ಮಗನಿಗೆ ಮಾತ್ರವಲ್ಲ, ಅವನ ಫ್ರೆಂಡ್‌ಗೂ ಲಂಚ್‌ ಬಾಕ್ಸ್‌ ಕಳುಹಿಸೋ ಅಮ್ಮನಿಗೆ ಚಪ್ಪಾಳೆ!

ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವುದು ಮಾನವೀಯತೆ. ವಿದೇಶದ ಹಲವು ದೇಶಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಹಸಿವಿನಿಂದ ಬಳಲುವವರು ಅಲ್ಲಿ ಹೆಚ್ಚಾಗಿದ್ದಾರೆ. ಅಂತಹ ಒಬ್ಬ ಯುವಕನಿಗೆ ಮಹಿಳೆಯೊಬ್ಬರು ತಮ್ಮ ಮಗನ ಮೂಲಕ ಪ್ರತಿದಿನ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಈ ಕುರಿತು ಅವರು ಟ್ವಿಟರ್‌ ನಲ್ಲಿ ಶೇರ್‌ ಮಾಡಿಕೊಂಡಿರುವುದು ವೈರಲ್‌ ಆಗಿದೆ.
 

Woman packs for extra lunch box for his friend who has no money for food

ಮತ್ತೊಬ್ಬರಿಗಾಗಿ ಮಿಡಿಯುವ ಜನರಿಂದಲೇ ನಮ್ಮ ಸಮಾಜ ಜೀವಂತವಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಹಸಿದವರಿಗೆ ಅನ್ನವಿಕ್ಕುವುದು ಎಂದಿನಿಂದಲೂ ನಮ್ಮ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ಕರುಣೆ, ಮಾನವೀಯತೆ ನಮ್ಮಲ್ಲಿದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಾಧ್ಯ. ಜಾಗತಿಕವಾಗಿ ಇದು ಆರ್ಥಿಕ ಹಿಂಜರಿತದ ಸಮಯ. ನಮ್ಮಲ್ಲಿ ಇದರ ಪರಿಣಾಮ ಹೆಚ್ಚಾಗಿ ಗೋಚರಿಸುತ್ತಿಲ್ಲ. ಆದರೆ, ಅದೆಷ್ಟೋ ದೇಶಗಳಲ್ಲಿ ಹಸಿದವರಿಗೆ ಸರಿಯಾಗಿ ಊಟವೂ ದಕ್ಕುತ್ತಿಲ್ಲ. ಎಲ್ಲದರ ಬೆಲೆಗಳು ಗಗನಕ್ಕೇರಿವೆ. ಇಂಗ್ಲೆಂಡ್‌ ನಂತಹ ದೇಶದಲ್ಲೇ ನಾಗರಿಕರಿಗೆ ಸರಿಯಾಗಿ ಊಟ ಲಭ್ಯವಾಗುವಂತೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಮನುಷ್ಯರು ಮಾಡುವ ಒಂದೇ ಒಂದು ಸಹಾಯವೂ ಅಪಾರ ಬದಲಾವಣೆ ತರಬಲ್ಲದು. ಇದಕ್ಕೆ ಸಾಕ್ಷಿಯಾಗಿ ತಾಯಿಯೊಬ್ಬರು ಮಾಡುತ್ತಿರುವ ಕೆಲಸದಿಂದಾಗಿ ಹಸಿದ ಹುಡುಗನಿಗೆ ಹೊಟ್ಟೆಗೆ ಹಿಟ್ಟು ದೊರೆಯುವಂತಾಗಿದೆ.

ಮಗನ ಸ್ನೇಹಿತನಿಗೆ ಪ್ರತ್ಯೇಕ ಲಂಚ್ (Lunch Box) 
ಅಂಟೋನಿಯಾ (Antonia) ಎಂಬಾಕೆ ಟ್ವೀಟ್‌ (Tweet) ಮೂಲಕ ಬಹಿರಂಗಪಡಿಸಿರುವ ಕಾರ್ಯವೊಂದು ಅಂತರ್ಜಾಲದಲ್ಲಿ (Internet) ಬಹಳ ಮೆಚ್ಚುಗೆ ಗಳಿಸಿದೆ. ಆಕೆಯೇ ತಿಳಿಸಿದ ಮಾಹಿತಿಯಂತೆ, ಆಕೆಯ ಮಗ (Son) ಕಾಲೇಜಿನಲ್ಲಿ ಓದುತ್ತಾನೆ. ಆತನ ಸಹಪಾಠಿಯೊಬ್ಬ ತೀವ್ರವಾಗಿ ಹಸಿವಿನ (Hunger) ಸಮಸ್ಯೆ ಸಿಲುಕಿದ್ದ. ಹಲವು ದಿನಗಳಿಂದ ಆತ ಸರಿಯಾಗಿ ಆಹಾರ ಸೇವಿಸದೆ (Starving) ನಿತ್ರಾಣಗೊಂಡಿದ್ದ. ಅಂಟೋನಿಯಾಳ ಮಗನಿಗೆ ಈ ವಿಚಾರ ತಿಳಿದಾಗ ಭಾರೀ ಬೇಸರ ಮಾಡಿಕೊಂಡಿದ್ದ, ಅಲ್ಲದೆ ತನ್ನ ಲಂಚ್‌ ಬಾಕ್ಸನ್ನು ಆತನೊಂದಿಗೆ ಶೇರ್‌ (Share) ಮಾಡಿಕೊಳ್ಳುತ್ತಿದ್ದ. ಇದನ್ನು ತಿಳಿದ ಅಂಟೋನಿಯಾ ಈಗ ಎರಡು ಲಂಚ್‌ ಬಾಕ್ಸ್‌ ಅನ್ನು ಕಟ್ಟಿಕೊಡುತ್ತಿದ್ದಾರೆ. ಒಂದು ಮಗನಿಗೆ ಹಾಗೂ ಮತ್ತೊಂದು ಆತನ ಸ್ನೇಹಿತನಿಗೆ. “ಇಬ್ಬರೂ ತಮ್ಮ ಅಧ್ಯಯನದ ಕಡೆಗೆ ಚೆನ್ನಾಗಿ ಗಮನ ಹರಿಸಲಿ, ಆರೋಗ್ಯವಂತರಾಗಿರಲಿʼ ಎಂದು ಹೇಳಿಕೊಂಡಿದ್ದಾರೆ. ಎರಡು ಲಂಚ್‌ ಬಾಕ್ಸ್‌ ಗಳ ಫೋಟೋಗಳನ್ನೂ ಆಕೆ ಶೇರ್‌ ಮಾಡಿದ್ದಾರೆ. 

Fast Food: ಹೆಚ್ಚಿನ ಭಾರತೀಯರು ಖುಷಿಯಾದ್ರೆ ತಿನ್ನೋದೇನು?

ಆರ್ಥಿಕ ಹಿಂಜರಿತದ (Financial Crisis) ಸಮಯದಲ್ಲಿ ಆಕೆಯ ಈ ಕಾರ್ಯ ಇಡೀ ಜಗತ್ತಿನ ಗಮನ ಸೆಳೆದಿದೆ. ನೆಟ್ಟಿಗರು ಭಾರೀ ಮೆಚ್ಚುಗೆಯನ್ನು ಆಕೆಯನ್ನು ಶ್ಲಾಘಿಸಿದ್ದಾರೆ. ಲಕ್ಷಾಂತರ ವ್ಯೂ (Veiw) ಕಂಡಿರುವ ಈ ಟ್ವೀಟ್‌ ಗೆ ನೂರಾರು ಕಾಮೆಂಟ್‌ (Comments) ಗಳೂ ಬಂದಿವೆ. ನೆಟ್ಟಿಗರ ಕಾಮೆಂಟ್‌ ಹಾಗೂ ಮೆಚ್ಚುಗೆಗೆ ಅಂಟೋನಿಯಾ ಕೃತಜ್ಞತೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಸಂತಸ ಮೂಡಿಸುವಂತಹ ಸುದ್ದಿಯನ್ನು ಹಂಚಿಕೊಂಡು ಎಲ್ಲರಲ್ಲೂ ಜಾಗೃತಿ ಮೂಡಿಸಿರುವುದಕ್ಕೆ ಖುಷಿ (Happy) ಪಟ್ಟಿದ್ದಾರೆ. 

Health Tips: ಆಗಾಗ ಆರೋಗ್ಯ ಹದಗೆಡ್ತಿದ್ಯಾ? ಅಡುಗೆಗೆ ಬಳಸೋ ಎಣ್ಣೆ ಸರಿಯಿದ್ಯಾ ಚೆಕ್ ಮಾಡ್ಕೊಳ್ಳಿ

ದೇವರಿಗೆ ಕೃತಜ್ಞ (Greatful)
ಹಲವರು “ಇದು ಉತ್ತಮ ಕೆಲಸʼ ಎಂದು ಶ್ಲಾಘಿಸಿದ್ದರೆ, ಇನ್ನೋರ್ವ ಅಮ್ಮನೂ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ತನ್ನ ಮಗನೂ ಸ್ನೇಹಿತನೊಬ್ಬನ ಜತೆ ಆಹಾರ (Food) ಹಂಚಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ. ತಮ್ಮ ಮಗ ದೇವರು (God) ತಮಗೆ ಇಷ್ಟು ಸಹಾಯ ಮಾಡಲು ಅನುಕೂಲ ಒದಗಿಸಿರುವುಕ್ಕೆ ಕೃತಜ್ಞತೆ ಹೊಂದಿದ್ದಾನೆ ಎಂದೂ ಹೇಳಿದ್ದಾರೆ. ಕೆಲವರು “ನೀವು ಗ್ರೇಟ್.‌ ನಿಮ್ಮ ಮಗನೂ ಅದ್ಭುತ. ಅವನನ್ನು ಮಗನಾಗಿ ಹೊಂದಿರುವುದಕ್ಕೆ ನೀವು ಹೆಮ್ಮೆ ಪಡಬೇಕುʼ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios