Asianet Suvarna News Asianet Suvarna News

ಇಲ್ಲಿ ಅತಿಥಿಗಳ ಜೊತೆ ಹೆಂಡ್ತಿಯನ್ನು ಮಲಗಿಸಿ, ಗಂಡ ಹೊರಗೆ ಮಲಗ್ತಾನೆ

ಇಲ್ಲಿಯ ಪುರುಷರು  ಕನಿಷ್ಠ ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಮನೆಗೆ ಭೇಟಿ ನೀಡುವ ಅತಿಥಿಗಳ ಜೊತೆ ಮಲಗಲು ಪತ್ನಿಯರನ್ನು ಇಲ್ಲಿಯ ಗಂಡಂದಿರೇ ಕಳುಹಿಸುತ್ತಾರೆ. ಅತಿಥಿಗಳ ಜೊತೆ ಪತ್ನಿಯನ್ನು ಬಿಟ್ಟು ಗಂಡಂದಿರು ಹೊರಗಡೆ ಮಲಗುತ್ತಾರೆ.

Himba traibal woman sharing bed with guest mrq
Author
First Published Jun 18, 2024, 6:53 PM IST | Last Updated Jun 18, 2024, 6:53 PM IST

ನಮೀಬಿಯಾದ ಹಿಂಬಾ ಬುಡಕಟ್ಟು ಸಮುದಾಯದ ಜನರು ಇಂದಿಗೂ ನಗರ ಪ್ರದೇಶಗಳಿಂದ ದೂರವಿದ್ದು, ತಮ್ಮದೇ ಆದ ಶೈಲಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಹಿಂಬಾ ಬುಡಕಟ್ಟಿನ ಜನತೆಯ ಜೀವನಶೈಲಿ, ಉಡುಪು, ಸಂಪ್ರದಾಯ, ಆಚರಣೆಗಳು ಜನರನ್ನು ಸೆಳಯುತ್ತವೆ. ಹಾಗಾಗಿಯೇ ಯುಟ್ಯೂಬರ್‌ಗಳು ಹಿಂಬಾ  ಬುಡಕಟ್ಟ ಜನರ ಬಳಿ ತೆರಳಿ ಸಂದರ್ಶನ ನಡೆಸುತ್ತಾರೆ. ಆದ್ರೆ ಹಿಂಬಾ ಸಮುದಾಯದ ಜನರು ಅಲೆಮಾರಿಗಳಾಗಿರುವ ಕಾರಣ ಒಂದು ಸೀಮಿತ ಪ್ರದೇಶದಲ್ಲಿ ಸಿಗಲ್ಲ. ಯಾರೇ ಬಂದರೂ ಹಿಂಬಾ ಸಮುದಾಯ ಜನತೆ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಈ  ಹಿಂಬಾ ಸಮುದಾಯದ ಮಹಿಳೆಯರು  ಸ್ನಾನವೇ ಮಾಡಲ್ಲ. ಆದರೂ ಉತ್ತಮ ಪರಿಮಳವನ್ನ ಹೊಂದಿರುತ್ತಾರೆ.

ಹಿಂಬಾ ಬುಡಕಟ್ಟು ಮಹಿಳೆಯರ ಜೀವನಶೈಲಿ ತುಂಬಾ ವಿಭಿನ್ನವಾಗಿದ್ದು, ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಕೆಂಪು ಪುಡಿ ಬಳಕೆ ಮಾಡಿಕೊಳ್ಳುತ್ತಾರೆ. ತಾವೇ ತಯಾರಿಸಿದ ಆಭರಣಗಳಿಂದ ತಮ್ಮನ್ನು ತಾವು ಅಲಂಕರಿಸಿಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲ ಕೂದಲು ವಿನ್ಯಾಸಗೊಳಿಸಿಕೊಳ್ಳಲು ಮಣ್ಣು ಬಳಕೆ ಮಾಡುತ್ತಾರೆ. ಹಿಂಬಾ ಸಮುದಾಯದಲ್ಲಿ ಬಹುಪತ್ನಿತ್ವ ಹೊಂದಿದ್ದು, ಇಲ್ಲಿಯ ಪುರುಷರು  ಕನಿಷ್ಠ ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಮನೆಗೆ ಭೇಟಿ ನೀಡುವ ಅತಿಥಿಗಳ ಜೊತೆ ಮಲಗಲು ಪತ್ನಿಯರನ್ನು ಇಲ್ಲಿಯ ಗಂಡಂದಿರೇ ಕಳುಹಿಸುತ್ತಾರೆ. ಅತಿಥಿಗಳ ಜೊತೆ ಪತ್ನಿಯನ್ನು ಬಿಟ್ಟು ಗಂಡಂದಿರು ಹೊರಗಡೆ ಮಲಗುತ್ತಾರೆ.

ಯುವಕರು ರಾತ್ರಿ ಇಲ್ಲಿ ಬೀಚ್ ಪಾರ್ಟಿ ಮಾಡ್ಬಾರ್ದಂತ ಸ್ಪೀಕರಲ್ಲಿ ಶಾಸ್ತ್ರೀಯ ಸಂಗೀತ ಹಾಕಿಸೋ ಪೋಲೀಸ್ರು!

ಪೋಷಕರು ಸಮ್ಮುಖದಲ್ಲಿ ಹಿಂಬಾ ಸಮುದಾಯದ ಮದುವೆ ನಡೆಯುತ್ತದೆ. ಯುವಕ, ಯುವತಿ ಪ್ರೌಢಾವಸ್ಥೆಗೂ ಮೊದಲು ಇಲ್ಲಿನ ಸಂಪ್ರದಾಯದಲ್ಲಿ ಭಾಗವಹಿಸುತ್ತಾರೆ. ಈ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ಇಲ್ಲಿಯ ಜೋಡಿಗಳ ಮದುವೆ ನಡೆಯುತ್ತದೆ. ಕುಟುಂಬ ರಚನೆಯ ಪಾತ್ರದಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಕೂದಲು ಮುಂಭಾಗ ಹಾಕಿಕೊಳ್ಳುವರು ಇನ್ನು ಪ್ರೌಢಾವಸ್ಥೆಗೆ ಬಂದಿಲ್ಲ ಎಂದರ್ಥವಾಗುತ್ತದೆ. ಈ ಜನರು ಗುಂಪು ಗುಂಪಾಗಿಯೇ ವಾಸಿಸುತ್ತಾರೆ. ಆಧುನೀಕರಣಕ್ಕೆ ಹಂತ ಹಂತವಾಗಿ ಒಗ್ಗಿಕೊಳ್ಳುತ್ತಿರುವ ಜನರು ಗ್ರಾಮಗಳನ್ನು ನಿರ್ಮಿಸಿಕೊಂಡು ಒಂದೆಡೆ ನೆಲೆಯೂರುತ್ತಿದ್ದಾರೆ.

ಕಟ್ಟಿಗೆ, ಹುಲ್ಲು ಹಾಗೂ ಮಣ್ಣಿನ ಮಿಶ್ರಣದಿಂದ ಹಿಂಬಾ ಜನರು ತಾವು ಗುಡಿಸಲು ನಿರ್ಮಿಸಿಕೊಳ್ಳುತ್ತಾರೆ. ಎಷ್ಟೇ ಹವಾಮಾನದಲ್ಲಿ ವೈಪರೀತ್ಯ ಉಂಟಾದ್ರೂ ಇವರ ಮನೆಗಳಿಗೆ ಏನು ಆಗಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಪುನರ್ವಸತಿ ಕೇಂದ್ರಗಳತ್ತ ಹಿಂಬಾ ಜನರು ಆಗಮಿಸುತ್ತಿದ್ದಾರೆ. ಆದ್ರೆ ಇಲ್ಲಿ ಇವರನ್ನು ತಾರತಮ್ಯದಿಂದ ನೋಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಪಾಕಿಸ್ತಾನದ ಅತಿ ಶ್ರೀಮಂತ ಭಿಕ್ಷುಕನ ಆಸ್ತಿ ಕೇಳಿದ್ರೆ ಹೌಹಾರ್ತೀರಿ!

Latest Videos
Follow Us:
Download App:
  • android
  • ios