Menstrual Leave: ಸ್ತ್ರೀಯರಿಗೆ ಮುಟ್ಟಿನ ರಜೆ ಸರ್ಕಾರದ ನೀತಿ ಎಂದ ಸುಪ್ರೀಂಕೋರ್ಟ್
ಮುಟ್ಟಿನ ಸಮಯದಲ್ಲಿ ಹೆಣ್ಣು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಾಳೆ. ಹೊಟ್ಟೆನೋವು, ಮೈ ಕೈ ನೋವಿನ ಜೊತೆ ಮೂಡ್ ಸ್ವಿಂಗ್ಸ್ ಸಹ ಉಂಟಾಗುತ್ತದೆ. ಹೀಗಾಗಿ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಕಾಲೇಜು ಹಾಗೂ ಕಚೇರಿಗಳಲ್ಲಿ ತೊಂದರೆ ಅನುಭವಿಸುತ್ತಾರೆ. ಹೀಗಾಗಿಯೇ ಇತ್ತೀಚಿಗೆ ಹಲವೆಡೆ ಮುಟ್ಟಿನ ರಜೆಯನ್ನು ನೀಡಲಾಗ್ತಿದೆ.ಈ ಮಧ್ಯೆ ಸ್ತ್ರೀಯರಿಗೆ ಮುಟ್ಟಿನ ರಜೆ ಸರ್ಕಾರದ ನೀತಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ: ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ ಋುತುಚಕ್ರದ ಅವಧಿಯ ನೋವಿನ ರಜೆಗಾಗಿ ನಿಯಮ ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಚ್ ಶುಕ್ರವಾರ ನಿರಾಕರಿಸಿದೆ. ಈ ವಿಷಯವು ಸರ್ಕಾರದ ನೀತಿ ವ್ಯಾಪ್ತಿಯಲ್ಲಿ ಬರುತ್ತದೆ. ಇದು ನೀತಿಯ ವಿಷಯವಾದ್ದರಿಂದ ನಾವು ಇದರೊಂದಿಗೆ ವ್ಯವಹರಿಸುವುದಿಲ್ಲ. ಅರ್ಜಿದಾರರು ಈ ಕುರಿತು ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯವನ್ನು ಸಂಪರ್ಕಿಸಿಸುವುದು ಸೂಕ್ತ. ಹೀಗಾಗಿ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತಿದೆ’ ಎಂದು ಮುಖ್ಯ ನ್ಯಾ.ಡಿ.ವೈ ಚಂದ್ರಚೂಡ್ ಅವರ ಪೀಠ ತಿಳಿಸಿದೆ.
ಈ ವೇಳೆ ಮಹಿಳಾ ಉದ್ಯೋಗಸ್ಥರಿಗೆ ಮುಟ್ಟಿನ ರಜೆ ನೀಡಿ ಎಂದು ಉದ್ಯೋಗ ನೀಡುವ ಕಂಪನಿಗಳಿಗೆ ಒತ್ತಾಯಿಸಿದರೆ, ಮಹಿಳೆಯರನ್ನು ನೇಮಿಸಿಕೊಳ್ಳದಂತೆ ಅವುಗಳಿಗೆ ಪ್ರೋತ್ಸಾಹ ನೀಡಿದಂತೆ ಎಂದು ಅರ್ಜಿ ವಿರೋಧಿಸಿ ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ಅರ್ಜಿಯನ್ನೂ ಪೀಠ ಗಮನಿಸಿತು.
Menstrual leave: ಮಹಿಳೆಯರಿಗೆ ಋತುಚಕ್ರದ ರಜೆಯನ್ನು ಅಧಿಕೃತಗೊಳಿಸಿದ ಸ್ಪೇನ್
ಕೇರಳ ಸರ್ಕಾರದಿಂದ ಮುಟ್ಟಿನ ರಜೆ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ
ಕೇರಳದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆಯನ್ನು ಕೇರಳ ಸರ್ಕಾರ ಘೋಷಿಸಿದೆ. ಇಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು (CUSAT) ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಘೋಷಿಸಿತ್ತು. ಇದರ ಬೆನ್ನಲ್ಲೇ ಕೇರಳ ಸರ್ಕಾರ ಮಹತ್ವದ ಸಭೆ ನಡೆಸಿದ ಇದೀಗ ಹೊಸ ಘೋಷಣೆ ಮಾಡಿದೆ. ಮುಟ್ಟಿನ ರಜೆ ಹಾಗೂ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿನಿಯರಿಗೆ 60 ದಿನದ ಹೆರಿಗೆ ರಜೆಯನ್ನು ಘೋಷಿಸಲಾಗಿದೆ.
ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಇನ್ನು ಮುಂದೆ ಕೇರಳದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲಾಗುತ್ತದೆ. ಇದರ ಜೊತೆಗೆ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆಯಾಗಿ 60 ದಿನ ನೀಡಲಾಗುವುದು ಎಂದು ಬಿಂದು ಹೇಳಿದ್ದಾರೆ. ಹೆರಿಗೆ ರಜೆ ಪಡೆದ ವಿದ್ಯಾರ್ಥಿನಿಯ ಹಾಜರಾತಿ ಶೇಕಡಾ 73ರಷ್ಟಿದ್ದರೆ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಆರ್ ಬಿಂದು ಹೇಳಿದ್ದಾರೆ.
Menstrual Leave: ಸ್ವಿಗ್ಗಿ, ಜೊಮಾಟೊ ನಂತ್ರ ಮುಟ್ಟಿನ ನೋವು ಅರ್ಥವಾಗಿದೆ ಈ ಕಂಪನಿಗೆ
CUSAT ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಲಾಗಿತ್ತು. ಇದಕ್ಕೂ ಮೊದಲು ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯವು 18 ವರ್ಷಕ್ಕಿಂತ ಮೇಲ್ಪಟ್ಟ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಘೋಷಿಸಿತ್ತು. ಈ ನಿರ್ಧಾರಗಳ ಬಳಿಕ ಹಲವು ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಹಾಗೂ ಹೆರಿಗೆ ರಜೆ ಘೋಷಿಸುವಂತೆ ಮನವಿ ಮಾಡಿತ್ತು.
ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದಲ್ಲಿ ತೆಗೆದುಕೊಂಡ ನಿರ್ಧಾರದಲ್ಲಿ ಕೆಲ ಮಹತ್ವದ ವಿಚಾರಗಳ ಮೇಲೂ ಬೆಳಕು ಚೆಲ್ಲಲಾಗಿತ್ತು. 60 ದಿನಗಳ ಹೆರಿಗೆ ರಜೆಯನ್ನು ಹೆರಿಗೆ ಮುನ್ನ ಅಥವಾ ನಂತರ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೋರ್ಸಿನ ಅವಧಿಯಲ್ಲಿ ಕೇವಲ 1 ಬಾರಿ ಹೆರಿಗೆ ರಜೆಗೆ ಅವಕಾಶವಿದೆ. ಮೊದಲ ಅಥವಾ 2ನೇ ಹೆರಿಗೆಗೆ ಈ ರಜೆ ಪಡೆದುಕೊಳ್ಳಬಹುದಾಗಿದೆ. ಗರ್ಭಪಾತ, ಟ್ಯೂಬೆಕ್ಟಮಿಗಾಗಿ 14 ದಿನಗಳ ರಜೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.