ನೀರಿನಲ್ಲಿ ಸಾಮಾನ್ಯವಾಗಿ ಬೋಟ್, ಹಡಗು, ದೋಣಿಯ ಮೂಲಕ ಪ್ರಯಾಣ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ವಿಭಿನ್ನವಾಗಿ ನೀರಲ್ಲಿ ನಡ್ಕೊಂಡು ಹೋಗಿದ್ದಾಳೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಎಲ್ಲರೂ ಆಕೆಯನ್ನು ದೇವಿ ಎಂದು ಕೊಂಡಾಡುತ್ತಿದ್ದಾರೆ. ನಿಜಕ್ಕೂ ಘಟನೆಯ ಅಸಲಿಯತ್ತೇನು?
ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ನರ್ಮದಾ ನದಿಯ ನೀರಿನಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಅನೇಕರು ಆಕೆಯನ್ನು ದೇವತೆ ಎಂದು ತಪ್ಪಾಗಿ ಭಾವಿಸಿದ್ದಾರೆ 'ತಿಲ್ವಾರಾ ಘಾಟ್‌ನಲ್ಲಿ ನರ್ಮದಾ ನೀರಿನ ಮೇಲ್ಮೈಯಲ್ಲಿ ಮಹಿಳೆ ನಡೆಯುತ್ತಿದ್ದಾರೆ' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಮಹಿಳೆಯನ್ನು ನೋಡಲು ನದಿ ತೀರಕ್ಕೆ ಮುಗಿಬಿದ್ದರು. ಅವಳು ನದಿಯ ನೀರಿನ ಮೇಲೆ ನಡೆಯೋದನ್ನು ನೋಡಿ ಜನರು ಆಕೆಯನ್ನು ದೇವರೆಂದು ಕೊಂಡಾಡಿದರು. ಜನರು ಡ್ರಮ್ ಬಾರಿಸುತ್ತಾ ಆಕೆಯ ಸುತ್ತಲೂ ನೆರೆದಿದ್ದರಿಂದ ಪೊಲೀಸರು ಸಹ ಸ್ಥಳಕ್ಕೆ ಧಾವಿಸಬೇಕಾಯಿತು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿ ಜನರು ನದಿ ತೀರದತ್ತ ಜಮಾಯಿಸಿದರು. ಮಹಿಳೆ (Women)ಯನ್ನು ನರ್ಮದಾ ಮಾತೆ ಎಂದು ಅಂದುಕೊಂಡು ಆಕೆಯನ್ನು ದೇವತೆ (Goddess) ಎಂಬಂತೆ ಪೂಜಿಸತೊಡಗಿದರು.ಆಕೆ ನಡೆದು ಬಂದ ಹಾದಿಯುದ್ದಕ್ಕೂ ಪೂಜೆ ಕೂಡಾ ಮಾಡತೊಡಗಿದರು. ಇದಾದ ನಂತರ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ (Enquiry) ನಡೆಸಲು ಆರಂಭಿಸಿದರು.
Viral Video: ಎಲಾ..ಏನ್ ಗುರೂ ಇವ್ನು..ನದಿಯಲ್ಲೂ ಸಖತ್ತಾಗಿ ಬೈಕ್ ಓಡಿಸ್ತಾನೆ!
ನಿಜವಾಗಿಯೂ ಮಹಿಳೆ ನೀರಿನ ಮೇಲೆ ನಡೆದಳಾ?
ಪೊಲೀಸರ ವಿಚಾರಣೆಯಲ್ಲಿ ಜ್ಯೋತಿ ರಘುವಂಶಿ ಎಂಬ ಮಹಿಳೆ ತಾನು ನರ್ಮದಾ ನದಿಯ (Narmada river) ನೀರಿನ ಮೇಲೆ ನಡೆದಿದ್ದನ್ನು ಅಲ್ಲಗಳೆದಿದ್ದಾರೆ. ತಾನು ನರ್ಮದಾಪುರಂ ನಿವಾಸಿಯಾಗಿದ್ದು, 10 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಈಕೆ 10 ತಿಂಗಳಿಂದ ಮನೆ ಬಿಟ್ಟಿದ್ದಾರೆ. ನರ್ಮದಾ ನದಿ ತೀರದಲ್ಲೇ ಈಕೆ ನೆಲೆಸಿದ್ದಾರೆ. ಜೊತೆಗೆ ತಾನೇನೂ ದೇವತೆ ಅಲ್ಲ ಅನ್ನೋದನ್ನೂ ಮಹಿಳೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ನಾನು ಯಾರ ಬಳಿಯಲ್ಲೂ ತನಗೆ ದೈವೀ ಶಕ್ತಿ ಇದೆ ಎಂದು ಹೇಳಿಕೊಂಡಿಲ್ಲ ಎಂದಿದ್ದಾರೆ.
ಘಟನೆಯ ನಿಜಾಂಶವೇನು?
ನರ್ಮದಾ ನದಿಯ ನೀರಿನ ಮಟ್ಟವು ಬದಲಾಗುತ್ತಿದೆ ಮತ್ತು ಬೇಸಿಗೆಯಲ್ಲಿ ಕೆಲವು ಸ್ಥಳಗಳಲ್ಲಿ ಇದು ತುಂಬಾ ಕಡಿಮೆಯಾಗಿದೆ. ಹೀಗಾಗಿ ನೀರಿಲ್ಲದೆ ಜಾಗದಲ್ಲಿ ನಡೆದರೂ ನೀರಿನಲ್ಲಿ ನಡೆದಂತೆ ಕಂಡುಬರುತ್ತದೆ ಎಂದು ಹಲವರು ಹೇಳಿದ್ದಾರೆ. ಜ್ಯೋತಿ ನರ್ಮದಾ ನದಿ ತೀರದಲ್ಲೇ ವಾಸಿಸುತ್ತಿರುವ ಕಾರಣ ಅವರಿಗೆ, ನದಿಯ ಆಳ, ಅಗಲ, ನದಿ ಹರಿವಿನ ಸಂಪೂರ್ಣ ಮಾಹಿತಿ ಇದೆ. ನದಿ ನೀರು ಎಲ್ಲಿ ನೆಲ ಮಟ್ಟದಲ್ಲಿ ಹರಿಯುತ್ತದೆ ಅನ್ನೋದು ಮಹಿಳೆಗೆ ತುಂಬಾ ಚನ್ನಾಗಿ ಗೊತ್ತಿದೆ. ಈ ರೀತಿ ನೆಲ ಮಟ್ಟದಲ್ಲಿ ನೀರು ಹರಿಯುವ ಪ್ರದೇಶದಲ್ಲಿ ಈ ಮಹಿಳೆ ನಡೆದಾಡುತ್ತಾರೆ (Walking). ಅಂದರೆ ಈಕೆ ನೀರಿನ ಮೇಲೆ ನಡೆಯೋದಿಲ್ಲ. ನದಿಯ ತಳಭಾಗ ನೆಲ ಮಟ್ಟದಲ್ಲೇ ಇರುವ ಕಡೆ ಮಾತ್ರ ನಡೆದಾಡುತ್ತಾಳೆ. ದೂರದಿಂದ ನೋಡಿದರೆ ನದಿ ಮಧ್ಯದಲ್ಲೇ ನಡೆದಾಡಿದಂತೆ ಕಂಡು ಬರುತ್ತದೆ. ಈ ರೀತಿ ಮಹಿಳೆ ನಡೆಯೋದನ್ನು ನೋಡಿದ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ವದಂತಿ ಹರಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ನಾನು ನರ್ಮದಾ ನದಿ ನೀರಿನ ಆಳ ಇರುವ ಭಾಗಗಳತ್ತ ಹೊಗೋದೇ ಇಲ್ಲ. ನೀರು ನೆಲ ಮಟ್ಟದಲ್ಲಿ ಹರಿಯುವ ಕಡೆ ಮಾತ್ರ ನಡೆಯುತ್ತೇನೆ. ನದಿ ಒಳಗೆ ನಾನು ಇಳಿಯೋದೇ ಇಲ್ಲ ಎಂದು ಮಹಿಳೆ ಹೇಳುತ್ತಾರೆ. ಇದೀಗ ಪೊಲೀಸರು ಈ ಪ್ರಕರಣದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಕಳೆದ 10 ತಿಂಗಳಿನಿಂದ ಮನೆ ಬಿಟ್ಟಿದ್ದ ಮಹಿಳೆಯನ್ನು ಕುಟುಂಬಸ್ಥರ ವಶಕ್ಕೆ ಒಪ್ಪಿಸಿದ್ದಾರೆ.
