Asianet Suvarna News Asianet Suvarna News

ಎಷ್ಟೊಳ್ಳೆ ಮಗ ಇದು...ಅಂತ ಅಜ್ಜಿ ಮುದ್ದಿಸ್ತಾ ಇದ್ರೆ ಮಡಲಲ್ಲೇ ನಿದ್ರೆ ಹೋಯ್ತು ನಾಯಿಮರಿ

ಸಾಕುಪ್ರಾಣಿಗಳ ಪ್ರೀತಿ ಮನಸ್ಸನ್ನು ಅರಳಿಸುತ್ತದೆ. ಅವುಗಳಿಗೂ ತನ್ನನ್ನು ಸಾಕಿರುವವರ ಮೆಚ್ಚುಗೆ, ಪ್ರೀತಿ ಅಗತ್ಯ. ನಾಯಿಮರಿಯೂ ಇದಕ್ಕೆ ಹೊರತಲ್ಲ. ಇದೀಗ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋವೊಂದು ಇದನ್ನೇ ಹೇಳುತ್ತದೆ. 
 

Viral video elderly woman and dog goes viral netizens surprised sum
Author
First Published Nov 25, 2023, 5:15 PM IST

ಸಾಕುಪ್ರಾಣಿಗಳೊಂದಿಗಿನ ಒಡನಾಟ ಭಾರೀ ಮುದ ನೀಡುವಂಥದ್ದು. ಹಸು, ನಾಯಿ, ಬೆಕ್ಕುಗಳನ್ನು ಸಾಕಿ ಅಭ್ಯಾಸವಾದ ಜನರಿಗೆ ಅವುಗಳಿಲ್ಲದೆ ಜೀವನ ಬೋರೆನಿಸುತ್ತದೆ. ಎಷ್ಟೋ ಜನರಿಗೆ ಅವೂ ತಮ್ಮ ಮನೆಯ ಸದಸ್ಯನಂತೆ ಆಗಿರುತ್ತವೆ. ಮೂಕ ಪ್ರಾಣಿಗಳಾಗಿದ್ದರೂ ಅವುಗಳೊಂದಿಗೆ ಮಾತನಾಡುತ್ತ, ತಮ್ಮ ಸುಖದುಃಖವನ್ನು ಹಂಚಿಕೊಳ್ಳುತ್ತಾರೆ. ಮಹಿಳೆಯರು ಈ ವಿಚಾರದಲ್ಲಿ ಒಂದು ಕೈ ಹೆಚ್ಚು. ಕೊಟ್ಟಿಗೆಯ ಹಸುಗಳೊಂದಿಗೆ ಅಪೂರ್ವ ಸಂಬಂಧ ಹೊಂದಿರುವ ಮಹಿಳೆಯರಿದ್ದಾರೆ. ಸಾಕುಪ್ರಾಣಿಗಳು ಎಷ್ಟೋ ಬಾರಿ ತಮ್ಮ ಮನೆಯ ಜನರ ಜೀವರಕ್ಷಕವಾಗುತ್ತವೆ. ಅಂತಹ ಸಂದರ್ಭಗಳೂ ಸಾಕಷ್ಟು ಕಾಣುತ್ತೇವೆ. ಇತ್ತೀಚೆಗೆ ಅಂತರ್ಜಾಲದಲ್ಲಿ ಒಂದು ವೀಡಿಯೋ ಬಹಳ ವೈರಲ್ ಆಗಿದೆ. ಅದರಲ್ಲಿ ಅಜ್ಜಿಯೊಬ್ಬರು ನಾಯಿಯೊಂದನ್ನು ಸಂತೈಸುತ್ತಿದ್ದಾರೆ. ಅವರ ಸಂತೈಕೆಯಿಂದ ಹಿತವಾದ ಆ ನಾಯಿ ಅವರ ಮಡಿಲಲ್ಲೇ ಮಲಗಿ ನಿದ್ದೆ ಹೋಗುತ್ತದೆ. ಈ ವೀಡಿಯೋ ನೋಡಿದರೆ ಅವರ ಬಾಂಧವ್ಯ ಅನುಭವಕ್ಕೆ ಬರುತ್ತದೆ. 

ಆಸ್ಟ್ರೊಆಂಡ್ ನಾನಿ ಎನ್ನುವ ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೆಯಾಗಿರುವ ಈ ವೀಡಿಯೋ (Video) ಭಾರೀ ಮನ್ನಣೆ ಗಳಿಸಿದೆ. ಹೃದಯ ಬೆಚ್ಚಗಾಗಿಸುವ ವೀಡಿಯೋ ಇದಾಗಿದ್ದು, ಮೂಕ ಪ್ರಾಣಿಗಳಲ್ಲೂ ಮಿಡಿಯುವ ಮನಸ್ಸಿರುತ್ತದೆ ಎನ್ನುವುದು ಸಾಬೀತಾಗುತ್ತದೆ. ಈ ವೀಡಿಯೋದಲ್ಲಿ ಪ್ರೀತಿಯ ಮಾತುಗಳನ್ನಾಡುವ ಅಜ್ಜಿ (Elder Woman) ಹಾಗೂ ಆಕೆಯ ಮಡಿಲಲ್ಲಿ ಮಲಗಿರುವ ಪುಟ್ಟ ನಾಯಿ (Dog) ಇವೆ.
ವೀಡಿಯೋದಲ್ಲಿರುವ ನಾಯಿ ಅತ್ತ ಮರಿಯೂ ಇಲ್ಲ, ಇತ್ತ ದೊಡ್ಡದೂ ಅಲ್ಲದ ಮಧ್ಯಮ ವಯಸ್ಸಿನದ್ದು. ಹೀಗಾಗಿ, ಅದು ಬಹುಶಃ ತುಂಟತನವನ್ನೂ ಮಾಡುವಂತೆ ತೋರುತ್ತದೆ. ಅದಕ್ಕಾಗಿಯೇ ಅದನ್ನು ಸಾಕಿದವರು ಅದಕ್ಕೆ ಬೈದಿರಬೇಕು. ಹೀಗಾಗಿ, ಅದರ ಮನಸ್ಸು ಮುದುಡಿದೆ. ಅದನ್ನು ಕಂಡ ಅಜ್ಜಿ ತನ್ನ ಮಡಿಲಲ್ಲಿ ಮಲಗಿಸಿಕೊಂಡು, ಪ್ರೀತಿಯ (Love) ಮಾತುಗಳನ್ನಾಡುತ್ತಾರೆ. 

ವೀಸಾ ಕಚೇರಿಯಲ್ಲಿ ಪೋರ್ನ್‌ ವಿಡಿಯೋ ಪ್ರಸಾರ: ಕ್ಯೂ ನಿಂತಿದ್ದ ಜನರು ಶಾಕ್; ವಿಡಿಯೋ ವೈರಲ್‌

ಕಿತನಾ ಅಚ್ಚಾ ಹೈ ಬಚ್ಚಾ!
“ಕಿತನಾ ಅಚ್ಚಾ ಹೈ ಯೆ ಬಚ್ಚಾ’ ಎಂದು ಅದರ ಬೆನ್ನ ಮೇಲೆ ಹಿತವಾಗಿ (Smooth) ಕೈಯಾಡಿಸುತ್ತಾರೆ. ಅವರ ಮೆಚ್ಚುಗೆಯ ಮಾತುಗಳು, ಹಿತವಾದ (Adorable) ಸ್ಪರ್ಶದಿಂದ ನಾಯಿ ಅಜ್ಜಿಯ ಮಡಿಲಲ್ಲೇ ಸಣ್ಣದಾಗಿ ನಿದ್ದೆ (Sleep) ಹೋಗುತ್ತದೆ. 

ಕೆಲವೇ ದಿನಗಳ ಹಿಂದೆ ಶೇರ್ (Share) ಆಗಿರುವ ಈ ವೀಡಿಯೋ ಈಗ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಇದು ಬಹಳ ಬೇಗ ಎಲ್ಲರ ಗಮನ ಸೆಳೆದಿದ್ದು, 32 ಸಾವಿರಕ್ಕೂ ಅಧಿಕ ಲೈಕ್ಸ್ (Likes) ಬಂದಿವೆ. ಬಹಳಷ್ಟು ಜನ  ಹೃದಯತುಂಬಿದ ಮೆಸೇಜುಗಳನ್ನು ಮಾಡುತ್ತಿದ್ದಾರೆ. ಈ ಮೆಸೇಜುಗಳು ನೋಡುಗರ ಭಾವನೆಗಳನ್ನು ಬಿಂಬಿಸುವಂತಿವೆ. ನಾಯಿಗೆ ತಾವು ಸಹಾಯ ಮಾಡುವಂತಿಲ್ಲದಿದ್ದರೂ ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸದಿರಲು ಸಾಧ್ಯವಿಲ್ಲ ಎನ್ನುವಂತೆ ಹಲವು ಕಾಮೆಂಟ್ (Comments) ಮಾಡುತ್ತಿದ್ದಾರೆ. 

'ಅಪ್ಪ ರೂಂನಲ್ಲಿದ್ದಾರೆ, ಇನ್ನೊಂದು ತಿಂಗಳಲ್ಲಿ....': ರೋಹಿತ್ ಶರ್ಮಾ ಮಗಳು ಸಮೈರಾ ಮುದ್ದಾದ ವಿಡಿಯೋ ವೈರಲ್..!

ಮೆಚ್ಚುಗೆಯ ಕಾಮೆಂಟ್ 
ಒಬ್ಬಾತ ತನ್ನ ಕಾಮೆಂಟ್ ನಲ್ಲಿ “ನಾನಿ, ನನಗೂ ನಿಮ್ಮ ಪ್ರೀತಿ ಮತ್ತು ಆಶೀರ್ವಾದ (Blessings) ಬೇಕು’ ಎಂದು ಹೇಳಿದ್ದರೆ, ಮತ್ತೊಬ್ಬರು “ಇದು ನಿಜಕ್ಕೂ ಆರೋಗ್ಯಕರ’ ಎಂದು ಹೇಳಿದ್ದಾರೆ. 
ಮೂರನೇ ಕಾಮೆಂಟ್ “ಸೋ ಕ್ಯೂಟ್ (Cute), ತುಂಬ ಮುದ್ದಾಗಿದೆ’ ಎಂದು ಹೇಳಿದೆ. ಅಜ್ಜಿ ಮತ್ತು ನಾಯಿಯ ಇಬ್ಬರ ನಡುವಿನ ಸಂವಹನವನ್ನು (Communication) ಅರ್ಥಮಾಡಿಕೊಂಡವರಂತೆ ಹೇಳಿರುವ ಮತ್ತೊಂದು ಕಾಮೆಂಟ್ ನಲ್ಲಿ, “ಈ ನಾಯಿ ಅಜ್ಜಿ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಿದೆ’ ಎಂದು ಮೆಚ್ಚಿಕೊಂಡಿದ್ದರೆ, ಮತ್ತೊಬ್ಬರು, “ಎಷ್ಟು ಪ್ರೀತಿಯ ಅಜ್ಜಿ ಹಾಗೂ ಮುದ್ದಾದ ನಾಯಿ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios