ನಗರಗಳಲ್ಲಿ ಯಾವುದಾದ್ರೂ ವಸ್ತು ಕಳೆದುಹೋದ್ರೆ ಆಮೇಲೆ ಅದು ವಾಪಾಸ್ ಸಿಗುತ್ತೆ ಅನ್ನೋ ಆಸೆ ಬಿಟ್ಟು ಬಿಡೋದೆ ಒಳ್ಳೇದು. ಯಾಕಂದ್ರೆ ಅದು ಯಾರ ಯಾರ ಕೈ ಸೇರಿ ಎಲ್ಲಿಗೋ ತಲುಪಿರುತ್ತದೆ. ಆದ್ರೆ ಇದಕ್ಕೆ ತದ್ವಿರುದ್ಧವಾಗಿ ಮುಂಬೈನಲ್ಲಿ ಮಹಿಳೆಯೊಬ್ಬರು ಕಳೆದುಕೊಂಡ ಮೊಬೈಲ್ ಮರಳಿ ಸಿಕ್ಕಿದೆ. ಮಹಾನಗರಗಳಲ್ಲಿ ಸಹಾಯದ ಮನೋಭಾವ ಇನ್ನೂ ಜೀವಂತವಾಗಿದೆ ಎಂದು ಮಹಿಳೆ ಹಂಚಿಕೊಂಡ ಟ್ವೀಟ್ ವೈರಲ್ ಆಗಿದೆ. 

ಮಹಾನಗರಗಳಲ್ಲಿ ಯಾವುದಾದರೂ ವಸ್ತು ಕಳೆದುಹೋದರೆ ಮತ್ತದನ್ನು ಮರಳಿ ಪಡೆಯುವುದು ಕಷ್ಟ. ಪರ್ಸ್‌, ಮೊಬೈಲ್, ಲ್ಯಾಪ್‌ಟಾಪ್‌ ಯಾವುದೇ ಆಗಿರಲಿ ಒಂದು ಸಾರಿ ಕಳೆದುಹೋದರೆ ಪೊಲೀಸ್ ಸ್ಟೇಷನ್‌ಗೆ ಹೋಗಿ ಕಂಪ್ಲೇಟ್ ಕೊಟ್ಟರೂ ಮತ್ತೆ ಸಿಗುತ್ತೆ ಅನ್ನೋ ಭರವಸೆಯಿಲ್ಲ. ವಸ್ತುಗಳು ಯಾರು ಯಾರದೋ ಕೈ ಸಾರಿ ಇನ್ನೆಲ್ಲೋ ತಲುಪಿರುತ್ತದೆ. ಬಿಟ್ಟಿ ಸಿಕ್ಕರೆ ಬಿಡೋರು ಯಾರು ಅನ್ನುವಂತೆ ಹೀಗೆ ಸಿಕ್ಕ ವಸ್ತುವನ್ನು ಯಾರು ಬೇಕೆಂದರೆ ಅವ್ರು ಎತ್ತಿಕೊಂಡು ಹೋಗಿ ಬಿಡುತ್ತಾರೆ. ಆದ್ರೆ ಇದಕ್ಕೆ ತದ್ವಿರುದ್ಧವಾಗಿ ಮುಂಬೈನಲ್ಲಿ ಮಹಿಳೆಯೊಬ್ಬರು ಕಳೆದುಕೊಂಡ ಮೊಬೈಲ್ ಮರಳಿ ಸಿಕ್ಕಿದೆ. ಮಹಾನಗರಗಳಲ್ಲಿ ಸಹಾಯದ ಮನೋಭಾವ ಇನ್ನೂ ಜೀವಂತವಾಗಿದೆ ಎಂದು ಮಹಿಳೆ ಹಂಚಿಕೊಂಡ ಟ್ವೀಟ್‌ ವೈರಲ್ ಆಗಿದೆ.

ಕಳೆದುಹೋದ ಐಫೋನ್ ಅನ್ನು ಹುಡುಕಲು ಮುಂಬೈ ಯುನೈಟೆಡ್‌ನಲ್ಲಿ ಆಟೋರಿಕ್ಷಾ ಚಾಲಕರು (Autorickshaw Drivers) ಹೇಗೆ ಸಹಾಯ (Help) ಮಾಡುತ್ತಾರೆ ಎಂಬುದನ್ನು ಮಹಿಳೆ (Woman) ಹಂಚಿಕೊಂಡಿದ್ದಾರೆ. ರಿಕ್ಷಾ ಚಾಲಕರು ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್‌ ಅಕ್ಷರಹಃ ತಮ್ಮ ಕೆಲಸವನ್ನು ಬಿಟ್ಟು ನನ್ನ ಮೊಬೈಲ್ ಹುಡುಕಿ ಕೊಡಲು ನೆರವಾದರು ಎಂದು ಮಹಿಳೆ ವಿವರಿಸಿದ್ದಾರೆ.

ಪಂಜರದಲ್ಲಿ ಬಂಧಿಸಲ್ಪಟ್ಟ ಹಕ್ಕಿಗಳು: ಖರೀದಿಸಿ ಹಾರಿಬಿಟ್ಟ ಕಾರು ಚಾಲಕ : ವೈರಲ್ ವೀಡಿಯೋ

ಮಹಿಳೆಯ ಐಪೋನ್ ಹುಡುಕಿಕೊಡಲು ನೆರವಾದ ಅಪರಿಚಿತರು
ಹಿಸ್ಟರೀವಾಲಿ ಎಂಬ ಹೆಸರಿನ ಬಳಕೆದಾರರು ಟ್ವಿಟರ್‌ನಲ್ಲಿ ಈ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ನಾನು ಖರೀದಿಸಿದ ಕಾಸ್ಟ್ಲೀ ಐಫೋನ್ ಕಳೆದುಹೋಗಿದ್ದು, ಅಪರಿಚಿತರು (Unknown) ನಾನು ಈ ಮೊಬೈಲ್ ಹಿಂಪಡೆಯಲು ಹೀಗೆ ನೆರವಾದರು ಎಂಬುದನ್ನು ವಿವರಿಸಿದ್ದಾರೆ.

'ನಾನು ವೇರಸೋವಾ ಮೆಟ್ರೋ ಸ್ಟೇಷನ್‌ನಲ್ಲಿದ್ದೆ. ಈ ಸಂದರ್ಭದಲ್ಲಿ ನನಗೆ ನಾನು ಮೊಬೈಲ್ ಕಳೆದುಕೊಂಡಿರುವ ವಿಚಾರ ಗೊತ್ತಾಯಿತು. ನಾನು ತಕ್ಷಣ ಆಟೋ ಸ್ಟ್ಯಾಂಡ್‌ಗೆ ಮರಳಿ ಓಡಿ ಹೋಗಿ, ನನ್ನನ್ನು ಡ್ರಾಪ್ ಮಾಡಿದ ವ್ಯಕ್ತಿಯ ಗುರುತು ಹಿಡಿಯಲು ಯತ್ನಿಸಿದೆ. ಆದರೆ ಯಾರೆಂದು ಗೊತ್ತಾಗಲ್ಲಿಲ್ಲ. ಅಷ್ಟರಲ್ಲೇ ಒಬ್ಬ ಆಟೋ ಚಾಲಕ ನೀವು ನನ್ನ ಆಟೋದಲ್ಲೇ ಬಂದಿದ್ದೀರಿ ಎಂದು ಗುರುತಿಸಿ, ಆತನ ಆಟೋದಲ್ಲೇ ಮೊಬೈಲ್ ಹುಡುಕಿದ ಆದರೆ ಸಿಗಲ್ಲಿಲ್ಲ' ಎಂದು ವಿವರಿಸಿದ್ದಾರೆ.

ಮಗನಿಗೆ ಮಾತ್ರವಲ್ಲ, ಅವನ ಫ್ರೆಂಡ್‌ಗೂ ಲಂಚ್‌ ಬಾಕ್ಸ್‌ ಕಳುಹಿಸೋ ಅಮ್ಮನಿಗೆ ಚಪ್ಪಾಳೆ!

'ಆ ನಂತರ, ಉಳಿದ ಎಲ್ಲಾ ರಿಕ್ಷಾ ಡ್ರೈವರ್ಸ್ ಈ ಬಗ್ಗೆ ತಿಳಿದು ನನ್ನ ಮೊಬೈಲ್‌ ನಂಬರ್‌ಗೆ ಕರೆ ಮಾಡಲು ಯತ್ನಿಸಿದರು. ಆದರೆ ರಿಂಗ್ ಆಗುತ್ತಿದ್ದರೂ ತುಂಬಾ ಹೊತ್ತಿನ ವರೆಗೆ ಯಾರೂ ಸಹ ಕಾಲ್ ರಿಸೀವ್ ಮಾಡಲ್ಲಿಲ್ಲ. ಬಳಿಕ ನಾನು ರಿಕ್ಷಾ ಚಾಲಕನ ನಂಬರ್ ಪಡೆದು ನಿರಾಶೆಯಿಂದಲೇ ಮನೆಗೆ ಹಿಂದಿರುಗಿದೆ. ಆದರೆ ಆಟೋ ಡ್ರೈವರ್ಸ್‌ ನಿರಂತರವಾಗಿ ಕಾಲ್ ಮಾಡುತ್ತಿದ್ದಾಗ ನನ್ನ ಮೊಬೈಲ್ ಯಾರೋ ರಿಸೀವ್ ಮಾಡಿದರು ಮತ್ತು ಮೊಬೈಲ್ ಸಿಕ್ಕಿದ್ದು, ಡಿಎನ್‌ ನಗರ ಮೆಟ್ರೋ ಸ್ಟೇಷನ್‌ ಸಮೀಪ ಇರುವುದಾಗಿ ಹೇಳಿದರು' ಎಂದು ಮಹಿಳೆ ಹೇಳಿದ್ದಾರೆ.

'ಮೊಬೈಲ್ ಸ್ವಿಗ್ಗೀ ಡೆಲಿವರಿ ಬಾಯ್ ಕೈಗೆ ಸಿಕ್ಕಿದ್ದು, ಆತ ಮಳೆಯಲ್ಲಿ ನೆನೆದು ರೈನ್‌ಕೋಟ್ ಹಾಕಿ ನಿಂತಿದ್ದ. ಆತ ಮೊಬೈಲ್‌ ಹಸ್ತಾಂತರಿಸಲು ಕಾಯುತ್ತಿದ್ದ. ಇದನ್ನು ನೋದಿ ಭಾವುಕಳಾಗಿದ್ದು ನಿಜ' ಎಂದು ಮಹಿಳೆ ವಿವರಿಸಿದ್ದಾರೆ. ಮಾತ್ರವಲ್ಲ 'ಸ್ವಿಗ್ವೀ ಡೆಲಿವರಿ ಬಾಯ್‌ ರಾಹುಲ್ ಕುಮಾರ್, ಆಟೋ ಚಾಲಕರಾದ ನಿಲೇಶ್, ಪ್ರಕಾಶ್‌ ಎಲ್ಲರೂ ಮುಂಬೈ ನಗರದ ಮೇಲಿರುವ ನನ್ನ ನಂಬಿಕೆಯನ್ನು ನಿಜವಾಗಿಸಿದರು. ನಗರದ ಜನರಲ್ಲಿ ಮಾನವೀಯತೆ, ದಯೆ ಎನ್ನುವುದು ಇಂದಿಗೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದರು' ಎಂದು ಮಹಿಳೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.