ವ್ಯಕ್ತಿಯೋರ್ವ ಪಂಜರದಲ್ಲಿರಿಸಿದ್ದ ಹಕ್ಕಿಗಳನ್ನು ಹಣ ಕೊಟ್ಟು ಖರೀದಿಸಿ ವ್ಯಕ್ತಿಯೋರ್ವ ಹೊರಗಡೆ ಬಿಟ್ಟು ಅವುಗಳನ್ನು ಸ್ವಾತಂತ್ರಗೊಳಿಸಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವತಂತ್ರವಾಗಿರುವುದನ್ನು ಮನುಷ್ಯರು ಪ್ರಾಣಿಗಳು ಎಲ್ಲರೂ ಇಷ್ಟಪಡುತ್ತಾರೆ. ಪ್ರತಿಯೊಬ್ಬ ಜೀವ ಜಂತುವೂ ಬಂಧನದಿಂದ ಮುಕ್ತವಾಗಿ ಸ್ವಾತಂತ್ರವಾಗಿ ಬದುಕಲು ಬಯಸುತ್ತದೆ. ಆದರೆ ಕೆಲವು ಮಾನವರು ತಮ್ಮ ಹೊಟ್ಟೆಪಾಡಿಗಾಗಿ ಕೆಲವು ಪ್ರಾಣಿಗಳನ್ನು ಬಂಧನಕ್ಕೆ ಒಳಪಡಿಸಿ ತಮ್ಮ ಕಪಿಮುಷ್ಠಿಯಲ್ಲಿ ಇರುವಂತೆ ಸಲಹುತ್ತಾರೆ. ಸಣ್ಣಪುಟ್ಟ ಹಕ್ಕಿಗಳು ಗಿಳಿಗಳನ್ನು ಪಂಜರದಲ್ಲಿರಿಸಿ ಸಾಕುವ ಅನೇಕರನ್ನು ನೀವು ನೋಡಿರಬಹುದು, ಭಾರತದಲ್ಲಿ ವನ್ಯಜೀವಿಗಳನ್ನು ಖಾಸಗಿಯಾಗಿ ಬಂಧನದಲ್ಲಿರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದಾಗ್ಯೂ ವ್ಯಕ್ತಿಯೋರ್ವ ಪಂಜರದಲ್ಲಿರಿಸಿದ್ದ ಹಕ್ಕಿಗಳನ್ನು ಹಣ ಕೊಟ್ಟು ಖರೀದಿಸಿ ವ್ಯಕ್ತಿಯೋರ್ವ ಹೊರಗಡೆ ಬಿಟ್ಟು ಅವುಗಳನ್ನು ಸ್ವಾತಂತ್ರಗೊಳಿಸಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಬಿ& ಎಸ್ ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಹಕ್ಕಿಗಳನ್ನು ಹಣ ಕೊಟ್ಟು ಪಡೆದು ಸ್ವಾತಂತ್ರವಾಗಿ ಹಾರಿಬಿಟ್ಟ ವ್ಯಕ್ತಿಯ ವಿಡಿಯೋ ಈಗ ಜನರ ಪ್ರಶಂಸೆಗೆ ಪಾತ್ರವಾಗಿದೆ. ಅನೇಕರು ಆತನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿ ಹಕ್ಕಿಗಳನ್ನು ಸ್ವಾತಂತ್ರಗೊಳಿಸುವ ಕಾರಣಕ್ಕೆ ಮಾತ್ರ ಹಕ್ಕಿಗಳನ್ನು ಖರೀದಿಸಿದ್ದಾನೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 7 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಗಿಣಿಗಳನ್ನು ಪಂಜರದಲ್ಲಿಟ್ಟಿದ ವ್ಯಕ್ತಿ ಒಂದೊಂದೇ ಹಕ್ಕಿಗಳನ್ನು ಹೆಕ್ಕಿ ಕಾರು ಚಾಲಕನಿಗೆ ನೀಡುತ್ತಿದ್ದರೆ ಆತ ಅವುಗಳನ್ನು ಒಂದೊಂದಾಗಿ ಹಾರಿ ಬಿಡುತ್ತಿದ್ದಾನೆ. ಹಿಡಿತ ಸಡಿಲಗೊಂಡ ಕೂಡಲೇ ಪುಟ್ಟ ಹಕ್ಕಿಗಳು ಸಾಗಿ ದೂರ ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಕಾಗೆಯನ್ನು ರಕ್ಷಿಸಿದ ಪುಟ್ಟ ಬಾಲಕನ ಕಾರ್ಯಕ್ಕೆ ಶ್ಲಾಘನೆ: ವಿಡಿಯೋ ವೈರಲ್
ಮಾನವ ನಿರ್ಮಿತ ಅವಾಂತರದಿಂದ ಪ್ರಾಣಿ ಪಕ್ಷಿಗಳ ಪ್ರಾಣ ಆಗಾಗ ಸಂಕಟಕ್ಕೆ ಸಿಲುಕುತ್ತದೆ. ಉರುಳಿಗೆ ಸಿಲುಕಿ ಚಿರತೆ ಹುಲಿಗಳು ಸಾಯುವುದು ಕರೆಂಟ್ ವೈರ್‌ಗೆ ಸಿಲುಕಿ ಬಾವಲ ಹಕ್ಕಿಗಳು ಪ್ರಾಣ ಬಿಡುವುದು, ರೈಲಿಗೆ ಸಿಲುಕಿ ಆನೆಗಳು ಸಾಯುವುದು ಹೀಗೆ ಅಭಿವೃದ್ಧಿ ಹೆಸರಲ್ಲಿ ಮಾನವ ಮಾಡಿದ ಅವಾಂತರಕ್ಕೆ ಅನೇಕ ಪ್ರಾಣಿ ಪಕ್ಷಿಗಳು ಆಗಾಗ ಅಪಾಯಕ್ಕೆ ಸಿಲುಕುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಕಾಗೆಯೊಂದು ನೆಟ್ಟೆಡ್ ಬೇಲಿಗೆ ಸಿಲುಕಿ ಒದ್ದಾಡಿದೆ. ಇದನ್ನು ನೋಡಿದ ಪುಟ್ಟ ಬಾಲಕನೋರ್ವ ಆ ಬಲೆಯಿಂದ ಕಾಗೆಯನ್ನು ಹೊರ ತೆಗೆದಿದ್ದು, ಈ ರಕ್ಷಣಾ ಕಾರ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಬಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಸಬಿತಾ ಚಂದ್ ಎಂಬುವವರು ಪೋಸ್ಟ್ ಮಾಡಿದ್ದು, ಒಂದು ಕರುಣೆ ಭರಿತ ಕಾರ್ಯವೂ ಅಸಂಖ್ಯ ಜೀವಗಳನ್ನು ತಟ್ಟಬಲ್ಲದು ಎಂದು ಬರೆದುಕೊಂಡಿದ್ದಾರೆ. 36 ನಿಮಿಷಗಳ ಈ ವಿಡಿಯೋದಲ್ಲಿ ಈ ವಿಡಿಯೋದಲ್ಲಿ ಸಮವಸ್ತ್ರ ಧರಿಸಿದ್ದ ಪುಟ್ಟ ಬಾಲಕ ನೆಟ್ ಬೇಲಿಯ ಬಲೆಗೆ ಸಿಲುಕಿದ ಕಾಗೆಯನ್ನು ಬಾಲಕ ಬಲೆಯಿಂದ ಬಿಡಿಸುತ್ತಾನೆ. ಇದನ್ನು ನೋಡಿದ ಜೊತೆಯಲ್ಲಿದ್ದ ಬಾಲಕರೆಲ್ಲರೂ ಆತನ ಸಮೀಪ ಬಂದು ಕಾಗೆಯನ್ನು (Crow) ಮುಟ್ಟಲು ಪ್ರಯತ್ನಿಸುತ್ತಾರೆ. ಈ ವೇಳೆ ಬಾಲಕ ಹಿಡಿತ ಸಡಿಲಗೊಳಿಸಿದ್ದು, ಕಾಗೆ ಅಲ್ಲಿಂದ ಹಾರಿ ಹೋಗುತ್ತದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ.
ಓ ಮೈನಾ ಓ ಮೈನಾ... ಗಿಣಿಗೆ ಮೈನಾದ ಜೊತೆ ಅದ್ದೂರಿ ಮದುವೆ
ಪುಟ್ಟ ಮಕ್ಕಳು ಬಾಲ್ಯದಲ್ಲಿ ಎಲ್ಲರಿಗೂ ಎಲ್ಲದರ ಬಗ್ಗೆಯೂ ಕಾಳಜಿ ತೋರುತ್ತಾರೆ, ದೊಡ್ಡವರಾಗುತ್ತಾ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಕಾಮೆಂಟ್‌ನಲ್ಲಿ ತಮ್ಮ ಬಾಲ್ಯದ ಅನುಭವಗಳ ಮೆಲುಕು ಹಾಕಿದ್ದಾರೆ. ಈ ಘಟನೆ ನನಗೆ ನನನ ಕಿರಿಯ ಸಹೋದರನ ನೆನಪು ಮಾಡಿದೆ. ಆತ ಅಸ್ವಸ್ಥಗೊಂಡ ಪರಿವಾಳಗಳ ರಕ್ಷಿಸಿ ಅವುಗಳನ್ನು ಆರೈಕೆ ಮಾಡುತ್ತಿದ್ದ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇದೊಂದು ಅದ್ಭುತ ವಿಡಿಯೋ, ಸೂಕ್ಷ್ಮ ಮನಸ್ಸಿನ ಬಾಲಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ಈ ಹಿಂದೆ ಕಾಗೆಗಳಿಗೆ ಆಹಾರ ನೀಡಿದ್ದಲ್ಲದೇ ರಕ್ಷಣೆ ಕಾರ್ಯ ಮಾಡಿದ್ದೆ. ಇದು ಸಲುಭದ ಕೆಲಸವಲ್ಲ. ಈ ಬಾಲಕ ಯಾವುದೇ ಭಯವಿಲ್ಲದೇ ಕಾಗೆಯ ರಕ್ಷಿಸುವ ಕಾರ್ಯ ಮಾಡಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಕರುಣಾಮಯಿ ಹೃದಯಗಳಿಗೆ ಸೆಲ್ಯೂಟ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
