ಮಹಿಳೆಯ ಕಾಡುವ ಮೊಣಕಾಲು ನೋವಿಗೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ನೋವಿಲ್ಲದ ಜನರಿಲ್ಲ. ದೇಹದ ಒಂದಲ್ಲ ಒಂದು ಭಾಗದಲ್ಲಿ ನೋವು ಮಾಮೂಲಿ ಎನ್ನುವಂತಾಗಿದೆ. ಅದ್ರಲ್ಲೂ ಬಹುತೇಕ ಮಹಿಳೆಯರು ಮೊಣಕಾಲು ನೋವಿನಿಂದ ಬಳಲ್ತಿದ್ದಾರೆ. ಮೊಣಕಾಲು ನೋವಿಗೆ ಅನೇಕ ಕಾರಣವಿದೆ.
ಮಹಿಳೆಯರು ಹಾಗೂ ಮಂಡಿ ನೋವಿಗೆ ಅವಿನಾಭಾವ ಸಂಬಂಧವಿದೆ ಎನ್ನಬಹುದು. ಯಾಕೆಂದ್ರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆಧುನಿಕ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿ. ಸ್ನಾಯುಗಳ ಬಿಗಿತ ಮತ್ತು ಕೀಲು ನೋವು ರಾತ್ರಿಯಲ್ಲಿ ಹೆಚ್ಚಿನ ಜನರನ್ನು ಕಾಡುತ್ತದೆ. ಆದರೆ ಜನರು ಈ ನೋವನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಮುಂದೆ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಮೊಣಕಾಲು ನೋವಿನಿಂದ ನೀವು ತೊಂದರೆಗೊಳಗಾಗಿದ್ದರೆ ಅದರ ಹಿಂದಿನ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಈ ಕಾರಣಗಳಿಂದಾಗಿ ಪುರುಷ (Male) ರಿಗಿಂತ ಮಹಿಳೆ (Woman) ಯರಿಗೆ ಹೆಚ್ಚು ಕಾಡುತ್ತೆ ಮೊಣಕಾಲು (Knee) ನೋವು (Pain) :
1. ಮಹಿಳೆಯರ ದೇಹ ರಚನೆಯು ಇದಕ್ಕೆ ಒಂದು ಕಾರಣ ಎನ್ನಬಹುದು. ಅವರ ಕೀಲುಗಳು ಹೆಚ್ಚು ಚಲನೆ ಹೊಂದಿರುತ್ತವೆ. ಮಹಿಳೆಯರ ಅಸ್ಥಿರಜ್ಜುಗಳು ಹೆಚ್ಚು ಮೃದುವಾಗಿರುತ್ತದೆ. ಮಹಿಳೆಯರ ಮೊಣಕಾಲುಗಳ ಚಲನೆ ಹೆಚ್ಚಿರುವ ಕಾರಣ ನೋವಿನ ಅಪಾಯವು ಹೆಚ್ಚಾಗುತ್ತದೆ.
2. ಹೆಣ್ಣು ಹಾರ್ಮೋನ್ ಈಸ್ಟ್ರೊಜೆನ್ ಮೊಣಕಾಲುಗಳನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈಸ್ಟ್ರೊಜೆನ್ ಹಾರ್ಮೋನ್ ಮುಟ್ಟಿನ ಅವಧಿಗಳಲ್ಲಿ ಮತ್ತು ಋತುಬಂಧದ ನಂತರ ಕಡಿಮೆಯಾಗುತ್ತದೆ. ಕಡಿಮೆಯಾದ ಈಸ್ಟ್ರೊಜೆನ್ ಮಟ್ಟಗಳು, ಮೊಣಕಾಲಿನ ಕೀಲುಗಳನ್ನು ಬೆಂಬಲಿಸುವ ಪ್ಯಾಡ್ಡ್ ಕಾರ್ಟಿಲೆಜ್ ಮೇಲೆ ಪರಿಣಾಮ ಬೀರುತ್ತವೆ.
3. ಪುರುಷರಿಗಿಂತ ಮಹಿಳೆಯರು ಸ್ಥೂಲಕಾಯಕ್ಕೆ ಹೆಚ್ಚು ಒಳಗಾಗುತ್ತಾರೆ. ದೇಹದ ಭಾರ ಮೊಣಕಾಲುಗಳ ಮೇಲೆ ಬೀಳುತ್ತದೆ. ತೂಕ ಹೆಚ್ಚಾದಷ್ಟೂ ನಿಮ್ಮ ಮೊಣಕಾಲುಗಳ ಮೇಲೆ ಒತ್ತಡ ಹೆಚ್ಚುತ್ತದೆ. ನಿಮ್ಮ ತೂಕವು ಸಾಮಾನ್ಯಕ್ಕಿಂತ 5 ಕೆಜಿ ಹೆಚ್ಚಿದ್ದರೆ ನಂತರ ಮೊಣಕಾಲುಗಳ ಮೇಲೆ 25 ಕೆಜಿ ಹೆಚ್ಚು ಒತ್ತಡ ಬೀಳುತ್ತದೆ.
4. ಸಾಮಾನ್ಯವಾಗಿ ಮಹಿಳೆಯರು ನೋವನ್ನು ನಿರ್ಲಕ್ಷ್ಯ ಮಾಡ್ತಾರೆ. ನೋವನ್ನು ನಿರ್ಲಕ್ಷಿಸುವುದರಿಂದ ಮೊಣಕಾಲು ನೋವಿನ ಅಪಾಯವೂ ಹೆಚ್ಚಾಗುತ್ತದೆ. ಮೊಣಕಾಲುಗಳಲ್ಲಿ ನಿರಂತರ ನೋವು, ಊತ ಬರುತ್ತಿದೆ ಅಥವಾ ಅವುಗಳನ್ನು ಬಗ್ಗಿಸುವಲ್ಲಿ ಸಮಸ್ಯೆ ಇದ್ದರೆ ಅದನ್ನು ನಿರ್ಲಕ್ಷಿಸಬಾರದು. ದೀರ್ಘಕಾಲದವರೆಗೆ ಅದನ್ನು ನಿರ್ಲಕ್ಷಿಸುವುದರಿಂದ ಮೊಣಕಾಲು ಹಾನಿಯಾಗುತ್ತದೆ.
5. ಮೊಣಕಾಲುಗಳಿಗೆ ಗಾಯವಾಗಿದ್ದರೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಭವಿಷ್ಯದಲ್ಲಿ ನೋವಿನ ಅಪಾಯವು ಹೆಚ್ಚಾಗಬಹುದು.
6. ಮೊಣಕಾಲಿನ ಅಸ್ಥಿರಜ್ಜು ವಿಸ್ತರಣೆ ಅಥವಾ ಹರಿದು ಹೋಗುವುದು ಸಹ ಮೊಣಕಾಲಿನ ಸಮಸ್ಯೆಗಳನ್ನು ಉಂಟುಮಾಡಬಹುದು.
7. ಅತಿಯಾದ ವ್ಯಾಯಾಮವು ನಿಮ್ಮ ಮೊಣಕಾಲುಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವ್ಯಾಯಾಮ ಮತ್ತು ಅತಿಯಾಗಿ ಓಡುವುದು ಮಂಡಿಚಿಪ್ಪು ಮತ್ತು ಸ್ನಾಯುರಜ್ಜುಗಳ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ.
ಮೊಣಕಾಲಿನ ಆರೋಗ್ಯಕ್ಕೆ ಏನು ಮಾಡ್ಬೇಕು ? : ಮೊಣಕಾಲಿನ ಆರೋಗ್ಯ ಕಾಪಾಡುವುದು ಕೂಡ ಬಹಳ ಮುಖ್ಯ. ಸಮತೋಲಿತ ತೂಕವನ್ನು ಕಾಪಾಡಿಕೊಳ್ಳಬೇಕು. ದೇಹದ ಹೆಚ್ಚುವರಿ ತೂಕವು ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ, ನಿಮ್ಮ ಮೊಣಕಾಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲನ ತೂಕವನ್ನು ಕಾಪಾಡಿಕೊಳ್ಳಿ.
ಎಷ್ಟು ಸೆಕ್ಸ್ ಪಾರ್ಟನರ್ಸ್ ಇದ್ದಾರೆಂದು ವೈದ್ಯರು ಕೇಳಿದರೆ ಏನು ಹೇಳುತ್ತೀರಿ?
ಹೆಚ್ಚಿನ ವ್ಯಾಯಾಮ ಬೇಡ : ಈಜು ಮತ್ತು ಸೈಕ್ಲಿಂಗ್‌ನಂತಹ ಹೃದಯರಕ್ತನಾಳದ ಚಟುವಟಿಕೆಗಳು ಮೊಣಕಾಲುಗಳ ಕಾರ್ಟಿಲೆಜ್ ಅನ್ನು ರಕ್ಷಿಸುವಲ್ಲಿ ಪ್ರಯೋಜನಕಾರಿ ಎಂದು ತೋರಿಸಲಾಗಿದೆ. ಮೊಣಕಾಲಿನ ಆರೋಗ್ಯಕ್ಕೆ ಹಾನಿ ಮಾಡುವ ವ್ಯಾಯಾಮ ಮಾಡಲು ಹೋಗ್ಬೇಡಿ. ಜುಂಬಾ, ಜಿಗಿಯುವುದು, ಕುಣಿಯುವುದು ಮತ್ತು ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಬರುವ ಕ್ರಿಯಾತ್ಮಕ ವ್ಯಾಯಾಮದಂತಹ ಕೆಲವು ಯೋಗ ಆಸನಗಳು (ಸೂರ್ಯನಮಸ್ಕಾರ, ಪದ್ಮಾಸನ) ಮೊಣಕಾಲು ನೋವನ್ನು ಉಲ್ಬಣಗೊಳಿಸಬಹುದು. ಇವುಗಳನ್ನು ಮಾಡುವಾಗ ಜಾಗರೂಕರಾಗಿರಿ.
ಅಡುಗೆ ರುಚಿ ಹೆಚ್ಚಿಸೋ ಕಿಚನ್ ಸೀಕ್ರೆಟ್ಸ್, ರುಚಿ ರುಚಿಯಾಗಿ ಅಡುಗೆ ಮಾಡ್ಕೊಂಡು ತಿನ್ನಿ
ವೈದ್ಯರ ಸಲಹೆ : ಮೊಣಕಾಲು ನೋವು, ಊತದಂತಹ ಯಾವುದೇ ಸಮಸ್ಯೆಯನ್ನು ನೀವು ಅನುಭವಿಸಿದರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಮೊಣಕಾಲುಗಳ ಸಮಸ್ಯೆಯನ್ನು ನಿರ್ಲಕ್ಷಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ.