ಕೂದಲಿದೆ ಅಂತ ಎಲ್ಲೆಲ್ಲೋ ವ್ಯಾಕ್ಸ್ ಮಾಡೋ ಮುನ್ನ ಜೋಪಾನ..ಚರ್ಮನೇ ಕಿತ್ತೋಯ್ತು ನೋಡಿ!
ದೇಹದ ಮೇಲಿನ ಅನಗತ್ಯ ರೋಮಗಳನ್ನು ನಿವಾರಣೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಎಲ್ಲರ ಅಭ್ಯಾಸ. ಅದರಲ್ಲೂ ಮಹಿಳೆಯರು ಇದನ್ನು ಹೆಚ್ಚಾಗಿ ಮಾಡುತ್ತಾರೆ. ಇದಕ್ಕಾಗಿ ವ್ಯಾಕ್ಸಿಂಗ್ ಮೊರೆ ಹೋಗುತ್ತಾರೆ. ಹೀಗೆ ವ್ಯಾಕ್ಸಿಂಗ್ ಮಾಡಲು ಹೋದ ಮಹಿಳೆಯ ಚರ್ಮವೇ ಕಿತ್ತು ಬಂದಿರುವ ಘಟನೆ ನಡೆದಿದೆ.
ಹೆಣ್ಣುಮಕ್ಕಳು ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ ಮೈಮೇಲಿನ ಅನಗತ್ಯ ರೋಮಗಳನ್ನು ನಾನಾ ವಿಧಾನಗಳ ಮೂಲಕ ತೆಗೆಯೋ ಕೆಲಸ ಮಾಡುತ್ತಾರೆ. ಮುಖದ ಮೇಲೆ ಮೂಡುವ ರೋಮವಾಗಿರಬಹುದು, ಕಾಲು, ಕೈ, ಬಿಕಿನಿ ಲೈನ್ ಅಥವಾ ದೇಹದ ಬೇರೆ ಯಾವುದೇ ಭಾಗದಲ್ಲಿ ಮೂಡುವ ಕೂದಲಾಗಿರಬಹುದು. ಕಿರಿಕಿರಿ ಎನಿಸುವ ಕಡೆ ರೋಮಗಳಿದ್ದರೆ ಮಹಿಳೆಯರು ಅವುಗಳನ್ನು ನಿವಾರಣೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ಬೇಡದ ರೋಮಗಳ ನಿವಾರಣೆಗೆ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಶೇವಿಂಗ್, ವ್ಯಾಕ್ಸಿಂಗ್ ಮೊದಲಾದ ವಿಧಾನಗಳನ್ನು ಅನುಸರಿಸಲಾಗುತ್ತದೆ. ಹೆಣ್ಣು ಮಕ್ಕಳು ತಮಗೆ ಕಂಫರ್ಟ್ ಅನಿಸೋ ರೀತಿಯನ್ನು ಆಯ್ದುಕೊಳ್ಳುತ್ತಾರೆ.
ವ್ಯಾಕ್ಸಿಂಗ್ ಮಾಡೋಕೆ ಹೋಗಿ ಚರ್ಮನೇ ಕಿತ್ತು ಬಂತು
ಬಹುತೇಕರು ಬೇಡದ ಕೂದಲಿನ ನಿವಾರಣೆಗೆ (Hair removal) ಆಯ್ದುಕೊಳ್ಳುವ ರೀತಿ ವ್ಯಾಕ್ಸಿಂಗ್. ಹೆಚ್ಚು ಶ್ರಮವಿಲ್ಲದೇ ಸುಲಭವಾಗಿ ಕೂದಲನ್ನು ನಿವಾರಿಸಬಹುದು ಅನ್ನೋ ಕಾರಣಕ್ಕೆ ಬಹುತೇಕರು ಈ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಹೀಗೆ ಮಾಡಿದಾಗ ಕೆಲವೊಮ್ಮೆ ಎಡವಟ್ಟು ಆಗೋದು ಇದೆ. ವ್ಯಾಕ್ಸಿಂಗ್‌ನಿಂದ ಕೆಲವೊಬ್ಬರ ಚರ್ಮಕ್ಕೆ (Skin) ಅಲರ್ಜಿಯುಂಟಾಗುತ್ತದೆ. ಕೆಲವೊಬ್ಬರಿಗೆ ತುರಿಕೆ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರು ಸ್ಕಿನ್‌ನಲ್ಲಿ ರಾಶಸ್ ಬರುತ್ತೆ, ರಕ್ತ ಬರುತ್ತೆ. ಆದ್ರೆ ಇಲ್ಲೊಂದೆಡೆ ಆಗಿರೋದು ನೋಡಿದ್ರೆ ಮೈ ಝುಂ ಅನ್ನುತ್ತೆ. ಇಲ್ಲೊಬ್ಬ ಮಹಿಳೆಗೆ ವ್ಯಾಕ್ಸಿಂಗ್ ಮಾಡೋಕೆ ಹೋಗಿ ಸ್ಕಿನ್ ಅಲರ್ಜಿ ಆಗಿರೋದಷ್ಟೇ ಅಲ್ಲ, ವ್ಯಾಕ್ಸಿಂಗ್ ವೇಳೆ ಚರ್ಮವೇ ಸುಲಿದು ಬಂದಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.
ಹುಡುಗೀರು ಮುಖದ ಮೇಲಿನ ಹೇರ್ ಶೇವ್ ಮಾಡಿದರೆ ಹೆಚ್ಚು ಕೂದಲು ಬರುತ್ತಾ ?
ಸ್ಪಾ ವಿರುದ್ಧ ದೂರು ನೀಡಿದ ಮಹಿಳೆ
ತನ್ನ ಬ್ರೆಜಿಲಿಯನ್ ವ್ಯಾಕ್ಸಿಂಗ್ ಅನ್ನು ಹಾಳು ಮಾಡಿದ್ದಕ್ಕಾಗಿ ಮಹಿಳೆಯೊಬ್ಬರು (Woman) ಇಂದೋರ್‌ನಲ್ಲಿ ಸ್ಪಾ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಮಹಿಳೆಗೆ 70,000 ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಸ್ಪಾಗೆ ಆದೇಶಿಸಿದೆ. ಈ ಘಟನೆಯು ನವೆಂಬರ್ 2021 ರಲ್ಲಿ ನಡೆದಿತ್ತು. ಚಂದನ್ ನಗರದ ನಿವಾಸಿಯಾಗಿರುವ ಮಹಿಳೆ, 4,500 ರೂಪಾಯಿ ಮೌಲ್ಯದ ಪ್ರೀಮಿಯಂ ಬ್ರೆಜಿಲಿಯನ್ (ಬಿಕಿನಿ) ವ್ಯಾಕ್ಸಿಂಗ್‌ಗಾಗಿ ತುಳಸಿ ನಗರದಲ್ಲಿರುವ ಸ್ಥಳೀಯ ಸ್ಪಾಗೆ ಭೇಟಿ ನೀಡಿದ್ದರು. ಇಲ್ಲಿ ವ್ಯಾಕ್ಸಿಂಗ್ ಮಾಡುವ ಸಂದರ್ಭ ರೋಮ ಬರುವ ಬದಲು ಚರ್ಮವೇ ಕಿತ್ತು ಬಂದಿದೆ ಎಂದು ಮಹಿಳೆ ಆರೋಪಿಸಿದ್ದರು.
ವ್ಯಾಕ್ಸಿಂಗ್ ವೇಳೆ ಮೇಣವು ತುಂಬಾ ಬಿಸಿಯಾಗಿತ್ತು. ನಂತ್ರ, ಸ್ಟ್ರಿಪ್ ಅನ್ನು ತೆಗೆದುಹಾಕಿದಾಗ ಆಕೆಯ ಚರ್ಮವೂ ಸಹ ಸುಲಿದು ಬಂದಿತ್ತು ಎಂದು ಮಹಿಳೆ ಆರೋಪಿಸಿದ್ದರು. ಜನವರಿ 2022ರಲ್ಲಿ ಮಹಿಳೆ ಈ ಕೆಟ್ಟ ಸೇವೆಗಾಗಿ ಸಲೂನ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ಮಾಲೀಕರು ನಿರಾಕರಿಸಿದರು. ಆದರೆ ಏಪ್ರಿಲ್ 14ರಂದು, ವ್ಯಾಕ್ಸಿಂಗ್ ವೇಳೆ ಮಹಿಳೆಗೆ ಗಂಭೀರ ಗಾಯಗಳಾಗಿವೆ ಎಂದು ನ್ಯಾಯಾಲಯವು (Court) ಕಂಡುಕೊಂಡಿತ್ತು. ಸಲೂನ್ ಮಾಲೀಕರು ಮಹಿಳೆಯ ಸಮಸ್ಯೆಗಳನ್ನು ಆಲಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಹೆಚ್ಚುವರಿಯಾಗಿ, ಗ್ರಾಹಕರ (Customers) ಚರ್ಮದ ಮೇಲೆ ವ್ಯಾಕ್ಸ್ ಅನ್ನು ಪರೀಕ್ಷಿಸಿದ ನಂತರವೇ ವ್ಯಾಕ್ಸಿಂಗ್ ಸೆಷನ್ ಅನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.
ಅಪ್ಪರ್ ಲಿಪ್ಸ್ ಹೇರ್ ರಿಮೂವ್ ಮಾಡಲು ವ್ಯಾಕ್ಸಿಂಗ್ - ಥ್ರೆಡ್ಡಿಂಗ್ ಯಾವುದು ಬೆಸ್ಟ್?
ಇದರ ಪರಿಣಾಮವಾಗಿ, ಮಹಿಳೆಗೆ ದೈಹಿಕವಾಗಿ ಆಗಿರುವ ಹಾನಿಗಾಗಿ 30,000 ರೂ., ಮಾನಸಿಕ ಸಂಕಟಕ್ಕೆ 20,000 ರೂ. ಮತ್ತು ಮಹಿಳೆಯ ವೈದ್ಯಕೀಯ ಚಿಕಿತ್ಸೆಗಾಗಿ 20,000 ರೂ. ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ. 30 ದಿನಗಳಲ್ಲಿ ಮೊತ್ತವನ್ನು ಪಾವತಿಸುವಂತೆ ಹೇಳಲಾಗಿದೆ.