ತೂಕ ಇಳಿಸಿಕೊಂಡ Smriti Irani, ಈಕೆಯ ಬಹುಮುಖ ಪ್ರತಿಭೆ ಇಲ್ಲಿದೆ ನೋಡಿ!
ರಾಜಕಾರಣಿ, ಒಂದು ಕಾಲದ ನಟಿ ಸ್ಮೃತಿ ಇರಾನಿ ತಮ್ಮ ತೂಕವನ್ನು ಸಾಕಷ್ಟು ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ಈಗ ಅವರು ವೇಟ್ ಕಂಟ್ರೋಲ್ ಎಕ್ಸ್‌ಪರ್ಟ್. ಹಾಗೇ ಅವರ ಇತರ ಪ್ರತಿಭೆಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ.
ವೇಟ್ ಲಾಸ್ ಜರ್ನಿ
ಸ್ಮೃತಿ ಇರಾನಿ (Smriti Irani) ರಾಜಕೀಯ ಸೇರಿದ ಬಳಿಕ ವರ್ಕ್ಔಟ್ ಮಾಡಲು ಸಮಯವಿಲ್ಲದ್ದಕ್ಕೋ, ಅನಿಯಮಿತ ಸಮಯದ ಊಟ ಉಪಾಹಾರಗಳ ಕಾರಣವೋ ಏನೋ, ಸಾಕಷ್ಟು ದಪ್ಪಗಾಗಿದ್ದರು. ಆದರೆ ಈಗ ತಮ್ಮ ದೇಹದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಸಾಕಷ್ಟು ಸಮಯ ದೊರೆತಂತಿದೆ. ಇತ್ತೀಚೆಗೆ ಅವರು ತಮ್ಮ ಪ್ರೊಫೈಲ್ ಪಿಕ್ (Profile pic) ಚೇಂಜ್ ಮಾಡಿಕೊಂಡಾಗ ಎಲ್ಲರೂ ಹುಬ್ಬೇರಿಸಿದ್ದರು. ಯಾಕೆಂದರೆ ದಪ್ಪಗಿದ್ದ ಸ್ಮೃತಿ ಬಳುಕುವ ಬಳ್ಳಿಯಂತಾಗಿದ್ದರು. ಅದನ್ನು ನೋಡಿ ಅವರ ಬಹುಕಾಲದ ಫ್ರೆಂಡ್ ಏಕ್ತಾ ಕಪೂರ್ (Ektha Kapoor) ಸೇರಿದಂತೆ ಹಲವರು ಅಚ್ಚರಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸ್ಮೃತಿಯ ಈ ವೇಟ್ ಲಾಸ್ (Weight Loss) ಹಿಂದೆ ಬಹುದಿನಗಳ ಶ್ರಮವಿದೆ. ಅವರು ಗ್ಲುಟೆನ್ (Gluten) ಫ್ರೀ ಡಯಟ್ (Diet) ಸೇವಿಸುತ್ತಾರೆ. ಅದರೆ ಗೋಧಿ, ಮೈದಾ ಸೇವಿಸುವುದಿಲ್ಲ. ಡೇರಿ ಉತ್ಪನ್ನಗಳನ್ನು ಸೇವಿಸುವುದಿಲ್ಲ. ದಿನ ಬೆಳಗ್ಗೆ ಯೋಗ (Yoga) ಹಾಗೂ ಸಂಜೆ ಆರೇಳು ಕಿಲೋಮೀಟರ್ ವಾಕಿಂಗ್ ಮಾಡುತ್ತಾರೆ. ಬೆಳಗ್ಗಿನ ಉಪಾಹಾರಕ್ಕೆ ಕಾರ್ಬೊಹೈಡ್ರೇಟ್ (Carbohydrate) ತ್ಯಜಿಸಿದ್ದಾರೆ. ಅದರ ಬದಲು ಪ್ರೊಟೀನ್ (Protiene) ಇರುವ ಆಹಾರ ಮತ್ತು ತರಕಾರಿ ಸೇವಿಸುತ್ತಾರೆ. ಮಧ್ಯಾಹ್ನ ಹಣ್ಣಿನ ಜ್ಯೂಸ್ (Juice) ಅಥವಾ ಕಷಾಯ (Kadha) . ರಾತ್ರಿ ಪುನಃ ಹಣ್ಣು (Fruits) ಮತ್ತು ತರಕಾರಿ (vegetables). ಹಾಲು, ತುಪ್ಪ ಸೇವನೆ ಇಲ್ಲ. ಯಾವುದೇ ಕರಿದ ಪದಾರ್ಥ ಸೇವಿಸುವುದಿಲ್ಲ.
ಇದೆಲ್ಲದರಿಂದ ಅವರು ಪಡೆದ ಆರೋಗ್ಯ ಅವರ ಮುಖದಲ್ಲಿ ಈಗ ಫಳಫಳಿಸುತ್ತಿದೆ. ಅದನ್ನು ಅವರು ಎಲ್ಲೂ ಹೇಳಿಕೊಂಡಿಲ್ಲವಾದರೂ, ಅವರು ತಮ್ಮ ಗೆಳತಿಯರ ಗುಂಪಿನಲ್ಲಿ ತೆಗೆದುಕೊಂಡ ಫೋಟೋಗಳಲ್ಲಿ, ಅವರ ಸೆಲ್ಫಿಗಳಲ್ಲಿ ವ್ಯಕ್ತವಾಗಿದೆ. ಅವರ ಆಪ್ತ ಗೆಳತಿ ಏಕ್ತಾ ಕಪೂರ್ ಅಂತೂ 'ವ್ಹಾಟ್ ಎ ಸ್ಟನ್ನಿಂಗ್ ವೇಟ್ ಲಾಸ್ ಜರ್ನಿ' ಎಂದು ಸ್ಮೃತಿಯ ಫೋಟೋದ ಕೆಳಗೆ ಕಾಮೆಂಟ್ ಬರೆದಿದ್ದಾರೆ.
ರೆಸ್ಟೋರೆಂಟ್ ಕ್ಲೀನ್ ಮಾಡುವುದರಿಂದ ಫೇಮಸ್ ನಟಿಯಾಗಿ ಈಗ ಕೇಂದ್ರ ಸಚಿವೆ; Smriti Irani ಜರ್ನಿ
ಸೆನ್ಸ್ ಆಫ್ ಹ್ಯೂಮರ್ (Sense of humor)
ಸ್ಮೃತಿ ಇರಾನಿಯ ಹಾಸ್ಯಪ್ರಜ್ಞೆ ಅದ್ಭುತ. ಕೆಲವೊಮ್ಮೆ ತಮ್ಮ ಅಭಿನಯದ ಹಳೇ ಕ್ಲಿಪ್ಪಿಂಗ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿ ಮಜಾ ತೆಗೆದುಕೊಳ್ಳುವುದು ಉಂಟು. ಹಾಗೇ ತಮ್ಮ ಆಕ್ಟಿಂಗ್ ವಲಯದ ಗೆಳಯ ಗೆಳತಿಯರ ಕಾಲೆಳೆಯುವುದೂ ಇದೆ. ಇತ್ತೀಚೆಗೆ ಒಂಧು ಮೀಮ್ ಹಾಕಿ, ''ನಿಮ್ಮ ಫ್ರೆಂಡ್ಸ್‌ಗೆ ಏನು ಗೊತ್ತು ಅಂತ ನಿಮಗೆ ಗೊತ್ತು. ಆದ್ರೆ ಅದು ನಿಮಗೆ ಗೊತ್ತು ಅಂತ ಅವರಿಗೆ ಗೊತ್ತಿಲ್ಲ. ವೀಕೆಂಡ್ ಬಂತು.'' ಅಂತ ಬರೆದುಕೊಂಡಿದ್ದರು.
ಸೆಲ್ಫಿ ಕ್ರೇಜ್ (Selfie)
ತುಂಬಾ ನಟಿಯರಂತೆ ಸ್ಮೃತಿಗೂ ಸೆಲ್ಫಿ ಅಂದ್ರೆ ತುಂಬಾ ಇಷ್ಟ. ಮಾಸ್ಕ್ ಧರಿಸಿ, ಮಾಸ್ಕ್ ಧರಿಸದೆಯೂ ತೆಗೆದ ಹಲವು ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇತ್ತೀಚೆಗೆ ಅವರು ಹಾಕಿಕೊಂಡು ಸೆಲ್ಫಿಗಳಲ್ಲಿ ಸ್ಲಿಮ್ ಆಗುತ್ತಿರುವ ಅವರ ಮುಖದ ದವಡೆಯ ಅಂಚು ಕಾಣಿಸುವಂತಿದೆ.
Sonam Kapoor ಮಾತ್ರ ಅಲ್ಲ, Katrina Kaif ಸಹ ಇಷ್ಟು ಬೇಗ ಅಮ್ಮ ಆಗ್ತಿದಾರಾ?
ಸ್ಫೂರ್ತಿಯು ಕೋಟ್‌ಗಳು
''ನಿಮ್ಮ ಫೋನ್ ಚೆಕ್ ಮಾಡಲು ಮರೆತುಬಿಡುವಂಥ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡುತ್ತಿರಿ'' ''ಇನ್ನೊಬ್ಬ ವ್ಯಕ್ತಿಯ ಕಹಿ, ಕ್ಷುದ್ರತೆ, ಸಣ್ಣತನ, ಅಭದ್ರತೆಗಳಿಗೆ ನೀವು ಸಂತ್ರಸ್ತರಾದರೆ, ನೆನಪಿಡಿ, ನೀವು ಅದಕ್ಕಿಂತಲೂ ಇನ್ನೂ ಕಳಪೆ ಸ್ಥಿತಿಗೆ ಹೋಗಬಹುದು- ಆ ವ್ಯಕ್ತಿಯೇ ನೀವಾಗಬಹುದು'' ಎಂಬಂತ ನೆನಪಿಡಬೇಕಾದ, ಸ್ಫೂರ್ತಿಯುತ ಮಾತುಗಳನ್ನು ಸ್ಮೃತಿ ಇರಾನಿ ಆಗಾಗ ತಮ್ಮ ವಾಲ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸರಳ ಜೀವನ (Simple Lifestyle)
ಸ್ಮೃತಿ ಇರಾನಿ ಲೈಫ್‌ಸ್ಟೈಲ್ ತುಂಬ ಸರಳ. ದುಪ್ಪಟ್ಟಾದ ಮೇಲೆ ಒಂದು ಶಾಲು ಹೊದ್ದುಕೊಂಡು, ಚಪ್ಪಲ್ ಧರಿಸಿಕೊಂಡು ಜೂಮ್ ಮೀಟಿಂಗ್ ಅಟೆಂಡ್ ಮಾಡುತ್ತಿರುವುದನ್ನು ಕಂಡವರಿದ್ದಾರೆ. ಮನೆಯಂತೆ ತಮ್ಮ ಕಚೇರಿಯಲ್ಲೂ ಅವರು ಸಾದಾ ಸೀದಾ. ಕುಟುಂಬದ ಜೊತೆಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಪತಿ ಜುಬಿನ್, ಮಕ್ಕಳಾದ ಜೊಹ್ರ್, ಜೋಯಿಶ್ ಮತ್ತು ಶೆನೆಲ್ಲೆ ಜೊತೆಗೆ ಕಳೆಯುವ ಫ್ಯಾಮಿಲಿ ಟೈಮಿನ ಫೋಟೋ ತೆಗೆದು ಹಂಚಿಕೊಳ್ಳುವುದುಂಟು. ಆ ವಿಚಾರದಲ್ಲಿ ಅವರು ಮುಕ್ತ ಮುಕ್ತ.
ವಿವಾದಗಳ ರಾಣಿ Kangana Ranaut ಹಾಟ್ ಬಿಕಿನಿ ಫೋಟೋಗಳು