Asianet Suvarna News Asianet Suvarna News

Ayurvedaದ ಈ ಐದು ಸೂತ್ರ ಪಾಲಿಸಿದರೆ ನಿಮಗೆ ವಯಸ್ಸಾಗುವುದೇ ಇಲ್ಲ!

ದೇಹಕ್ಕೆ ವಯಸ್ಸಾಗುತ್ತದೆ. ಆದರೆ ಮುಖದ ವಯಸ್ಸಾಗುವಿಕೆಯನ್ನು ಸಾಧ್ಯವಾದಷ್ಟು ಮುಂದೂಡಲು ಆಯುರ್ವೇದದಲ್ಲಿ ಕೆಲವು ಸೂತ್ರಗಳಿವೆ. ಅವು ಹೀಗಿವೆ ನೋಡಿ.
 

These five Ayurveda Skin hacks will protect you from aging
Author
Bengaluru, First Published Mar 26, 2022, 2:39 PM IST

ಆಯುರ್ವೇದ (Ayurveda) ಪ್ರಾಚೀನ ವಿಜ್ಞಾನ (Science) ವೆಂದೇ ಪ್ರಪಂಚದಾದ್ಯಂತ ಅಂಗೀಕೃತವಾಗಿದೆ. ಹೆಚ್ಚು ಅನುಸರಿಸಲ್ಪಟ್ಟಿದೆ. ಕೊರಿಯಾದ ಸೌಂದರ್ಯ ಉತ್ಪನ್ನಗಳು (Beauty products) ಕೂಡ ಆಯುರ್ವೇದದಲ್ಲಿ ಉಲ್ಲೇಖಿಸಲಾದ ಸೌಂದರ್ಯವರ್ಧಕ ಸಾಮಗ್ರಿಗಳಿಂದ ಮಾಡಲ್ಪಟ್ಟಿದೆ ಎಂಬುದು ನಿಮಗೆ ತಿಳಿದಿರಲಿ. ಸೌಂದರ್ಯವರ್ಧನೆಯ ನೈಸರ್ಗಿಕ ಮಾರ್ಗದಿಂದ ಹಿಡಿದು ಒಟ್ಟಾರೆ ಆರೋಗ್ಯದ ಹೆಚ್ಚಿಸುವ ವರೆಗೆ ಅದರ ಸಮಗ್ರ ವಿಧಾನಗಳ ಉಪಯೋಗಗಳು ನಮ್ಮನ್ನು ಆಶ್ಚರ್ಯಚಕಿತಗೊಳಿಸುವಂತೆ ಇವೆ. ನಿಮ್ಮ ಮುಖಕ್ಕೆ ವಯಸ್ಸಾಗುವಿಕೆಯನ್ನು ತಡೆಯಲು ನೀವು ಈ ಐದು ಆಯುರ್ವೇದ ಸ್ಕಿನ್ ಹ್ಯಾಕ್ಸ್ ಅನ್ನು ಪ್ರಯತ್ನಿಸಬಹುದು.

ಶ್ರೀಗಂಧದ ಪುಡಿ (Sandalwood)

ಅರ್ಧ ಚಮಚ ಶ್ರೀಗಂಧದ ಪುಡಿಗೆ ಕೆಲವು ಹನಿ ನೀರು ಸೇರಿಸಿ. ಈ ಪೇಸ್ಟ್ ಅನ್ನು ಮುಖ, ಕುತ್ತಿಗೆಗೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ. ಇದು ಮೊಡವೆಗಳನ್ನು ನಿರೋಧಿಸುತ್ತದೆ. ಎಣ್ಣೆಯುಕ್ತ ಚರ್ಮವನ್ನು ಕಾಪಾಡುತ್ತದೆ. ಮುಖದಲ್ಲಿ ಬೀಳುವ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.

ಮಾನವನ ರಕ್ತದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದ ಸೂಕ್ಷ್ಮ ಪ್ಲಾಸ್ಟಿಕ್, ವಿಜ್ಞಾನಿಗಳ ಎಚ್ಚರಿಕೆ!

ನಿಂಬೆ ರಸ, ಗೋಧಿ ಹಿಟ್ಟು, ಅರಿಶಿನ ಪುಡಿ (Lemon, Wheat flour, Turmeric)

ಈ ಮೂರೂ ಪದಾರ್ಥಗಳನ್ನು ಮಿಶ್ರಣ ಮಾಡಿ. ನಿಂಬೆ ರಸದ ಬದಲಿಗೆ ಮೊಸರು ಬಳಸಬಹುದು. ಮುಖದ ಮೇಲೆಲ್ಲಾ ಹಚ್ಚಿ ಒಣಗಲು ಬಿಡಿ. ನಿಂಬೆ ರಸದಲ್ಲಿರುವ ಆಮ್ಲಗಳು ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಿ ಮೈಬಣ್ಣವನ್ನು ಹೊಳಪುಗೊಳಿಸುತ್ತದೆ. ಅರಿಶಿನವು ನಿಮ್ಮ ಮುಖವನ್ನು ಕಾಂತಿಯುತವಾಗಿಸುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಅಗತ್ಯವಾದ ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ.

ಹಾಲು (Milk)

ಹಾಲು ಅತ್ಯುತ್ತಮವಾದ ತೈಲಮುಕ್ತ ಕ್ಲೆನ್ಸರ್ (Cleanser)  ಆಗಿದೆ ಮತ್ತು ಇದು ಚರ್ಮವನ್ನು (Skin) ಒಣಗಿಸುವುದಿಲ್ಲ. ನಿಮ್ಮ ಮುಖವನ್ನು ಹಾಲಿನಿಂದ ತೊಳೆಯಿರಿ, ಇದರಿಂದ ರೋಮದ ಸೂಕ್ಷ್ಮ ರಂಧ್ರಗಳು ಮೇದೋಗ್ರಂಥಿಗಳ ಸ್ರಾವ ಅಥವಾ ಎಣ್ಣೆಯಿಂದ ಮುಚ್ಚಿಹೋಗುವುದಿಲ್ಲ.

ತೂಕ ಇಳಿಸಿಕೊಂಡ Smriti Irani, ಈಕೆಯ ಬಹುಮುಖ ಪ್ರತಿಭೆ ಇಲ್ಲಿದೆ ನೋಡಿ!

ಜೇನುತುಪ್ಪ (Honey)

ಒಣ ತ್ವಚೆ ಮಾತ್ರವಲ್ಲ, ಎಣ್ಣೆಯುಕ್ತ ಚರ್ಮಕ್ಕೂ ಮಾಯಿಶ್ಚರೈಸಿಂಗ್ ಅಗತ್ಯವಿದೆ. ಜೇನುತುಪ್ಪವು ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ (Moisturiser) ಆಗಿದೆ. ಜೇನುತುಪ್ಪದ ತೆಳುವಾದ ಪದರವನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ.

ಶ್ರೇಯಸಿ ನಿಶಾಂಕ್: ಮಿಲಿಟರಿ ಸೇರಿದ ಮಂತ್ರಿಯ ಮಗಳು

ಮುಲ್ತಾನಿ ಮಿಟ್ಟಿ (Multhani Mitty)

ಒಂದು ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ. ಸುಮಾರು ಮೂರು ಟೇಬಲ್ ಸ್ಪೂನ್‌ಗಳನ್ನು ರೋಸ್ ವಾಟರ್‌ನೊಂದಿಗೆ ಮಿಶ್ರಣ ಮಾಡಿ. ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಪ್ಯಾಕ್ ಸಂಪೂರ್ಣವಾಗಿ ಒಣಗಿದ ನಂತರ ಮುಖವನ್ನು ತೊಳೆಯಿರಿ. ಇದು ನಿಮಗೆ ತೈಲ ಮುಕ್ತ, ನಯವಾದ ಮತ್ತು ಸ್ಪಷ್ಟವಾದ ಚರ್ಮವನ್ನು ನೀಡುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿ ಅಮೂಲ್ಯವಾದ ಗಿಡಮೂಲಿಕೆಗಳ ಅಂಶಗಳಿರುತ್ತವೆ.


 

Follow Us:
Download App:
  • android
  • ios