Asianet Suvarna News Asianet Suvarna News

ಮಹಿಳೆ ಮುಖದ ಕೂದಲು ಬಿಚ್ಚಿಡಬಲ್ಲದು ಆಕೆಯ ಆರೋಗ್ಯದ ಗುಟ್ಟು!

ಗಡ್ಡ, ಮೀಸೆ ಇದ್ರೇನೆ ಪುರುಷರಿಗೆ ಡಿಮ್ಯಾಂಡ್‌. ಆದ್ರೆ ಇದೇ ಗಡ್ಡ ಮತ್ತು ಮೀಸೆ ಮಹಿಳೆ ಮುಖದ ಮೇಲೆ ಮೂಡಲಾರಂಭಿಸಿದ್ರೆ ಆಕೆ ನೆಮ್ಮದಿ ಹರಣವಾಗೋದು ಗ್ಯಾರಂಟಿ. ಮಹಿಳೆ ಮುಖದ ಮೇಲಿನ ಅಸಹಜ ಕೂದಲು ಆಕೆ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬುದರ ಸೂಚನೆಯೂ ಆಗಿರಬಹುದು. 

When woman should worry about her chin hair
Author
Bangalore, First Published Sep 11, 2020, 5:05 PM IST

ಪುರುಷರಿಗೆ ಮುಖದ ಮೇಲೆ ಕೂದಲಿದ್ರೇನೆ ಲಕ್ಷಣ. ಗಡ್ಡ ಮತ್ತು ಮೀಸೆ ಪುರುಷತ್ವದ ಸಂಕೇತ. ಅದೇ ಮಹಿಳೆಗೆ ಮುಖದ ಮೇಲೆ ಅನಗತ್ಯ ಕೂದಲು ಬೆಳೆದ್ರೆ ಚಿಂತಿಸೋದು ಅನಿವಾರ್ಯ.ಈ ಕೂದಲು ಕೂಡ ಚರ್ಮ ಮತ್ತು ಕಣ್ಣಿನ ಬಣ್ಣಗಳಂತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ.ಕೆಲವರಿಗೆ ಕಪ್ಪಗಿನ ದಪ್ಪ ಕೂದಲಿದ್ರೆ,ಇನ್ನೂ ಕೆಲವರಿಗೆ ತೆಳ್ಳಗಿನ ಕಂದು ಕೂದಲಿರುತ್ತೆ.ಕೆಲವರಿಗೆ ನುಣುಪಾದ ಕೇಶರಾಶಿಯಿದ್ರೆ,ಇನ್ನೂ ಕೆಲವರಿಗೆ ಸುರುಳಿ ಸುತ್ತಿದ ಕೂದಲು. ಇದು ಮುಖದ ಮೇಲಿನ ಕೂದಲಿಗೂ ಅನ್ವಯಿಸುತ್ತೆ.ಕೆಲವು ಮಹಿಳೆಯರಿಗೆ ಮುಖದ ಮೇಲೆ ಅತ್ಯಲ್ಪ ಕೂದಲಿದ್ದು,ಅದರ ಇರುವಿಕೆ ಗಮನಕ್ಕೆ ಬರೋದೇ ಇಲ್ಲ.ಇನ್ನೂ ಕೆಲವರಿಗೆ ಮಾತ್ರ ಅಗತ್ಯಕ್ಕಿಂತ ಹೆಚ್ಚೇ ಕೂದಲಿದ್ದು,ಮುಖದ ಅಂದವನ್ನು ಕೆಡಿಸಿಬಿಡುತ್ತೆ. ಗಲ್ಲ ಹಾಗೂ ಕುತ್ತಿಗೆ ಭಾಗದಲ್ಲಿ ಜಾಸ್ತಿ ಕೂದಲು ಬೆಳೆಯೋದಕ್ಕೆ ದೇಹದ ಆರೋಗ್ಯದಲ್ಲಿ ಏರುಪೇರಾಗಿರೋದು ಕೂಡ ಕಾರಣವಾಗಿರಬಹುದು.ಹಾರ್ಮೋನ್‌ ಮಟ್ಟದಲ್ಲಿ ಏರುಪೇರಾದ್ರೆ  ಮುಖದ ಮೇಲೆ ಹೆಚ್ಚಿನ ಕೂದಲು ಬೆಳೆಯುತ್ತೆ.

ಪಿಸಿಒಎಸ್‌ ಬಗ್ಗೆ ತಿಳಿಯಬೇಕಾದ ಮಾಹಿತಿ; ಮೂರು ಬಗೆಯಲ್ಲಿ ಕಾಡುವ ಪಾಲಿಸಿಸ್ಟಿಕ್‌ ಒವೇರಿಯನ್!.

ಗಲ್ಲದ ಮೇಲಿನ ಕೂದಲಿಗೆ ಕಾರಣವೇನು?
ಕೂದಲಿನ ಬೇರುಗಳು ಅಥವಾ ಪಾಲಿಕಲ್ಸ್‌ ಚರ್ಮದ ಅಡಿಯಲ್ಲಿರುತ್ತವೆ.ಇವುಗಳಿಂದಲೇ ಕೂದಲುಗಳು ಚಿಗುರೊಡೆದು ಹೊರಬರೋದು. ಈ ಹೇರ್‌ ಪಾಲಿಕಲ್ಸ್‌ನಲ್ಲಿ ವೆಲೊಸ್‌ ಹಾಗೂ ಟರ್ಮಿನಲ್‌ ಎಂಬ ಎರಡು ವಿಧಗಳಿವೆ. ತೆಳ್ಳಗಿನ ಗುಂಗುರು ಕೂದಲೇ ವೆಲೊಸ್‌. ಉದ್ದ,ದಪ್ಪ ಹಾಗೂ ಗಟ್ಟಿ ಬೇರುಗಳನ್ನು ಹೊಂದಿರೋ ಕೂದಲೇ ಟರ್ಮಿನಲ್‌. ದೇಹದ ಮೇಲಿನ ಕೂದಲಿನ ಬೆಳವಣಿಗೆಯಲ್ಲಿ ಆಂಡ್ರೋಜೆನ್‌ (ಟೆಸ್ಟೋಸ್ಟೆರೋನ್‌) ಎಂಬ ಪುರುಷರ ಸೆಕ್ಸ್‌ ಹಾರ್ಮೋನ್‌ ಮಹತ್ವದ ಪಾತ್ರ ವಹಿಸುತ್ತದೆ. ಹಾಗಂತ ಈ ಹಾರ್ಮೋನ್‌ ಪುರುಷರಲ್ಲಿ ಮಾತ್ರ ಇರುತ್ತೆ ಎಂದು ಭಾವಿಸಬೇಡಿ.ಮಹಿಳೆಯರಲ್ಲೂ ಇರುತ್ತೆ,ಆದ್ರೆ ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತೆ ಅಷ್ಟೆ.ಟೆಸ್ಟೋಸ್ಟೆರೋನ್‌ ಫಾಲಿಕಲ್ಸ್‌ನಲ್ಲಿ ಬದಲಾವಣೆ ತರೋ ಮೂಲಕ ವೆಲೊಸ್‌ ಕೂದಲನ್ನು ಟರ್ಮಿನಲ್‌ ಕೂದಲಾಗಿ ಪರಿವರ್ತಿಸುತ್ತೆ.ಇದು ಅತ್ಯಂತ ಸಹಜ ಪ್ರಕ್ರಿಯೆಯಾಗಿದ್ದು,ಹದಿಹರೆಯಕ್ಕೆ ಕಾಲಿಟ್ಟಾಗ ಪ್ರತಿಯೊಬ್ಬರಲ್ಲೂ ಈ ಬದಲಾವಣೆಯಾಗುತ್ತೆ.ಅದ್ರಲ್ಲೂ ಮಹಿಳೆಯರಲ್ಲಿ ಮುಖ ಸೇರಿದಂತೆ ದೇಹದ ಮೇಲಿನ ಕೂದಲುಗಳ ಬೆಳವಣಿಗೆ ಹಾರ್ಮೋನ್‌ಗಳ ಬದಲಾವಣೆಗನುಗುಣವಾಗಿ ಮಾರ್ಪಟಾಗುತ್ತೆ. ಅಂದ್ರೆ ಹದಿಹರೆಯ, ಗರ್ಭಧಾರಣೆ, ಋತುಬಂಧದ ಸಮಯದಲ್ಲಿ ಮಹಿಳೆಯರಲ್ಲಿ ಹಾರ್ಮೋನ್‌ ಮಟ್ಟದಲ್ಲಿ ಬದಲಾವಣೆಯಾಗುತ್ತೆ. ಇದು ಅವರ ದೇಹದ ಮೇಲಿನ ಕೂದಲುಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತೆ.

When woman should worry about her chin hair

ಆಗಾಗ ಆಗಲಿ ಗಂಡ ಹೆಂಡತಿ ಪಾತ್ರ ಅದಲು ಬದಲು

ಯಾವಾಗ ಚಿಂತಿಸಬೇಕು?
ಗಲ್ಲ, ತುಟಿಯ ಮೇಲ್ಭಾಗದಲ್ಲಿ ಅಲ್ಲೊಂದು ಇಲ್ಲೊಂದು ಕೂದಲಿರೋದು ಸಹಜ. ಮುಖದ ಮೇಲೆ ತೆಳ್ಳನೆಯ (ವೆಲೊಸ್‌) ಕೂದಲು ಅಲ್ಪ ಪ್ರಮಾಣದಲ್ಲಿರೋದು ಕಾಮನ್‌ ಕೂಡ. ಆದ್ರೆ ಇದ್ದಕ್ಕಿದ್ದಂತೆ ದಟ್ಟ ಹಾಗೂ ದಪ್ಪನೆಯ (ಟರ್ಮಿನಲ್‌) ಕೂದಲು ಗಲ್ಲ, ಕುತ್ತಿಗೆ ಹಾಗೂ ಮುಖದ ಇತರ ಭಾಗಗಳಲ್ಲಿ ಕಾಣಿಸಿಕೊಂಡ್ರೆ ಆಗ ಈ ಬಗ್ಗೆ ಯೋಚಿಸೋದು ಅಗತ್ಯ. ಇದು ನಿಮ್ಮ ದೇಹದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬ ಸೂಚನೆಯಾಗಿರೋ ಸಾಧ್ಯತೆಯಿದೆ. ಅನಾರೋಗ್ಯ ಅಥವಾ ಕೆಲವು ಔಷಧ ಅಥವಾ ಚಿಕಿತ್ಸೆ ಪರಿಣಾಮದಿಂದ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾದ್ರೆ ಕೂಡ ಮುಖದ ಮೇಲೆ ಹೆಚ್ಚಿನ ಕೂದಲುಗಳು ಕಾಣಿಸಿಕೊಳ್ಳುತ್ತವೆ. 

ಈ ಸಮಸ್ಯೆ ಕಾರಣವಾಗಿರಬಹುದು
-ಪಾಲಿಸಿಸ್ಟಿಕ್‌ ಒವೇರಿಯನ್ ಸಿಂಡ್ರೋಮ್‌ (ಪಿಸಿಒಎಸ್‌) ತಾಯಿಯಾಗೋ ವಯಸ್ಸಿನಲ್ಲಿ ಹೆಣ್ಮಕ್ಕಳನ್ನು ಕಾಡುತ್ತೆ. ಮೂಲವೊಂದರ ಪ್ರಕಾರ ಶೇ.೧೫ರಷ್ಟು ಮಹಿಳೆಯರು ಈ ಸಮಸ್ಯೆಗೆ ತುತ್ತಾಗುತ್ತಾರೆ. ಆಂಡ್ರೋಜನ್‌ ಮಟ್ಟದಲ್ಲಿ ಹೆಚ್ಚಳವಾಗೋದ್ರಿಂದ ಹಾರ್ಮೋನ್‌ ಅಸಮತೋಲನ ಉಂಟಾಗಿ ಈ ಸಮಸ್ಯೆ ಎದುರಾಗುತ್ತೆ.ಇದು ಆನುವಂಶಿಕ ಸಮಸ್ಯೆಯಾಗಿದ್ದು,ಬಹುತೇಕ ಮಹಿಳೆಯರಿಗೆ ತಮಗೆ ಪಿಸಿಒಎಸ್‌ ಸಮಸ್ಯೆಯಿದೆ ಎಂಬುದೇ ತಿಳಿದಿರೋದಿಲ್ಲ.ಪಿಸಿಒಎಸ್‌ ಸಮಸ್ಯೆ ಮುಖ್ಯ ಲಕ್ಷಣಗಳಲ್ಲಿ ಮುಖದ ಮೇಲೆ ಕೂದಲ ಅಸಹಜ ಬೆಳವಣಿಗೆ ಕೂಡ ಒಂದು.
-ಅಡ್ರಿನಲ್‌ ಗ್ರಂಥಿ ಸಮಸ್ಯೆಯಿದ್ರೆ ಕೂಡ ಮುಖದ ಮೇಲೆ ಅತಿಯಾದ ಕೂದಲಿನ ಬೆಳವಣಿಗೆ, ತೂಕ ಹೆಚ್ಚಳ ಕಂಡುಬರುತ್ತೆ.
-ಕುಶಿಂಗ್‌ ಎಂಬ ಕಾಯಿಲೆಯಿದ್ರೆ ಆಂಡ್ರೋಜನ್‌ ಹೆಚ್ಚಿನ ಮಟ್ಟದಲ್ಲಿ ಸ್ರವಿಕೆಯಾಗೋ ಕಾರಣ ಮುಖದ ಮೇಲೆ ಹೆಚ್ಚಿನ ಕೂದಲು ಬೆಳೆಯುತ್ತೆ.
-ಅನಬೊಲಿಕ್‌ ಸ್ಟಿರಾಯ್ಡ್ಸ್‌, ಟೆಸ್ಟೋಸ್ಟೆರೋನ್‌, ಸೈಕ್ಲೋಸ್ಪೊರಿನ್‌ ಔಷಧಗಳ ಅಡ್ಡಪರಿಣಾಮಗಳಲ್ಲಿ ಮುಖದ ಮೇಲೆ ಹೆಚ್ಚು ಕೂದಲು ಬೆಳೆಯೋದು ಕೂಡ ಸೇರಿದೆ. 

ಆರಾಧ್ಯ ವಿಷಯದಲ್ಲಿ ಐಶ್ವರ್ಯ ರೈ ಸೂಪರ್‌ ಮಾಮ್ ಅಂತೆ!

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
-ಮುಖ, ಗಲ್ಲ, ಹೊಟ್ಟೆ ಹಾಗೂ ದೇಹದ ಇತರ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಕೂದಲಿನ ಅಸಹಜ ಬೆಳವಣಿಗೆ, ತೂಕದಲ್ಲಿ ದಿಢೀರ್‌ ಹೆಚ್ಚಳ, ಸ್ವರದಲ್ಲಿ ಬದಲಾವಣೆ ಕಾಣಿಸಿದಾಗ.
-ಮುಟ್ಟಿನಲ್ಲಿ ಏರುಪೇರು ಅಥವಾ ತೊಂದರೆ. 
-ಕೂದಲು ತೆಳ್ಳಗಾಗಲು ಪ್ರಾರಂಭಿಸಿದ್ರೆ.
-ತಲೆನೋವು.
-ಮುಖದ ಮೇಲೆ ಅತಿಯಾದ ಮೊಡವೆಗಳು.

ವೈದ್ಯಕೀಯ ಚಿಕಿತ್ಸೆ
-ಗಡ್ಡೆಯನ್ನು ಸರ್ಜೃರಿ ಮೂಲಕ ತೆಗೆಯೋದು.
-ಹಾರ್ಮೋನ್‌ ಮಟ್ಟವನ್ನು ಸಮತೋಲನಕ್ಕೆ ತರಲು ಆಹಾರ ಕ್ರಮದಲ್ಲಿ ಬದಲಾವಣೆ ಹಾಗೂ ವ್ಯಾಯಾಮ.
-ಆಂಡ್ರೋಜನ್‌ ಮಟ್ಟವನ್ನು ಸರಿಪಡಿಸಲು ಔಷಧಗಳು.

ಅನಗತ್ಯ ಕೂದಲಿಗೇನು ಪರಿಹಾರ
ಮುಖದ ಮೇಲಿನ ಅನಗತ್ಯ ಕೂದಲಿನಿಂದ ಮುಕ್ತಿ ಪಡೆಯಲು ಈಗಂತೂ ಅನೇಕ ವಿಧಾನಗಳಿವೆ. ಲೇಸರ್‌ ಹೇರ್‌ ರಿಮೂವಲ್‌, ವ್ಯಾಕ್ಸಿಂಗ್‌, ಕೂದಲು ತೆಗೆಯೋ ಕ್ರೀಮ್‌ಗಳು, ಶೇವಿಂಗ್‌ (ಇದ್ರಿಂದ ಮುಖದ ಮೇಲೆ ಕೂದಲು ದಪ್ಪಗೆ ಬೆಳೆಯುತ್ತೆ ಅನ್ನೋದು ಸುಳ್ಳು) ಮೂಲಕ ಮುಖದ ಮೇಲಿನ ಕೂದಲುಗಳಿಂದ ಮುಕ್ತಿ ಪಡೆಯಬಹುದು. 


 

Follow Us:
Download App:
  • android
  • ios