ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಾಲಿವುಡ್‌ನ ಸೂಪರ್‌ ಕೂಲ್‌ ಜೋಡಿ. ಬಹುಶಃ ಬಾಲಿವುಡ್‌ನ ಗಟ್ಟಿಯಾಗಿರುವ, ಸುಮಧುರ ದಾಂಪತ್ಯಗಳಲ್ಲಿ ಇವರದು ಒಂದು ಎಂದು ಹೇಳಬಹುದು. ಮದುವೆಯ ನಂತರ ಅಭಿಷೇಕ್ ಬಚ್ಚನ್‌ ಕೂಡ ಸಾಕಷ್ಟು ಹಿಟ್‌ ಫಿಲಂಗಳನ್ನು ಕೊಟ್ಟಿಲ್ಲ. ಐಶ್ವರ್ಯಾ ರೈ ಕೂಡ ಹೆಚ್ಚಿ ಫಿಲಂಗಳನ್ನು ನಟಿಸಿಲ್ಲ. ಮಗಳು ಆರಾಧ್ಯ ಹುಟ್ಟಿದ ಮೇಲಂತೂ ಇಲ್ಲವೇ ಇಲ್ಲ. ಹೀಗಾಗಿ ಫ್ಯಾಮಿಲಿಗೆ ಕೊಡುವುದಕ್ಕೆ ಬೇಕಾದಷ್ಟು ಟೈಮ್‌ ಇಬ್ಬರಿಗೂ ಸಿಕ್ಕಿದೆ. ಹೀಗಾಗಿ ಫ್ಯಾಮಿಲಿಗೆ ಸಮಯ ಕೊಡ್ತಿಲ್ಲಾಂತ ಒಬ್ಬರು ಇನ್ನೊಬ್ಬರ ಮೇಲೆ ಕಂಪ್ಲೇಂಟ್‌ ಮಾಡುವುದಾಗಲೀ, ತಕರಾರು ತೆಗೆಯುವುದಾಗಲೀ, ಮುನಿಸಿಕೊಂಡು ಹೋಗುವುದಾಗಲೀ ಇಲ್ಲವೇ ಇಲ್ಲ.

ಮಗಳೂ ಆರಾಧ್ಯ ವಿಷಯದಲ್ಲಂತೂ ಐಶ್ವರ್ಯಾ ರೈ ತುಂಬ ಕೂಲ್‌ ಕೂಲ್ ತಾಯಿ. ಜೊತೆಗೆ ಕಟ್ಟುನಿಟ್ಟಿನ ಕಣ್ಗಾವಲು ಇಟ್ಟಿರುವ ಸೂಪರ್‌ಮಾಮ್‌ ಕೂಡ. ಈಕೆಯ ಕಣ್ಣು ತಪ್ಪಿಸಿ ಮನೆಯಲ್ಲಿ ಆರಾಧ್ಯಳ ಊಟ ತಿಂಡಿ ಆರೈಕೆಗೆ ಸಂಬಂಧಿಸಿದಂತೆ ಯಾವುದೂ ನಡೆಯುವುದಿಲ್ಲ. ಇದೇ ನವಂಬರ್‌ನಲ್ಲಿ ಆರಾಧ್ಯಳಿಗೆ ಒಂಬತ್ತು ವರ್ಷ ತುಂಬುತ್ತದೆ. ಈ ಒಂಬತ್ತು ವರ್ಷದಲ್ಲಿ ಐಶ್ವರ್ಯಾ, ಆರಾಧ್ಯಳನ್ನು ಸಾರ್ವಜನಿಕ ಸುತ್ತಾಟಕ್ಕೆ ಕರೆದುಕೊಂಡು ಬಂದಿರುವುದು ಕಡಿಮೆ. ಆದರೆ ಅಭಿಷೇಕ್- ಐಶ್ವರ್ಯಾ ಇಬ್ಬರೂ ತಮ್ಮ ಮುದ್ದಿನ ಮಗಳ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಹಿಂದೊಮ್ಮೆ ಕ್ಯಾನೆ ಫಿಲಂ ಫೆಸ್ಟಿವಲ್‌ಗೂ ಆರಾಧ್ಯಳನ್ನು ಐಶ್ವರ್ಯಾ ಕರೆದುಕೊಂಡು ಹೋಗಿದ್ದುಂಟು. ಆದರೆ ತೈಮೂರ್ ಮುಂತಾದವರ ಹಾಗೆ ಆರಾಧ್ಯ ಸೆಲೆಬ್ರಿಟಿ ಕಿಡ್‌ ಆಗದಂತೆ ನೋಡಿಕೊಳ್ಳುವುದರಲ್ಲಿ ಐಶ್‌ ಯಶಸ್ವಿಯಾಗಿದ್ದಾಳೆ. ಆಕೆಯ ಮೇಲೆ ಮೀಡಿಯಾ ಕಣ್ಣು ಅತಿಯಾಗಿ ಬೀಳಬಾರದು ಎಂದು ಅಭಿ- ಐಶ್ ನಿರ್ಧಾರ. ಹಾಗಾಗಿಯೇ  ಆಕೆಯನ್ನು ಪಾರ್ಟಿಗಳಿಗೆ ಕರೆದೊಯ್ಯುವುದು, ಸಿನಿಮಾ ರಂಗದ ಬಗ್ಗೆ ಈಗಿನಿಂದಲೇ ಫೀಡ್‌ ಮಾಡುವುದು, ಮೇಕಪ್‌ ಮಾಡುವುದು ಮುಂತಾದವೆಲ್ಲಾ ಇಲ್ಲ. 

ಬಚ್ಚನ್ ಮನೆಯಲ್ಲಿ ಆರಾಧ್ಯಳೇ ಹೀರೋಯಿನ್ ! 
ಸ್ವತಃ ಅಮಿತಾಭ್‌ ಮನೆಯಲ್ಲಿ ಮಕ್ಕಳಿಗೆ ಸಿನಿಮಾ ರಂಗದ ಬಗ್ಗೆ ಪ್ರಜ್ಞಾಪೂರ್ವಕ ಫೀಡಿಂಗ್‌ ಇರಲಿಲ್ಲ. ಅಭಿಷೇಕ್‌ ಇದನ್ನು ಹೇಳಿಕೊಳ್ಳುತ್ತಾರೆ. ಅಭಿಗೆ ಸಿನಿಮಾ ಮ್ಯಾಗಜಿನ್‌ ಕೂಡ ಓದಿ ಗೊತ್ತಿರಲಿಲ್ಲ. ಅಭಿಷೇಕ್ ಮೊದಲ ಬಾರಿಗೆ ಸಿನಿಮಾ ಮ್ಯಾಗಜಿನ್‌ ನೋಡಿದ್ದು ಹದಿನೆಂಟನೇ ವಯಸ್ಸಿನಲ್ಲಿ. ಅಂದರೆ ಅಲ್ಲಿಯವರೆಗೂ ಬಿಗ್‌ ಬಿ ತಮ್ಮ ಮಗನನ್ನು ಶೋಬಿಝ್‌ನಿಂದ ರಕ್ಷಿಸಿಕೊಂಡಿದ್ದರು. ಇದೇ ಕ್ರಮವನ್ನೇ ಐಶ್- ಅಭಿ ಜೋಡಿ ತಮ್ಮ ಮಗಳ ವಿಷಯದಲ್ಲಿ ಅನುಸರಿಸುತ್ತಿದೆ.

ದೇಶದ ಪ್ರಧಾನಿಯಾಗಲಿದ್ದಾರೆ ಬಚ್ಚನ್ ವಂಶದ ಕುಡಿ 
ಐಶ್ವರ್ಯ ಮಗಳನ್ನು ಬಿಟ್ಟಿರುವುದು ಕಡಿಮೆ. ಆಕೆಯ ದೇಖರೇಖಿಗಳನ್ನೆಲ್ಲ ತಾಯಿಯೇ ನೋಡಿಕೊಳ್ಳುತ್ತಾಳೆ. ಮಗಳನ್ನು ನೋಡಿಕೊಳ್ಳುವುದಕ್ಕಾಗಿಯೇ ಯಾವ ಆಳುಗಳನ್ನೂ ಇಟ್ಟಿಲ್ಲವಂತೆ. ಉಳಿದಂತೆ, ಶೂಟಿಂಗ್ ಇದ್ದಾಗ ಐಶ್‌ ಮಗಳನ್ನು ತಮ್ಮ ಜತೆಗೇ ಕರೆದೊಯ್ಯುತ್ತಾರೆ. ಶೂಟಿಂಗ್‌ ನಡೆಯುವಾಗ ಆರಾಧ್ಯ ವ್ಯಾನ್‌ನಲ್ಲೇ ಇರುತ್ತಾಳೆ. ಲಂಚ್‌ ಟೈಮ್‌ನಲ್ಲಿ ಇಬ್ಬರೂ ಆಟವಾಡುತ್ತಾರೆ. ನಂತರ ಮತ್ತೆ ಮನೆಗೆ ಮರಳುವ ಸಮಯ, ಟ್ರಾಫಿಕ್‌ನಿಂದಾಗಿ ತಡವಾಗುವುದರಿಂದ ವ್ಯಾನ್‌ನಲ್ಲೇ ಪದ್ಯ ಹೇಳಲು, ಆಟವಾಡಲು ಸಾಕಷ್ಟು ಸಮಯ ಸಿಗುತ್ತಂತೆ. ಸಾಧ್ಯವಾದಷ್ಟು ನಾರ್ಮಲ್ ತಾಯಿ- ಮಗಳಾಗಿರಲು ಐಶ್‌ ಪ್ರಯತ್ನ ಪಡುತ್ತಾರೆ. ಬೆಳಗ್ಗೆ ಶಾಲೆಗೆ ಆರಾಧ್ಯಳನ್ನು ಬಿಡಲು ಐಶ್ವರ್ಯಾನೇ ಹೋಗುತ್ತಾರೆ. ಮಾರ್ಕೆಟ್, ಪಾರ್ಕ್‌ಗಳಿಗೂ ಆರಾಧ್ಯಳನ್ನು ಕರೆದುಕೊಂಡು ಹೋಗುತ್ತಾರೆ. ಸಮಾಜ ಜೀವನವನ್ನು ಮಗಳಿಗೆ ಕಲಿಸಿಕೊಡಲು ಈಗಿನಿಂದಲೇ ಪ್ರಯತ್ನಿಸುತ್ತಿದ್ದಾರೆ ಐಶ್‌.

ಆರಾಧ್ಯ ಕಾಪಿ ಮಾಡಿದ್ಲು ಅಮ್ಮನ ಪೋಸ್, ಅಭಿಷೇಕ್ ಬಚ್ಚನ್ ಫುಲ್ ಖುಷ್