ಹಳ್ಳಿಯ ತಾಯಿಯೊಬ್ಬಳು ತನ್ನ ಮಗುವನ್ನು ಹುಲ್ಲಿನ ಹೊರೆಯೊಳಗೆ ಇಟ್ಟು ಹೊತ್ತು ಸಾಗುತ್ತಿರುವ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯವು ಗ್ರಾಮೀಣ ಮಹಿಳೆಯರ ಕಷ್ಟಕರ ಜೀವನ ಮತ್ತು ಅಚಲವಾದ ಮಾತೃಪ್ರೇಮವನ್ನು ಬಿಂಬಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರ ಮನ ಕಲಕಿದೆ.

ಅಮ್ಮನ ಅಂಬಾರಿ ಮೇಲೆ ಮಗನ ಸವಾರಿ:

ಹಳ್ಳಿಯೊಂದರ ಜೀವನಶೈಲಿಯ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ. ಹಳ್ಳಿಯ ಜೀವನವೇ ಬಿಡುವಿಲ್ಲದ ಕೆಲಸಗಳಿಂದ ತುಂಬಿದ ಜೀವನ. ಮನೆಯಲ್ಲೊಂದು ಹಸುವೋ ಆಕಳೋ ಇದ್ದರೆ ಅವರ ಬಹುತೇಕ ಸಮಯದ ಅದರ ಆರೈಕೆ ಲಾಲನೆ ಪಾಲನೆಯಲ್ಲೇ ಕಳೆದು ಹೋಗುತ್ತದೆ. ಹಳ್ಳಿಯ ಕೆಲಸಕ್ಕೆ ಅಗತ್ಯವಾದ ಜನರು ಕೂಡ ಸಿಗದೇ ಹೋಗುವುದರಿಂದ ಮನೆ ಮಂದಿಯೇ ಈ ಕೆಲಸವನ್ನೆಲ್ಲಾ ಮಾಡಬೇಕಾಗುತ್ತದೆ. ಇದರ ಜೊತೆಗೆ ಪುಟ್ಟ ಮಕ್ಕಳಿದ್ದರೆ ಆ ತಾಯಿಯ ಪಾಡು ಅಷ್ಟಿಷ್ಟಲ್ಲ, ಸಿಟಿಯಲ್ಲಿ ಮನೆ ಗಂಡಸರು ಮನೆ ಹೆಣ್ಣು ಮಕ್ಕಳಿಗೆ ಬೆಂಬಲಿಸುವಂತೆ ಹಳ್ಳಿಯ ಕಡೆಗಳಲ್ಲಿ ಬೆಂಬಲಿಸುವುದಿಲ್ಲ, ಮನೆ ಕೆಲಸವೆಲ್ಲವೆಲ್ಲವನ್ನೂ ಮನೆಯವರೇ ಮಾಡಬೇಕಾಗುತ್ತದೆ.

ಹುಲ್ಲಿನ ಹೊರೆಯಲ್ಲೇ ಮಗನಿಗೆ ಅಂಬಾರಿ ತೋರಿಸಿದ ತಾಯಿ

ಹೀಗಿರುವಾಗ ಹಳ್ಳಿಯ ಪುಟ್ಟ ಮಕ್ಕಳಿಗೂ ನಗರದ ಮಕ್ಕಳಂತೆ ನವಿರಾದ ಬಾಲ್ಯವಿರುವುದಿಲ್ಲ, ಕೇಳಿದು ಆಸೆಪಟ್ಟಿದ್ದು ಎಲ್ಲಾ ಮರು ಕ್ಷಣದಲ್ಲಿ ಸಿಗುವುದಿಲ್ಲ, ಆದರೂ ಆ ಹಳ್ಳಿಯ ಬಾಲ್ಯದಲ್ಲಿ ಅದೇನೋ ಖುಷಿ ಇದೆ. ಹಳ್ಳಿಯಲ್ಲಿ ತಾಯಿ ಅಥವಾ ಮನೆ ಹೆಂಗಸರು, ತಮ್ಮ ಕೆಲಸಗಳ ಜೊತೆ ಜೊತೆಗೆ ಪುಟ್ಟ ಮಕ್ಕಳನ್ನು ಹೊಲ ಗದ್ದೆಗಳಿಗೆ ಕರೆದುಕೊಂಡು ಹೋಗುತ್ತಾರೆ. ಅವರು ಪೋಷಕರನ್ನು ಕೆಲಸ ಮಾಡುವುದನ್ನು ನೋಡುತ್ತಲೇ ಕೆಲಸವನ್ನು ಕಲಿಯುತ್ತಾರೆ. ಅದೊಂತರ ಪ್ರಯೋಗಿಕ ಜೀವನ ಕಷ್ಟಸುಖ, ಹಣದ ಮೌಲ್ಯ, ಸಂಬಂಧಗಳ ಪ್ರಾಮುಖ್ಯತೆಯನ್ನು ಹಳ್ಳಿಯ ಜೀವನ ಕಲಿಸುತ್ತದೆ. ಹೀಗಿರುವಾಗ ಹಳ್ಳಿಯ ವೀಡಿಯೋವೊಂದು ವೈರಲ್ ಆಗಿದೆ.

ಹಳ್ಳಿ ಜೀವನದ ವೀಡಿಯೋ ಭಾರಿ ವೈರಲ್:

ವಿಡಿಯೋದಲ್ಲಿ ಹುಲ್ಲಿನ ಹೊರೆಯೊಂದರಲ್ಲಿ ಪುಟ್ಟ ಮಗುವನ್ನು ಸೇರಿಸಿ ಹೊರೆಯನ್ನು ಕಟ್ಟಿದ್ದಾಳೆ. ಹುಲ್ಲಿನ ಹೊರೆಯ ದೊಡ್ಡದಾಗಿ ಭಾರವಾಗಿದ್ದು, ಅದರ ಮೇಲೆ ಸರಿಸುಮಾರು 14ರಿಂದ 15 ಕೆಜಿ ತೂಗುವ ಬಾಲಕನನ್ನು ಹೊತ್ತುಕೊಂಡು ಆ ತಾಯಿ ನಡೆಯುತ್ತಾ ಸಾಗುತ್ತಿದ್ದು, ಈ ವೀಡಿಯೋ ಭಾರಿ ವೈರಲ್ ಅಗಿದೆ. ಚಿಕ್ಕ ಮಕ್ಕಳು ಕೆಲಸದ ಸ್ಥಳದಲ್ಲೇ ನಿದ್ದೆಗೆ ಜಾರುತ್ತವೆ. ಕೆಲವೊಮ್ಮೆ ನಡೆಯುವುದಕ್ಕೆ ಇಷ್ಟಪಡುವುದಿಲ್ಲ ಎತ್ತಿಕೊಂಡು ಹೋಗಬೇಕು ಎಂದು ಹಠ ಹಿಡಿಯುತ್ತಾರೆ. ಇಲ್ಲಿ ಮಗು ನಿದ್ದೆ ಮಾಡಿತ್ತೋ ಹಠ ಹಿಡಿತೋ ಗೊತ್ತಿಲ್ಲ. ಆದರೆ ಆ ತಾಯಿ ಹುಲ್ಲಿನ ಹೊರೆಯಲ್ಲಿ ಮಗುವನ್ನು ಕೂಡ ಕಟ್ಟಿಕೊಂಡು ತಲೆಯ ಮೇಲಿಟ್ಟು ಸಾಗಿದ್ದಾರೆ.

ಇದನ್ನೂ ಓದಿ: ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

ಇದನ್ನು ಯಾರೋ ವೀಡಿಯೋ ಮಾಡಿ ಹಾಕಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಬಾಲ್ಯದ ನೆನಪುಗಳಿಗೆ ಜಾರಿದ್ದಾರೆ. ಇದೊಂದು ನಿಜವಾದ ವುಮನ್ ಪವರ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಾಲ್ಯದಲ್ಲಿ ನನ್ನ ತಾಯಿ ಕೂಡ ನನ್ನನ್ನು ಹೀಗೆ ಹುಲ್ಲಿನ ಹೊರೆಯ ಜೊತೆ ಕಟ್ಟಿ ಹೊತ್ತುಕೊಂಡು ಹೋಗುತ್ತಿದ್ದಿದ್ದು, ನೆನಪಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಹಿಳೆಯ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಬಯಸುವರು ಈ ವೀಡಿಯೋ ನೋಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ತಾಯಿ ಈ ಭೂಮಿ ಮೇಲಿರುವ ದೇವರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು. ಕಾಮೆಂಟ್ ಮಾಡಿ..

ಇದನ್ನೂ ಓದಿ: ಚೆನ್ನೈ ಶಿವ ದೇಗುಲಕ್ಕೆ ಭೇಟಿ ನೀಡಿ ನಿರರ್ಗಳವಾಗಿ ಶಿವ ತಾಂಡವ ಪಠಿಸಿದ ಪಾಪ್ ಗಾಯಕ

View post on Instagram