ಕಂದಾ ಭಯಭೇಡ ನಾನಿರುವೆ..ಏಳು ನಿಮಿಷ ಚಿರತೆಯೊಂದಿಗೆ ಕಾದಾಡಿ ಮಗುವನ್ನು ರಕ್ಷಿಸಿದ ತಾಯಿ
ತಾಯಿಗೆ ತನ್ನ ಮಗುವಿಗಿಂತ ದೊಡ್ಡ ಪ್ರಪಂಚವಿಲ್ಲ. ಮಗುವನ್ನು ಖುಷಿ ಪಡಿಸಲು ಆಕೆ ಏನು ಮಾಡಲು ಸಹ ಸಿದ್ಧಳಾಗುತ್ತಾಳೆ. ಮಗುವಿಗೆ ಕಷ್ಟಬಂದಾಗ ಅದೆಷ್ಟೇ ಅಪಾಯಕಾರಿಯಾದರೂ ಆಕೆ ತನ್ನ ಮಗುವನ್ನು ರಕ್ಷಿಸುತ್ತಾಳೆ. ಅದು ನಿಜವೆಂಬುದು ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದರಿಂದ ಸಾಬೀತಾಗಿದೆ.
ತಾಯಿಯ ಪಾಲಿಗೆ ಮಗುವೇ ಸರ್ವಸ್ವ. ಮಗುವನ್ನು ಖುಷಿಯಾಗಿಡಲು ಆಕೆ ಏನು ಸಹ ಮಾಡಬಲ್ಲಳು. ಎಂಥಾ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬಲ್ಲಳು. ಮಗು ಅಪಾಯದಲ್ಲಿದ್ದರೆ ಆತನನ್ನು ರಕ್ಷಿಸಲು ತನ್ನ ಕೊನೆಯ ಉಸಿರು ಇರುವವರೆಗೂ ಹೋರಾಡಬಲ್ಲಳು. ಅದು ನಿಜವೆಂಬುದು ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದರಿಂದ ಸಾಬೀತಾಗಿದೆ. ಇಲ್ಲಿನ ಬಿಜನೋರ್‌ನಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ರಕ್ಷಿಸಲು ಚಿರತೆಯೊಂದಿಗೆ ಕಾದಾಡಿದ್ದಾಳೆ.
ಕಣ್ಣೆದುರು ಚಿರತೆ (Leopard) ಅಷ್ಟು ದೊಡ್ಡಗೆ ಬಾಯಿ ಬಿಡುತ್ತಾ ಕುಳಿತಿದ್ದರೆ ಯಾರಿಗಾದರೂ ಜೀವ ಕೈಗೆ ಬಂದೇ ಬರುತ್ತದೆ. ಒಮ್ಮೆ ಅದರ ಕಣ್ಣು ತಪ್ಪಿಸಿ ಎಲ್ಲಾದರೂ ಓಡಿ ಹೋಗಿಬಿಡೋಣ ಅನಿಸುತ್ತದೆ. ಆದರೆ ಆಕೆ ಮಾತ್ರ ಅಂಜದೆ, ಅಳುಕದೆ ಚಿರತೆಯ ಎದುರೇ ನಿಂತಿದ್ದಳು. ಅಷ್ಟೇ ಅಲ್ಲ ಆ ಭೀಕರ ಚಿರತೆಯೊಂದಿಗೆ ಹೋರಾಡಿದಳು. ಸುಸ್ತಾಗಿ ಬಸವಳಿದರೂ ಆಕೆ ಚಿರತೆಯನ್ನು ಮಾತ್ರ ಬಿಡಲ್ಲಿಲ್ಲ. ಕಾದಾಡುತ್ತಲೇ ಇದ್ದಳು. ಇಷ್ಟೆಲ್ಲಾ ಆಕೆ ಮಾಡಿದ್ದು ತನ್ನ ಮಗು (Son)ವಿಸ್ಕೋರ. ಹೌದು, ಉತ್ತರಪ್ರದೇಶದ ಬಿಜನೋರ್‌ನಲ್ಲಿ ತನ್ನ ಕಂದನನ್ನು ಹೊತ್ತೊಯ್ದ ಚಿರತೆಯ ವಿರುದ್ಧ ಮಹಿಳೆ (Women) ಕಾದಾಡಿದಳು. ಸತತ ಏಳು ನಿಮಿಷಗಳ ಚಿರತೆಯೊಂದಿಗೆ ಸೆಣಸಾಟ ನಡೆಸಿ ಗೆದ್ದಳು.
ಬಾವಿಗಿಳಿದು ಚಿರತೆಯನ್ನು ರಕ್ಷಿಸಿದ ಗಟ್ಟಿಗಿತ್ತಿ: ವೈದ್ಯೆಯ ಸಾಧನೆಗೆ ಎಲ್ಲರ ಮೆಚ್ಚುಗೆ
ಚಿರತೆಯೊಂದಿಗೆ ಸೆಣಸಾಡಿ ಮಗುವನ್ನು ರಕ್ಷಿಸಿದ ತಾಯಿ
ಬಿಜನೋರ್ ಜಿಲ್ಲೆಯ ಓಂಪ್ರಕಾಶ್ ಎಂಬವರ ಪತ್ನಿ ತನ್ನ 10 ವರ್ಷದ ಮಗ ತಿಕೇಂದ್ರನೊಂದಿಗೆ ಮನೆಯ ಸಮೀಪದ ಕಬ್ಬಿನ ಗದ್ದೆಗೆ (Sugarcane field) ತೆರಳಿದ್ದಳು. ಆಕೆ ಗದ್ದೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಮಗ ಅಷ್ಟು ದೂರ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಚಿರತೆ ಮಗನನ್ನು ಕಚ್ಚಿ ಹೊತ್ತೊಯ್ದಿದೆ. ಇದನ್ನು ನೋಡಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರೆಲ್ಲಾ ತಕ್ಷಣ ಓಡಿಹೋಗಿದ್ದಾರೆ. ಆದರೆ ತಾಯಿ ತಕ್ಷಣ ತನ್ನ ಮಗುವನ್ನು ರಕ್ಷಿಸಲು ಧಾವಿಸಿದ್ದಾಳೆ. ಕೈಯಲ್ಲಿದ್ದ ಕಬ್ಬನ್ನು ಎಳೆಯುವ ಮೆಷಿನ್ ತೆಗೆದುಕೊಂಡು ಚಿರತೆಯತ್ತ ಓಡಿದ್ದಾಳೆ. ಮಗುವನ್ನು ಕಚ್ಚಲು ಯತ್ನಿಸಿದ್ದ ಚಿರತೆಯ ಮುಖಕ್ಕೆ, ಹೊಟ್ಟೆಗೆ ತನ್ನ ಕೈಯಲ್ಲಿದ್ದ ಮೆಷಿನ್‌ನಿಂದ ತಿವಿದಿದ್ದಾಳೆ. ಈ ಸಂದರ್ಭದಲ್ಲಿ ಚಿರತೆ ಮಹಿಳೆಯ ಮೇಲೂ ದಾಳಿ ಮಾಡಿದೆ. ಆದರೂ ಮಹಿಳೆ ಛಲಬಿಡದೆ ಸತತವಾಗಿ ಚಿರತೆಗೆ ಮೆಷಿನ್‌ನಿಂದ ಚುಚ್ಚುತ್ತಾ ಹೋಗಿದ್ದಾಳೆ. ಕೊನೆಗೆ ಚಿರತೆ ನೋವನ್ನು ತಾಳಲಾರದೆ ಮಗುವನ್ನು ಬಿಟ್ಟು ಕಾಡಿಗೆ ಓಡಿಹೋಗಿದೆ.
ಮಹಿಳೆ ತಕ್ಷಣ ತನ್ನ ಮಗನತ್ತ ಧಾವಿಸಿದ್ದಾಳೆ. ಬಾಲಕ ಚಿರತೆಯ ದಾಳಿಯಿಂದ ಸಂಪೂರ್ಣವಾಗಿ ಗಾಯಗೊಂಡಿದ್ದ. ಬಾಲಕನ ತಲೆ, ಹೊಟ್ಟೆ, ಭುಜದ ಮೇಲೆಲ್ಲಾ ಗಾಯಗಳಾಗಿದ್ದ ಕಾರಣ ಪ್ರಜ್ಞೆಯೂ ತಪ್ಪಿತ್ತು. ಮಹಿಳೆ ತಕ್ಷಣ ತನ್ನ ಮಗನನ್ನೆತ್ತಿಕೊಂಡು ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಕೊಡಿಸಿದ್ದಾಳೆ. ಬಿಜನೋರ್‌ನ ರೈತರು ಕಳೆದ ಹಲವು ತಿಂಗಳಿನಿಂದ ಚಿರತೆ ದಾಳಿಯ ಭೀತಿಯಲ್ಲೇ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗಾಜಿಯಾಬಾದ್ ಕೋರ್ಟ್‌ನಲ್ಲಿ ಚಿರತೆ ದಾಳಿ, ವಕೀಲ ಸೇರಿದಂತೆ ಮೂವರ ಮೇಲೆ ದಾಳಿ!
ಅಬ್ಬಬ್ಬಾ..ಧೈರ್ಯವೇ..25 ಅಡಿ ಆಳದ ಬಾವಿಗಿಳಿದು ಚಿರತೆ ರಕ್ಷಿಸಿದ ಮಹಿಳೆ
ಮಂಗಳೂರಿನಲ್ಲೊಬ್ಬ ಮಹಿಳೆ ಬಾವಿಯೊಳಗಿದ್ದ ಒಂದು ವರ್ಷದ ಚಿರತೆಯನ್ನು ರಕ್ಷಿಸಿದ್ದಾರೆ. ಪಶು ವೈದ್ಯೆಯಾಗಿರುವ ಡಾ.ಮೇಘನಾ ಧೈರ್ಯಕ್ಕೆ ಊರವರು ಮೆಚ್ಚುಗೆ ಸೂಚಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಚರ್ಚ್ ಸಮೀಪವಿರುವ ಮನೆಯ ಬಾವಿಗೆ ಶುಕ್ರವಾರ ರಾತ್ರಿ ಚಿರತೆ (Leopard)ಯೊಂದು ಬಿದ್ದಿತ್ತು. ಶನಿವಾರ ಮಧ್ಯಾಹ್ನ ಮನೆಯವರಿಗೆ ವಿಷಯ ತಿಳಿದಿದ್ದು, ಕೂಡಲೇ ಅರಣ್ಯ ಅಧಿಕಾರಿಗಳಿಗೆ (Forest officers) ತಿಳಿಸಿದರು. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿರತೆಯನ್ನು ರಕ್ಷಿಸಲು ಬೋನು ತಂದು ಅದಕ್ಕೆ ಕೋಳಿಮರಿಯನ್ನು ಕಟ್ಟಿಬಾವಿಗೆ ಇರಿಸಿ ಹಲವು ಪ್ರಯತ್ನ ಮಾಡಲಾಯಿತು. ಆದರೂ ಚಿರತೆ ಬೋನಿನೊಳಗೆ (Cage) ಬರಲ್ಲಿಲ್ಲ. ನಂತರ ಮಂಗಳೂರಿನ ವನ್ಯಜೀವಿ ರಕ್ಷಣಾ ಮತ್ತು ಸಂಶೋಧನಾ ಕೇಂದ್ರವಾದ ಚಿಟ್ಟೆಪಿಲಿ ಸಂಸ್ಥೆಯ ನೆರವಿನಿಂದ ರಕ್ಷಣಾ ಕಾರ್ಯಾಚರಣೆ (Rescue operation) ಮುಂದುವರಿಸಲಾಯಿತು . ಬರೋಬ್ಬರಿ 36 ಗಂಟೆಗಳ ಕಾಲ ಚಿರತೆ ಬೋನಿನೊಳಗೇ ಸಿಕ್ಕಿ ಹಾಕಿಕೊಂಡಿತ್ತು. ನಂತರ ಚಿಟ್ಟೆಪಿಲಿ ತಂಡದ ಪಶು ವೈದ್ಯರಾದ ಡಾ.ಮೇಘನಾ ಪೆಮ್ಮಯ್ಯ ತಾವೇ ಬಾವಿ (Well)ಯೊಳಗೆ ಇಳಿದು ಚಿರತೆಯನ್ನು ರಕ್ಷಿಸಲು ನಿರ್ಧರಿಸಿದರು. ಬಾವಿ ಬರೋಬ್ಬರಿ 25 ಅಡಿ ಆಳವಿದ್ದರೂ ಚಿರತೆಯನ್ನು ರಕ್ಷಿಸಿದರು.