83 ವರ್ಷದ ಬಳಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಎಂಎ ಪದವಿ ಪತ್ರ ಪಡೆದ 105 ವರ್ಷದ ಅಜ್ಜಿ!

MA ಪದವಿ ಮುಗಿಸಿ ಬರೋಬ್ಬರಿ 83 ವರ್ಷಗಳು ಉರುಳಿತ್ತು. ಆದರೆ ಘಟಿಕೋತ್ಸವದಲ್ಲಿ ಪಾಲ್ಗೊಂಡು ಪ್ರಮಾಣ ಪತ್ರ ಪಡದೇ ಇರಲಿಲ್ಲ. ಈ ವರ್ಷ ವಿಶೇಷ ಅತಿಥಿಯಾಗಿ ಪಾಲ್ಗೊಂಡ 105ರ ವರ್ಷದ ಅಜ್ಜಿ ಹೊಸ ದಾಖಲೆ ನಿರ್ಮಿಸಿದ್ದಾರೆ.
 

Stanford elderly woman  receives MA Convocation certificate after 83 years of study ckm

ಸ್ಟಾನ್‌ಫೋರ್ಡ್(ಜೂ.19) ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಬಳಿಕ ಕೆಲವರು ಘಟಿಕೋತ್ಸವದಲ್ಲಿ ಪಾಲ್ಗೊಂಡು ಪದವಿ, ಸ್ನಾತಕೋತ್ತರ ಪ್ರಮಾಣಪತ್ರ ಪಡೆಯುವುದನ್ನೇ ಮರೆತು ಬಿಡುತ್ತಾರೆ. ಅಥವಾ ತಮ್ಮ ಬಿಡುವಿಲ್ಲದ ದಿನಗಳಲ್ಲಿ ಈ ಕೆಲಸ ಹಾಗೇ ಉಳಿದು ಬಿಡುತ್ತದೆ. ಕೆಲ ವರ್ಷಗಳ ಬಳಿಕ ಈ ಕಾನ್ವೋಕೇಶನ್ ಸರ್ಟಿಫಿಕೇಟ್ ಪಡೆದ ಉದಾಹರಣೆಗಳಿವೆ. ಕೆಲ ವರ್ಷ ಅಂದರೆ 5 ವರ್ಷ, 10, 20, ಹೆಚ್ಚೆಂದರೆ 25. ಆದರೆ ಇಲ್ಲೊಬ್ಬ ಅಜ್ಜಿ ಮಾಸ್ಟರ್ ಡಿಗ್ರಿ ಮಾಡಿ ಬರೋಬ್ಬರಿ 83 ವರ್ಷಗಳ ಬಳಿಕ ಕಾನ್ವೋಕೇಶನ್ ಸರ್ಟಿಫಿಕೇಟ್ ಪಡೆದ ಘಟನೆ  ಸ್ಟಾನ್‌‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. 

ವಯಸ್ಸು ಕೇವಲ ನಂಬರ್ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಅಜ್ಜಿ ವಯಸ್ಸು 105. ಹೆಸರು ವರ್ಜಿನಿಯಾ ಜಿಂಜರ್ ಹಿಸ್ಲೋಪ್.  ಮಾಸ್ಟರ್ ಡಿಗ್ರಿ ಮುಗಸಿ 83 ವರ್ಷವಾದರೂ ಕಾನ್ವೋಕೇಶನ್ ಪ್ರಮಾಣಪತ್ರ ಪಡೆದೇ ಇರಲಿಲ್ಲ. ಈ ಅಜ್ಜಿಯ ಜೀವನ ಸಾಗಿದ ರೀತಿ ಹಲವರ ಬದುಕು ಸಾಗಿದೆ. ಇದೇ ಕಾರಣದಿಂದ ಸುದೀರ್ಘ ವರ್ಷಗಳ ಬಳಿಕ ಕಾನ್ಪೋಕೇಶನ್ ಪಡೆದ ಉದಾಹರಣೆಗಳಿವೆ. ಆದರೆ ಹಿಸ್ಲೋಪ್ ಈ ಎಲ್ಲಾ ದಾಖಲೆ ಮುರಿದಿದ್ದಾರೆ.

ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರ ಐಕಾನಿಕ್‌ IIT ಫೋಟೋ ವೈರಲ್‌, ಪಕ್ಕದಲ್ಲಿರುವ ಯುವತಿ ಕೂಡ ಫೇಮಸ್‌!

ಸ್ಟಾನ್‌ಫೋರ್ಡ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಹಿಸ್ಲೋಪ್ 1936ರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ತಮ್ಮ ಅಧ್ಯಯನ ಸಂಶೋಧನಾ ಪ್ರಬಂಧ ಮಂಡಿಸಿದ ಹಿಸ್ಲೋಪ್, ಕೆಲಸಕ್ಕೆ ಸೇರಿಕೊಳ್ಳವು ಕಾರಣ ತಕ್ಷಣವೇ ಹೊರಡಬೇಕಾಯಿತು. ಇದರ ಬೆನ್ನಲ್ಲೇ ಕಾಲೇಜಿನಲ್ಲಿ ಶುರುವಾಗಿದ್ದ ಪ್ರೀತಿ ಉಳಿಸಿಕೊಳ್ಳಲು ಮದುವೆ. ಮಕ್ಕಳು ಹೀಗೆ ಬದುಕು ಬಿಡುವಿಲ್ಲದ ಸಮಯದ ರೀತಿಯಲ್ಲಿ ಸಾಗಿತ್ತು. ಸೇನೆಯಲ್ಲಿದ್ದ ಪತಿ ಎರಡನೇ ಮಹಾ ಯುದ್ಧದಲ್ಲಿ ಸಕ್ರಿಯವಾಗಿದ್ದ ಕಾರಣ ಮಕ್ಕಳು, ಕುಟುಂಬ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ ಕಾಲೇಜು ಕಡೆ ತಲೆ ಹಾಲು ಸಾಧ್ಯವಾಗಿರಲಿಲ್ಲ.

ಪ್ರಬಂಧ ಸಲ್ಲಿಸಿ ಸಹಿ ಹಾಕಬೇಕಿತ್ತು. ಪ್ರಬಂದ ಮೌಲ್ಯಮಾಪನ ಮಾಡಿ ಕೆಲ ಪ್ರಕ್ರಿಯೆಗಳನ್ನು ಹಿಸ್ಲೋಪ್ ಪೂರೈಸಬೇಕಿತ್ತು. ಆದರೆ ಇದ್ಯಾವುದಕ್ಕೂ ಸಮಯವೇ ಸಿಗಲಿಲ್ಲ. ಕಾಲ ಉರುಳಿತ್ತು. ಬರೋಬ್ಬರಿ 83 ವರ್ಷದ ಬಳಿಕ ಮತ್ತೆ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಕ್ಕೆ ಆಗಮಿಸಿದ ಹಿಸ್ಲೋಪ್ ಘಟಿಕೋತ್ಸವದಲ್ಲಿ ಪಾಲ್ಗೊಂಡರು. 105 ವರ್ಷದ ವಿದ್ಯಾರ್ಥಿನಿಗೆ ಕುಲಪತಿಗಳು ಕಾನ್ವೋಕೇಶನ್ ಸರ್ಟಿಫಿಕೇಟ್ ನೀಡಿದ್ದಾರೆ. ಅಜ್ಜಿ ಸ್ನಾತಕೋತ್ತರ ಪ್ರಮಾಣ ಪತ್ರ ಪಡೆದು ಸಂಭ್ರಮಿಸಿದ್ದಾರೆ. 

ಮೆಡಿಕಲ್‌ ಸೀಟ್‌ ತಿರಸ್ಕರಿಸಿ ಕೃಷಿಯಲ್ಲಿ ತೊಡಗಿದ ಸ್ನೇಹಶ್ರೀಗೆ 10 ಚಿನ್ನದ ಪದಕದ ಫಸಲು!


 

Latest Videos
Follow Us:
Download App:
  • android
  • ios