ಅಬ್ಬಬ್ಬಾ.ಎರಡು ಶಿಶ್ನದೊಂದಿಗೆ ಜನಿಸಿದ ಮಗು, ಗುದದ್ವಾರವೇ ಇಲ್ಲ, ಬೆಚ್ಚಿಬಿದ್ದ ವೈದ್ಯರು!
ಮಕ್ಕಳು ವಿಚಿತ್ರ ಅಂಗಾಂಗಗಳೊಂದಿಗೆ, ಕಾಯಿಲೆಗಳೊಂದಿಗೆ ಜನಿಸುವುದು ಹೊಸದೇನಲ್ಲ. ಆದರೆ ಪಾಕಿಸ್ತಾನದಲ್ಲೊಂದು ಮಗು ಎರಡು ಶಿಶ್ನಗಳು ಮತ್ತು ಗುದದ್ವಾರವಿಲ್ಲದೆ ಜನಿಸಿದೆ. ಈ ಮಗುವನ್ನು ನೋಡಿ ವೈದ್ಯಲೋಕವೇ ಬೆಚ್ಚಿಬಿದ್ದಿದೆ.
ಮಕ್ಕಳು ಅಪರೂಪದ ಸ್ಥಿತಿಯೊಂದಿಗೆ ಜನಿಸುವುದು ಹೊಸದೇನಲ್ಲ. ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸುವಂತೆ ಹಲವೆಡೆ ಮಕ್ಕಳು ವ್ಯತ್ಯಸ್ಥ ಅಂಗಾಗಗಳು ರೂಪುಗೊಂಡು ಹುಟ್ಟುತ್ತಾರೆ. ಹಾಗೆಯೇ ಪಾಕಿಸ್ತಾನದಲ್ಲೊಂದು ಮಗು ಎರಡು ಶಿಶ್ನಗಳೊಂದಿಗೆ ಜನಿಸಿದೆ. ಮಾತ್ರವಲ್ಲ ಈ ಮಗುವಿಗೆ ಗುದದ್ವಾರ ಸಹ ಇಲ್ಲ. ವೈದ್ಯರು ಈ ಸ್ಥಿತಿಯನ್ನು ಡಿಫಾಲಿಯಾ ಎಂದು ಕರೆಯುತ್ತಾರೆ. ಆದರೆ ಈ ಮಗು ಎರಡೂ ಶಿಶ್ನವನ್ನು ಬಳಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪರೂಪದ ವೈದ್ಯಕೀಯ ಸ್ಥಿತಿಯಿಂದಾಗಿ ಮಗುವಿಗೆ ಎರಡು ಸಾಮಾನ್ಯ ಆಕಾರದ ಜನನಾಂಗದ ಭಾಗಗಳಿವೆ. ಅಪರೂಪದ ಸ್ಥಿತಿಯು ಆರು ಮಿಲಿಯನ್ ಶಿಶುಗಳಲ್ಲಿ ಒಬ್ಬರಿಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಒಂದು ಶಿಶ್ನವು (Penis) ಇನ್ನೊಂದಕ್ಕಿಂತ ಒಂದು ಸೆಂಟಿಮೀಟರ್ ಉದ್ದವಾಗಿದೆ ಮತ್ತು ಎರಡೂ ಮೂತ್ರವನ್ನು ರವಾನಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ವೈದ್ಯರು (Doctors) ಕೊಲೊನೋಸ್ಕೋಪಿಯೊಂದಿಗೆ ತೆರೆಯುವಿಕೆಯನ್ನು ರಚಿಸಲು ಆಪರೇಷನ್ ನಡೆಸಿದರು, ಇದರಿಂದ ಅವರು ಮಲವನ್ನು ಹೊರಹಾಕಲು ಸಾಧ್ಯವಾಯಿತು. ಪಾಕಿಸ್ತಾನದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಮಕ್ಕಳ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಚಿಕಿತ್ಸೆ (Treatment) ನೀಡಲಾಯಿತು. ಮಗು ಜನಿಸಿದ ತಕ್ಷಣ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು.
ಅಬ್ಬಬ್ಬಾ..ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೆ ಒದ್ದಾಡಿದ ಮಹಿಳೆ!
ಎರಡೂ ಶಿಶ್ನಗಳಿಂದ ಮೂತ್ರವನ್ನು ರವಾನಿಸಲು ಸಾಧ್ಯ
ಒಂದು ಫಾಲಸ್ 1.5 ಸೆಂಟಿಮೀಟರ್ ಉದ್ದವಿದ್ದರೆ, ಇನ್ನೊಂದು 2.5 ಸೆಂಟಿಮೀಟರ್ ಅಳತೆಯಿದೆ. ಹುಡುಗನಿಗೆ ಎರಡು ಮೂತ್ರನಾಳಗಳಿಗೆ ಒಂದೇ ಮೂತ್ರಕೋಶವನ್ನು ಜೋಡಿಸಲಾಗಿತ್ತು, ಇದು ಎರಡೂ ಶಿಶ್ನಗಳಿಂದ ಮೂತ್ರವನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಎರಡು ದಿನಗಳ ಕಾಲ ಬಾಲಕನನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು ಎಂದು ತಿಳಿದುಬಂದಿದೆ. ಇದು ವ್ಯಕ್ತಿಯ ಜೀವಕ್ಕೆ ಮಾರಣಾಂತಿಕವಲ್ಲ. ಆದರೆ ಡಿಫಾಲಿಯಾ ಹೇಗೆ ಸಂಭವಿಸುತ್ತದೆ ಎಂಬುದು ಅಸ್ಪಷ್ಟವಾಗಿದೆ.
ಎರಡು ಶಿಶ್ನದೊಂದಿಗೆ ಮಗು ಜನಿಸಿರುವ ಈ ಕುಟುಂಬದಲ್ಲಿ ಈ ಹಿಂದೆ ಇಂಥಾ ಯಾವುದೇ ಘಟನೆ ನಡೆದಿಲ್ಲ. ಅವರ ಕುಟುಂಬಕ್ಕೆ ಜನ್ಮ ದೋಷಗಳ ಯಾವುದೇ ಇತಿಹಾಸವಿಲ್ಲ. ಹಾಗೆಂದು ಪ್ರಪಂಚದಲ್ಲಿ ಹೀಗಾಗಿರುವುದು ಇದೇ ಮೊದಲ ಬಾರಿಯೇನಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಇಂಥಾ 100 ಡಿಫಾಲಿಯಾ ಪ್ರಕರಣಗಳನ್ನು ದಾಖಲಿಸಲಾಗಿದೆ, ಮೊದಲನೆಯದು 1609ರಷ್ಟು ಬಹಳ ಹಿಂದಿನದ್ದು.
32 ವರ್ಷದಲ್ಲಿ ಒಮ್ಮೆಯೂ ಕುಳಿತೇ ಇಲ್ಲ ಈ ಯುವತಿ!
ಮಗುವಿಗೆ ವಿಚಿತ್ರ ಕಾಯಿಲೆ, ಆಮೆಯಂತೆ ಬೆನ್ನ ಮೇಲಿದೆ ಚಿಪ್ಪು
ಅಪರೂಪದ ಚರ್ಮದ ಕಾಯಿಲೆಯಿಂದ (Disease) ಮಗು ಚಿಪ್ಪಿನೊಂದಿಗೆ ಜನಿಸಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಫ್ಲೋರಿಡಾದ ಕ್ಲಿಯರ್‌ವಾಟರ್‌ನ ಜೇಮ್ಸ್ ಮೆಕಲಮ್ ಎಂಬ ಮಗು ಹುಟ್ಟಿನಿಂದ ಈ ಸಮಸ್ಯೆಯಿಂದ ಬಳಲುತ್ತಿದೆ. ಮೆಲನೊಸೈಟಿಕ್ ನೆವಸ್ ಎಂಬ ಅಪರೂಪದ ಸ್ಥಿತಿಯು ಅಸಹಜವಾಗಿ ಗಾಢವಾದ, ಕ್ಯಾನ್ಸರ್‌ರಹಿತ ಚರ್ಮದ (Skin) ಪ್ಯಾಚ್ ಹೊರಬರಲು ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಮಗುವಿನ ದೇಹದಲ್ಲಿ ಚಿಪ್ಪನ್ನು ನೋಡಿ ಪೋಷಕರು ಆತನಿಗೆ ಲಿಟಲ್ ನಿಂಜಾ ಟರ್ಟಲ್ ಎಂದು ಹೆಸರಿಟ್ಟಿದ್ದಾರೆ.
ಜೇಮ್ಸ್‌ನ ಹೆತ್ತವರು ಆರಂಭದಲ್ಲಿ ಮಗುವಿನ (Baby) ಬೆನ್ನಿನ ಮೇಲಿದ್ದ ಚಿಪ್ಪನ್ನು (Shell) ಜನ್ಮ ಗುರುತು ಎಂದು ಭಾವಿಸಿದ್ದರು. 'ಆದರೆ ಮಗುವಿಗೆ ಎರಡು ವರ್ಷವಾಗುವಷ್ಟರಲ್ಲಿ ಇದು ಮತ್ತಷ್ಟು ಬೆಳೆಯಿತು. ದಪ್ಪವಾಗಿ ಗಡ್ಡೆಯ ರೂಪವನ್ನು ಪಡೆದುಕೊಂಡಿತು. ಬೆನ್ನಿನ ಮೇಲೆ ದಪ್ಪದಾದ ಚಿಪ್ಪು ಇದ್ದ ಕಾರಣ ಅವನನ್ನು ಮಲಗಿಸಲು ಸಹ ಸಾಧ್ಯವಾಗುತ್ತಿರಲ್ಲಿಲ್ಲ. ಕಷ್ಟಪಟ್ಟು ಒಂದು ಬದಿಯಲ್ಲಿ ಮಲಗಿಸುತ್ತಿದ್ದೆವು' ಎಂದು ಲಿಟಲ್ ನಿಂಜಾ ಟರ್ಟಲ್ ಪೋಷಕರು (Parents) ತಿಳಿಸಿದ್ದಾರೆ. ಚಿಪ್ಪು ಬೆಳವಣಿಗೆಯ ಹಂತದಲ್ಲಿ ತುರಿಕೆಗೆ ಸಹ ಕಾರಣವಾಗಿತ್ತು ಹೀಗಾಗಿ ಜೇಮ್ಸ್ ತನ್ನ ಬೆನ್ನನ್ನು ಪದೇ ಪದೇ ಕೆರೆದುಕೊಳ್ಳುತ್ತಿದ್ದನು ಎಂದಿದ್ದಾರೆ.