Viral Video: ಎಲಾ..ಏನ್ ಗುರೂ ಇವ್ನು..ನದಿಯಲ್ಲೂ ಸಖತ್ತಾಗಿ ಬೈಕ್ ಓಡಿಸ್ತಾನೆ!
ಸಾರಿಗೆ ವ್ಯವಸ್ಥೆಯಲ್ಲಿ ಹಲವು ವಿಧಗಳಿವೆ. ರಸ್ತೆ, ಜಲಮಾರ್ಗ, ವಾಯುಮರರ್ಗ ಹೀಗೆ. ರಸ್ತೆಯಲ್ಲಿ ವಾಹನಗಳು ಓಡಾಡಿದರೆ, ನೀರಿನಲ್ಲಿ ದೋಣಿ, ಹಡಗು, ಆಗಸದಲ್ಲಿ ವಿಮಾನ ಹಾರುತ್ತದೆ. ಇದೆಲ್ಲಾ ಉಲ್ಟಾ ಪಲ್ಟಾ ಆದರೆ ಹೇಗಿರುತ್ತೆ. ಅರೆ, ಅದ್ಹೇಗೆ ಸಾಧ್ಯ ಅಂತೀರಾ, ಅಸಾಧ್ಯವೆನಿಸಿದ್ದೂ ಇಲ್ಲಿ ಸಾಧ್ಯವಾಗಿದೆ. ಮೋಟರ್‌ಸೈಕ್ಲಿಸ್ಟ್ ಒಬ್ಬರು ನದಿಯಲ್ಲಿ ಬೈಕ್ ಓಡಿಸುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ರೋಮಾಂಚನಕಾರಿ ಸಾಹಸಕಾರ್ಯಗಳನ್ನು ಮಾಡುವಲ್ಲಿ ಜನರು ಯಾವತ್ತೂ ಹಿಂದೆ ಬಿದ್ದಿಲ್ಲ. ಹೊಸ ಹೊಸ ಪ್ರಯತ್ನಗಳನ್ನು ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ನೀರಿನಲ್ಲಿ ಬೈಕ್ ಓಡಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಬಜಾಜ್ ಪಲ್ಸರ್(Bajaj Pulsar) ಬೈಕ್ ಮೇಲೆ ಕುಳಿತು ಸವಾರನೊಬ್ಬ ನದಿ ದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ವೀಡಿಯೊ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಕೆಲವೇ ಗಂಟೆಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು.
ನೀರಿನಲ್ಲಿ ಸಲೀಸಾಗಿ ಬೈಕ್ ಓಡಿಸುತ್ತಾನೆ ಸವಾರ
ವಿಡಿಯೋದಲ್ಲಿ ವ್ಯಕ್ತಿಯು ತನ್ನ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ನಲ್ಲಿ ಇಳಿಜಾರು ಮೂಲಕ ನದಿಗೆ (River) ಇಳಿಯುವುದನ್ನು ಕಾಣಬಹುದು. ನಂತರ ಹಾಗೆಯೇ ನೀರಿನಲ್ಲಿ ಮುಂದೆ ಸಾಗುತ್ತಾ ಹೋಗುತ್ತಾನೆ. ಈ ವಿಡಿಯೋ ನೋಡುಗರಲ್ಲಿ ಆಶ್ಚರ್ಯಚಕಿತರನ್ನಾಗಿ ಮಾಡಿಸಿದೆ. ಇಲ್ಲಿ ನಿಮ್ಮನ್ನು ದಿಗ್ಭ್ರಮೆಗೊಳಿಸುವ ಸಂಗತಿಯೆಂದರೆ, ಅವನು ತನ್ನ ಬೈಕನ್ನು ನದಿಯಲ್ಲಿ ಓಡಿಸುತ್ತಿರುವುದು ಮಾತ್ರವಲ್ಲದೆ ಮಾರ್ಗವನ್ನುತಿಳಿದಿರುವಂತೆ ಎಚ್ಚರಿಕೆಯಿಂದ ತಿರುವುಗಳನ್ನು (Turn) ತೆಗೆದುಕೊಳ್ಳುತ್ತಾನೆ. ಅವನು ಪ್ರತಿದಿನವೂ ಈ ಮಾರ್ಗವನ್ನು ಬಳಸುತ್ತಾನೆ ಎಂದು ಇದು ಸೂಚಿಸುತ್ತದೆ. ಆನ್‌ಲೈನ್‌ನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ಬೈಕ್ ಸವಾರನ ದಿಟ್ಟತನಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Women's Day : ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪರ್, ಪ್ರವೃತ್ತಿಯಲ್ಲಿ ದೇಶ ಸುತ್ತೋ ಸಾಹಸಿ ಬೈಕರ್ ಕೃತಿ ಉಚ್ಚಿಲ್
ಬೈಕ್ ಸವಾರನ ಸಾಹಸ ವೀಡಿಯೋ ವೈರಲ್, ಜನರ ಮೆಚ್ಚುಗೆ
ವೀಡಿಯೊ 648.8K ವೀವ್ಸ್, 446 ರಿಟ್ವೀಟ್‌ಗಳು, 64 ಕಾಮೆಂಟ್ಸ್, 3,112 ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ನೋಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ. 'ಮನಸ್ಸಿದ್ದರೆ ಮಾರ್ಗವಿದೆ' ಎಂಬುದು ಇಲ್ಲಿ ಸಾಬೀತಾಗಿದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟಿಸಿದ್ದಾರೆ. ಇನ್ನೊಬ್ಬರು, 'ಇಂಥಾ ಆಲೋಚನೆಗಳು ತುಂಬಾ ಅಪಾಯಕಾರಿ' ಎಂದಿದ್ದಾರೆ. 'ಬೈಕ್‌ನ ಇಂಜಿನ್‌ನೊಳಗೆ ನೀರು ಹೋದರೆ ಏನಾಗಬಹುದು' ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ
ಇನ್ನೊಬ್ಬ ವ್ಯಕ್ತಿ, 'ಸ್ಥಳೀಯರಿಗೆ ಅವರ ನದಿ ತಿಳಿದಿದೆ; ಅವನು ಬಾಲ್ಯದಿಂದಲೂ ಅಲ್ಲಿ ವಾಸಿಸುತ್ತಿರಬಹುದು, ಅಸ್ಸಾಂನಲ್ಲಿ ಇದು ಸಾಮಾನ್ಯವಾಗಿದೆ' ಎಂದು ತಿಳಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ದಿನನಿತ್ಯದ ದುಡಿಮೆಗಾಗಿ ಒಬ್ಬರು ಅದೆಷ್ಟು ಅಪಾಯಗಳನ್ನು ತೆಗೆದುಕೊಳ್ಳುತ್ತಾರೆ' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಅವರು ಅಲ್ಲಿ ಕಡಿಮೆ ಉಬ್ಬರವಿಳಿತವನ್ನು ಕಂಡಿರಬೇಕು, ಅಂದರೆ ನೀರಿಲ್ಲದ ಸ್ಥಳವನ್ನು ನೋಡಿರಬೇಕು ಮತ್ತು ಆಳದ ಬಗ್ಗೆ ಖಚಿತವಾಗಿರಬೇಕು' ಎಂದಿದ್ದಾರೆ.
ಸಾಮಾಜಿಕ ಜಾಲತಾಣ(Social Media) ದಲ್ಲಿ ಪ್ರತೀ ದಿನ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತದೆ. ಅದರಲ್ಲಿ ಕೆಲವೊಂದು ಭಾರೀ ಸುದ್ದಿಯಲ್ಲಿರುತ್ತದೆ. ಇದೀಗಾ ಬೈಕ್ ಸವಾರನೊರ್ವ ನದಿಯಲ್ಲಿ ಬೈಕ್ ಓಡಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.