ವಿಶ್ವದ ಅತಿ ದೊಡ್ಡ ತುಟಿ ಹೊಂದಿರುವ ಮಹಿಳೆಯೀಕೆ, 34ಕ್ಕೂ ಹೆಚ್ಚು ಇಂಜೆಕ್ಷನ್ ಹಾಕಿಸಿಕೊಂಡಿದ್ದಾಳಂತೆ!

ಸುಂದರವಾಗಿ ಕಾಣಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹೀಗಾಗಿಯೇ ಮನೆಯಿಂದ ಹೊರ ಹೊರಟಾಗ ಚೆನ್ನಾಗಿ ರೆಡಿಯಾಗುತ್ತಾರೆ. ಇನ್ನೂ ಕೆಲವರು ಬ್ಯೂಟಿಫುಲ್ ಆಗಿ ಕಾಣ್ಬೇಕು ಅಂತ ಇಂಜೆಕ್ಷನ್, ಸರ್ಜರಿ ಎಲ್ಲಾ ಮಾಡ್ಕೊಳ್ತಾರೆ. ಹಾಗೆಯೇ ವಿಶ್ವದ ಅತಿ ದೊಡ್ಡ ತುಟಿ' ಹೊಂದಿರುವ ಮಹಿಳೆ ತನಗೂ ದೊಡ್ಡ ಕೆನ್ನೆಯ ಮೂಳೆಗಳು ಬೇಕು ಎಂದು ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

Woman with worlds biggest lips wants huge cheekbones too Vin

ವಿಶ್ವದ ಅತಿ ದೊಡ್ಡ ತುಟಿಯನ್ನು ಹೊಂದಿರುವ ಮಹಿಳೆ ಈಕೆ. ಬಲ್ಗೇರಿಯಾದ ಸೋಫಿಯಾದಿಂದ ಆಂಡ್ರಿಯಾ ಇವನೊವಾ ಅತಿ ದೊಡ್ಡ ತುಟಿಗಳನ್ನು ಹೊಂದಲು ಬರೋಬ್ಬರಿ 7.9 ಲಕ್ಷ ರೂ. ಖರ್ಚು ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಸದ್ಯ ದೊಡ್ಡ ಕೆನ್ನೆಯ ಮೂಳೆಗಳನ್ನು ಪಡೆಯಬೇಕೆಂದು ಬಯಸಿದ್ದಾರೆ. ಅವರು ಈಗ ಕೆನ್ನೆಯ ಮೂಳೆ ಫಿಲ್ಲರ್‌ಗಳನ್ನು ಸ್ವೀಕರಿಸಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಕೆನ್ನೆಯ ಮೂಳೆಗಳಿಗಾಗಿ ದಾಖಲೆಯನ್ನು ಸ್ಥಾಪಿಸುವ ಭರವಸೆ ಹೊಂದಿದ್ದಾರೆ. 'ನಾನು ವಿಶ್ವದ ದೊಡ್ಡ ತುಟಿಗಳ ಜೊತೆಗೆ ಕೆಲವು ದೊಡ್ಡ ಕೆನ್ನೆಯ ಮೂಳೆಗಳನ್ನು ಸಹ ಹೊಂದಲು ಬಯಸುತ್ತೇನೆ' ಎಂದು ಆಂಡ್ರಿಯಾ ಹೇಳಿರುವುದಾಗಿ ಡೈಲಿ ಮೇಲ್ ಉಲ್ಲೇಖಿಸಿದೆ.

ವಿಶ್ವದ ಅತಿ ದೊಡ್ಡ ಕೆನ್ನೆಯಿರುವ ಮಹಿಳೆಗೀಗ ಅತಿ ದೊಡ್ಡ ಕೆನ್ನೆ ಬೇಕಂತೆ
'ನಾನು ಇಲ್ಲಿಯವರೆಗೆ ಕೆನ್ನೆಯ ಮೂಳೆಗಳಲ್ಲಿ ನಾಲ್ಕು ಹೈಲುರಾನಿಕ್ ಆಸಿಡ್ ಚುಚ್ಚುಮದ್ದನ್ನು (Injection) ಹೊಂದಿದ್ದೇನೆ, ಆದರೆ ನಾನು ವಾರದೊಳಗೆ ಇನ್ನೆರಡು ಚುಚ್ಚುಮದ್ದನ್ನು ಹಾಕಿಸಿಕೊಳ್ಳುತ್ತೇನೆ' ಎಂದು ಆಂಡ್ರಿಯಾ ತಿಳಿಸಿದ್ದಾರೆ. 'ಗುಣಪಡಿಸುವ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಾನು ಮೂರು ದಿನಗಳ ನಂತರ ಮುಖದ (Face) ಮೇಲೆ ಬಲವಾದ ಒತ್ತಡ ಹಾಕುವುದನ್ನು ತಪ್ಪಿಸಬೇಕಾಗಿದೆ' ಎಂದು ಅವರು ಹೇಳಿದರು.

Menstrual Leave: ಸ್ತ್ರೀಯರಿಗೆ ಮುಟ್ಟಿನ ರಜೆ ಸರ್ಕಾರದ ನೀತಿ ಎಂದ ಸುಪ್ರೀಂಕೋರ್ಟ್‌

ದೊಡ್ಡ ತುಟಿ ಪಡೆಯಲು 34ಕ್ಕೂ ಹೆಚ್ಚು ಚುಚ್ಚುಮದ್ದು ಬಳಕೆ
25 ವರ್ಷದ ಯುವತಿ ಆಂಡ್ರಿಯಾ ಇವನೊವಾ ದೊಡ್ಡ ತುಟಿಗಳನ್ನು (Big lips) ಪಡೆಯಲು ಇಲ್ಲಿಯವರೆಗೆ 34ಕ್ಕೂ ಹೆಚ್ಚು ಚುಚ್ಚುಮದ್ದನ್ನು ಹಾಕಿಸಿಕೊಂಡಿದ್ದಾರೆ. 'ನನ್ನ ಗುರಿ ಮಾಡೆಲ್ ಆಗುವುದು. ಹೀಗಾಗಿ  ತುಟಿಗಳ ಗಮನಾರ್ಹ ಹಿಗ್ಗುವಿಕೆಯನ್ನು ಪಡೆಯಬೇಕಾಗಿದೆ. ಹೀಗಾಗಿ ಸಹಜವಾಗಿ, ನಾನು ಇನ್ನೂ ದೊಡ್ಡ ತುಟಿಗಳನ್ನು ಬಯಸುತ್ತೇನೆ. ನಾನು ಅವುಗಳನ್ನು ಇನ್ನಷ್ಟು ದೊಡ್ಡದಾಗಿಸಲು ಹೆಚ್ಚಿನ ಚುಚ್ಚುಮದ್ದನ್ನು ಮುಂದುವರಿಸುತ್ತೇನೆ' ಎಂದಿದ್ದಾರೆ.

ಹಲವಾರು ಚಿಕಿತ್ಸಾಲಯಗಳು ತನಗೆ ಹೆಚ್ಚಿನ ಲಿಪ್ ಫಿಲ್ಲರ್‌ಗಳನ್ನು ನೀಡಲು ನಿರಾಕರಿಸುತ್ತವೆ ಎಂದು ಆಂಡ್ರಿಯಾ ಹೇಳಿಕೊಂಡಿದ್ದಾರೆ.. ಏಕೆಂದರೆ ಅವುಗಳು ತುಂಬಾ ದೊಡ್ಡದಾಗಿರುತ್ತವೆ ಮತ್ತು ಹೆಚ್ಚಿನ ಚುಚ್ಚುಮದ್ದುಗಳು ಆರೋಗ್ಯದ ತೊಂದರೆಗಳನ್ನು (Health problem) ಉಂಟುಮಾಡಬಹುದು. ಮುಂದಿನ ಕಾರ್ಯವಿಧಾನಗಳು ಮಾರಣಾಂತಿಕ ಎಂದು ಅವರು ಎಚ್ಚರಿಸಿರುವುದಾಗಿ ತಿಳಿಸಿದ್ದಾರೆ. 

ಕಲೆ ಮೂಲಕ ಗ್ರಾಮದ ಬಣ್ಣವನ್ನೇ ಬದಲಾಯಿಸಿದ ಹಳ್ಳಿ ಹುಡುಗಿಗೊಂದು ಸಲಾಂ!

25ರ ಹರೆಯದ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ಕಿಸಸ್ ಫಾರ್ ಕ್ಯಾಶ್' ಅನ್ನು ಹರಾಜು ಹಾಕಿದರು. ಆ ನಂತರ ಆಂಡ್ರಿಯಾ ತನ್ನ ಕೆನ್ನೆಯ ಸೌಂದರ್ಯದತ್ತ ಗಮನ ಹರಿಸುತ್ತಿದ್ದಾರೆ. ಆಂಡ್ರಿಯಾ ತನ್ನ ಕೆನ್ನೆಯ ಮೂಳೆಗಳಿಗಾಗಿ ಇದುವರೆಗೆ ಅಂದಾಜು 1.58 ಲಕ್ಷ ರೂ. ಖರ್ಚು ಮಾಡಿದ್ದಾರೆ. 'ನನ್ನ ಮುಖವು ಈಗ ತೀಕ್ಷ್ಣವಾಗಿದೆ, ಆದರೆ ನಾನು ಅದನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಹೊಸ ನೋಟವನ್ನು ನನ್ನ ಕುಟುಂಬವು ಒಪ್ಪದಿದ್ದರೂ, ನನ್ನ ಬದಲಾವಣೆಗೆ ನನ್ನ ಆಯ್ಕೆಯನ್ನು ಅವರು ಗೌರವಿಸಬೇಕು. ಜನರ ಕಾಮೆಂಟ್‌ಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಸೌಂದರ್ಯದ (Beauty) ಬಗ್ಗೆ ನನ್ನದೇ ಆದ ಅಭಿರುಚಿ ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇನೆ - ನಾನು ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇನೆ' ಎಂದು ಆಂಡ್ರಿಯಾ ಹೇಳಿದ್ದಾರೆ.

ಅದೇನೆ ಇರ್ಲಿ, ಸೌಂದರ್ಯ ಹೆಚ್ಚಿಸಬೇಕು ಅಂತ ಆರೋಗ್ಯದ ಬಗ್ಗೆ ಕಾಳಜಿ (Care) ಕೊಡದೆ ಬೇಕಾಬಿಟ್ಟಿ ಇಂಜೆಕ್ಷನ್‌, ಸರ್ಜರಿ ಮಾಡಿಸಿಕೊಳ್ಳೋ ಇಂಥವರಿಗೆ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ. ಇಂಥಾ ಅನಾವಶ್ಯಕ ಆಸೆಗಳು ಜೀವಕ್ಕೇ ಕುತ್ತು ತಂದರೆ ಆಶ್ಚರ್ಯವಿಲ್ಲ.

ಮಗನ ಮಗುವಿಗೆ ಜನ್ಮ ನೀಡಿದ ತಾಯಿ, ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!

Latest Videos
Follow Us:
Download App:
  • android
  • ios