ಈಕೆಯ ಎದೆಹಾಲು ಬತ್ತೋದೆ ಇಲ್ಲ, 10350 ಲೀ. ಬ್ರೆಸ್ಟ್‌ಮಿಲ್ಕ್‌ ದಾನ ಮಾಡಿ ಮಹಿಳೆಯ ಗಿನ್ನಿಸ್ ದಾಖಲೆ

ಎದೆಹಾಲು ಮಗುವಿನ ಆರೋಗ್ಯಕ್ಕೆ ಅತೀ ಮುಖ್ಯವಾಗಿದೆ. ಆದರೆ ಕೆಲವೊಬ್ಬರಿಗೆ ಎದೆಹಾಲು ಬರದೆ ಸಮಸ್ಯೆ ಎದುರಾಗುತ್ತದೆ. ಇಂಥವರಿಗೆಂದೇ ಕೆಲ ತಾಯಂದಿರು ಎದೆಹಾಲನ್ನು ದಾನ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಲೀಟರ್‌ಗಟ್ಟಲೆ ಎದೆಹಾಲು ದಾನ ಮಾಡಿ ಅದೆಷ್ಟೋ ಮಕ್ಕಳ ಜೀವ ಉಳಿಸಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿಯೂ ಇವರ ಹೆಸರು ಸೇರಿದೆ.

Woman donates breast milk, fed her milk to thousands of children, Now in the Guinness Book Vin

ತಾಯಿಯ ಹಾಲು ಮಕ್ಕಳ ಆರೋಗ್ಯಕ್ಕೆ ಅಮೃತಕ್ಕೆ ಸಮಾನವಾಗಿದೆ. ಮಕ್ಕಳು ಹುಟ್ಟಿದ 6 ತಿಂಗಳವರೆಗೆ ತಾಯಿಯ ಹಾಲನ್ನು ನೀಡಬೇಕು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಇದು ಹೇರಳವಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಾತ್ರವಲ್ಲ ಎದೆಹಾಲು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ತಾಯಿಯೂ ಮಕ್ಕಳಿಗೆ ಅಗತ್ಯವಾದಷ್ಟು ಎದೆಹಾಲನ್ನು ಒದಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವೊಬ್ಬರಿಗೆ ಎದೆಹಾಲು ಬರದೆ ಸಮಸ್ಯೆ ಎದುರಾಗುತ್ತದೆ. ಇಂಥವರಿಗೆಂದೇ ಕೆಲ ತಾಯಂದಿರು ಎದೆಹಾಲನ್ನು ದಾನ ಮಾಡುತ್ತಾರೆ. 

ಇತರ ಮಕ್ಕಳಿಗಾಗಿ ಎದೆಹಾಲು ದಾನ (Breastmilk donate) ಮಾಡುವ ಇಂತಹ ತಾಯಿಯ ಬಗ್ಗೆ ಕೇಳಿದ್ದೀರಾ. ಇಲ್ಲಿಯವರೆಗೆ ಸಾವಿರಾರು ಮಕ್ಕಳಿಗೆ ಜೀವ ನೀಡಿದ ಅಂತಹ ಮಹಿಳೆಯ (Woman) ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿಯೂ ದಾಖಲಾಗಿದೆ.

ಹೆಚ್ಚು ಹಾಲು ಕುಡಿಯೋದ್ರಿಂದ ತಾಯಂದಿರ ಎದೆಹಾಲು ಹೆಚ್ಚುತ್ತಾ?

2015ರಿಂದ 2018ರ ವರೆಗೆ ಲೀಟರ್‌ಗಟ್ಟಲೆ ಎದೆಹಾಲು ದಾನ
ಅಮೆರಿಕದಲ್ಲಿ ವಾಸಿಸುವ ಎಲಿಜಬೆತ್ ಆಂಡರ್ಸನ್, ಕಳೆದ ಹಲವಾರು ವರ್ಷಗಳಿಂದ ಈ ಉದಾತ್ತ ಕೆಲಸವನ್ನು ಮಾಡುತ್ತಿದ್ದಾರೆ. ಆಂಡರ್ಸನ್ ಸ್ವತಃ ಎರಡು ಮಕ್ಕಳ ತಾಯಿ. ಆದರೆ ಅವರು ಸಾವಿರಾರು ಮಕ್ಕಳನ್ನು ಬೆಳೆಸಿದ್ದಾರೆ. ಅನೇಕ ಅಕಾಲಿಕ ಶಿಶುಗಳ (Infant) ಜೀವವನ್ನು ಉಳಿಸುವಲ್ಲಿ ಸಹಾಯ ಮಾಡಿದ್ದಾರೆ. ಗಿನ್ನೆಸ್ ಪುಸ್ತಕದ ಪ್ರಕಾರ, 20 ಫೆಬ್ರವರಿ 2015ರಿಂದ 20 ಜೂನ್ 2018ರ ವರೆಗೆ, ಎಲಿಜಬೆತ್‌ 1600 ಲೀಟರ್ ಎದೆಹಾಲನ್ನು ಮಿಲ್ಕ್‌ ಬ್ಯಾಂಕ್‌ಗೆ ದಾನ ಮಾಡಿದ್ದಾರೆ. ಯಾವುದೇ ಮಹಿಳೆ ಎಂದಿಗೂ ಇಷ್ಟು ಪ್ರಮಾಣದಲ್ಲಿ ಎದೆಹಾಲು ದಾನ ಮಾಡಿಲ್ಲ. 

10350 ಲೀಟರ್ ಎದೆಹಾಲು ದಾನ 
ಎಲಿಜಬೆತ್ ಅವರು, 2015 ಮತ್ತು 2018ರ ನಡುವೆ ದಾನ ಮಾಡಿದ ಹಾಲಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಿದೆ. ಆದರೆ ಇದರ ಹೊರತಾಗಿಯೂ ಎಲಿಜಬೆತ್ ಅದೆಷ್ಟೋ ಮಕ್ಕಳಿಗೆ ಹಾಲು ನೀಡಿದ್ದಾರೆ. ಕಳೆದ 9 ವರ್ಷಗಳಲ್ಲಿ 10350 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾಗಿ ತಿಳಿಸಿದ್ದಾರೆ. ಎದೆಹಾಲು ದಾನ ಮಾಡುವ ಪರಿಕಲ್ಪನೆ ಹೇಗೆ ಬಂತು ಎಂಬ ಪ್ರಶ್ನೆಗೆ ಎಲಿಜಬೆತ್ ಆಂಡರ್ಸನ್ ಉತ್ತರಿಸಿದ್ದಾರೆ. 'ನಾನು ಮೊದಲು ಹೆಚ್ಚಿನ ಹಾಲನ್ನು ಎಸೆಯುತ್ತಿದ್ದೆ. ಆದರೆ ಒಂದು ದಿನ ಅದನ್ನು ಸರಿಯಾಗಿ ಬಳಸಿದರೆ, ಜಗತ್ತಿನಲ್ಲಿ ಅನೇಕ ಮಕ್ಕಳು ತಮ್ಮ ಜೀವವನ್ನು ಉಳಿಸಬಹುದು ಎಂದು ನನಗೆ ಅನಿಸಿತು. ಎರಡನೇ ಮಗಳು ಜನಿಸಿದ, ಒಂದು ವಾರದ ನಂತರ ಹಾಲನ್ನು ದಾನ ಮಾಡಲು ಪ್ರಾರಂಭಿಸಿದೆ. ಪ್ರತಿದಿನ 6 ಲೀಟರ್ ಹಾಲು ತೆಗೆದು ಅದನ್ನು ಬಾಟಲಿಯಲ್ಲಿ ಪ್ಯಾಕ್ ಮಾಡಿ ಹಾಲಿನ ಬ್ಯಾಂಕ್ ಗೆ ಕೊಡುತ್ತೇನೆ' ಎಂದು ಎಲಿಜಬೆತ್ ತಿಳಿಸಿದ್ದಾರೆ. 

7 ತಿಂಗಳಲ್ಲಿ 42 ಲೀಟರ್ ಎದೆಹಾಲು ದಾನ ಮಾಡಿ ದಾಖಲೆ ಬರೆದ ಮಹಾತಾಯಿ

ಅಷ್ಟೊಂದು ಎದೆ ಹಾಲು ಬರೋಕೆ ಈ ಸಿಂಡ್ರೋಮ್ ಕಾರಣ
ಆದರೆ ಅಷ್ಟೊಂದು ಎದೆ ಹಾಲು ಎಲ್ಲಿಂದ ಬಂತು? ವಾಸ್ತವವಾಗಿ, ಹೈಪರ್‌ಲ್ಯಾಕ್ಟೇಶನ್ ಸಿಂಡ್ರೋಮ್‌ನಿಂದಾಗಿ, ಎಲಿಜಬೆತ್‌ನಲ್ಲಿ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ. ಇದು ಅಂತಹ ಸ್ಥಿತಿಯಾಗಿದೆ, ಇದರಿಂದಾಗಿ ಬಹಳಷ್ಟು ಎದೆ ಹಾಲು ಉತ್ಪತ್ತಿಯಾಗುತ್ತದೆ. 'ನನ್ನ ದೇಹವು ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್ ಅನ್ನು ಬಹಳಷ್ಟು ಮಾಡುತ್ತದೆ ಮತ್ತು ಇದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈಗಾಗಿ ನಾನು ಇದನ್ನು ಮಕ್ಕಳ ಉಪಯೋಗಕ್ಕಾಗಿ ಬಳಸಲು ನಿರ್ಧರಿಸಿದೆ' ಎಂದು ಎಲಿಜಬೆತ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios