ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?
ಹೆಣ್ಣು ಗರ್ಭಿಣಿ (Pregnant) ಯಾಗಿದ್ದಾಗಲೇ ಇನ್ನೊಮ್ಮೆ ಗರ್ಭ ಧರಿಸೋಕೆ ಸಾಧ್ಯಾನ ? ಅರೆ ಅದು ಹೇಗೆ ಸಾಧ್ಯ ಅನ್ಬೋದು ನೀವು. ಆದ್ರೆ ನಿಜವಾಗಿಯೂ ಇಂಥಹದ್ದೊಂದು ಘಟನೆ ಟೆಕ್ಸಾಸ್ (Texas)ನಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದಾಗಲೇ ಮಹಿಳೆ (Woman) ಮತ್ತೊಮ್ಮೆ ಗರ್ಭಿಣಿಯಾಗಿದ್ದಾಳೆ.
ಹೆಣ್ಣಿನ (Woman) ಗರ್ಭದಲ್ಲಿ ಪುಟ್ಟ ಜೀವವೊಂದು ರೂಪುಗೊಳ್ಳುವ ಪ್ರಕ್ರಿಯೇ ಅದ್ಭುತ. ಆದ್ರೆ ಇದು ಕೆಲವೊಮ್ಮೆ ಇನ್ನೂ ಅತ್ಯದ್ಭುತಗಳಿಗೆ ಸಾಕ್ಷಿಯಾಗುತ್ತದೆ. ಎಲ್ಲರನ್ನೂ ನಿಬ್ಬೆರಗೊಳಿಸುತ್ತದೆ. ಗರ್ಭಿಣಿ (Pregnant) ಅವಳಿ ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯ. ಕೆಲವೊಮ್ಮೆ ಮೂರು ಮಕ್ಕಳಿಗೆ, ಇನ್ನೂ ಕೆಲವೊಮ್ಮೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದರ ಬಗ್ಗೆ ನಾವು ಕೇಳಿದ್ದೇವೆ. ಇಂಥವರನ್ನು ಮಹಾತಾಯಿ ಎಂದು ಕೊಂಡಾಡಲಾಗುತ್ತದೆ. ಆದ್ರೆ ಒಬ್ಬ ಮಹಿಳೆ ಗರ್ಭಿಣಿಯಾಗಿರುವಾಗಲೇ ಮತ್ತೊಮ್ಮೆ ಗರ್ಭಿಣಿಯಾಗಿರುವ ಬಗ್ಗೆ ನೀವು ಕೇಳಿದ್ದೀರಾ ? ಅರೆ ಇದೇನ್ ಹೇಳ್ತಿದ್ದಾರಪ್ಪಾ ಅಂತ ಬೆಚ್ಚಿಬೀಳ್ಬೇಡಿ. ನಾವ್ ಹೇಳ್ತಿರೋದು ನಿಜಾನೇ. ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೆರಿಕಾದ ಟೆಕ್ಸಾಸ್ (Texas)ನಲ್ಲಿ ಇಂಥಹದ್ದೊಂದು ಘಟನೆ ನೈಜವಾಗಿ ನಡೆದಿದೆ. 30 ವರ್ಷದ ಅಮೆರಿಕದ (America) ಮಹಿಳೆಯೊಬ್ಬಳು ಇಂತಹ ಒಂದು ಅಪರೂಪದ ಗರ್ಭಧಾರಣೆಯನ್ನು ಅನುಭವಿಸಿದ ನಂತರ ತದ್ರೂಪಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮಹಿಳೆ ಟೆಕ್ಸಾಸ್ ನ ಕಾರಾ ವಿನ್‌ಹೋಲ್ಡ್ ಎಂದು ಹೇಳಲಾಗುತ್ತಿದೆ ಮತ್ತು ಇವರ ಈ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ.
ಗರ್ಭಿಣಿ ಸೆಕ್ಸ್‌ನಲ್ಲಿ ತೊಡಗಿದರೆ ಹೊಟ್ಟೆಯಲ್ಲಿರೋ ಮಗು ಚಡಪಡಿಸುವುದೇಕೆ?
ವಿನ್‌ಹೋಲ್ಡ್ ಅವರು ಮೊದಲು ಮೂರು ಬಾರಿ ಗರ್ಭಪಾತಗಳನ್ನು ಅನುಭವಿಸಿದ್ದರು. ಇತ್ತೀಚಿಗೆ ಅವರು ಗರ್ಭಿಣಿಯಾಗಿರುವುದಾಗಿ ವೈದ್ಯರು ತಿಳಿಸಿದರು. ಮಾತ್ರವಲ್ಲ ಗರ್ಭಿಣಿಯಾಗಿದ್ದ ಸಮಯದಲ್ಲಿ ಮತ್ತೊಮ್ಮೆ ಗರ್ಭಿಣಿಯಾದ ಸುದ್ದಿಯನ್ನು ವೈದ್ಯರು ಬಹಿರಂಗಪಡಿಸಿದರು. ಗರ್ಭಿಣಿ ಆದಾಗ ಮತ್ತೊಮ್ಮೆ ಗರ್ಭಿಣಿ ಆಗುವುದು ಹೇಗೆ ಅಂತ ನೀವು ತಲೆ ಕೆಡಿಸಿಕೊಂಡಿದ್ದರೆ. ಮುಂದೆ ಓದಿ..
ಹೆಲ್ತ್‌ಲೈನ್ ಪ್ರಕಾರ, ಈ ಸ್ಥಿತಿಯನ್ನು ‘ಸೂಪರ್ಫೆಟೇಶನ್’ ಎಂದು ಕರೆಯಲಾಗುತ್ತದೆ. ಆರಂಭಿಕ ಗರ್ಭಧಾರಣೆಯ ಸಮಯದಲ್ಲಿ ಹೊಸ ಗರ್ಭಧಾರಣೆಯು ಸಂಭವಿಸಿದಾಗ ಹೀಗಾಗುತ್ತದೆ. ಮೊದಲ ಗರ್ಭಧಾರಣೆಯ ನಂತರ ಕೆಲವು ದಿನಗಳು ಅಥವಾ ವಾರಗಳ ನಂತರ ಎರಡನೆಯದು ಸಂಭವಿಸಬಹುದು.
ನಾನು ವೈದ್ಯರಿಗೆ ಏನಾಯಿತು ಎಂದು ಕೇಳಿದಾಗ, ಅವರು ನನಗೆ ಮೊದಲ ಬಾರಿ ನನ್ನನ್ನು ಪರೀಕ್ಷಿಸಿದಾಗ ಗರ್ಭಿಣಿ ಆಗಿರುವುದು ಗೊತ್ತಾಗಿತ್ತು, ಆದರೆ ಮತ್ತೊಮ್ಮೆ ಹೋದಾಗ ನಾನು ಎರಡು ಬಾರಿ ಸಂತಾನೋತ್ಪತ್ತಿ ಮಾಡಿದ್ದೇನೆ, ಮತ್ತು ಅವು ಸುಮಾರು ಒಂದು ವಾರದ ಅಂತರದಲ್ಲಿ ವಿವಿಧ ಸಮಯಗಳಲ್ಲಿ ಸಂತಾನೋತ್ಪತ್ತಿ ಮಾಡಿವೆ ಎಂದು ವೈದ್ಯರು ನನಗೆ ಹೇಳಿದರು ಎಂದು ವಿನ್‌ಹೋಲ್ಡ್ ಹೇಳಿದ್ದಾರೆ. ನನ್ನ ಗರ್ಭಾವಸ್ಥೆಯ ಪ್ರಯಾಣದಲ್ಲಿ ನಡೆದ ಘಟನೆಗಳಿಂದಾಗಿ ಇದು ಪವಾಡವೇ ಎಂದು ನನಗನಿಸುತ್ತಿದೆ ಎಂದು ವಿನ್‌ಹೋಲ್ಡ್ ಹೇಳಿದ್ದಾರೆ.
Women Care : ತಾಯಿಯಾಗದ ಮಹಿಳೆಯರಿಗೆ ಹೃದಯಾಘಾತ ಹೆಚ್ಚು
ವಿನ್‌ಹೋಲ್ಡ್ ಮತ್ತು ಅವರ ಪತಿ ಇಬ್ಬರೂ ಈ ಹಿಂದೆ ಕಷ್ಟಕರವಾದ ಜೀವನವನ್ನು ಅನುಭವಿಸಿದ್ದರು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, 2018ರಲ್ಲಿ ದಂಪತಿಗೆ ಮಗ ಜನಿಸಿದನು, ನಂತರ ದಂಪತಿಗಳು ತಮ್ಮ ಎರಡನೇ ಮಗುವನ್ನು ಮಾಡಿಕೊಳ್ಳಲು ಇಷ್ಟಪಟ್ಟರು ಎಂದು ಹೇಳಲಾಗುತ್ತಿದೆ. ಆದರೆ ಇದರ ಮಧ್ಯೆ ವಿನ್‌ಹೋಲ್ಡ್ ಮೂರು ಗರ್ಭಪಾತ (Abortion)ಗಳಿಗೆ ಒಳಗಾಗಿದ್ದರು. 2019ರಲ್ಲಿ ಒಂದು ಹೆಣ್ಣು ಮಗು ಮತ್ತು 2020ರಲ್ಲಿ ಮತ್ತೊಂದು ಗರ್ಭಪಾತವಾಯಿತು.
ಪೋಸ್ಟ್ ವರದಿಯ ಪ್ರಕಾರ, ಕೊನೆಯ ಮಗು ಜನಿಸಿದ್ದಾಗ ವಿನ್‌ಹೋಲ್ಡ್ ತುಂಬಾನೇ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೆಲ್ಲಾ ನಡೆದಿರುವುದರಿಂದ ದಂಪತಿ (Couple)ಗಳಿಬ್ಬರು ಅವರು ಭರವಸೆಯನ್ನು ಕಳೆದು ಕೊಂಡಿದ್ದರು. ಆದರೆ ಇದೆಲ್ಲದರ ಮಧ್ಯೆ ಗರ್ಭಿಣಿಯಾಗಿರುವಾಗಲೇ ಮತ್ತೊಮ್ಮೆ ಗರ್ಭಧಾರಣೆ ಮಾಡಿದ ಮಹಿಳೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ದಂಪತಿಗಳಲ್ಲಿ ಸಂತಸಗೊಂಡಿದ್ದಾರೆ.