ಮೆಡಿಸಿನ್ ತಿಂದು ಎಡವಟ್ಟಾಯ್ತು, ಮಹಿಳೆಯ ನಾಲಿಗೆ ಮೇಲೆ ಬೆಳೀತು ಕಪ್ಪು ಕೂದಲು!
ಆರೋಗ್ಯ ಸರಿಯಿಲ್ಲದಿದ್ದಾಗ ಎಲ್ಲರೂ ಸಾಮಾನ್ಯವಾಗಿ ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಾರೆ. ಇಂಥಾ ಕೆಲವು ಟ್ಯಾಬ್ಲೆಟ್ಸ್‌ಗಳಿಂದ ಕೆಲವೊಮ್ಮೆ ಆರೋಗ್ಯ ಮತ್ತಷ್ಟು ಹದಗೆಡೋದು ಇದೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಮೆಡಿಸಿನ್ ರಿಯಾಕ್ಷನ್ ಎಷ್ಟು ಕೆಟ್ಟದಾಗಿತ್ತು ನೋಡಿ..
ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಬಹುತೇಕರು ಆಸ್ಪತ್ರೆಗೆ ಧಾವಿಸುತ್ತಾರೆ. ವೈದ್ಯರು ಸೂಚಿಸಿದ ಮೆಡಿಸಿನ್‌ಗಳ ಮೊರೆ ಹೋಗುತ್ತಾರೆ. ಹಿಂದಿನ ಕಾಲದವರು ಮಾತ್ರ ಆರ್ಯುವೇದ ಪದ್ಧತಿಯ ಮೊರೆ ಹೋಗುತ್ತಾರೆ. ಯಾಕೆಂದರೆ ಇಂಗ್ಲಿಷ್ ಮೆಡಿಸಿನ್ ಆರೋಗ್ಯಕ್ಕೆ ಕೆಟ್ಟದ್ದೆಂದು ಅವರು ತಿಳಿದಿರುತ್ತಾರೆ. ಮೆಡಿಸಿನ್‌ಗಳನ್ನು ತಿನ್ನೋದ್ರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಕೆಲವೊಮ್ಮೆ ಸೈಡ್ ಎಫೆಕ್ಟ್ಸ್ ಸಹ ಕಾಡುತ್ತದೆ. ಹೊಟ್ಟೆ ನೋವು, ಅಸ್ವಸ್ಥತೆ, ಅಲರ್ಜಿ ಸಮಸ್ಯೆಗಳು ಶುರುವಾಗುತ್ತವೆ. ಆದರೆ ಇಲ್ಲೊಬ್ಬ ಮಹಿಳೆಗೆ ಇದೆಲ್ಲಕ್ಕಿಂತ ವಿಭಿನ್ನವಾಗಿ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿದೆ.
ಮೆಡಿಸಿನ್ ರಿಯಾಕ್ಷನ್‌ಗೆ ಮಹಿಳೆ ಕಂಗಾಲು
ಮಹಿಳೆಯೊಬ್ಬಳ ನಾಲಿಗೆ ಮೆಡಿಸಿನ್‌ಗಳನ್ನು ತಿಂದ ನಂತರ ಕಪ್ಪು ಬಣ್ಣಕ್ಕೆ (Black color) ತಿರುಗಿದೆ. ಮಾತ್ರವಲ್ಲ, ನಾಲಿಗೆಯಲ್ಲಿ ಕಪ್ಪು ಬಣ್ಣದ ಕೂದಲು (Hair) ಬೆಳೆದಿದ್ದು ಆತಂಕಕ್ಕೊಳಗಾಗಿದ್ದಾರೆ. ವೈದ್ಯಕೀಯ ಜರ್ನಲ್‌ನ ಪ್ರಕಾರ, ಆಂಟಿಬಯೋಟಿಕ್‌ಗೆ ಅಪರೂಪದ ಮತ್ತು ವಿಲಕ್ಷಣ ಪ್ರತಿಕ್ರಿಯೆಯನ್ನು ಅನುಭವಿಸಿದ ನಂತರ ಮಹಿಳೆಯ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಿತು ಎಂದು ತಿಳಿದುಬಂದಿದೆ. ಮಾತ್ರವಲ್ಲ ನಾಲಿಗೆಯಲ್ಲಿ ಪೂರ್ತಿ ಕೂದಲು ಬೆಳೆಯಿತು.ಇದು ಸಾಮಾನ್ಯವಾಗಿ ಕಳಪೆ ಮೌಖಿಕ ನೈರ್ಮಲ್ಯ ಮತ್ತು ಧೂಮಪಾನದಿಂದ (Smoking) ಉಂಟಾಗುತ್ತದೆ ಎಂದು ದಕ್ಷಿಣ ಜಪಾನ್‌ನ ಫುಕುವೋಕಾ ವಿಶ್ವವಿದ್ಯಾಲಯದ ಪ್ರಕಾರ ತಿಳಿಸಿದೆ.
ಆಮೆಯಂತೆ ಮಗುವಿನ ಬೆನ್ನ ಮೇಲಿದೆ ಚಿಪ್ಪು, ಇದೆಂಥಾ ವಿಚಿತ್ರ ಕಾಯಿಲೆ!
ಮುಖದ ಮೇಲೆ ಹುಟ್ಟಿಕೊಳ್ತು ಬೂದಿ ಬಣ್ಣದ ಚರ್ಮ
ರೋಗಿಯ ನಾಲಿಗೆಯ ಫೋಟೋಗಳನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ಕೇಸ್ ರಿಪೋರ್ಟ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ವೈದ್ಯರು ಆಕೆ ಮುಖದ ಮೇಲೆ ಬೂದು ಚರ್ಮವನ್ನು (Grey skin) ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ವರದಿಯು ಪ್ರಕಾರ 'ದೈಹಿಕ ಪರೀಕ್ಷೆಯಲ್ಲಿ, ಆಕೆಯ ಮುಖದ (Face) ಮೇಲೆ ಬೂದು ಹೈಪರ್ಪಿಗ್ಮೆಂಟೇಶನ್‌ನ್ನು ಗಮನಿಸಲಾಯಿತು. ಅದು ಈ ಹಿಂದೆ ಇರಲ್ಲಿಲ್ಲ. ಮಾತ್ರವಲ್ಲ ನಾಲಿಗೆ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿರು ಮತ್ತು ನಾಲಿಗೆಯಲ್ಲಿ ಕಪ್ಪು ಕೂದಲು ಬೆಳೆಯಿತು' ಎಂದು ಹೇಳಿದ್ದಾರೆ.
ಆಕೆಯ ಮುಖ ಮತ್ತು ಕೂದಲುಳ್ಳ ನಾಲಿಗೆಯ ಮೇಲಿನ ಚರ್ಮದ ಬೂದು ಬಣ್ಣವು ಆರು ವಾರಗಳಲ್ಲಿ ವಿವಿಧ ಔಷಧಿಗಳಿಗೆ ಬದಲಾಯಿಸಿದಾಗ ಸುಧಾರಣೆಗಳನ್ನು ತೋರಿಸಿದೆ ಎಂದು ವೈದ್ಯಕೀಯ ಜರ್ನಲ್‌ನಲ್ಲಿ ತಿಳಿಸಲಾಗಿದೆ. ದಕ್ಷಿಣ ಜಪಾನ್‌ನ ಫುಕುವೋಕಾ ವಿಶ್ವವಿದ್ಯಾಲಯದ ವೈದ್ಯರ ಜರ್ನಲ್ ವರದಿಯಲ್ಲಿ ಈ ಘಟನೆಯ ವಿವರಿಸಲಾಗಿದೆ.
ಅಬ್ಬಬ್ಬಾ.ಎರಡು ಶಿಶ್ನದೊಂದಿಗೆ ಜನಿಸಿದ ಮಗು, ಗುದದ್ವಾರವೇ ಇಲ್ಲ, ಬೆಚ್ಚಿಬಿದ್ದ ವೈದ್ಯರು!
ಇದೇ ರೀತಿಯ ಪ್ರಕರಣದಲ್ಲಿ, 50ರ ಹರೆಯದ ವ್ಯಕ್ತಿಯೊಬ್ಬರು ಚರ್ಮರೋಗ ಚಿಕಿತ್ಸಾಲಯಕ್ಕೆ ಹೋದರು. ನಾಲಿಗೆಯು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ ಮತ್ತು ಅದರ ಮೇಲೆ ದಪ್ಪವಾದ ಕೂದಲು ಬೆಳೆಯುತ್ತಿದೆ ಎಂಬುದಾಗಿ ಹೇಳಿದರು. ಪಾರ್ಶ್ವವಾಯುವಿನ ನಂತರ ಶುದ್ಧವಾದ ಆಹಾರ ಮತ್ತು ದ್ರವಗಳ ಆಹಾರವನ್ನು ಕೊರತೆಯಿಂದ ಅವರು ಕಪ್ಪು ಕೂದಲುಳ್ಳ ನಾಲಿಗೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ರೋಗನಿರ್ಣಯ ಮಾಡಿದರು. ಮಾರ್ಚ್ 9 ರಂದು JAMA ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ ದಪ್ಪ, ಕಪ್ಪು ಲೇಪನವು ಮಧ್ಯದ ಗೆರೆ ಮತ್ತು ನಾಲಿಗೆಯ ಹಿಂಭಾಗದ ಬಳಿ ಹಳದಿ ಗೆರೆಗಳಿಂದ ಕೂಡಿದೆ.
ನಾಲಿಗೆಯ ಹೊರ ಅಂಚುಗಳು, ತುದಿ ಮತ್ತು ಸುತ್ತಲೂ ಕಪ್ಪಿನಿಂದ ಮುಕ್ತವಾಗಿದೆ. ನಾಲಿಗೆಯ ಮೇಲ್ಮೈಯಲ್ಲಿ ಸಣ್ಣ, ಕೋನ್-ಆಕಾರದ ಉಬ್ಬುಗಳು ಕಂಡು ಬಂದಿದೆ. ಈ ಕಪ್ಪು ಕೂದಲು ನಾಲಿಗೆಯಲ್ಲಿ ಸುಮಾರು 1 ಮಿಲಿಮೀಟರ್ ಉದ್ದ ಬೆಳೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ. ನಾಲಿಗೆಯ ಮೇಲ್ಭಾಗವು ನಿಯಮಿತವಾದ ಸವೆತಕ್ಕೆ ಒಳಗಾಗದಿದ್ದರೆ, ಉದಾಹರಣೆಗೆ, ಹಲ್ಲುಜ್ಜುವ ಬ್ರಷ್, ಟಂಗ್ ಸ್ಕ್ರಾಪರ್ ಅಥವಾ ಘನ, ರಚನೆಯ ಆಹಾರಗಳಿಂದ ಹಾನಿಗೆ ಒಳಗಾಗದಿದ್ದರೆ ಇದು ಸುಮಾರು 18 ಮಿಲಿಮೀಟರ್ ಉದ್ದದವರೆಗೆ ಬೆಳೆಯುತ್ತವೆ ಎಂದು ತಿಳಿದುಬಂದಿದೆ..