Asianet Suvarna News Asianet Suvarna News

ಮಾನವನ ರಕ್ತದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದ ಸೂಕ್ಷ್ಮ ಪ್ಲಾಸ್ಟಿಕ್, ವಿಜ್ಞಾನಿಗಳ ಎಚ್ಚರಿಕೆ!

ಇದೇ ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಕಂಡು ಬಂದ ಸೂಕ್ಷ್ಮಾತಿಸೂಕ್ಷ್ಮ ಪ್ಲಾಸ್ಟಿಕ್

ಈ ಕಣಗಳು ದೇಹದಲ್ಲಿ ಸಂಚಾರಗೊಂಡು ಅಂಗಗಳಲ್ಲಿ ನೆಲೆಯಾಗಬಹುದು

ಸಂಶೋಧನೆಯ ಬಳಿಕ ಎಚ್ಚರಿಕೆ ನೀಡಿದ ವಿಜ್ಞಾನಿಗಳು

Microplastic pollution has been detected in human blood for the first time scientists warn particles could travel around the body san
Author
Bengaluru, First Published Mar 25, 2022, 11:04 AM IST

ಆಂಸ್ಟರ್‌ಡ್ಯಾಮ್‌ (ಮಾ. 25): ಮಾನವನ ರಕ್ತದಲ್ಲಿ(Human Blood) ಇದೇ ಮೊದಲ ಬಾರಿಗೆ ಮೈಕ್ರೋಪ್ಲಾಸ್ಟಿಕ್ ಗಳು (Microplastic) ಕಂಡು ಬಂದಿವೆ. ಇದಕ್ಕೂ ಮುನ್ನ ಮಾನವನ ಮೆದುಳು, ಕರುಳು, ಶಿಶುಗಳ ಭ್ರೂಣ, ವಯಸ್ಕರು ಹಾಗೂ ಶಿಶುಗಳ ಮಲದಲ್ಲಿ ಕಂಡುಬರುತ್ತಿದ್ದ ಸೂಕ್ಷ್ಮಾತಿಸೂಕ್ಷ್ಮ ಪ್ಲಾಸ್ಟಿಕ್ ಗಳು ಇದೇ ಮೊದಲ ಬಾರಿಗೆ ಮಾನನವ ರಕ್ತದಲ್ಲಿ ಕಂಡು ಬಂದಿದೆ ಎಂದು ನೆದರ್ಲೆಂಡ್ ನ ಸಂಶೋಧಕರು (Dutch Researchers) ಹೇಳಿದ್ದಾರೆ. ಅದರೊಂದಿಗೆ ಬಹುದೊಡ್ಡ ಎಚ್ಚರಿಕೆಯನ್ನೂ ಮಾನವರಿಗೆ ನೀಡಿದ್ದು, ಈ ಮೈಕ್ರೋಪ್ಲಾಸ್ಟಿಕ್ ಗಳು ದೇಹದಲ್ಲಿ ಸಂಚಾರಗೊಂಡು ಅಂಗಗಳಲ್ಲಿ ನೆಲೆಯಾಗುವುದು ಮಾತ್ರವಲ್ಲ, ಅಂಗಗಳಿಗೆ ರಕ್ತ ಸಂಚಾರವನ್ನು ತಡೆಹಿಡಿಯಬಹುದು ಎಂದು ಹೇಳಿದ್ದಾರೆ.

ಮೈಕ್ರೋಪ್ಲಾಸ್ಟಿಕ್‌ಗಳು - 0.2 ಇಂಚು (5 ಮಿಮೀ) ಗಿಂತ ಕಡಿಮೆ ವ್ಯಾಸದ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ತುಣುಕುಗಳು ಮಾನವ ರಕ್ತದಲ್ಲಿ ಕಂಡುಬಂದಿವೆ. ನೆದರ್‌ಲ್ಯಾಂಡ್ಸ್‌ನ ವಿಜ್ಞಾನಿಗಳು 22 ಅನಾಮಧೇಯ ಆರೋಗ್ಯವಂತ ವಯಸ್ಕ ದಾನಿಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡು ಪರಿಶೀಲನೆ ಮಾಡಿದ್ದು, ಅವುಗಳನ್ನು ಒಂದು ಇಂಚಿನ 0.00002 ಸಣ್ಣ ಕಣಗಳಿಗಾಗಿ ವಿಶ್ಲೇಷಿಸಿದ್ದಾರೆ. 22 ಸ್ವಯಂಸೇವಕರಲ್ಲಿ 17 ಮಂದಿ (ಶೇ. 77.2) ತಮ್ಮ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಅತ್ಯಂತ ಆತಂಕದ ವಿಚಾರ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೊಸ ಸಂಶೋಧನೆಗೆ ಡಚ್ ನ್ಯಾಷನಲ್ ಆರ್ಗನೈಸೇಶನ್ ಫಾರ್ ಹೆಲ್ತ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ( Dutch National Organisation for Health Research and Development) ಮತ್ತು  ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಲು ಕೆಲಸ ಮಾಡುವ ಕಾಮನ್ ಸೀಸ್ (Common Seas) ಧನಸಹಾಯವನ್ನು ನೀಡಿದೆ.


'ನಮ್ಮ ರಕ್ತದಲ್ಲಿ ಪಾಲಿಮರ್ (polymer) ಕಣಗಳಿವೆ ಎಂಬುದಕ್ಕೆ ನಮ್ಮ ಅಧ್ಯಯನವು ಮೊದಲ ಸೂಚನೆಯಾಗಿದೆ. ಇದು ಅದ್ಭುತ ಫಲಿತಾಂಶವಾಗಿದೆ' ಎಂದು ನೆದರ್‌ಲ್ಯಾಂಡ್‌ನ ವ್ರಿಜೆ ಯೂನಿವರ್ಸಿಟಿ ಆಂಸ್ಟರ್‌ಡ್ಯಾಮ್‌ನ ಅಧ್ಯಯನ ಲೇಖಕ ಪ್ರೊಫೆಸರ್ ಡಿಕ್ ವೆಥಾಕ್ (author Professor Dick Vethaak at Vrije Universiteit Amsterdam) ತಿಳಿಸಿದ್ದಾರೆ. 'ಆದರೆ ನಾವು ಸಂಶೋಧನೆಯನ್ನು ವಿಸ್ತರಣೆ ಮಾಡುವ ಅಗತ್ಯವಿದೆ. ಮಾದರಿ ಗಾತ್ರಗಳು, ಮೌಲ್ಯಮಾಪನ ಮಾಡಿದ ಪಾಲಿಮರ್‌ಗಳ ಸಂಖ್ಯೆ ಇತ್ಯಾದಿಗಳನ್ನು ಹೆಚ್ಚಿಸಬೇಕು.' ಎಂದಿದ್ದಾರೆ.

ಪೋಷಕರೇ ಎಚ್ಚರ: ಮಕ್ಕಳಲ್ಲಿ ಹೆಚ್ಚಾಗ್ತಿದೆ ಹೃದಯ ಸಂಬಂಧಿ ಸಮಸ್ಯೆ!

ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಶನಲ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು  ಪಾಲಿಮಿಥೈಲ್ ಮೆಥಾಕ್ರಿಲೇಟ್ (ಪಿಎಂಎಂಎ), ಪಾಲಿಪ್ರೊಪಿಲೀನ್ (ಪಿಪಿ), ಪಾಲಿಸ್ಟೈರೀನ್ (ಪಿಎಸ್), ಪಾಲಿಥಿಲೀನ್ (ಪಿಇ), ಮತ್ತು ಪಾಲಿಥಿಲೀನ್ ಟೆರೆಫ್ಥಲೇಟ್ (ಪಿಇಟಿ) ಎನ್ನುವ ಐದು ವಿಧದ ಪ್ಲಾಸ್ಟಿಕ್‌ಗಳನ್ನು ಪರೀಕ್ಷೆ ಮಾಡಿದೆ. 50 ರಷ್ಟು ರಕ್ತದ ಮಾದರಿಗಳಲ್ಲಿ ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಮಾದರಿಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪ್ಲಾಸ್ಟಿಕ್ ವಿಧವಾಗಿದೆ. ಪಿಇಟಿ ಎನ್ನುವುದು ಸ್ಪಷ್ಟ, ಬಲವಾದ ಮತ್ತು ಹಗುರವಾದ ಪ್ಲಾಸ್ಟಿಕ್ ಆಗಿದ್ದು, ಆಹಾರ ಮತ್ತು ಪಾನೀಯಗಳನ್ನು ಪ್ಯಾಕೇಜಿಂಗ್ ಮಾಡಲು ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ತಂಪು ಪಾನೀಯಗಳು, ನೀರು ಇವುಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗಲು ಇದನ್ನು ಬಳಕೆ ಮಾಡಲಾಗುತ್ತದೆ.

ಅದರೊಂದಿಗೆ ಕೇವಲ ಮೂರನೇ ಒಂದು ಭಾಗದಷ್ಟು (36 ಪ್ರತಿಶತ) ಪಾಲಿಸ್ಟೈರೀನ್ ಅನ್ನು ಪ್ಯಾಕೇಜಿಂಗ್ ಮತ್ತು ಶೇಖರಣೆಯಲ್ಲಿ ಬಳಸಲಾಗುತ್ತದೆ, ಆದರೆ ಸುಮಾರು ಕಾಲು (23 ಪ್ರತಿಶತ) ಪಾಲಿಥಿಲೀನ್ ಅನ್ನು ಹೊಂದಿದೆ. ಇದರಿಂದ ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗ್‌ಗಳನ್ನು ತಯಾರಿಸಲಾಗುತ್ತದೆ. ಒಬ್ಬ ವ್ಯಕ್ತಿ ಮಾತ್ರ (ಶೇ. 5) ಪಾಲಿಮಿಥೈಲ್ ಮೆಥಾಕ್ರಿಲೇಟ್ ಹೊಂದಿದ್ದು ಯಾವುದೇ ರಕ್ತದ ಮಾದರಿಗಳಲ್ಲಿ ಪಾಲಿಪ್ರೊಪಿಲೀನ್ ಇರಲಿಲ್ಲ. ಸಂಶೋಧಕರು ಒಂದೇ ರಕ್ತದ ಮಾದರಿಯಲ್ಲಿ ಮೂರು ವಿಭಿನ್ನ ರೀತಿಯ ಪ್ಲಾಸ್ಟಿಕ್ ಅನ್ನು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Mental Health: ಮಾನಸಿಕವಾಗಿ ತೊಂದರೆಯಲ್ಲಿರೋರಿಗೆ ನಿಮ್ಮ ಸಹಾಯ ಹೀಗಿರಲಿ

ಮೈಕ್ರೋಪ್ಲಾಸ್ಟಿಕ್ ಕಣಗಳು ಜೀವಕೋಶದ ಸಾವು, ಸೆಲ್ಯುಲಾರ್ ವಾಲ್ ಗೆ  ಹಾನಿ ಮತ್ತು ಮಾನವರಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು ಎಂದು 2021 ರ ಅಧ್ಯಯನವು ಕಂಡುಹಿಡಿದಿದೆ. ಅಂದಾಜಿನ ಪ್ರಕಾರ ಮಾನವ ಒಂದು ವರ್ಷದಲ್ಲಿ ಒಂದು ಸಣ್ಣ ಪ್ಲೇಟ್ ಪೂರ್ತಿ ಪ್ಲಾಸ್ಟಿಕ್ ತಿನ್ನುತ್ತಾನೆ ಎಂದು ಹೇಳಲಾಗಿದೆ. ಮೈಕ್ರೊಪ್ಲಾಸ್ಟಿಕ್‌ಗಳು ಕರುಳಿನ ಉರಿಯೂತ, ಕರುಳಿನ ಮೈಕ್ರೋಬಯೋಮ್ ಅಡಚಣೆಗಳು ಮತ್ತು ಮಾನವರಲ್ಲದ ಪ್ರಾಣಿಗಳಲ್ಲಿ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಕಳೆದ ವರ್ಷ ಪ್ರಕಟವಾದ ಮತ್ತೊಂದು ಅಧ್ಯಯನವು ಮೈಕ್ರೋಪ್ಲಾಸ್ಟಿಕ್‌ಗಳು ಮಾನವ ಜೀವಕೋಶ ಪೊರೆಗಳನ್ನು ವಿರೂಪಗೊಳಿಸಬಹುದು ಮತ್ತು ಅವುಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಕಂಡುಹಿಡಿದಿದೆ.

Follow Us:
Download App:
  • android
  • ios