Women Care : ತಾಯಿಯಾಗದ ಮಹಿಳೆಯರಿಗೆ ಹೃದಯಾಘಾತ ಹೆಚ್ಚು

Women Healthcare tips in Kannada: ನಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತವೆ. ಈಗ ಹೊಸ ಸಂಶೋಧನೆಯೊಂದು ಮಹಿಳೆಯರಿಗೆ ಎಚ್ಚರಿಕೆ ನೀಡಿದೆ. ತಾಯಿಯಾಗದ ಮಹಿಳೆಯರಿಗೆ ಹೃದಯ ಸಂಬಂಧಿ ಸಮಸ್ಯೆ ಹೆಚ್ಚು ಕಾಡಲಿದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಸಂಶೋಧಕರು ಹೇಳಿದ್ದಾರೆ.
 

Women Who Are Unable To Become Mothers Are At Higher Risk Of Heart Attack

ತಾಯಿ (Mother) ಯಾಗುವುದು ಮಹಿಳೆ (Woman) ಯ ಜೀವನ (Life) ದ ಮಹತ್ವದ ಘಟ್ಟ.  ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅನೇಕ ಮಹಿಳೆಯರಿಗೆ ಮಗು (Child ) ಪಡೆಯಲು ಸಾಧ್ಯವಾಗ್ತಿಲ್ಲ. ಒಂದಲ್ಲ, ಎರಡಲ್ಲ ಅನೇಕ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳಾಗದ ಮಹಿಳೆಯರು ಮಾನಸಿಕ ಹಿಂಸೆ ಅನುಭವಿಸುವುದು ಸಾಮಾನ್ಯ ಸಂಗತಿ. ಆದ್ರೆ ಈಗ ಮತ್ತೊಂದು ಆಘಾತಕಾರಿ ಸಂಗತಿ ಹೊರಗೆ ಬಿದ್ದಿದೆ. ಸಂತಾನಹೀನತೆ ಸಮಸ್ಯೆ ಇರುವ ಮಹಿಳೆಯರು ಹೃದಯಾಘಾತ (Heart Attack) ಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ (Research) ಯೊಂದು ತಿಳಿಸಿದೆ. ಇಂದು ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ನೀಡ್ತೇವೆ.

ಯಾವ ಮಹಿಳೆಯರಿಗೆ ಹೆಚ್ಚು ಅಪಾಯ : ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯಲ್ಲಿ ಅಧ್ಯಯನದ ಫಲಿತಾಂಶ ಪ್ರಕಟವಾಗಿದೆ. ಬಂಜೆತನ ಸಮಸ್ಯೆ ಹೊಂದಿರುವ ಮಹಿಳೆಯರು ಮಕ್ಕಳನ್ನು ಪಡೆದ ಮಹಿಳೆಯರಿಗಿಂತ ಶೇಕಡಾ 16ರಷ್ಟು  ಹೃದಯ ವೈಫಲ್ಯವನ್ನು ಹೊಂದಿರುತ್ತಾರೆ. ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಹೊಂದಿರುವ ಮಹಿಳೆಗೆ ಭವಿಷ್ಯದಲ್ಲಿ ಹೃದ್ರೋಗದ ಅಪಾಯ ಹೆಚ್ಚಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಂಶೋಧಕರು, ಎರಡು ರೀತಿಯ ಹೃದಯ ವೈಫಲ್ಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಅಡುಗೆಗೆ ಮಾತ್ರವಲ್ಲ ಮೊಡವೆಗೂ ದಿ ಬೆಸ್ಟ್ BAKING SODA

ಎರಡು ರೀತಿಯ ಹೃದಯ ವೈಫಲ್ಯ : ರಕ್ತವನ್ನು ಪಂಪ್ ಮಾಡಿದ ನಂತರ ಹೃದಯ ಸ್ನಾಯುಗಳು ಸಂಪೂರ್ಣವಾಗಿ ಹಿಗ್ಗಲು ಸಾಧ್ಯವಾಗುವುದಿಲ್ಲ. ಆಗ ಹೃದಯಾಘಾತವಾಗುತ್ತದೆ. ಇನ್ನೊಂದು ಪ್ರತಿ ಬಡಿತದ ನಂತರ ದೇಹಕ್ಕೆ ಹೋಗಬೇಕಾದ ರಕ್ತದ ಪ್ರಮಾಣವು ಹೃದಯದ ಕೆಳಗಿನ ಭಾಗಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಮಹಿಳೆಯರಲ್ಲಿ ಹೃದಯ ವೈಫಲ್ಯಕ್ಕೆ ಹೆಚ್ಚಾಗಿ HFpEF ಕಾರಣವಾಗಿರುತ್ತದೆ. 

ಮಹಿಳೆಯರು ಗಮನಿಸಬೇಕಾದ ಸಂಗತಿ : ಗರ್ಭಧಾರಣೆ ಸಮಸ್ಯೆ ಇರುವ ಮಹಿಳೆಯರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಮಹಿಳೆಯರು ಮಕ್ಕಳನ್ನು ಪಡೆಯುವು ವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆದ್ರೆ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು. ಮುಂದೆ ಹೃದಯ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. 

ಬಂಜೆತನ ಎಂದರೇನು ? : ಮಹಿಳೆಯು ಯಾವುದೇ ಕಾರಣದಿಂದ ಅಥವಾ ಯಾವುದೇ ಕೊರತೆಯಿಂದ ಗರ್ಭಿಣಿಯಾಗಲು ಸಾಧ್ಯವಾಗದಿದ್ದರೆ ಮತ್ತು ನೈಸರ್ಗಿಕವಾಗಿ ತಾಯಿಯಾಗಲು ಸಾಧ್ಯವಾಗದಿದ್ದರೆ ಅದನ್ನು ಸ್ತ್ರೀ ಬಂಜೆತನ ಎಂದು ಕರೆಯಲಾಗುತ್ತದೆ. ಕೆಲವು ಮಹಿಳೆಯರಿಗೆ ಒಂದು ಮಗುವಿಗೆ ಜನ್ಮ ನೀಡುವುದು ಸಮಸ್ಯೆಯಾಗುವುದಿಲ್ಲ. ಎರಡನೇ ಬಾರಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಬಂಜೆತನದಲ್ಲಿ ಎರಡು ವಿಧಗಳಿವೆ. 

ಉಳಿದ ಅನ್ನವನ್ನು ಬಳಸಿ ಮಲ್ಲಿಗೆಯಂತಹ ತ್ವಚೆ ಪಡೆಯಿರಿ

ಬಂಜೆತನಕ್ಕೆ ಇದು ಕಾರಣ : ಮಹಿಳೆಯರ ದೇಹದಲ್ಲಿ ಹಾರ್ಮೋನ್ ಅಸಮತೋಲನದಿಂದಲೂ ಬಂಜೆತನ ಉಂಟಾಗಬಹುದು. ದೇಹದಲ್ಲಿ ಸಾಮಾನ್ಯ ಹಾರ್ಮೋನ್ ಬದಲಾವಣೆಗಳ ಅನುಪಸ್ಥಿತಿಯಲ್ಲಿ, ಅಂಡಾಶಯದಿಂದ ಮೊಟ್ಟೆಗಳು ಬಿಡುಗಡೆಯಾಗುವುದಿಲ್ಲ. ಇದಕ್ಕೆ ಕಾರಣ ಒತ್ತಡ, ವಯಸ್ಸು, ಆಧುನಿಕ ಜೀವನಶೈಲಿ ಇತ್ಯಾದಿ. ಮಹಿಳೆಯು ತನ್ನ ಗರ್ಭಾಶಯದಲ್ಲಿ ಪಾಲಿಪ್ಸ್, ನಿಯೋಪ್ಲಾಮ್‌ಗಳು,  ಅಪಸ್ಥಾನೀಯ ಗರ್ಭಧಾರಣೆಯಂತಹ ಕೆಲವು ಸಮಸ್ಯೆಗಳನ್ನು ಹೊಂದಿದ್ದರೆ, ಅದು ಗರ್ಭಾವಸ್ಥೆಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ .ಹೆಚ್ಚಿನ ಪ್ರಮಾಣದಲ್ಲಿ ಔಷಧಗಳು ಅಥವಾ ಆಲ್ಕೋಹಾಲ್ ಸೇವನೆಯು ಫಲವತ್ತತೆಯನ್ನು ಕಡಿಮೆ ಮಾಡುತ್ತದೆ.  

ಬಂಜೆತನದ ಲಕ್ಷಣಗಳು : ಮಹಿಳೆಯ ಋತುಚಕ್ರವು 35 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಅದು ಬಂಜೆತನದ ಲಕ್ಷಣವಾಗಿರಬಹುದು. ಇದಲ್ಲದೆ, ಕೆಲವೇ ದಿನಗಳಲ್ಲಿ ಮುಟ್ಟು ಅಥವಾ 21 ದಿನಗಳ ಮೊದಲು ಮುಟ್ಟಿನ ಪ್ರಾರಂಭವನ್ನು ಅನಿಯಮಿತ ಮುಟ್ಟು ಎಂದು ಕರೆಯಲಾಗುತ್ತದೆ. ಇದು ಬಂಜೆತನಕ್ಕೆ ಕಾರಣವಾಗಬಹುದು.  

ಬಂಜೆತನ ತಪ್ಪಿಸಲು ಮಾರ್ಗ : ಮುಟ್ಟಿನಲ್ಲಿ ಬದಲಾವಣೆಯಾಗ್ತಿದ್ದರೆ ಅದನ್ನು ಗಮನಿಸಿ ಚಿಕಿತ್ಸೆ ಪಡೆಯಿರಿ. ಸಮತೋಲಿತ ಆಹಾರ ಸೇವನೆ ಮಾಡಬೇಕು. ಜಂಕ್ ಫುಡ್ ಮತ್ತು ಕರಿದ ಆಹಾರಗಳಿಂದ ದೂರವಿರಬೇಕು. ಪ್ರತಿದಿನ ಬೆಳಿಗ್ಗೆ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ಒತ್ತಡದಿಂದ ದೂರವಿರಬೇಕು.

Latest Videos
Follow Us:
Download App:
  • android
  • ios