ಅಬ್ಬಬ್ಬಾ..ಈಕೆ 40ನೇ ವಯಸ್ಸಿಗೆ 44 ಮಕ್ಕಳನ್ನು ಹೆತ್ತ ಮಹಾತಾಯಿ!
ಅದೆಷ್ಟೋ ಮಂದಿ ಮಕ್ಕಳಾಗಿಲ್ಲ ಅಂತ ಕೊರಗ್ತಾ ಇರ್ತಾರೆ. ಆದ್ರೆ ಈಕೆ ಮಾತ್ರ 40ನೇ ವಯಸ್ಸಿಗೇ 44 ಮಕ್ಕಳ ತಾಯಿಯಾಗಿದ್ದಾಳೆ. ಕೇವಲ 13 ನೇ ವಯಸ್ಸಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಆಕೆ ಭೂಮಿಯ ಮೇಲಿನ ಅತ್ಯಂತ ಫಲವತ್ತಾದ ಮಹಿಳೆ ಎಂದು ಹೆಸರುವಾಸಿಯಾಗಿದ್ದಾರೆ. ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಆಫ್ರಿಕಾದ ಮಹಿಳೆಯೊಬ್ಬರು 40 ವರ್ಷ ವಯಸ್ಸಿನೊಳಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಉಗಾಂಡಾ ಮೂಲದ ಮರಿಯಮ್ ನಬಟಾಂಜಿ ಎಂಬ ಮಹಿಳೆ ಮಮ ಉಗಾಂಡಾ ( ಉಗಾಂಡಾದ ತಾಯಿ) ಎಂದೇ ಖ್ಯಾತರು. 12 ನೇ ವಯಸ್ಸಿನಲ್ಲಿ ಅವಳು ಮದುವೆಯಾದ ನಂತರ ಅವರು ಮಕ್ಕಳಿಗೆ ಜನ್ಮ ನೀಡಲು ಆರಂಭಿಸಿದರು. ನಬಟಾಂಜಿ ಕೇವಲ 13 ವರ್ಷ ವಯಸ್ಸಿನವರಾಗಿದ್ದಾಗ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆಕೆಯನ್ನು ವಿಶ್ವದ ಅತ್ಯಂತ ಫಲವತ್ತಾದ ಮಹಿಳೆ ಎಂದು ಪರಿಗಣಿಸಲಾಗಿದೆ. ಪೂರ್ವ ಆಫ್ರಿಕಾದ ಉಗಾಂಡಾದಲ್ಲಿರುವ ತನ್ನ ಜನರಲ್ಲಿ ಮಹಿಳೆಯನ್ನು ಮಾಮಾ ಉಗಾಂಡಾ ಎಂದು ಕರೆಯಲಾಗುತ್ತದೆ. ಆಕೆಯ ಪೋಷಕರು ಅವಳನ್ನು ಮಾರಾಟ ಮಾಡಿದರು ಮತ್ತು ಕೇವಲ ಒಂದು ವರ್ಷದ ನಂತರ ಅವಳು ತಾಯಿಯಾದಳು.
ಮರಿಯಮ್ ಕೇವಲ 12 ವರ್ಷದವಳಿದ್ದಾಗ ಆಕೆಯ ಪೋಷಕರು ಅವಳನ್ನು ಮಾರಾಟ ಮಾಡಿದಾಗ ಮದುವೆಯಾದರು. 13 ನೇ ವಯಸ್ಸಿಗೇ ಆಕೆ ಮೊದಲ ಮಗುವಿಗೆ ಜನ್ಮ ನೀಡಿದರು. 36 ವರ್ಷಕ್ಕೆ ಕಾಲಿಡುವ ಹೊತ್ತಿಗೆ, ಮರಿಯಮ್ 42 ಶಿಶುಗಳಿಗೆ ಜನ್ಮ ನೀಡಿದ್ದರು.
7 ತಿಂಗಳಲ್ಲಿ 42 ಲೀಟರ್ ಎದೆಹಾಲು ದಾನ ಮಾಡಿ ದಾಖಲೆ ಬರೆದ ಮಹಾತಾಯಿ
40ನೇ ವಯಸ್ಸಿನಲ್ಲಿ ಅವರು 44 ಮಕ್ಕಳನ್ನು ಹೊಂದಿದ್ದರು. ತನ್ನ ಪತಿ ಈ ದೊಡ್ಡ ಕುಟುಂಬದಿಂದ ಹೊರನಡೆದ ನಂತರ ಆಕೆ ತನ್ನೆಲ್ಲಾ ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಬೇಕಾಗಿದೆ. ನಾಲ್ಕು ಬಾರಿ ಅವಳಿ ಮಕ್ಕಳು, ಐದು ಬಾರಿ ತ್ರಿವಳಿ ಮತ್ತು ಐದು ಬಾರಿ ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ತನ್ನ ಮಕ್ಕಳ ಪೈಕಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ . ಸದ್ಯ ಮರಿಯಮ್ಗಿರುವ 38 ಮಕ್ಕಳಲ್ಲಿ 20 ಗಂಡು 18 ಹೆಣ್ಣು ಮಕ್ಕಳಿದ್ದಾರೆ.
ಮರಿಯಮ್ ವೈದ್ಯರನ್ನು ಭೇಟಿ ಮಾಡಿದಾಗ, ವೈದ್ಯಕೀಯ ತಜ್ಞರು ಆಕೆ ಅಸಹಜವಾಗಿ ದೊಡ್ಡ ಅಂಡಾಶಯಗಳನ್ನು ಹೊಂದಿದ್ದು, ಇದು ಹೈಪರ್ ಓವ್ಯುಲೇಷನ್ ಎಂಬ ಸ್ಥಿತಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಇಂತವರಿಗೆ ಗರ್ಭನಿರೋಧಕ ಮಾತ್ರೆಗಳು ಕೆಲಸ ಮಾಡುವುದಿಲ್ಲ ಮತ್ತು ತೀವ್ರ ಆರೋಗ್ಯ ಪರಿಸ್ಥಿತಿಗಳನ್ನು ಉಂಟುಮಾಡಬಹುದು ಎಂದು ಮಾಹಿತಿ ನೀಡಿದರು. ಮುಲಾಗೊ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ ಚಾರ್ಲ್ಸ್ ಕಿಗ್ಗುಂಡು, ಮರಿಯಮ್‌ನ ತೀವ್ರ ಫಲವತ್ತತೆಗೆ ಅನುವಂಶೀಯತೆ ಪ್ರಮುಖ ಕಾರಣ ಎಂದಿದ್ದಾರೆ.
ಇದು ಅಮ್ಮನ ಜಗತ್ತು: ಮಗಳನ್ನು ಸಾಕುವ ಸಲುವಾಗಿ 30 ವರ್ಷಗಳ ಕಾಲ ಗಂಡಸಿನಂತೆ ವೇಷ ಧರಿಸಿದ್ದ ಮಹಿಳೆ!
ಕಿಡ್ನಿ ಸ್ಟೋನ್ಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆ ಗರ್ಭಿಣಿಯಾಗಿರುವುದನ್ನು ತಿಳಿದುಕೊಂಡಳು. ನಿಗೂಢ ಗರ್ಭಧಾರಣೆಯ
ಹೆಚ್ಚುವರಿಯಾಗಿ, ನಬಟಾಂಜಿಯ ಫಲವತ್ತತೆ ಅನುವಂಶಿಕವಾಗಿದೆ ಎಂದು ಕಂಡುಬಂದಿದೆ. 'ಅವಳ ಪ್ರಕರಣವು ಹೈಪರ್-ಅಂಡೋತ್ಪತ್ತಿಗೆ ಒಂದು ಆನುವಂಶಿಕ ಪ್ರವೃತ್ತಿಯಾಗಿದೆ.ಒಂದು ಚಕ್ರದಲ್ಲಿ ಅನೇಕ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತದೆ. ಇದು ಬಹು ಜನನಗಳನ್ನು ಹೊಂದುವ ಸಾಧ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ' ಎಂದು ಸ್ತ್ರೀರೋಗತಜ್ಞ ಡಾ ಚಾರ್ಲ್ಸ್ ಕಿಗ್ಗುಂಡು ಹೇಳಿದರು. ಇದಲ್ಲದೆ, ಮಹಿಳೆ ತನ್ನ ಫಲವತ್ತತೆಯನ್ನು ಕಡಿಮೆ ಮಾಡಲು ಜನ್ಮ ನೀಡುತ್ತಲೇ ಇರಬೇಕೆಂದು ತಿಳಿಸಲಾಯಿತು.
ಒಂದೇ ಬಾರಿಗೆ 5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ!
ಹೆಣ್ಣು (Women) ಸಾಮಾನ್ಯವಾಗಿ ಏಕಕಾಲದಲ್ಲಿ ಒಂದು ಮಗುವಿಗೆ ಜನ್ಮ ನೀಡುವುದು ಸಹಜವಾಗಿದೆ. ಆದರೆ, ಪೋಲೆಂಡ್ ನಿವಾಸಿಯಾಗಿರುವ 37 ವರ್ಷದ ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಹೆಸರು ಡೊಮಿನಿಕಾ ಕ್ಲಾರ್ಕ್. ಡೊಮಿನಿಕಾ ಕ್ಲಾರ್ಕ್ ತನ್ನ ಗರ್ಭಧಾರಣೆಯ 28 ನೇ ವಾರದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದಳು. ಅದರಲ್ಲಿ ಮೂವರು ಹುಡುಗಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳು ಸಿಸೇರಿಯನ್ ಮೂಲಕ ಮಹಿಳೆಗೆ ಜನಿಸಿದೆಯಂತೆ . ಹುಟ್ಟಿದ ಎಲ್ಲಾ ಮಕ್ಕಳ ತೂಕ 710 ರಿಂದ 1400 ಗ್ರಾಂ ಹೊಂದಿದೆ. ಮಹಿಳೆ ಎಂಟನೇ ಮಗುವನ್ನು ಬಯಸಿ ಗರ್ಭವತಿ (Pregnant)ಯಾಗಿದ್ದರು. ಆದರೆ ಅವರು ಬಯಸಿದ್ದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಇದೀಗ ಒಮ್ಮಲೇ ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ.