Asianet Suvarna News Asianet Suvarna News

ಗಾಜಿಯಾಬಾದ್‌ ಕೋರ್ಟ್‌ನಲ್ಲಿ ಚಿರತೆ ದಾಳಿ, ವಕೀಲ ಸೇರಿದಂತೆ ಮೂವರ ಮೇಲೆ ದಾಳಿ!


ಈವರೆಗೂ ಸಾರ್ವಜನಿಕ ಪ್ರದೇಶಗಳಲ್ಲಿ ಚಿರತೆ ದಾಳಿ ಮಾಡುತ್ತಿದ್ದ ಸುದ್ದಿಗಳು ಬರುತ್ತಿದ್ದವು. ಆದರೆ, ಬುಧವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ ಕೋರ್ಟ್‌ನ ಆವರಣ ಪ್ರವೇಶಸಿದ ಚಿರತೆ, ಮೂವರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

Leopard enters Ghaziabad court premises : Many People Were Attacked san
Author
First Published Feb 8, 2023, 5:36 PM IST

ನವದೆಹಲಿ (ಫೆ.8): ಈವರೆಗೂ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂಥ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಬುಧವಾರ ಮಧ್ಯಾಹ್ನ ಗಾಜಿಯಾಬಾದ್‌ನ ಕೋರ್ಟ್‌ ಆವರಣದಲ್ಲಿ ಕಾಣಿಸಿಕೊಂಡಿದೆ. ಕೋರ್ಟ್‌ನ ಹಳೆಯ ಕಟ್ಟಡದ ಬಳಿಯಿದ್ದ ವಕೀಲ, ಶೂ ಪಾಲೀಶ್‌ ಮಾಡುತ್ತಿದ್ದ ವ್ಯಕ್ತಿ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿದೆ. ಶೂ ಪಾಲಿಶ್‌ ಮಾಡುತ್ತಿದ್ದ ವ್ಯಕ್ತಿಯ ಕಿವಿಯನ್ನು ಚಿರತೆ ಹರಿದು ಹಾಕಿದೆ. ಆತ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಚಿರತೆ ಪ್ರವೇಶಿಸಿದ ಕೂಡಲೇ ಹಳೆ ಕಟ್ಟಡದ ಕೋರ್ಟ್‌ ಕೋಣೆಗಳನ್ನು ಖಾಲಿ ಮಾಡಲಾಗಿತ್ತು. ಸುಮಾರು 30 ನಿಮಿಷಗಳ ಕಾಲ ನ್ಯಾಯಾಲಯದ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಚಿರತೆಯು ಕಟ್ಟಡದ ಕಬ್ಬಿಣದ ಗ್ರಿಲ್‌ನ ಅಂಚಿನಲ್ಲಿ ಬಂಧಿಸಿ ಇಡಲಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಚಿರತೆ ಹೊಕ್ಕ ಬೆನ್ನಲ್ಲಿಯೇ ಇಡೀ ನ್ಯಾಯಾಲಯದಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ, "ಚಿರತೆ ಮೊದಲು ಸಿಜೆಎಂ ನ್ಯಾಯಾಲಯದ ಕಟ್ಟಡದ ಮೆಟ್ಟಿಲುಗಳ ಕೆಳಗೆ ಕಾಣಿಸಿಕೊಂಡಿತು, ಜನರನ್ನು ನೋಡಿದ ಚಿರತೆ ಓಡಿಹೋಯಿತು. ಬಳಿಕ ಜನರ ಓಡಾಟವನ್ನು ನೋಡಿ ಇನ್ನಷ್ಟು ಆಕ್ರಮಣಕ್ಕೆ ಇಳಿಯಿತು. ಪೊಲೀಸ್, ವಕೀಲರು, ಶೂ ಪಾಲಿಶ್ ಮಾಡುವವರ ಮೇಲೆ ದಾಳಿ ಚಿರತೆ ದಾಳಿ ಮಾಡಿದೆ. ಹಲವಾರು ಜನರು ಗಾಯಗೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

ಸುಮಾರು ಅರ್ಧ ಗಂಟೆಯ ನಂತರ ಅರಣ್ಯ ಇಲಾಖೆಯ 12 ಮಂದಿಯ ತಂಡ ರಕ್ಷಣೆಗೆ ಧಾವಿಸಿತು. ತಂಡವು ತಮ್ಮೊಂದಿಗೆ ಬಲೆ ಮತ್ತು ಪಂಜರಗಳನ್ನು ತಂದಿತ್ತು ಎನ್ನುವ ಮಾಹಿತಿ ಸಿಕ್ಕಿದೆ.  ನ್ಯಾಯಾಲಯದ ಮುಖ್ಯ ಕಟ್ಟಡದ ನೆಲ ಮಹಡಿಯಲ್ಲಿರುವ ಕಬ್ಬಿಣದ ಕಾಲುವೆ ಮುಚ್ಚಲಾಗಿದೆ. ನ್ಯಾಯಾಲಯದ ಸಿಬ್ಬಂದಿ, ನೌಕರರು, ವಕೀಲರು ಸೇರಿದಂತೆ ನೂರಾರು ಮಂದಿ ಕಟ್ಟಡದ ಹೊರಗೆ ಜಮಾಯಿಸಿದ್ದಾರೆ. ಅರಣ್ಯ ಇಲಾಖೆ ತಂಡ ನ್ಯಾಯಾಲಯದ ಮುಖ್ಯ ಕಟ್ಟಡದೊಳಗೆ ಪ್ರವೇಶಿಸಿದೆ. 

Follow Us:
Download App:
  • android
  • ios