ಗರ್ಭಿಣಿ ಸೆಕ್ಸ್‌ನಲ್ಲಿ ತೊಡಗಿದರೆ ಹೊಟ್ಟೆಯಲ್ಲಿರೋ ಮಗು ಚಡಪಡಿಸುವುದೇಕೆ?

ಮಗು ಹೊಟ್ಟೆಯಲ್ಲಿರುವಾಗ ದಂಪತಿ ಸೆಕ್ಸ್‌ನಲ್ಲಿ ತೊಡಗಿದರೆ ಸಮಸ್ಯೆಯೇನಿಲ್ಲ. ಆದರೆ ಹೊಟ್ಟೆಯಲ್ಲಿರುವ ಮಗು ಚಡಪಡಿಸಬಹುದು. ಅದೇಕೆ?
 

why child in womb becomes irritated when mother involves in intimacy

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಸುರಕ್ಷಿತವೇ ಎಂದು ಅನೇಕ ದಂಪತಿಗಳು ವೈದ್ಯರಲ್ಲಿ ಕೇಳುತ್ತಾರೆ. ವಿಶೇಷವಾಗಿ ಮೊದಲ ಮೂರು ತಿಂಗಳು ಮತ್ತು ಮೂರನೇ ತ್ರೈಮಾಸಿಕದಲ್ಲಿ. ಇದರಿಂದ ಮಗುವಿಗೆ ಹಾನಿಯಾಗಬಹುದಾ ಅಂತ ಹೆಚ್ಚಾಗಿ ಚಿಂತಿಸುತ್ತಾರೆ. ದರೆ ಎಲ್ಲ ವೈದ್ಯರೂ ಹೇಳುವುದು ಏನೆಂದರೆ, ನೀವು ಸಾಮಾನ್ಯ, ಆರೋಗ್ಯಕರ ಗರ್ಭಧಾರಣೆಯನ್ನು ಹೊಂದಿದ್ದರೆ, ಒಂಬತ್ತನೇ ತಿಂಗಳವರೆಗೂ ಸೆಕ್ಸ್ ಹೊಂದಲು ಏನೂ ತೊಂದರೆಯಿಲ್ಲ. ನೀವು ಸರಿಯಾದ ಮೂಡ್‌ನಲ್ಲಿದ್ದರೆ, ಸಂತೃಪ್ತ ಲೈಂಗಿಕತೆಯನ್ನು ಹೊಂದುವುದು ನಿಮ್ಮ ಸಂಬಂಧ ಮತ್ತು ನಿಮ್ಮ ದೇಹಕ್ಕೆ ಒಳ್ಳೆಯದು.

ಮೂಡ್ ಚೇಂಜ್‌ಗಳು (Mood Changes)
ಆದರೂ ಇದಕ್ಕಾಗಿ ಒತ್ತಡವನ್ನು (Stress) ಅನುಭವಿಸಬೇಡಿ. ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ (Pregnancy) ತಮ್ಮ ಸೆಕ್ಸ್ ಡ್ರೈವ್ ಬದಲಾಗುವುದನ್ನು ಕಂಡುಕೊಳ್ಳುತ್ತಾರೆ. ಬದಲಾಗುತ್ತಿರುವ ಭಾವನೆಗಳು (Emotions), ವಾಕರಿಕೆ (Vomitting Sensation) ಮುಂತಾದ ಗರ್ಭಾವಸ್ಥೆಯ ಅಡ್ಡಪರಿಣಾಮಗಳು, ಅಥವಾ ನಿಜವಾಗಿಯೂ ದಣಿದಿರುವುದು, ಇನ್ನಷ್ಟು ನಿದ್ರೆಗಾಗಿ ಹಂಬಲಿಸುವುದು ಇತ್ಯಾದಿ. ಆದರೆ ಗರ್ಭಿಣಿ ಈ ವಿಚಾರದಲ್ಲಿ ಪತಿಯೊಂದಿಗೆ ಮಾತಾಡುವುದು ಮುಖ್ಯ. ದಂಪತಿ ಹತ್ತಿರದಲ್ಲಿರುವುದು, ಸಂತೋಷವಾಗಿರುವುದು, ಸಂತೋಷವಾಗಿರಲು ಸಮತೋಲಿತ ಮಾರ್ಗವನ್ನು ಕಂಡುಕೊಳ್ಳುವುದು ಮುಖ್ಯ. ನಿಮ್ಮ ಸೆಕ್ಸ್ ಡ್ರೈವ್ ಕಡಿಮೆಯಿದ್ದರೆ ನಿಮ್ಮ ಪತಿಯೊಂದಿಗೆ ಮಾತನಾಡಿ ಅವರಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿ.

ಭಾರತದಲ್ಲಿ ಕೇವಲ ಶೇ.36ರಷ್ಟು ಮಹಿಳೆಯರು ಮಾತ್ರ ಪಿರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸ್ತಾರೆ !

ಮಗುವೇಕೆ ಚಡಪಡಿಸುತ್ತದೆ?
ಸಂಭೋಗದಿಂದ ನಿಮ್ಮ ಮಗುವಿಗೆ ನೋವಾಗುವುದಿಲ್ಲ. ಆದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮ್ಮ ಚಿಕ್ಕ ಮಗುವಿಗೆ ತಿಳಿದಿರುವುದಿಲ್ಲ! ಮಗುವಿನ ಸುತ್ತ ಇರುವ ಆಮ್ನಿಯೋಟಿಕ್ ಚೀಲ ಮತ್ತು ನಿಮ್ಮ ಗರ್ಭಾಶಯದ ಬಲವಾದ ಸ್ನಾಯುಗಳು ನಿಮ್ಮ ಮಗುವನ್ನು ರಕ್ಷಿಸುತ್ತವೆ. ನಿಮ್ಮ ಗರ್ಭಕಂಠವನ್ನು ಮುಚ್ಚುವ ದಪ್ಪ ಲೋಳೆಯ ಪದರ ಅದನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಸೆಕ್ಸ್‌ನ ಪರಾಕಾಷ್ಠೆ ಅಥವಾ ಆರ್ಗ್ಯಾಸಂ ಹೊಂದಿದಾಗ, ನಿಮ್ಮ ಮಗು ಹೊಟ್ಟೆಯೊಳಗೆ ಹೆಚ್ಚು ಚಲಿಸುತ್ತದೆ, ಕೊಂಚ ಚಡಪಡಿಸಬಹುದು. ಇದಕ್ಕೆ ಕಾರಣ, ಸೆಕ್ಸ್ ಸಂದರ್ಭದಲ್ಲಿ ನಿಮ್ಮ ಹೃದಯದ ಬಡಿತ ತೀವ್ರವಾಗುವುದು. ನಿಮ್ಮ ಹೃದಯ ಜೋರಾಗಿ ಬಡಿದುಕೊಂಡರೆ ಮಗುವಿಗೂ ಚಡಪಡಿಕೆ ಉಂಟಾಗುತ್ತದೆ.

ಹುಸಿ ಹೊಟ್ಟೆನೋವು
ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ನೀವು ಮಿಲನದ ಪರಾಕಾಷ್ಠೆಯನ್ನು ಅನುಭವಿಸಿದರೆ, ನಿಮ್ಮ ಗರ್ಭದಲ್ಲಿ ಕೆಲವು ಸೌಮ್ಯವಾದ ನೋವುಗಳು ಕಂಡುಬರಬಹುದು. ಇದನ್ನು ಬ್ರಾಕ್‌ಸ್ಟನ್ ಹಿಕ್ಸ್ ಕಾಂಟ್ರಾಕ್ಷನ್ ಎನ್ನುತ್ತಾರೆ. ಇದೊಂದು ಕೃತಕ ಹೆರಿಗೆನೋವು. ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆದರೆ ಅದು ಹೊರಟುಹೋಗುತ್ತದೆ. ಸಂಕೋಚನ ಮುಂದುವರಿದರೆ, ಅಥವಾ ದ್ರವ ಸೋರುತ್ತಿದ್ದರೆ, ಅಥವಾ ಲೈಂಗಿಕತೆಯ ನಂತರ ರಕ್ತಸ್ರಾವವಾಗಿದ್ದರೆ, ಕೂಡಲೇ ವೈದ್ಯರನ್ನು ಕಾಣಬೇಕು. 

ಮೌಖಿಕ ಸಂಭೋಗ
ಮೌಖಿಕ ಸಂಭೋಗದಿಂದ ನಿಮಗಾಗಲೀ ಮಗುವಿಗಾಗಲೀ ಯಾವುದೇ ಹಾನಿಯಿಲ್ಲ. ಸಂಭೋಗ ತುಂಬಾ ಅಪಾಯಕಾರಿ ಎಂದು ನೀವು ಪರಿಗಣಿಸಿದರೆ, ಮೌಖಿಕ ಸಂಭೋಗ ಉತ್ತಮ ಪರಿಹಾರ.
ಸಂಭೋಗ ಸಂದರ್ಭದಲ್ಲಿ ಯೋನಿಯೊಳಗೆ ಗಾಳಿ ತುಂಬುವುದನ್ನು ತಪ್ಪಿಸಬೇಕು. ಇದರಿಂದಾಗಿ ಗಾಳಿಯ ಗುಳ್ಳೆಗಳು ರಕ್ತನಾಳದ ಅಡಚಣೆಯನ್ನು ಉಂಟುಮಾಡಬಹುದು. 

ಯಾವಾಗ ಸೆಕ್ಸ್ ಬೇಡ?
ಕೆಲವು ಸಂದರ್ಭಗಳಲ್ಲಿ, ನೀವು ಕೆಲವು ಚಟುವಟಿಕೆಗಳನ್ನು ಬಿಟ್ಟುಬಿಡಬೇಕಾಗಬಹುದು, ಅಥವಾ ಲೈಂಗಿಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಬಹುದು. 
- ಗರ್ಭಾವಸ್ಥೆಯಲ್ಲಿ ರಕ್ತಸ್ರಾವವನ್ನು ಅನುಭವಿಸಿದಾಗ.
- ಗರ್ಭಪಾತದ (Abortion) ಅಪಾಯವನ್ನು ಹೊಂದಿದ್ದಾಗ. 
- ಗರ್ಭಕಂಠದ ದೌರ್ಬಲ್ಯದ ಹಿನ್ನೆಲೆ ಹೊಂದಿದ್ದರೆ ಅಥವಾ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದರೆ. 
- ಹೆಚ್ಚಿನ ಬಿಪಿ ಅಥವಾ ಡಯಾಬಿಟಿಸ್ (Diabetes) ಹೊಂದಿದ್ದರೆ. 
- ನೀವು ಫಲವತ್ತತೆ ಚಿಕಿತ್ಸೆಗಳಿಗೆ ಒಳಗಾಗಿದ್ದರೆ, ಅಥವಾ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಶಿಶುಗಳಿದ್ದರೆ.
- ವೈದ್ಯರು ಬೇರೆ ಯಾವುದೇ ಕಾರಣಕ್ಕೆ ಸೆಕ್ಸ್ ಬೇಡ ಎಂದಿದ್ದರೆ. 
- ನೀವು ಅಥವಾ ನಿಮ್ಮ ಪತಿ ಯಾವುದಾದರೂ ಲೈಂಗಿಕವಾಗಿ ಹರಡುವ ಸೋಂಕು ಹೊಂದಿದ್ದರೆ.

ಆ ಸಂದರ್ಭದಲ್ಲಿ ಸೆಕ್ಸ್ ಉತ್ತಮವಾ?
ಗರ್ಭಿಣಿಯಾಗಿರುವಾಗ ಕೆಲವು ಮಹಿಳೆಯರಿಗೆ ಸೆಕ್ಸ್ ತುಂಬಾ ಒಳ್ಳೆಯದು, ಕೆಲವರಿಗೆ ಅಲ್ಲ. 
ಗರ್ಭಾವಸ್ಥೆಯಲ್ಲಿ ಸೆಕ್ಸ್ ನಿಮ್ಮ ಜನನಾಂಗ ಪ್ರದೇಶಕ್ಕೆ ರಕ್ತದ ಹರಿವು ಹೆಚ್ಚಿಸಿ, ಲೈಂಗಿಕ ಸಂವೇದನೆಯನ್ನು ಹೆಚ್ಚಿಸಬಹುದು. ಅಥವಾ ಅನಾನುಕೂಲತೆಯನ್ನೂ ಅನುಭವಿಸಬಹುದು. ಕೆಲವು ಮಹಿಳೆಯರು ಹೊಟ್ಟೆಯಲ್ಲಿ ಮಗುವಿದ್ದಾಗ ಭಾವನಾತ್ಮಕವಾಗಿ ಸೆಕ್ಸ್‌ನಲ್ಲಿ ಇನ್‌ವಾಲ್ವ್ ಆಗಲಾರರು. 
ಗರ್ಭಾವಸ್ಥೆಯಲ್ಲಿ ಹೆಚ್ಚಿನ ದಂಪತಿಗಳು ಸಂಭೋಗಕ್ಕಿಂತಲೂ ಮುನ್ನಲಿವು, ಮೌಖಿಕ ಸಂಭೋಗ ಅಥವಾ ಹಸ್ತಮೈಥುನದಿಂದ ಹೆಚ್ಚು ಆನಂದವನ್ನು ಅನುಭವಿಸುತ್ತಾರೆ. ಇದರಿಂದ ಕಡಿಮೆ ತೃಪ್ತರಾಗುತ್ತಾರೆ ಎಂದರ್ಥವಲ್ಲ!
ಗರ್ಭಾವಸ್ಥೆಯ ಉದ್ದಕ್ಕೂ ಗಂಡ ಹೆಂಡತಿ ಅನ್ಯೋನ್ಯತೆಯಿಂದ ಇರಬೇಕು. ಇದು ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿಡುತ್ತದೆ. ಮಗುವಿನ ಜನನದ ನಂತರ ನೀವು ಲೈಂಗಿಕ ಸಮಸ್ಯೆಗಳನ್ನು ಹೊಂದಿರುವುದಿಲ್ಲ.

Menstruation: ಕೀಲುನೋವಿನ ಸಮಸ್ಯೆಗೆ ಪರಿಹಾರ ಹೀಗಿವೆ ನೋಡಿ..!

ಸೆಕ್ಸ್ ಬೇಡವೇ ಬೇಡ! 
ಕೆಲವರು ಗರ್ಭಿಣಿಯಾದಾಗಿನಿಂದ ಲೈಂಗಿಕತೆಯನ್ನು ಪೂರ್ತಿ ತೊರೆಯುತ್ತಾರೆ. ದೇಹ ಮತ್ತು ಜೀವನದಲ್ಲಿ ಆಗುವ ದೊಡ್ಡ ಬದಲಾವಣೆಗಳು ಲೈಂಗಿಕ ಜೀವನವನ್ನು ಬದಲಾಯಿಸುತ್ತವೆ. ಯಾಕೆಂದರೆ ಕೆಲವು ಮಹಿಳೆಯರು ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಲೈಂಗಿಕತೆಯನ್ನು ಹೊಂದಲಾಗದಂತೆ ತುಂಬಾ ದಣಿದಿರುತ್ತಾರೆ, ತುಂಬಾ ವಾಕರಿಕೆ ಅನುಭವಿಸುತ್ತಾರೆ.
ಮೂಡ್ ಬದಲಾವಣೆಗಳು, ಮೈ ಜುಮ್ಮೆನಿಸುವಿಕೆ, ನೋಯುತ್ತಿರುವ ಸ್ತನಗಳು, ಬೆನ್ನುನೋವುಗಳು ಲೈಂಗಿಕತೆಯ ಆಸಕ್ತಿ ಕಡಿತಕ್ಕೆ ಇತರ ಕೆಲವು ಕಾರಣ. ಹಾರ್ಮೋನುಗಳ ಬದಲಾವಣೆ ಸಹ ಕಾಮಾಸಕ್ತಿಯ ನಷ್ಟಕ್ಕೆ ಕಾರಣವಾಗಬಹುದು.
ಇದರಲ್ಲಿ ತಪ್ಪೇನಿಲ್ಲ. ಮನಸ್ಸಿನ ಸ್ಥಿತಿಯೂ ಮುಖ್ಯ. ಗರ್ಭಾವಸ್ಥೆಯು ಸಂಪೂರ್ಣ ಹೊಸ ಚಿಂತೆಗಳು ಮತ್ತು ಕಾಳಜಿಗಳನ್ನು ತರುತ್ತದೆ. ಒತ್ತಡದಲ್ಲಿರುವಾಗ ಸೆಕ್ಸ್ ಅನುಭವಿಸುವುದು ಕಷ್ಟವೇ ಸರಿ. ನಿಮ್ಮ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಧನಾತ್ಮಕವಾಗಿ ಭಾವಿಸಿದರೆ, ಹೆಚ್ಚು ಲೈಂಗಿಕತೆಯನ್ನು ಅನುಭವಿಸುವ ಸಾಧ್ಯತೆಯಿದೆ. ಆದರೆ ಗರ್ಭಾವಸ್ಥೆಯ ಅಸುರಕ್ಷಿತರಾಗಿದ್ದರೆ, ಅದು ಲೈಂಗಿಕತೆಯಿಂದ ದೂರವಿಡಬಹುದು.
ಗರ್ಭಾವಸ್ಥೆಯ ಮೊದಲ ಭಾಗದಲ್ಲಿ ಲೈಂಗಿಕತೆಯನ್ನು ಆನಂದಿಸಿದ್ದರೂ, ಹೆರಿಗೆ ಹತ್ತಿರವಾಗುತ್ತಿದ್ದಂತೆ ಲೈಂಗಿಕ ಬಯಕೆ ಕಡಿಮೆಯಾಗಬಹುದು. ಕೊನೆಯದಾಗಿ, ಪ್ರತಿಯೊಬ್ಬರೂ ಈ ವಿಷಯದಲ್ಲಿ ವಿಭಿನ್ನ ಆಸಕ್ತಿ ಹೊಂದಿರುತ್ತಾರೆ ಎನ್ನಬಹುದು. 
ಮುಕ್ತ ಮಾತುಕತೆಯು ಬಹಳಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ನೀವು ವಿಶ್ರಾಂತಿ ಪಡೆಯಲು, ಪರಸ್ಪರ ಆನಂದಿಸಲು ಮತ್ತು ಅನ್ಯೋನ್ಯವಾಗಿರಲು ಸಾಧ್ಯವಾಗುತ್ತದೆ. 

ಪತ್ನಿ ಗರ್ಭಿಣಿಯಾಗಿದ್ದಾಗ ಗಂಡನ ಸೆಕ್ಸ್ ಡ್ರೈವ್ ಬದಲಾಗುವುದೇ?
ಹೆಚ್ಚಿನ ಪುರುಷರು ತಮ್ಮ ಸಂಗಾತಿಯೊಂದಿಗೆ ಎಂದಿನಂತೆ ಲೈಂಗಿಕತೆಯನ್ನು ಬಯಸುತ್ತಾರೆ. ಕೆಲವು ಪುರುಷರು ವಿಶೇಷವಾಗಿ ಮೂರನೇ ತ್ರೈಮಾಸಿಕದಲ್ಲಿ ಲೈಂಗಿಕತೆಯಲ್ಲಿ ಕಡಿಮೆ ಆಸಕ್ತಿಯನ್ನು ಅನುಭವಿಸುತ್ತಾರೆ. ಪತಿ ನಿಮ್ಮಲ್ಲಿ ಆಕರ್ಷಣೆ ಕಳೆದುಕೊಳ್ಳುತ್ತಾರೆ ಎಂದು ಇದರ ಅರ್ಥವಲ್ಲ. ಸೆಕ್ಸ್ ಮಗುವಿಗೆ ಹಾನಿಯನ್ನುಂಟುಮಾಡುತ್ತದೆ ಎಂಬ ಭಯ, ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಇದಕ್ಕೆ ಕಾರಣವಾಗಬಹುದು. 

Womens Health Day History: ಮಹಿಳೆಯರನ್ನು ಕಾಡುತ್ತೆ ಈ ಪೋಷಕಾಂಶದ ಕೊರತೆ
 

Latest Videos
Follow Us:
Download App:
  • android
  • ios