ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ದೆಹಲಿ ಮೆಟ್ರೋದಲ್ಲಿ ಬಿಕಿನಿ ಧರಿಸಿ ಓಡಾಡಿದ ಸುದ್ದಿ ಹಳತಾಗುವ ಮುನ್ನವೇ ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಹುಡುಗಿಯೊಬ್ಬಳು ಕೆಂಪು ಸೀರೆ ಧರಿಸಿ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.
ದೆಹಲಿ ಮೆಟ್ರೋ ಭರ್ಜರಿ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಬಿಕಿನಿ ಧರಿಸಿದ ಹುಡುಗಿ ಪ್ರಯಾಣ ಮಾಡಿ ಎಲ್ಲರ ಗಮನ ಸೆಳೆದಿದ್ದಳು. ಅಂತರ್ಜಾಲದಲ್ಲೂ ಬಿಕಿನಿ ಹುಡುಗಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಬಿಕಿನಿ ಮಾದರಿಯ ಡ್ರೆಸ್ ಧರಿಸಿ ಮೆಟ್ರೋ ಏರಿದ ಹುಡುಗಿಯನ್ನು ಕಂಡವರೆಲ್ಲ ಬೆರಗಾಗಿದ್ದರು. ದೆಹಲಿ ಮೆಟ್ರೋ ಸಂಸ್ಥೆಯೂ ಇದರಿಂದಾಗಿ ಟೀಕೆಗೆ ಗುರಿಯಾಗಿತ್ತು. ಇಂತಹ ಡ್ರೆಸ್ ಧರಿಸಲು ಅವಕಾಶ ನೀಡಿರುವ ಕುರಿತು ಹಲವರು ಮೆಟ್ರೋ ಸಂಸ್ಥೆಯನ್ನು ದೂರಿದ್ದರು. ಬಳಿಕ, ಮೆಟ್ರೋ ಸಂಸ್ಥೆ ಪ್ರಯಾಣಿಕರು ಇಂತಹ ಡ್ರೆಸ್ ಧರಿಸಬೇಡಿ. ಸಹಕರಿಸಿ ಎಂದು ಮನವಿಯನ್ನೂ ಮಾಡಿತು. ಈ ಸುದ್ದಿ ಮರೆಯುವ ಮುನ್ನವೇ ದೆಹಲಿ ಮೆಟ್ರೋ ನಿಲ್ದಾಣ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಸೀರೆಯ ಸರದಿ. ಸೀರೆಯಲ್ಲಿ ಹೊಸದೇನಿದೆ ಅಂತೀರಾ? ಸೀರೆ ಧರಿಸಿ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಒಬ್ಬಾಕೆ ಭರ್ಜರಿ ಡ್ಯಾನ್ಸ್ ಮಾಡಿದ್ದಾಳೆ.
ನನ್ನ ಬಟ್ಟೆ ನನ್ನ ಆಯ್ಕೆ ಅಂತ ಹೇಳಿ ಬ್ರಾ, ಮಿನಿ ಸ್ಕರ್ಟ್ ಹಾಕ್ಕೊಂಡು ಮೆಟ್ರೋ ಹತ್ತೋದು ಸರೀನಾ?
ಅವ್ನಿಕರಿಶ್ ಖಾತೆಯಿಂದ ಶೇರ್ (Share)
ದೆಹಲಿ ಮೆಟ್ರೋ (Delhi Metro) ಫ್ಲಾಟ್ ಫಾರಂನಲ್ಲಿ ಡ್ಯಾನ್ಸ್ (Dance) ಮಾಡುತ್ತಿರುವ ವಿಡಿಯೋ (Video) ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಅವ್ನಿಕರಿಶ್ ಎನ್ನುವ ಹೆಸರಿನ ಖಾತೆಯಿಂದ ಈ ವಿಡಿಯೋ ಶೇರ್ ಆಗಿದ್ದು, ಕೆಂಪು ಸೀರೆಯುಟ್ಟ (Red Saree) ಹುಡುಗಿ ಭರ್ಜರಿ ಸ್ಟೆಪ್ಸ್ (Steps) ಹಾಕಿದ್ದಾಳೆ. ಈಕೆ ಭಾರೀ ಆಭರಣ (Jewellery) ಮತ್ತು ಬಳೆಗಳನ್ನೂ ಧರಿಸಿದ್ದಾಳೆ. ಭೋಜಪುರಿ ಹಾಡಿಗೆ (Bhojpuri Song) ನೃತ್ಯ ಮಾಡಿದ್ದಾಳೆ. ಅಸಲಿ ಹಾಡಿನಲ್ಲಿ ಕೇಸರಿ ಲಾಲ್ ಯಾದವ್ ಮತ್ತು ಪ್ರಿಯಾಂಕಾ ಸಿಂಗ್ ಅವರಿದ್ದಾರೆ.
ಡಾನ್ಸ್ ಮಾಡೋಕೆ ಧೈರ್ಯ (Courage) ಬೇಕು
ಈ ವಿಡಿಯೋಕ್ಕೆ ಕ್ಯಾಪ್ಷನ್ ಏನಿದೆ ಗೊತ್ತಾ? “ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ನೃತ್ಯ ಮಾಡಲು ಬಹಳ ಧೈರ್ಯ ಬೇಕುʼ ಎಂದು ನೀಡಲಾಗಿದೆ. ಇದು ಅವ್ನಿಕರಿಶ್ ಖಾತೆಯಲ್ಲಿ ಶೇರ್ ಆಗಿರುವ ಮೊದಲ ಡಾನ್ಸ್ ವಿಡಿಯೋ ಅಲ್ಲ. ಇದಕ್ಕೂ ಮುನ್ನ, ಹಲವು ಪ್ರದೇಶಗಳಲ್ಲಿ ಡಾನ್ಸ್ ಮಾಡಿರುವ ವಿಡಿಯೋವನ್ನು ಆಕೆ ಶೇರ್ ಮಾಡಿದ್ದಾಳೆ. ಒಂದು ವಿಡಿಯೋ “ಅಖಿಂಯಾ ಮಿಲಾಕೆ ಕೋಯಿ ಅಖಿಂಯಾ ಮಿಲೋಂಸೆʼ ಹಾಡಿಗೆ ನರ್ತಿಸಿರುವ ಕ್ಲಿಪ್ ಇದೆ. ಮತ್ತೊಂದರಲ್ಲಿ “ಗೋರಿ ಹೈʼ ಎನ್ನುವ ಹಾಡಿನಲ್ಲಿ ಕೆಂಪು ಸೀರೆ ಧರಿಸಿ ನರ್ತಿಸಿದ್ದಾಳೆ. ಇವೆಲ್ಲವೂ ಒಂದೇ ದಿನ ಶೂಟ್ (Shoot) ಮಾಡಿರುವ ವಿಡಿಯೋ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆ ನಂತರ ಶೇರ್ ಮಾಡಲಾಗಿದೆ. ಮೊದಲ ವಿಡಿಯೋವನ್ನು ಫೆಬ್ರವರಿಯಲ್ಲೇ ಹಂಚಿಕೊಳ್ಳಲಾಗಿದ್ದರೆ ಈಗೀಗ ಮತ್ತೆರಡು ವಿಡಿಯೋ ಹಂಚಿಕೊಳ್ಳಲಾಗಿದೆ.
Viral Video: ಈ ಹುಡುಗೀರ ಡ್ಯಾನ್ಸ್ ನೋಡಿ ಹುಡುಗರ ಹೃದಯದ ಬಡಿತವೇ ಹೆಚ್ಚು-ಕಮ್ಮ ಆಯ್ತಂತೆ!
ಅಂದ ಹಾಗೆ, ಬಿಕಿನಿ (Bikini) ಹುಡುಗಿ ಪ್ರಕರಣವಾದ ಬಳಿಕ ದೆಹಲಿ ಮೆಟ್ರೋ ಅಸಭ್ಯ ವರ್ತನೆ (Indecent) ಶಿಕ್ಷಾರ್ಹ ಕೃತ್ಯ ಎಂದು ಹೇಳಿದೆ. ಬಟ್ಟೆ (Dress) ಧರಿಸುವುದು ಪ್ರಯಾಣಿಕರ ಇಚ್ಛೆಯನ್ನು ಆಧರಿಸಿದ್ದರೂ, ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಸೂಚಿಸಿದೆ. ಈಗ ಸೀರೆಯಲ್ಲಿ ನರ್ತನ ಮಾಡಿರುವುದಕ್ಕೆ ಏನು ಕ್ರಮ ಕೈಗೊಳ್ಳುತ್ತದೆಯೋ ನೋಡಬೇಕು.