ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಳ್ ಅವರು ತಮ್ಮ ಮದುವೆಯಾದ 15 ದಿನಗಳ ನಂತರ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡಿದ್ದರು.

ಚೆನ್ನೈ (ಮೇ. 14): ಅಚ್ಚರಿಯ ವಿಚಾರದಲ್ಲಿ, ತಮಿಳುನಾಡಿನ (Tamil Nadu) ತೂತುಕುಡಿ (Thoothukudi) ಜಿಲ್ಲೆಯ ತಾಯಿಯೊಬ್ಬಳು (Women) ತನ್ನ ಮಗಳನ್ನು ಬೆಳೆಸುವ ಸಲುವಾಗಿ 30 ವರ್ಷಗಳ ಕಾಲ ಪುರುಷನ ವೇಷ ಧರಿಸಿದ್ದಳು ಎನ್ನುವುದು ಬಹಿರಂಗವಾಗಿದೆ. 

ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಳ್ (Pechiyammal) ಅವರು ತಮ್ಮ ಮದುವೆಯಾದ 15 ದಿನಗಳ ನಂತರ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡಿದ್ದರು. ಅವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಪೆಚ್ಚಿಯಮ್ಮಲ್ ಕೆಲಸ ಮಾಡಲು ಪ್ರಾರಂಭಿಸಿದಳು, ಆದರೆ ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳವನ್ನು ಎದುರಿಸಿದ್ದಳು. ಮರುಮದುವೆಯಾಗದೇ ತಾನೊಬ್ಬಳೇ ತನ್ನ ಮಗಳನ್ನು ಬೆಳೆಸುವ ನಿಟ್ಟಿನಲ್ಲಿ ತಾನೇ ಗಂಡಸಿನ ವೇಷ ಹಾಕಿ ನಿರ್ಧರಿಸಿ ಬರೋಬ್ಬರಿ 30 ವರ್ಷ ಇದನ್ನು ಸಂಭಾಳಿಸಿದ್ದರು.

ಹೇಗಿತ್ತು ಬದಲಾವಣೆ?: ಅವಳು ತನ್ನ ಕೂದಲನ್ನು ಕ್ರಾಪ್ ಮಾಡಿ ಲುಂಗಿ ಮತ್ತು ಶರ್ಟ್ ಧರಿಸಿ ಗಂಡಸಿನಂತೆ ಕಾಣಲು ಪ್ರಾರಂಭಿಸಿದ್ದಳು. ಕಳೆದ ಮೂರು ದಶಕಗಳಲ್ಲಿ ಮುತ್ತು (Muthu ) ಎನ್ನುವ ಹೆಸರಿನಲ್ಲಿ ಅವರು ಚೆನ್ನೈ ಮತ್ತು ತೂತುಕುಡಿಯ ಹೋಟೆಲ್‌ಗಳು, ಟೀ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. ಅವಳು ಕೆಲಸ ಮಾಡಿದಲ್ಲೆಲ್ಲಾ ಅವಳನ್ನು 'ಅನ್ನಾಚಿ' (ಪುರುಷನ ಸಾಂಪ್ರದಾಯಿಕ ಹೆಸರು) ಎಂದು ಕರೆಯಲಾಗುತ್ತಿತ್ತು. ಮುತ್ತು ಅವರು ಪರೋಟಾ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರನ್ನು ನಂತರ 'ಮುತ್ತು ಮಾಸ್ಟರ್' (Muthu Master) ಎಂದೇ ಕರೆಯಲಾಗುತ್ತಿತ್ತು.

'ನಾನು ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ 100 ದಿನದ ಕೆಲಸದವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಚಿತಪಡಿಸಿಕೊಳ್ಳಲು ನಾನು ಪ್ರತಿ ಪೈಸೆಯನ್ನೂ ಉಳಿಸಿದೆ. ದಿನಗಳ ನಂತರ, ಮುತ್ತು ನನ್ನ ಗುರುತಾಗಿ ಬದಲಾದರು, ಅದು ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಇದು ಉಲ್ಲೇಖಿಸಲ್ಪಟ್ಟಿದೆ' ಎಂದು ಪೇಚಿಯಮ್ಮಳ್ ಹೇಳುತ್ತಾರೆ.

ಆರಂಭದಲ್ಲಿ ಇದು ಕಠಿಣವಾಗಿತ್ತು ಎಂದು ಪೇಚಿಯಮ್ಮಳ್ ಹೇಳುತ್ತಾರೆ. 'ನನ್ನ ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಾನು ಈ ತೊಂದರೆಯನ್ನು ಎದುರಿಸಲು ನಿರ್ಧರಿಸಿದೆ. ನನ್ನ ಜೀವನೋಪಾಯಕ್ಕಾಗಿ ನಾನು ಹೆಚ್ಚು ಪ್ರಯಾಣಿಸುತ್ತಿದ್ದ ಸಮಯದಲ್ಲಿ ಪುರುಷನ ವೇಷವು ನನ್ನ ಕೆಲಸದ ಸ್ಥಳದಲ್ಲಿ ನನ್ನನ್ನು ಸುರಕ್ಷಿತವಾಗಿರಿಸಿತು. ನನ್ನ ಗುರುತನ್ನು ನಿಜವಾಗಿಸಲು, ನಾನು ಯಾವಾಗಲೂ ಬಸ್‌ಗಳಲ್ಲಿ ಪುರುಷರ ಬದಿಯಲ್ಲೇ ಕೂರುತ್ತಿದೆ. ನಾನು ಪುರುಷರ ಶೌಚಾಲಯವನ್ನು ಬಳಸಿದ್ದೇನೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಿದ್ದರೂ, ನಾನು ಪ್ರಯಾಣ ದರವನ್ನು ಪಾವತಿಸಿದ್ದೇನೆ' ಎಂದು ಅವರು ಹೇಳಿದರು.

ಕಚೇರಿಯಲ್ಲಿ ಬೋಳು ತಲೆ ಎಂದು ಕರೆಯುವುದು ಲೈಂಗಿಕ ಕಿರುಕುಳ!

ನನ್ನ ಆಸೆಗಳು ಈಡೇರಿದವು: 57 ವರ್ಷದ ಪೇಚಿಯಮ್ಮಳ್ ಈಗ ನೆಮ್ಮದಿಯಲ್ಲಿದ್ದಾರೆ. 'ನನ್ನ ಮಗಳ ಮದುವೆಯಾಗಿದೆ. ನನ್ನ ಎಲ್ಲಾ ಆಸೆಗಳನ್ನು ನಾನು ಪೂರೈಸಿದ್ದೇನೆ ಎಂದು ಅಂದುಕೊಂಡಿದ್ದೇನೆ. ನನ್ನ ಸಸಾವಿನ ಬಳಿಕವೂ ನಾನು ಹೀಗೆ ಗುರುತಿಸಿಕೊಳ್ಳಬೇಕು ಎಂದು ಬಯಸುತ್ತೇನೆ. ಸರ್ಕಾರದಿಂದ ಪಿಂಚಣಿ ಸಿಕ್ಕರೆ ನನ್ನ ಉಳಿದ ಜೀವನವನ್ನು ಗಂಡಸಿನಂತೆಯೇ ಕಳೆಯುತ್ತೇನೆ. ನಾನು ಅನೇಕ ಯೋಜನೆಗಳಿಗೆ ಅನರ್ಹಳಾಗಿದ್ದೇನೆ ಎಂದು ಹೇಳಿದ್ದಾರೆ.

ಅಣ್ಣನ ಮಕ್ಕಳಿಗೆ ತಂದೆಯಾದ ಚಿಕ್ಕಪ್ಪ, ಅತ್ತಿಗೆ ಜೊತೆ ಮದುವೆ, ಮಕ್ಕಳಿಗಾಗಿ 'ಸಪ್ತಪದಿ' ತುಳಿದ ಜೋಡಿ!

ಅವಳ ಕಷ್ಟಗಳ ಬಗ್ಗೆ ಒಂದೆರಡು ಜನರಿಗೆ ಮತ್ತು ಅವಳ ಮಗಳು ಷಣ್ಮುಗಸುಂದರಿಗೆ (Shanmugasundari) ಮಾತ್ರ ತಿಳಿದಿತ್ತು. "ಅವಳು ತನ್ನ ಜೀವನವನ್ನು ನನಗೆ ಮುಡಿಪಾಗಿಟ್ಟಳು. ಅವಳು ಭತ್ಯೆಯನ್ನು ಪಡೆಯುತ್ತಾಳೆ ಎಂದು ನಾನು ಭಾವಿಸುತ್ತೇನೆ' ಎಂದು ಷಣ್ಮುಗಸುಂದರಿ ಹೇಳುತ್ತಾರೆ.