Asianet Suvarna News Asianet Suvarna News

'ಅಪ್ಪ ರೂಂನಲ್ಲಿದ್ದಾರೆ, ಇನ್ನೊಂದು ತಿಂಗಳಲ್ಲಿ....': ರೋಹಿತ್ ಶರ್ಮಾ ಮಗಳು ಸಮೈರಾ ಮುದ್ದಾದ ವಿಡಿಯೋ ವೈರಲ್..!

ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದ ನಾಯಕ ರೋಹಿತ್ ಶರ್ಮಾ, 'ಈ ದಿನ ನಮ್ಮದಾಗಿರಲಿಲ್ಲ' ಎಂದಿದ್ದರು. ಇದಾದ ಬಳಿಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮಾಧ್ಯಮಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ಈ ಹಿಂದೆ ರೋಹಿತ್ ಶರ್ಮಾ ಅವರ 5 ವರ್ಷದ ಮಗಳು ಸಮೈರಾ ನೀಡಿರುವ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಲ್ಲಿ ಸಾಕಷ್ಟು ವೈರಲ್ ಆಗಿದೆ.

Team India Captain Rohit Sharma daughter Samaira old adorable video now goes viral kvn
Author
First Published Nov 24, 2023, 4:11 PM IST

ನವದೆಹಲಿ(ನ.24): ತವರಿನಲ್ಲಿ ದಶಕದ ಬಳಿಕ ಐಸಿಸಿ ಟೂರ್ನಿ ಗೆಲ್ಲಬೇಕು ಎನ್ನುವ ಭಾರತ ತಂಡದ ಕನಸು ನುಚ್ಚುನೂರಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಅಜೇಯವಾಗಿಯೇ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿ ನಿರಾಸೆ ಅನುಭವಿಸಿತು. 

ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದ ನಾಯಕ ರೋಹಿತ್ ಶರ್ಮಾ, 'ಈ ದಿನ ನಮ್ಮದಾಗಿರಲಿಲ್ಲ' ಎಂದಿದ್ದರು. ಇದಾದ ಬಳಿಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮಾಧ್ಯಮಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ಈ ಹಿಂದೆ ರೋಹಿತ್ ಶರ್ಮಾ ಅವರ 5 ವರ್ಷದ ಮಗಳು ಸಮೈರಾ ನೀಡಿರುವ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಲ್ಲಿ ಸಾಕಷ್ಟು ವೈರಲ್ ಆಗಿದೆ.

ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌!

ಹೌದು, ರೋಹಿತ್ ಶರ್ಮಾ ಪತ್ನಿ ರಿತಿಕಾ ತಮ್ಮ ಮಗಳೊಂದಿಗೆ ಹೋಟೆಲ್‌ನಿಂದ ಹೊರಬರುವ ಸಂದರ್ಭದಲ್ಲಿ ಮಾಧ್ಯಮದ ವ್ಯಕ್ತಿಯೊಬ್ಬರು, ರೋಹಿತ್ ಮಗಳನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆಗ ಸಮೈರಾ ನೀಡಿದ ಮುಗ್ಧ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೊಂದು ಹಳೆಯ ವಿಡಿಯೋವಾಗಿದ್ದು, ರೋಹಿತ್ ಶರ್ಮಾ ಹಾಗೂ ಮತ್ತವರ ಕುಟುಂಬ ಇಂಗ್ಲೆಂಡ್‌ನಲ್ಲಿದ್ದಾಗ, ರೋಹಿತ್‌ಗೆ ಕೋವಿಡ್ ತಗುಲಿದ ಸಂದರ್ಭದಲ್ಲಿ ಮಾಡಿದ ವಿಡಿಯೋವಾಗಿದ್ದು, ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಲಾರಂಭಿಸಿದೆ.

ಆ ಸಂಭಾಷಣೆ ಹೀಗಿದೆ ನೋಡಿ:

ವರದಿಗಾರ: ನಿಮ್ಮ ಅಪ್ಪ ಎಲ್ಲಿದ್ದಾರೆ?

ಸಮೈರಾ: ಅವರು ಅವರ ರೂಂನಲ್ಲಿದ್ದಾರೆ.

ವರದಿಗಾರ: ಈಗ ಅವರು ಆರೋಗ್ಯವಾಗಿದ್ದಾರೆ ತಾನೆ?

ಸಮೈರಾ: ಅವರು ಬಹುತೇಕ ಪಾಸಿಟಿವ್ ಆಗಿದ್ದಾರೆ. ಆದರೆ ಇನ್ನೊಂದು ತಿಂಗಳಿನಲ್ಲಿ ಅವರು ನಗೆಯಾಡುತ್ತಾರೆ.

2024ರ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್‌..!

ಹೀಗಿತ್ತು ನೋಡಿ ಆ ವಿಡಿಯೋ:

ಇನ್ನು ವಿಶ್ವಕಪ್ ಟೂರ್ನಿಯ ಬಗ್ಗೆ ಹೇಳುವುದಾದರೇ, ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್‌ ಪ್ರವೇಶಿಸಿತ್ತು. ರೋಹಿತ್ ಶರ್ಮಾ ಓರ್ವ ನಾಯಕನಾಗಿ ಮಾತ್ರವಲ್ಲದೇ ತಂಡಕ್ಕೆ ಆರಂಭಿಕನಾಗಿಯೂ ಸ್ಪೋಟಕ ಆರಂಭ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 11 ಪಂದ್ಯಗಳನ್ನಾಡಿದ ರೋಹಿತ್ ಶರ್ಮಾ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 54.27ರ ಬ್ಯಾಟಿಂಗ್ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ, ಐಸಿಸಿ ಟೀಂ ಆಫ್‌ ದಿ ಟೂರ್ನಮೆಂಟ್‌ನಲ್ಲೂ ನಾಯಕನಾಗಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
 

Follow Us:
Download App:
  • android
  • ios