ಮಗನ ಮಗುವಿಗೆ ಜನ್ಮ ನೀಡಿದ ತಾಯಿ, ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!

56 ವರ್ಷದ ಮಹಿಳೆ ತನ್ನ ಮಗನ ಮಗುವಿಗೇ ಜನ್ಮ ನೀಡಿದ್ದಾಳೆ. ಹೌದು, ಅಚ್ಚರಿ ಎನಿಸಿದರೂ ಇದು ನಿಜ. ಈ ಮೂಲಕ ಆಕೆ ಏಕಕಾಲಕ್ಕೆ ತಾಯಿ ಹಾಗೂ ಅಜ್ಜಿಯಾಗಿದ್ದಾಳೆ. ಅರೆ ಇದು ಹೇಗೆ ಸಾಧ್ಯವಾಯ್ತು ಅನ್ಬೇಡಿ. ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

Mother gave birth to sons child, Know how the 56 year old woman did this miracle Vin

ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮದುವೆಯಾದ ಮೇಲೆ ಮನೆ ತುಂಬೋಕೆ ಮುದ್ದಾದ ಮಕ್ಕಳಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಮಕ್ಕಳ ನಗು, ಅಳು, ಗದ್ದಲ-ಗಲಾಟೆಯಿಂದ ಮನೆ ತುಂಬಿದಾಗ ಸಂಸಾರ ಪರಿಪೂರ್ಣವಾಗುತ್ತದೆ. ಆದ್ರೆ ಕೆಲವೊಬ್ಬರಿಗೆ ಮಕ್ಕಳೇ ಆಗುವುದಿಲ್ಲ. ಐವಿಎಫ್‌, ಬಾಡಿಗೆ ತಾಯ್ತನ ಮೊದಲಾದವುಗಳಿಂದ ಮಕ್ಕಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಕೆಲವೊಬ್ಬರಿಗೆ ಇದು ಸಹ ಸಾಧ್ಯವಾಗುವುದಿಲ್ಲ. ಹೀಗಾದಾಗ ಜೀವನಪೂರ್ತಿ ಮಕ್ಕಳಿಲ್ಲಾ ಎಂದು ಕೊರಗುತ್ತಾ ಇರಬೇಕಾಗುತ್ತದೆ. ಆದ್ರೆ ಇಲ್ಲೊಬ್ಬ 56 ವರ್ಷದ ಮಹಿಳೆ ತನ್ನ ಮಗನ ಮಗುವಿಗೇ ಜನ್ಮ ನೀಡಿದ್ದಾಳೆ. ಹೌದು, ಅಚ್ಚರಿ ಎನಿಸಿದರೂ ಇದು ನಿಜ. 

ಮಗನ ಮಗುವಿಗೇ ಜನ್ಮ ನೀಡಿದ 56 ವರ್ಷದ ಮಹಿಳೆ
ಯುಎಸ್ ಪ್ರಾಂತ್ಯದ ಉತಾಹ್‌ನಲ್ಲಿ ವಾಸಿಸುವ ನ್ಯಾನ್ಸಿ ಹಾಕ್ ತನ್ನ ಮೊಮ್ಮಗಳಿಗೆ ಜನ್ಮ ನೀಡಿದರು. ಅವರು ತಮ್ಮ ಮಗನ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಮಗುವನ್ನು ಪಡೆಯಲು ತಾಯಿ ಮತ್ತು ಮಗನ ನಡುವೆ ಸಂಬಂಧವಿತ್ತು ಎಂದು ನೀವು ಯೋಚಿಸಬೇಡಿ. ಇದು ಸಂಪೂರ್ಣವಾಗಿಯೂ ತಪ್ಪು. ಯಾಕೆಂದರೆ ಈ ತಾಯಿ ಬಾಡಿಗೆ ತಾಯ್ತನದ ಮೂಲಕ ತನ್ನ ಮಗನಿಗೆ ಮಗುವನ್ನು ನೀಡಿದ್ದಾಳೆ. ಮಗನ ಮಗುವಿಗೆ (Baby) ಜನ್ಮ ನೀಡುವ ಮೂಲಕ ನ್ಯಾನ್ಸಿ ಈಗ ಏಕಕಾಲಕ್ಕೆ ತಾಯಿ ಹಾಗೂ ಅಜ್ಜಿ ಆಗಿದ್ದಾರೆ..

Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ

ನ್ಯಾನ್ಸಿಯ ಸೊಸೆ ಕ್ರಾಂಬ್ರಿಯಾ 2021ರಲ್ಲಿ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದರು. ಈ ಸಮಯದಲ್ಲಿ ಅವರು ಗರ್ಭಕಂಠಕ್ಕೆ ಒಳಗಾಗಿದ್ದರು. ಅಂದರೆ, ಗರ್ಭಧಾರಣೆಯ ನಂತರ, ವೈದ್ಯಕೀಯ ಸಮಸ್ಯೆಯಿಂದಾಗಿ, ಅವಳ ಗರ್ಭಾಶಯವನ್ನು ತೆಗೆದುಹಾಕಲಾಯಿತು. ನ್ಯಾನ್ಸಿಯ ಸೊಸೆ ಕ್ಯಾಂಬ್ರಿಯಾ ಮತ್ತು ಮಗ ಮಗುವನ್ನು ತುಂಬಾ ಇಷ್ಟಪಡುತ್ತಿದ್ದರು. ಆ ಸಮಯದಲ್ಲೂ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವಳಿ ಮಗುವಿಗೆ ಜನ್ಮ ನೀಡಿದ್ದಳು. ಇದಕ್ಕೂ ಮೊದಲು ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದರು. ದಂಪತಿಯ (Couple) ಮಗುವಿನ ಆಸೆ ಇಲ್ಲಿಗೇ ನಿಲ್ಲಲಿಲ್ಲ. ಅವರು ತಮ್ಮ ಜೀವನದಲ್ಲಿ ಐದನೇ ಮಗುವನ್ನು ತರಲು ಬಯಸಿದ್ದರು. ಆದರೆ ಗರ್ಭಕಂಠದ ಸಮಸ್ಯೆಯ ನಂತರ, ಕ್ಯಾಂಬ್ರಿಯಾ ತಾಯಿಯಾಗಲು ಸಾಧ್ಯವಾಗಲಿಲ್ಲ.

ತಾಯಿಯೊಂದಿಗೆ ಬಾಡಿಗೆ ತಾಯ್ತನದ ಬಗ್ಗೆ ಮಾತನಾಡಿದ ಮಗ
ಹೆಂಡತಿಗೆ ಗರ್ಭಾಶಯದ (Uterus) ಸಮಸ್ಯೆಯಿದ್ದ ಕಾರಣ ಮಗ ತನ್ನ ತಾಯಿಯೊಂದಿಗೆ ಬಾಡಿಗೆ ತಾಯ್ತನದ ಬಗ್ಗೆ ಮಾತನಾಡಿದನು. 56 ವರ್ಷದ ನ್ಯಾನ್ಸಿ ತನ್ನ 33 ವರ್ಷದ ಮಗ ಅಭಿಪ್ರಾಯವನ್ನು ಗೌರವಿಸಿದರು. ಅವಳು ಅವನ ಮಗನ ಬಾಡಿಗೆ ತಾಯಿಯಾಗಲು ಒಪ್ಪಿಕೊಂಡರು. ಆದರೆ ಈ ವಯಸ್ಸಿನಲ್ಲಿ ಬಾಡಿಗೆ ತಾಯ್ತನ ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಬಳಿಕ ಮೂವರು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು (Test) ಮಾಡಿಸಲಾಯಿತು. ನ್ಯಾನ್ಸಿ ಬಾಡಿಗೆ ತಾಯ್ತನಕ್ಕೆ ಆರೋಗ್ಯವಾಗಿದ್ದಾರೆ ಎಂಬುದನ್ನು ಕಂಡುಕೊಳ್ಳಲಾಯಿತು. 

ಗರ್ಭಾವಸ್ಥೆಯಲ್ಲಿ ತಲೆನೋವು ಕಾಡೋದು ಯಾಕೆ ಗೊತ್ತಾ?

ನ್ಯಾನ್ಸಿಯವರನ್ನು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿಸಿ, ಅಂತಿಮವಾಗಿ ಅವರು ಗರ್ಭಿಣಿ (Pregnant)ಯಾದರು. ನವೆಂಬರ್ 2022 ರಲ್ಲಿ ತುಂಬಾ ಸುಂದರವಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ನ್ಯಾನ್ಸಿಯ ವೈದ್ಯ ರಸೆಲ್ ಫೋಕ್ ಮಾತನಾಡಿ, 'ನ್ಯಾನ್ಸಿಯನ್ನು ನೋಡಿದರೆ ವಯಸ್ಸು ಕೇವಲ ಸಂಖ್ಯೆ ಎಂದು ಹೇಳಬಹುದು. ಅನೇಕ ರೀತಿಯ ಕಾಯಿಲೆಗಳು ಜನರನ್ನು ಸುತ್ತುವರಿದಿರುವ ಈ ಕಾಲದಲ್ಲಿ. ಆದರೆ ನ್ಯಾನ್ಸಿ ಸಂಪೂರ್ಣವಾಗಿ ಫಿಟ್ ಆಗಿದ್ದರು. ನಾವು ಆಕೆಯ ದೇಹಕ್ಕೆ ಭ್ರೂಣವನ್ನು ವರ್ಗಾಯಿಸಿ, ನಿಖರವಾಗಿ 6 ದಿನಗಳ ನಂತರ ಗರ್ಭಿಣಿಯಾದರು' ಎಂದು ಮಾಹಿತಿ ನೀಡಿದರು.

ಅದೇ ಸಮಯದಲ್ಲಿ, ಪ್ರತಿ ಕ್ಷಣವೂ ತನ್ನ ಹೆಂಡತಿಯನ್ನು ಬೆಂಬಲಿಸುವ ಜೇಸನ್, 'ನ್ಯಾನ್ಸಿಗೆ 56 ವರ್ಷ ವಯಸ್ಸಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಮಗು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಎಂದು ನಾವು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅದು ಸಾಧ್ಯವಾಯಿತು' ಎಂದಿದ್ದಾರೆ. ಪತಿ ಜೇಸನ್ ಅವರ ಮಾತನ್ನು ನ್ಯಾನ್ಸಿ ಕೂಡ ಒಪ್ಪುತ್ತಾರೆ. ನಾನು ಈ ಮಗುವನ್ನು ಕಳೆದುಕೊಳ್ಳಬಹುದು ಎಂದು ನಾನು ಅನೇಕ ಬಾರಿ ಭಾವಿಸಿದೆ. ಆದರೆ ಮುದ್ದಾಗ ಮಗುವಿಗೆ ಜನ್ಮ ನೀಡಿರುವುದು ಖುಷಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios