಥುನ ಮಾಡಿಕೊಳ್ಳುವುದು, ಕೆಟ್ಟದಾಗಿ ಕಾಮೆಂಟ್ ಮಾಡುವುದು, ಅಶ್ಲೀಲವಾಗಿ ಮಾತನಾಡುವುದನ್ನು ಮಾಡಿರುವುದರ ಬಗ್ಗೆ ಈ ಹಿಂದೆ ಅದೆಷ್ಟೋ ಮಹಿಳೆಯರು ದೂರು ನೀಡಿದ್ದಾರೆ. ಹಾಗೆಯೇ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿರುವ ಘಟನೆ ನಡೆದಿದೆ. ನಾನು ಪಾಕಿಸ್ತಾನದಲ್ಲಿದ್ದರೆ ನಿಮ್ಮನ್ನು ಮುಟ್ಟುತ್ತಿದ್ದೆ, ಕಿಡ್ನಾಪ್ ಮಾಡುತ್ತಿದ್ದೆ ಎಂದು ಉಬರ್ ಚಾಲಕ ಮಹಿಳೆಗೆ ಹೇಳಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ.

ಕೆನಡಾದ ಟೊರೊಂಟೊದಲ್ಲಿ ಈ ಘಟನೆ ನಡೆದಿದ್ದು, ಕ್ಯಾಬ್‌ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ಮತ್ತು ಕ್ಯಾಬ್ ಚಾಲಕನ ನಡುವಿನ ಮಾತುಕತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಇದಕ್ಕೆ ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ.

ಮನೆಗೆ ಬಿಟ್ಟ ಕ್ಯಾಬ್ ಡ್ರೈವರ್ ಮೇಲೆ ಲವ್, ಆಮೇಲಾಗಿದ್ದು ಕೇಳಿ ನೆಟ್ಟಿಗರು ಶಾಕ್

ವೈರಲ್ ಆದ ವೀಡಿಯೋದಲ್ಲಿ ಚಾಲಕ, 'ನಾನು ಪಾಕಿಸ್ತಾನದವನು, ನೀನು ಸಹ ಪಾಕಿಸ್ತಾನದಲ್ಲಿ ಹುಟ್ಟಿದ್ದರೆ, . ಇಷ್ಟೊತ್ತಿಗೆ ನಿನ್ನನ್ನು ಕಿಡ್ನಾಪ್ ಮಾಡಿರುತ್ತಿದ್ದೆ' ಎಂದು ಹೇಳುತ್ತಾನೆ. 'ನನ್ನನ್ನು ಕಿಡ್ನಾಪ್ ಮಾಡ್ತಿದ್ರಾ' ಎಂದು ಮಹಿಳೆ ಪ್ರಶ್ನಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ವ್ಯಕ್ತಿ, 'ಅಫ್‌ಕೋರ್ಸ್‌, ಯಾಕೆಂದರೆ ಅಲ್ಲಿ ನಿಮ್ಮನ್ನು ಪಡೆಯಲು, ನಿಮ್ಮನ್ನು ಟಚ್‌ ಮಾಡಲು ಬೇರೆ ದಾರಿಯಿಲ್ಲ ಹಾಗಾಗಿ ಕಿಡ್ನಾಪ್ ಮಾಡುತ್ತಿದ್ದೆ. ನೀವು ಕೆನಡಾದಲ್ಲಿ ಇರುವುದರಿಂದ, ನಾನು ನಿಮಗೆ ಏನನ್ನೂ ಹೇಳಲಾರೆ, ನಾನು ನಿನ್ನನ್ನು ಮುಟ್ಟಲಾರೆ. ನಾನು ಹೇಳಿದ್ದು ನಿಮಗೆ ಅರ್ಥವಾಯಿತೇ' ಎನ್ನುತ್ತಾನೆ.

ಮಹಿಳೆ ಇದಕ್ಕೆ ಪ್ರತಿಯಾಗಿ, 'ಇದು ತಮಾಷೆಯಂತೆ ಅನಿಸುತ್ತಿಲ್ಲ..ತುಂಬಾ ಭಯಾನಕವಾಗಿದೆ' ಎನ್ನುತ್ತಾಳೆ. ನಂತರ ಕ್ಯಾಬ್‌ನಿಂದ ಇಳಿಯುತ್ತಾಳೆ. ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

Begnaluru: ಮಹಿಳಾ ಡ್ರೈವರ್ ಕ್ಯಾಬ್ ನಲ್ಲಿ ಮಧ್ಯರಾತ್ರಿ ಏರ್ ಪೋರ್ಟ್ ನಿಂದ ಮನೆಗೆ ಹೋದ ಅನುಭವ ಹೀಗಿತ್ತು

ಒಬ್ಬ ಬಳಕೆದಾರರು, 'ಈ ಪಾಕಿಸ್ತಾನಿ ವಲಸಿಗನನ್ನು ಬಂಧಿಸಿ ಮತ್ತು ಗಡೀಪಾರು ಮಾಡಿ' ಎಂದು ಹೇಳಿದ್ದಾರೆ. 'ಮಹಿಳೆಯರು ಇಂಥಾ ಸಂದರ್ಭದಲ್ಲಿ ಇಳಿಯುವ ಸ್ಥಳ ಬರುವ ವರೆಗೂ ಶಾಂತವಾಗಿರಬೇಕು, ಸುರಕ್ಷಿತವಾಗಿರಬೇಕು' ಎಂದು ಮತ್ತೊಬ್ಬರು ಹೇಳಿದ್ದಾರೆ. ಆದರೆ ಮತ್ತೊಬ್ಬ ಬಳಕೆದಾರರು 'ಆತ ತಪ್ಪಾಗಿ ಹೇಳುತ್ತಿಲ್ಲ. ಪಾಕಿಸ್ತಾನದಲ್ಲಿ ಡ್ರೈವರ್‌ಗಳು ಮಹಿಳೆಯರನ್ನು ಅಪಹರಿಸುತ್ತಾರೆ ಎಂದು ಅವರು ಹೇಳುತ್ತಿದ್ದಾರೆ. ಏಕೆಂದರೆ ಅದು ಸುರಕ್ಷಿತವಲ್ಲ ಆದರೆ ಕೆನಡಾದಲ್ಲಿ ಇದು ಸುರಕ್ಷಿತವಾಗಿದೆ ಎಂಬ ಮಾಹಿತಿ ನೀಡುತ್ತಿದ್ದಾರೆ' ಎಂದಿದ್ದಾರೆ.

Scroll to load tweet…