ಹೆಚ್ಚು ಹಾಲು ಕುಡಿಯೋದ್ರಿಂದ ತಾಯಂದಿರ ಎದೆಹಾಲು ಹೆಚ್ಚುತ್ತಾ?
ಹೊಸದಾಗಿ ತಾಯಿಯಾದವರಿಗೆ ಸುತ್ತಮುತ್ತಲ ಜನ ಅನೇಕ ಸಲಹೆ ನಿಡ್ತಾನೆ ಇರ್ತಾರೆ, ಅವುಗಳಲ್ಲಿ ಒಂದು ಎದೆ ಹಾಲನ್ನು ಹೆಚ್ಚಿಸಲು ಹೆಚ್ಚು ಹಾಲು ಕುಡೀಬೇಕು ಎಂದು. ಹೆಚ್ಚು ಹಾಲು ಕುಡಿಯೋದು ನಿಜವಾಗಿಯೂ ಎದೆಹಾಲನ್ನು ಹೆಚ್ಚಿಸುತ್ತಾ? ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ತಿಳಿಯೋಣ.
ತಾಯಿಯಾಗೋದು(Mother) ಒಂದು ಸುಂದರ ಅನುಭವ. ಮಹಿಳೆ ತಾಯಿಯಾಗಲು ಹೊರಟಾಗಲೆಲ್ಲಾ, ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ನಂತರ ಸುತ್ತಮುತ್ತಲಿನ ಜನ ವಿವಿಧ ಸಲಹೆಗಳನ್ನು ನೀಡುತ್ತಾರೆ. ಮನೆಯಲ್ಲಿ, ಸುತ್ತಮುತ್ತಲಿನ ಜನರು ಮತ್ತು ಇಂಟರ್ನೆಟ್ ಎಲ್ಲೆಡೆಯೂ ವಿವಿಧ ಟಿಪ್ಸ್ ಸಿಗುತ್ತೆ. ಇದರಲ್ಲಿ ಹೊಸ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಯಾವುದು ಒಳ್ಳೆದು ಅನ್ನೋದೆ ಗೊತ್ತಾಗೋದಿಲ್ಲ.
ಗರ್ಭಧಾರಣೆ (pregnancy ) ಮತ್ತು ಹೆರಿಗೆಯ ನಂತರದ ಜೀವನ ಪ್ರತಿಯೊಬ್ಬ ಮಹಿಳೆಗೆ ವಿಭಿನ್ನವಾಗಿರುತ್ತೆ. ಆದ್ದರಿಂದ, ಯಾವುದೇ ಸಲಹೆಯನ್ನು ಕುರುಡಾಗಿ ನಂಬಬಾರದು. ಸ್ತನ್ಯಪಾನದ ಬಗ್ಗೆ ಅನೇಕ ವಿಷಯಗಳನ್ನು ಸಹ ಹೇಳಲಾಗುತ್ತೆ ಮತ್ತು ನಂಬಲಾಗುತ್ತೆ. ಅದರಲ್ಲಿ ಮುಖ್ಯವಾಗಿ ಎದೆಹಾಲನ್ನು ಹೆಚ್ಚಿಸಲು ಹೊಸ ತಾಯಂದಿರು ಹೆಚ್ಚು ಹಾಲು ಕುಡಿಯಬೇಕು ಎಂದು ಸೂಚಿಸಲಾಗುತ್ತೆ. ಆದರೆ ಹೆಚ್ಚು ಹಾಲು ಕುಡಿಯೋದು ನಿಜವಾಗಿಯೂ ಎದೆಹಾಲನ್ನು ಹೆಚ್ಚಿಸುತ್ತಾ?
ಹೆಚ್ಚು ಹಾಲು ಕುಡಿಯಬೇಕಾ?
ತಜ್ಞರ ಪ್ರಕಾರ, ಎದೆಹಾಲನ್ನು ಹೆಚ್ಚಿಸಲು ಹೊಸ ತಾಯಿ ಹೆಚ್ಚು ಹಾಲು ಕುಡಿಯುವ ಅಗತ್ಯವಿಲ್ಲ. ಆದರೆ, ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತೆ. ಆದ್ದರಿಂದ, ಆರೋಗ್ಯವಾಗಿರಲು, ಹೊಸ ತಾಯಿ ಹಾಲು ಕುಡಿಯಬೇಕು.
ಹಾಲಿನಲ್ಲಿ ಕ್ಯಾಲ್ಸಿಯಂ(Calcium) ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದು ತಾಯಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತೆ. ಆದರೆ ಎದೆಹಾಲನ್ನು ಹೆಚ್ಚಿಸಲು ಇದನ್ನು ಸೇವಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಎದೆಹಾಲಿನ ಪೂರೈಕೆಯು ಮಗುವಿಗೆ ದಿನಕ್ಕೆ ಎಷ್ಟು ಬಾರಿ ಹಾಲುಣಿಸುತ್ತಿದ್ದೀರಿ ಎಂಬುದಕ್ಕೆ ನೇರವಾಗಿ ಸಂಬಂಧಿಸಿದೆ.
ಮಗು ಹೆಚ್ಚು ಹಾಲು ಕುಡಿದಷ್ಟೂ, ಅದಕ್ಕೆ ಅನುಗುಣವಾಗಿ ಎದೆಹಾಲಿನ ಪೂರೈಕೆ ಹೆಚ್ಚಾಗುತ್ತೆ. ಹಾಗಾಗಿ ತಾಯಿಯಾದವರು ಆಹಾರವನ್ನು ಆರೋಗ್ಯಕರವಾಗಿರಿಸಿಕೊಳ್ಳಿ. ಆದರೆ ಎದೆಹಾಲಿನ ಪೂರೈಕೆಯು ಸ್ತನ್ಯಪಾನ ಅಥವಾ ಪಂಪಿಂಗ್ (Pumping) ಅವಧಿಗಳ ಮೇಲೆ ಅವಲಂಬಿತವಾಗಿರುತ್ತೆ.
ಆಹಾರಕ್ರಮ ಹೀಗಿರಲಿ
ಸ್ತನ್ಯಪಾನದ ಸಮಯದಲ್ಲಿ, ಹೊಸ ತಾಯಿ ತನ್ನ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನೀವು ಏನು ತಿನ್ನುತ್ತೀರೋ ಅದು ನಿಮ್ಮ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತೆ. ಆಹಾರದಲ್ಲಿ ನೀರು, ಎಳನೀರು(Tender coconut), ತಾಜಾ ಜ್ಯೂಸ್ ಅಥವಾ ಇತರ ಆರೋಗ್ಯಕರ ಪಾನೀಯಗಳನ್ನು ಕುಡಿಯಬೇಕು.
ಹಾಲುಣಿಸುವ ತಾಯಿ ಆರೋಗ್ಯಕರ ಆಹಾರ (Healthy food) ಯೋಜನೆಯನ್ನು ಅನುಸರಿಸಬೇಕು, ಅದು ನಿಮ್ಮ ದೇಹದ ಪ್ರಕಾರಕ್ಕೆ ಅನುಗುಣವಾಗಿರಲಿ. ಇದಕ್ಕಾಗಿ, ತಜ್ಞರ ಸಲಹೆ ತೆಗೆದುಕೊಳ್ಳಬಹುದು. ನೀವು ಯಾವುದೇ ರೀತಿಯ ಕೆಟ್ಟ ಆಹಾರ ಸೇವಿಸಿದರೆ ಅದರ ಪರಿಣಾಮದಿಂದ ಮಗುವಿಗೆ ಹೆಚ್ಚಿನ ಪೋಷಕಾಂಶ ಸಿಗಲು ಸಾಧ್ಯವಾಗೋದಿಲ್ಲ. ಹಾಗಾಗಿ ಆಹಾರದ ಬಗ್ಗೆ ಜಾಗೃತರಾಗಿರಿ.
ಹಸಿರು ಎಲೆಗಳ ತರಕಾರಿ (Green Leafy vegetables), ಪ್ರೋಟೀನ್ ಮತ್ತು ಫೈಬರ್ ಸಮೃದ್ಧ ಆಹಾರ ತೆಗೆದುಕೊಳ್ಳಬೇಕು. ಹಾಗೆಯೇ, ಹೆಚ್ಚು ಸಮಯದವರೆಗೆ ಹಸಿವಿನಿಂದ ಇರೋದನ್ನು ತಪ್ಪಿಸಿ. ಎದೆಹಾಲನ್ನು ಹೆಚ್ಚಿಸಲು, ನಿಮ್ಮ ಆಹಾರದಲ್ಲಿ ಕೆಲವು ನೈಸರ್ಗಿಕ ಆಹಾರಗಳನ್ನು (Natural Food) ಸೇರಿಸಬಹುದು. ಅದು ಹೆಚ್ಚು ಪ್ರಯೋಜನಕಾರಿ.