Begnaluru: ಮಹಿಳಾ ಡ್ರೈವರ್ ಕ್ಯಾಬ್ ನಲ್ಲಿ ಮಧ್ಯರಾತ್ರಿ ಏರ್ ಪೋರ್ಟ್ ನಿಂದ ಮನೆಗೆ ಹೋದ ಅನುಭವ ಹೀಗಿತ್ತು
ಮಧ್ಯರಾತ್ರಿಯಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ತೆರಳುವ ಸಮಯದಲ್ಲಿ ಯಾವ್ಯಾವುದೋ ಟ್ಯಾಕ್ಸಿ ಪಡೆಯುವುದಕ್ಕೆ ಆತಂಕವಾಗುತ್ತದೆ. ಇತ್ತೀಚೆಗೆ ಬೆಂಗಳೂರಿನ ಮಹಿಳೆಯರೊಬ್ಬರು ಗೋಪಿಂಕ್ ಸಂಸ್ಥೆಯ ಮಹಿಳಾ ಡ್ರೈವರ್ ಹೊಂದಿದ್ದ ಕ್ಯಾಬ್ ನಲ್ಲಿ ಸುರಕ್ಷಿತವಾಗಿ ಮನೆ ಸೇರಿರುವ ತಮ್ಮ ಅನುಭವದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ವೈರಲ್ ಆಗಿದೆ.
ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳು ಹೆಚ್ಚು. ನಮ್ಮ ಬೆಂಗಳೂರು ಸಹ ಇದಕ್ಕೆ ಹೊರತಲ್ಲ. ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ನಡೆಯುವಲ್ಲಿ ಬೆಂಗಳೂರು ನಗರ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಮುಂಬೈ ಬಳಿಕ ಬೆಂಗಳೂರು ನಗರವಿದೆ. ರಾತ್ರಿ ವೇಳೆಯಲ್ಲಿ ಅಪರಾಧ ಪ್ರಕರಣಗಳ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ಭಯಪಡುವ ಸನ್ನಿವೇಶ ಉಂಟಾಗುತ್ತದೆ. ಅಪರಾತ್ರಿಯಲ್ಲಿ ಸಂಚರಿಸುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಅಂತಾರಾಷ್ಟ್ರೀಯ ವಿಮಾನಗಳು ರಾತ್ರಿ ವೇಳೆ ಬಂದಿಳಿದ ಸಮಯದಲ್ಲಿ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಕ್ಯಾಬ್ ಡ್ರೈವರೇ ಪ್ರಯಾಣಿಕರನ್ನು ಹತ್ಯೆ ಮಾಡಿದ ಘಟನೆಗಳೂ ಇರುವಾಗ ಹೊತ್ತಲ್ಲದ ಹೊತ್ತಿನಲ್ಲಿ ಸಂಚರಿಸುವುದು ಅಪಾಯಕಾರಿಯಾಗುತ್ತದೆ. ಈ ಬಗ್ಗೆ ಬಹುತೇಕ ಮಹಿಳೆಯರಿಗೆ ಆತಂಕ ಇರುತ್ತದೆ. ಇತ್ತೀಚೆಗೆ ಇಂಥದ್ದೇ ಒಂದು ಸಂದರ್ಭ ಬೆಂಗಳೂರಿನ ಮಹಿಳೆಯೊಬ್ಬರಿಗೆ ಎದುರಾಗಿತ್ತು. ಅವರು ಮಹಿಳಾ ಕ್ಯಾಬ್ ಡ್ರೈವರ್ ಜತೆ ಸುರಕ್ಷಿತವಾಗಿ ಮನೆ ತಲುಪಿದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಪೂರ್ಣಿಮಾ ಪ್ರಭು ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ (Social Media) ಬೆಂಗಳೂರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (International Airport) ಸುರಕ್ಷಿತವಾಗಿ (Safely) ಮನೆ ತಲುಪಿದ ಬಗ್ಗೆ ಸಂತಸ (Happy) ವ್ಯಕ್ತಪಡಿಸಿರುವ ಜತೆಗೆ, ಮಹಿಳಾ ಕ್ಯಾಬ್ ಡ್ರೈವರ್ (Cab Driver) ಗೆ ಧನ್ಯವಾದವನ್ನೂ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದೆ.
ರಾತ್ರಿ ಮಲಗುವಾಗ ಮಗು ಅಳುತ್ತೆ ಅನ್ನೋ ಕಾರಣಕ್ಕೆ ಹೆಣ್ಣುಮಗುವನ್ನು ಗೋಡೆಗೆ ಎಸೆದ ಪಾಪಿ ತಂದೆ!
ಮಧ್ಯರಾತ್ರಿ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮಹಿಳಾ (Woman) ಕ್ಯಾಬ್ ಡ್ರೈವರ್ ಏರ್ ಪೋರ್ಟ್ ಹೊರಕ್ಕೆ ಕಾಯುತ್ತಿದ್ದರು. ಮಧ್ಯರಾತ್ರಿ ಮನೆಗೆ ವಾಪಸ್ಸಾಗುವ ತಮ್ಮ ಆತಂಕವನ್ನು ಅವರು ನಿವಾರಿಸಿದರು ಎಂದು ಪೂರ್ಣಿಮಾ ಪ್ರಭು ಹೇಳಿಕೊಂಡಿದ್ದಾರೆ.
ಸ್ಮಾರ್ಟ್, ವಿಶ್ವಾಸಿ ಡ್ರೈವರ್
“ಗೋಪಿಂಕ್ ಕ್ಯಾಬ್ ನ (GoPink Cabs) ರಾಜೇಶ್ವರಿ ಅವರು ತಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ತಮಗೆ ಅವರು ಈ ಕುರಿತು ಅಭಯ ನೀಡಿದರು. ಸ್ಮಾರ್ಟ್ (Smart), ಸ್ಪಷ್ಟ ನಿಲುವಿನ, ಆತ್ಮವಿಶ್ವಾಸದ (Confident) ರಾಜೇಶ್ವರಿ ಅವರು ಅತ್ಯಂತ ತಜ್ಞತೆಯಿಂದ (Expert) ಕ್ಯಾಬ್ ಓಡಿಸಿದರು. ನಾನು ಸಂತಸಪಡದಿರಲು ಸಾಧ್ಯವಿಲ್ಲ’ ಎಂದು ಪೂರ್ಣಿಮಾ ಪ್ರಭು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಗೋಪಿಂಕ್ ಕ್ಯಾಬ್ ಸಂಸ್ಥೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೇವಲ 10 ಟ್ಯಾಕ್ಸಿ ಸೇವೆಗಳನ್ನು ಮಾತ್ರ ಹೊಂದಿದ್ದು, ಅದರ ಸೇವೆ (Service) ದೊರೆತಿರುವುದಕ್ಕೆ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಪೂರ್ಣಿಮಾ ಅವರ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಬಂದಿವೆ. ಒಬ್ಬರು, “ಅಮೇಜಿಂಗ್, ನನಗೆ ಏರ್ ಪೋರ್ಟ್ ನಲ್ಲಿ ಗೋಪಿಂಕ್ ಕ್ಯಾಬ್ ಅನ್ನು ಪಡೆಯಲು ಇದುವರೆಗೆ ಸಾಧ್ಯವಾಗಿಲ್ಲ. ಗೋಪಿಂಕ್ ಸಂಸ್ಥೆ ಮತ್ತೆ ಕಾರ್ಯ ನಡೆಸುತ್ತಿರುವುದನ್ನು ನೋಡಲು ಸಂತಸವೆನಿಸುತ್ತದೆ. ನಾನೂ ಸಹ ಮಹಿಳಾ ಡ್ರೈವರ್ ಅನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಇಂಡಿಗೋ ವಿಮಾನದಲ್ಲಿ ಅಕ್ಕನಿಗೆ ತಮ್ಮನೇ ಸಹೋದ್ಯೋಗಿ ಆಗಿ ಬಂದ್ರೆ!?
ಅದೃಷ್ಟವಿತ್ತು
ಇದಕ್ಕೆ ಪೂರ್ಣಿಮಾ, ಗೋಪಿಂಕ್ ಸಂಸ್ಥೆಯ ಮಹಿಳಾ ಡ್ರೈವರ್ ಕ್ಯಾಬ್ ತಮಗೆ ಅದೃಷ್ಟವಶಾತ್ (Luck) ದೊರೆತರು ಎಂದು ಹೇಳಿದ್ದಾರೆ. ಮಧ್ಯರಾತ್ರಿ (Midnight) ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಟ್ಯಾಕ್ಸಿ ವಿಚಾರ ಮಾಡಲು ಏರ್ ಪೋರ್ಟ್ ಟ್ಯಾಕ್ಸಿ ಲೈನ್ ಗೆ ಹೋದಾಗ ಅಲ್ಲಿನ ಉಸ್ತುವಾರಿ ಹೊತ್ತಿದ್ದ ವ್ಯಕ್ತಿಯೊಬ್ಬರು ಮಹಿಳಾ ಕ್ಯಾಬ್ ಡ್ರೈವರ್ ಇರುವ ಟ್ಯಾಕ್ಸಿಯ ಕಡೆಗೆ ತೋರಿದರು. ಕಣ್ಣಿಗೆ ಕಾಣುವಷ್ಟು ಅನತಿ ದೂರದಲ್ಲಿ ಮಹಿಳಾ ಡ್ರೈವರ್ ತಮ್ಮ ಕ್ಯಾಬ್ ನೊಂದಿಗೆ ನಿಂತಿದ್ದರು ಎಂದು ತಿಳಿಸಿದ್ದಾರೆ.
“ಅವರ ಸುರಕ್ಷತೆಯನ್ನು (Safety) ಯಾರು ನೋಡಿಕೊಳ್ಳುತ್ತಾರೆ?’ ಎಂದು ಯಾರೋ ಕಾಮೆಂಟ್ ಮಾಡಿದ್ದಾರೆ. ಗೋಪಿಂಕ್ ವೆಬ್ ಸೈಟ್ ಪ್ರಕಾರ, ಅವರ ಸಂಸ್ಥೆಯ ಮಹಿಳಾ ಡ್ರೈವರ್ ಗಳು ಸ್ವಯಂ ಸುರಕ್ಷತೆಯ ವಿಧಾನಗಳನ್ನು ಅರಿತಿದ್ದಾರೆ.