Women Health: ನಾರ್ಮಲ್ ಹೆರಿಗೆಯಿಂದ ತಾಯಿಗೆ ಮಾತ್ರವಲ್ಲ ಮಕ್ಕಳಿಗೂ ಲಾಭವಿದೆ!

ಹೆರಿಗೆ ನೋವು ಯಾರು ತಿನ್ನುತ್ತಾರೆ? ಸಿ ಸೆಕ್ಷನ್ ಆಯ್ಕೆ ಇದೆಯಲ್ಲ ಎಂದೇ ಈಗಿನ ಜನರು ಆಲೋಚನೆ ಮಾಡ್ತಾರೆ. ಸಿ ಸೆಕ್ಷನ್ ನಲ್ಲಿ ನೋವು ಕಾಡದೆ ಇರಬಹುದು, ಆದ್ರೆ ದೀರ್ಘಕಾಲದಲ್ಲಿ ಅದು ಒಂದಿಷ್ಟು ಸಮಸ್ಯೆಗೆ ಕಾರಣವಾಗುತ್ತೆ. 
 

Tips For Having Normal Delivery Benefits For Mother And Baby roo

ಹೆರಿಗೆ ವಿಷ್ಯಕ್ಕೆ ಬಂದಾಗ ಬಹುತೇಕ ಮಹಿಳೆಯರು ಸಿ ಸೆಕ್ಷನ್ ಆಯ್ಕೆ ಮಾಡಿಕೊಳ್ಳಲು ಮುಂದಾಗ್ತಿದ್ದಾರೆ. ಒಂದು ಹೆರಿಗೆ ನೋವು ಅನುಭವಿಸೋದು ತಪ್ಪುತ್ತೆ ಇನ್ನೊಂದು ಹೆರಿಗೆಗಾಗಿ ಹೆಚ್ಚು ಕಾಯಬೇಕಾಗೋದಿಲ್ಲ, ಸಿ ಸೆಕ್ಷನ್ ಯಾವಾಗ ಅಂತಾ ಮೊದಲೇ ಫಿಕ್ಸ್ ಆಗಿರುತ್ತೆ ಎನ್ನುವ ಕಾರಣಕ್ಕೆ. ಆದ್ರೆ ಈ ಸಿ ಸೆಕ್ಷನ್ ಆರಂಭದಲ್ಲಿ ಆರಾಮ ಎನ್ನಿಸಿದ್ರೂ ಭವಿಷ್ಯದಲ್ಲಿ ತಾಯಿಗೆ ಮಾತ್ರವಲ್ಲ ಮಗುವಿಗೂ ಸಮಸ್ಯೆ ತರುತ್ತದೆ. ಇದೇ ಕಾರಣಕ್ಕೆ ಮನೆಯ ಹಿರಿಯರು, ನಾರ್ಮಲ್ ಡಿಲೆವರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡ್ತಿರುತ್ತಾರೆ. ನಾರ್ಮಲ್ ಹೆರಿಗೆ ಆಗ್ಬೇಕೆಂದ್ರೆ ಏನೆಲ್ಲ ಮಾಡ್ಬೇಕು ಎಂಬ ಬಗ್ಗೆ ಹಿರಿಯರು ಸಲಹೆ ನೀಡ್ತಿರುತ್ತಾರೆ. ನಾರ್ಮಲ್ ಹೆರಿಗೆ ನೈಸರ್ಗಿಕ ವಿಧಾನವಾಗಿದೆ. ಇದು ಮಗು ಹಾಗೂ ತಾಯಿ ಇಬ್ಬರಿಗೂ ಒಳ್ಳೆಯದು. ನಾವಿಂದು ನಾರ್ಮಲ್ ಹೆರಿಗೆಯಿಂದ ತಾಯಿ ಹಾಗೂ ಮಗುವಿಗೆ ಆಗುವ ಲಾಭವೇನು ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ.

ಈ ಬಗ್ಗೆ ಅನೇಕ ಸಂಶೋಧನೆ (Research) ನಡೆದಿದೆ. ಶೇಕಡಾ 85ರಷ್ಟು ಮಹಿಳೆಯರಿಗೆ ನಾರ್ಮಲ್ (Normal) ಹೆರಿಗೆ ಸಾಧ್ಯ. ಅನಾರೋಗ್ಯ ಸೇರಿದಂತೆ ಬೇರೆ ಕಾರಣಕ್ಕೆ ಶೇಕಡಾ 15ರಷ್ಟು ಮಹಿಳೆಯರಿಗೆ ಮಾತ್ರ ಸಿ ಸೆಕ್ಷನ್ ಮಾಡ್ಬೇಕು ಎನ್ನುತ್ತದೆ ಸಂಶೋಧನೆ. ಆದ್ರೆ ಶೇಕಡಾ 30ರಷ್ಟು ಮಹಿಳೆಯರು ಸಾಧ್ಯವಿದ್ರೂ ನಾರ್ಮಲ್ ಹೆರಿಗೆ (Delivery) ಬದಲು ಸಿ ಸೆಕ್ಷನ್ ಆಯ್ಕೆ ಮಾಡಿಕೊಳ್ತಿದ್ದಾರೆ. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ಹೆರಿಗೆ ನೋವಿನಿಂದ ಬಚಾವ್ ಆಗೋದು.

ಶೀಘ್ರದಲ್ಲೇ ಅಪ್ಪಳಿಸಲಿದೆ ಕೋವಿಡ್‌ಗಿಂತ ಭೀಕರ ಸಾಂಕ್ರಾಮಿಕ ರೋಗ; 5 ಕೋಟಿ ಜನರನ್ನು ಕೊಲ್ಲಲಿದೆ ‘’‍X’’!

ನಾರ್ಮಲ್ ಹೆರಿಗೆಯಿಂದ ಮಗು ಹಾಗೂ ತಾಯಿಗೆ ಆಗುವ ಲಾಭಗಳು : 
• ನಾರ್ಮಲ್ ಹೆರಿಗೆಯಿಂದ ಜನ್ಮತಳೆದ ಮಗುವಿಗೆ ಸೋಂಕಿನ ಅಪಾಯ ಕಡಿಮೆ ಇರುತ್ತದೆ.
• ನಾರ್ಮಲ್ ಹೆರಿಗೆಯಾದ ಮಹಿಳೆಗೆ ಓಡಾಡಲು, ಕುಳಿತುಕೊಳ್ಳಲು ಹೆಚ್ಚಿನ ಸಮಸ್ಯೆ ಕಾಡೋದಿಲ್ಲ. ಹೆರಿಗೆಯಾದ ದಿನದಿಂದಲೇ ಆರಾಮವಾಗಿ ಕುಳಿತು ಆಕೆ ಮಗುವಿಗೆ ಹಾಲುಣಿಸಬಹುದು. ಆದ್ರೆ ಸಿ ಸೆಕ್ಷನ್ ನಲ್ಲಿ ಇದು ಕಷ್ಟ. ಒಂದು ದಿನ ತಾಯಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿರುತ್ತದೆ. ಒಂದರೆಡು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡ್ತಾರೆ, ಆದ್ರೆ ನಾರ್ಮಲ್ ಹೆರಿಗೆಯಲ್ಲಿ ಮಹಿಳೆ ಒಂದು ತಿಂಗಳೊಳಗೇ ಆರಾಮವಾಗಿ ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಗಟ್ಟಿಯಾಗ್ತಾಳೆ. 
• ನಾರ್ಮಲ್ ಹೆರಿಗೆಯಾದ ಮಹಿಳೆಗೆ ಹೊಟ್ಟೆ ಮೇಲೆ ಸ್ಟಿಚ್ ಬಿದ್ದಿರೋದಿಲ್ಲ. ಹಾಗಾಗಿ ಆಕೆ ಈ ಬಗ್ಗೆ ಹೆಚ್ಚು ಕಾಳಜಿವಹಿಸುವ ಅಗತ್ಯವಿಲ್ಲ. ಸಿ ಸೆಕ್ಷನ್ ಮಹಿಳೆಗೆ ಮಗು ಜೊತೆ ಸ್ಟಿಚ್ ಬಿಚ್ಚಿ ಹೋಗದಂತೆ ಕಾಳಜಿವಹಿಸಬೇಕಾಗುತ್ತದೆ.

ಜಸ್ಟ್ 1 ತಿಂಗಳು ಈ ನೀರು ಕುಡಿದ್ರೆ ಸಾಕು, ಭರ್ತಿ 10 ಕೆಜಿ ತೂಕ ಕಡಿಮೆ ಮಾಡ್ಕೋಬೋದು

• ದೀರ್ಘಕಾಲದ ಸಮಸ್ಯೆ ಎಂದ್ರೆ ಸೊಂಟ ನೋವು. ಸಿ ಸೆಕ್ಷನ್ ಗೆ ಒಳಗಾದ ಮಹಿಳೆಗೆ ಬೆನ್ನು, ಸೊಂಟು ನೋವು ಕಾಡುವುದು ಹೆಚ್ಚು. ಕೆಲ ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಕೂಡ ಎದುರಿಸುತ್ತಾರೆ. 
• ಮೊದಲ ಹೆರಿಗೆ ನಾರ್ಮಲ್ ಆಗಿದ್ದರೆ ಎರಡನೇ ಬಾರಿ ತಾಯಿಯಾಗುವ ವೇಳೆ ಯಾವುದೇ ದೊಡ್ಡ ಸಮಸ್ಯೆ ಆಗುವುದಿಲ್ಲ. ಆಗಲೂ ನಾರ್ಮಲ್ ಹೆರಿಗೆ ಸಾಧ್ಯತೆ ಹೆಚ್ಚಿರುತ್ತದೆ. ಮೊದಲ ಹೆರಿಗೆ ಸಿ ಸೆಕ್ಷನ್ ಆಗಿದ್ರೆ ಎರಡನೇ ಬಾರಿಯೂ ಸಿ ಸೆಕ್ಷನ್ ಗೆ ಒಳಗಾಗಬೇಕಾಗುತ್ತದೆ. 
• ನಾರ್ಮಲ್ ಹೆರಿಗೆಯಲ್ಲಿ ಮಗುವಿನ ಎದೆಯ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ಆಮ್ನಿಯೋಟಿಕ್ ದ್ರವವು ಶ್ವಾಸಕೋಶದಿಂದ ಹೊರಬರುತ್ತದೆ. ಇದು ಮಗು ಗರ್ಭಾಶಯದಿಂದ ಹೊರಬಂದ ನಂತರ ಉಸಿರಾಡಲು ಸಹಾಯ ಮಾಡುತ್ತದೆ.  ಜನನದ ನಂತರದ ಆರಂಭಿಕ ದಿನಗಳಲ್ಲಿ ಮಗು ಯಾವುದೆ ಉಸಿರಾಟ ಸಮಸ್ಯೆ ಎದುರಿಸುವುದಿಲ್ಲ. 
• ನಾರ್ಮಲ್ ಹೆರಿಗೆ ನೋವು ಮಹಿಳೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ತೀವ್ರವಾದ ನೋವು ಮತ್ತು ದೈಹಿಕ ಸವಾಲುಗಳನ್ನು ಎದುರಿಸಲು ಮಹಿಳೆ ಹೆದರುವುದಿಲ್ಲ. 

Latest Videos
Follow Us:
Download App:
  • android
  • ios