ಇದೆಂಥಾ ವಿಚಿತ್ರ ಕಾಯಿಲೆ..ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ, ಕಾಲಿನ ಮೂಳೆನೇ ಮುರಿದೋಯ್ತು!
ಎತ್ತರದಿಂದ ಬಿದ್ದಾಗ, ಅಪಘಾತವಾದಾಗ ಮೂಳ ಮುರಿತವಾಗೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಮಹಿಳೆಗೆ ಶೌಚಾಲಯದಲ್ಲಿ ಕುಳಿತಿದ್ದಾಗ್ಲೇ ಪಟಕ್ ಅಂತ ಮೂಳೆ ಮುರಿತಗೊಂಡಿದೆ. ಆಸ್ಪತ್ರೆಗೆ ದಾಖಲಿಸಿದ್ದಾಗ್ಲೇ ಗೊತ್ತಾಗಿದ್ದು ಅಸಲೀ ಸಮಸ್ಯೆ.
26 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯದ ಮೇಲೆ ಕುಳಿತಾಗ ಮೊಣಕಾಲು ಮುರಿದ ನಂತರ ಆಘಾತಕಾರಿ ರೋಗನಿರ್ಣಯವನ್ನು ಹಂಚಿಕೊಂಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಇಂಗ್ಲೆಂಡ್‌ನ ಬೆಥನಿ ಈಸನ್ ಏಳು ವರ್ಷಗಳ ಹಿಂದೆ, ಅಂದರೆ 19 ವರ್ಷದವಳಿದ್ದಾಗ ಮೊಣಕಾಲು ನೋವನ್ನು ಅನುಭವಿಸಲು ಪ್ರಾರಂಭಿಸಿದರು. ಈ ಕುರಿತಾಗಿ ತಿಳಿಯಲು ವೈದ್ಯರನ್ನು ಸಹ ಭೇಟಿ ಮಾಡಿದರು. ವೈದ್ಯರು ಆಕೆಗೆ ಎಕ್ಸ್ ರೇ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆಕೆಗೆ ಮೊದಲಿನಿಂದಲೇ ಮೊಣಕಾಲಿನ ಮೂಳೆಯ ಸಮಸ್ಯೆ ಇರುವುದು ತಿಳಿದುಬಂತು.
ಫೆಬ್ರವರಿ 2017 ರಲ್ಲಿ, ತನ್ನ ಮಲಗುವ ಕೋಣೆಗೆ ಹೋಗಲು ಮೆಟ್ಟಿಲುಗಳ ಮೇಲೆ ನಡೆಯುವಾಗ ಮಹಿಳೆ ಎಡಗಾಲಿನಲ್ಲಿ ತೀವ್ರವಾದ ನೋವನ್ನು ಅನುಭವಿಸಿದಳು. ಮತ್ತೊಮ್ಮೆ ಅವಳು ಟಾಯ್ಲೆಟ್ ಸೀಟ್ ಮೇಲೆ ಕುಳಿತಿದ್ದಳು. ಈ ಸಂದರ್ಭದಲ್ಲಿಯೇ ಮೊಣಕಾಲು ಮೂಳೆ ಮುರಿತವಾಗಿರುವುದು ತಿಳಿದುಬದಿದೆ. ಮಹಿಳೆ ಆಸ್ಪತ್ರೆಗೆ ಹೋದಾಗ ವೈದ್ಯರು, ಮೊಣಕಾಲಿನಲ್ಲಿ ದೈತ್ಯ ಜೀವಕೋಶದ ಗೆಡ್ಡೆ ಸಂಭವಿಸಿದೆ ಎಂದು ಹೇಳಿದರು. ಇದು ಮೂಳೆಗಳು ಮತ್ತು ಸುತ್ತಮುತ್ತಲಿನ ಮೃದು ಅಂಗಾಂಶಗಳನ್ನು ದುರ್ಬಲಗೊಳಿಸಿದೆ ಎಂದು ತಿಳಿಸಲಾಯಿತು.
ಮಹಿಳೆಯ ಕಾಡುವ ಮೊಣಕಾಲು ನೋವಿಗೆ ಕಾರಣವೇನು?
ಟ್ಯೂಮರ್‌ನಿಂದಾಗಿ ಈಸನ್ ಮೊಣಕಾಲು ಮತ್ತು ತೊಡೆಯ ಮೂಳೆ ಬದಲಾವಣೆಗೆ ಒಳಗಾಗಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದರು. 'ವೈದ್ಯರು ನನ್ನ ಕಾಯಿಲೆಯ ಬಗ್ಗೆ ಹೇಳಿದಾಗ ನಾನು ಸಂಪೂರ್ಣವಾಗಿ ಆತಂಕದಿಂದ ಒದ್ದಾಡಿದೆ. ಯಾಕೆಂದರೆ ನಾನು ನೃತ್ಯ, ಓಟ ಮತ್ತು ಈಜುವಿಕೆಯಲ್ಲಿ ಭಾಗವಹಿಸುತ್ತಿದ್ದೆ. ಈ ಕಾಯಿಲೆಯಿಂದ ನಾನು ಇದ್ಯಾವುದನ್ನೂ ಮತ್ತೆ ಮಾಡಲಾಗುವುದಿಲ್ಲ ಎಂದು ತಿಳಿದುಬಂತು.' ಎಂದು ಈಸನ್ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ನಂತರವೂ 99 ಪ್ರತಿ ಶಸ್ತ್ರಚಿಕಿತ್ಸೆಯ ನಂತರ ಶೇಕಡಾ ರೋಗಿಗಳು ಪೂರ್ಣ ಚಲನಶೀಲತೆಯನ್ನು ಹೊಂದಿರುವುದಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ರೆ ಈಸನ್ ನಡೆಯಲು ಕಲಿಯಬೇಕು ಮತ್ತು ಅವಳು ಮತ್ತೆ ಹೀಲ್ಸ್ ಧರಿಸಬಾರದು ಎಂದು ವೈದ್ಯರು ಹೇಳಿದರು.
ಈಸನ್ ಈಗ ಎಲ್ಲರೂ ತಮ್ಮ ಕಾಲು ನೋವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ. ಈ ರೀತಿಯ ಕಾಯಿಲೆ ಮಿಲಿಯನ್‌ನಲ್ಲಿ ಒಬ್ಬರಿಗೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ರೀತಿಯ ಗೆಡ್ಡೆಗಳು ಹೆಚ್ಚಾಗಿ ತೋಳುಗಳು ಮತ್ತು ಕಾಲುಗಳ ಉದ್ದನೆಯ ಮೂಳೆಗಳಲ್ಲಿ ಸಂಭವಿಸುತ್ತವೆ, ತ್ವರಿತವಾಗಿ ಬೆಳೆಯುತ್ತವೆ ಮತ್ತು ಹತ್ತಿರದ ಅಂಗಾಂಶಗಳಿಗೆ ಹರಡುವಾಗ ಪೀಡಿತ ಮೂಳೆಗಳನ್ನು ಹಾನಿಗೊಳಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಅರೆ..ಇದ್ಹೇಗೆ ಸಾಧ್ಯ..ತಿಂಗಳಿಗೆ ಮೂರು ಸಾರಿ ಸತ್ತು ಬದುಕುತ್ತಾಳಂತೆ ಈ ಮಹಿಳೆ!