ಭೂಗತ ಪಾತಕಿ ಅಂದ್ರೆ ಸಾಕು ಜನರು ಕನಸಲ್ಲೂ ಬೆಚ್ಚಿ ಬೀಳ್ತಾರೆ. ಹೀಗಿರುವಾಗ ದಾವೂದ್ ಇಬ್ರಾಹಿದ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿರುವ ಮಹಿಳೆಯೊಬ್ಬಳು ಪೋಟೋ ಎಲ್ಲೆಡೆ ವೈರಲ್ ಆಗ್ತಿದೆ. ಭೂಗತ ಪಾತಕಿಯ ಜೊತೆ ಈ ಮಹಿಳೆಗೇನು ಕೆಲಸ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ನವದೆಹಲಿ: ಕಳೆದ ನಾಲ್ಕೈದು ದಿನಗಳಿಂದ ದಾವೂದ್ ಇಬ್ರಾಹಿಂ ಜೊತೆಗೆ ಓರ್ವ ಮಹಿಳೆ ಕುಳಿತಿರೋ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗ್ತಿದೆ. ಅಂಥಾ ಭೂಗತ ಪಾತಕಿ ಜೊತೆಗೆ ಕುಳಿತು ಪೋಟೋ ಕ್ಲಿಕ್ಕಿಸಿಕೊಂಡಿರುವ ಮಹಿಳೆ ಯಾರಪ್ಪಾಅನ್ನೋ ಬಗ್ಗೆ ನೆಟ್ಟಿಗರು ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಭೂಗತ ಪಾತಕಿಯ ಜೊತೆ ಈ ಮಹಿಳೆಗೇನು ಕೆಲಸ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಲವು ಮಾಹಿತಿಗಳನ್ನು ಕಲೆ ಹಾಕಿದ ನಂತರ, ಇದು 1970ರ ದಶಕದಲ್ಲಿ ಮುಂಬೈನ ಮಾಫಿಯಾ ಡಾನ್ ಜೊತೆಗೆ ಪತ್ರಕರ್ತೆ ಶೀಲಾ ಭಟ್ ತೆಗೆದುಕೊಂಡಿರುವ ಫೋಟೋ ಎಂಬುದು ತಿಳಿದುಬಂದಿದೆ.

ಶೀಲಾ ಭಟ್‌, ಡಾನ್‌ ದಾವೂದ್‌ ಇಬ್ರಾಹಿಂ ಸಣ್ಣಮಟ್ಟದ ಕ್ರಿಮಿನಲ್ ಆಗಿದ್ದ ಸಂದರ್ಭ ನಾನು ಅವರನ್ನು ಭೇಟಿಯಾಗಿದ್ದೆ ಎಂದು ಹೇಳುತ್ತಾರೆ. ಮಾತ್ರವಲ್ಲ ಭಾರತ ಮತ್ತು ದುಬೈನಲ್ಲಿ ಎರಡು ಬಾರಿ ಅವರ ಸಂದರ್ಶನ (Interview) ಮಾಡಿರುವುದಾಗಿ ತಿಳಿಸಿದ್ದಾರೆ. ಹಿರಿಯ ಪತ್ರಕರ್ತೆ ಶೀಲಾ ಭಟ್, ಅವರು ಕಳೆದ ತಿಂಗಳು ತನ್ನ ಮತ್ತು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಅವರನ್ನು ಒಳಗೊಂಡ ಥ್ರೋಬ್ಯಾಕ್ ಚಿತ್ರವನ್ನು ಪೋಸ್ಟ್ ಮಾಡಿದ ನಂತರ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಪುಟ್ಟ ಮಗು ಎದೆಗೆ ಕಟ್ಟಿಕೊಂಡು ಝೊಮೆಟೋದಲ್ಲಿ ಫುಡ್ ಡೆಲಿವರಿ, ಮಹಿಳೆಯ ಕೆಲಸಕ್ಕೆ ಜನರ ಶಹಬ್ಬಾಸ್

ನಾಲ್ಕು ದಶಕಗಳ ಕಾಲದ ಪತ್ರಿಕೋದ್ಯಮ ವೃತ್ತಿಜೀವನ
ನಾಲ್ಕು ದಶಕಗಳ ಕಾಲದ ಪತ್ರಿಕೋದ್ಯಮ ವೃತ್ತಿಜೀವನವನ್ನು ಹೊಂದಿರುವ ಶೀಲಾ ಭಟ್ ಅವರು 1993ರ ಮುಂಬೈ ಸರಣಿ ಸ್ಫೋಟಗಳು ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಿಗೆ (Terrosim) ಬೇಕಾಗಿರುವ ಡಾನ್ ನನ್ನು ಸಂದರ್ಶಿಸಲು ದುಬೈಗೆ ಭೇಟಿ ನೀಡಿದಾಗ ಈ ಚಿತ್ರವನ್ನು 1988ರಲ್ಲಿ ತೆಗೆದುಕೊಳ್ಳಲಾಗಿದೆ. 1970ರ ದಶಕದಲ್ಲಿ ಮುಂಬೈನ ಮಾಫಿಯಾ ಡಾನ್ ಕರೀಂ ಲಾಲಾ ಜೊತೆ ಚಿತ್ರಲೇಖಾ ನಿಯತಕಾಲಿಕದಲ್ಲಿ ಶೀಲಾ ಭಟ್ ಅವರು ತೆಗೆದಿದ್ದ ಚಿತ್ರ ದಾವೂದ್ ಇಬ್ರಾಹಿಂನ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಕರೆ ಮಾಡಿದ್ದ ದಾವೂದ್, 'ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಸರ್ಕಾರಿ ರಿಮಾಂಡ್ ಹೋಮ್‌ನಲ್ಲಿ ಕರೀಂ ಲಾಲ್‌ನ ಮಂದಿ ಹೆಣ್ಣುಮಕ್ಕಳಿಗೆ (Girls) ನೀಡುತ್ತಿರುವ ಕಿರುಕುಳದ ಬಗ್ಗೆ ಬರೆಯಲು ತಿಳಿಸಿದರು' ಎಂದು ಶೀಲಾ ಭಟ್ ಹೇಳಿದರು.

'ನೀವು ಕರೀಂ ಲಾಲಾ ಅವರನ್ನು ಭೇಟಿಯಾಗಿದ್ದೀರಿ. ಅವರ ಹುಡುಗರು, ಹುಡುಗಿಯರಿಗೆ ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದರ ಕುರಿತು ದಯವಿಟ್ಟು ಬರೆಯಿರಿ'ಎಂದು ದಾವೂದ್ ಶೀಲಾ ಭಟ್‌ಗೆ ಫೋನ್ ಮೂಲಕ ಹೇಳಿದರು. 1981-82ರಲ್ಲಿ ದಾವೂದ್ ಇನ್ನು ಸಣ್ಣ ರೌಡಿಯಾಗಿದ್ದ. ಘಟನೆಯಲ್ಲಿ ಆತ ಅಪರಾಧಿಯಷ್ಟೇ ಆಗಿದ್ದ. ಆ ದೂರವಾಣಿ ಕರೆಯ ಸ್ವಲ್ಪ ಸಮಯದ ನಂತರ, ಮೊದಲ ಸಂದರ್ಶನ ನಡೆಯಿತು. ಶೀಲಾ ಭಟ್‌ ತನ್ನ ಪತಿಯೊಂದಿಗೆ ಡಾನ್‌ನ್ನು ಭೇಟಿಯಾಗಲು ಹೋದಳು.

ಐಐಟಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಪ್ರೀತಿ ಆಘಾಲಯಂ ನೇಮಕ

'ಮೊದಲು, ಅವರು ನಮ್ಮನ್ನು ಜೈಲ್ ರೋಡ್ (ಮುಂಬೈ) ಬಳಿಯ ಟ್ಯಾಂಕರ್ ಸ್ಟ್ರೀಟ್‌ಗೆ ಕರೆದರು. ನಂತರ ಅವರು ಟಿಂಟೆಡ್ ಕಿಟಕಿಗಳಿರುವ ಕಾರಿನಲ್ಲಿ ನಮ್ಮನ್ನು ಕರೆದೊಯ್ದು ನನಗೆ ತಿಳಿದಿದ್ದ ಪಕ್ಮೋಡಿಯಾ ಸ್ಟ್ರೀಟ್‌ಗೆ ಕರೆದೊಯ್ದರು. ನಂತರ ನಾನು, ನನ್ನ ಪತಿ, ದಾವೂದ್ ಮತ್ತು ದಾವೂದ್ ಸಹಾಯಕ ಛೋಟಾ ಶಕೀಲ್ ಭೇಟಿಯಾದೆವು' ಎಂದು ಶೀಲಾ ಭಟ್ ತಿಳಿಸಿದ್ದಾರೆ.

'ದಾವೂದ್ ತುಂಬಾ ಕಡಿಮೆ ಮಾತನಾಡುತ್ತಿದ್ದರು. ಕರೀಂ ಲಾಲಾ ಒಬ್ಬ ಕೆಟ್ಟ ಮನುಷ್ಯ ಎಂದು ಮಾತ್ರ ಅವನು ಹೇಳಲು ಬಯಸಿದ್ದನು' ಎಂದು ಶೀಲಾ ಹೇಳಿದ್ದಾರೆ. ಈ ಸಂದರ್ಶನದ ಕೆಲವು ವರ್ಷಗಳ ನಂತರ, ಶೀಲಾ ಭಟ್ ಮತ್ತೆ ಬರೋಡಾ ಜೈಲಿನಲ್ಲಿ ಡಾನ್ ಅನ್ನು ಭೇಟಿಯಾದರು ಎಂದು ಹೇಳಿದರು. ಜೈಲಿನಲ್ಲಿ ಫುಟ್ಬಾಲ್ ಆಡುತ್ತಿದ್ದ ದಾವೂದ್, ಮುಂಬೈನಲ್ಲಿ ಕರೀಂ ಲಾಲಾ ವ್ಯವಹಾರಗಳನ್ನು ನಡೆಸುತ್ತಿದ್ದ ಅಲಂಜೇಬ್‌ನ್ನು ಬಿಡುವುದಿಲ್ಲ' ಎಂದು ಅವರು ಹೇಳಿದರು. ಆ ನಂತರ ಮುಂದಿನ 2-3 ವರ್ಷಗಳ ವರೆಗೆ ದಾವೂದ್ ಜೊತೆ ಯಾವುದೇ ಸಂಪರ್ಕವಿರಲ್ಲಿಲ್ಲ ಎಂದು ಶೀಲಾ ಹೇಳಿದರು.

1987ರಲ್ಲಿ ದಾವೂದ್ ದುಬೈನಿಂದ.ಮತ್ತೆ ಕರೆ ಮಾಡಿದ್ದ. ಹಲವಾರು ಕರೆಗಳ ನಂತರ, ಅಪಾಯಿಂಟ್‌ಮೆಂಟ್ ಸಿಕ್ಕಿತ್ತು. ಈ ಬಾರಿ ಡ್ರಗ್ ವ್ಯವಹಾರದ ಬಗ್ಗೆ ಸಂದರ್ಶಿಸಲು 1988ರಲ್ಲಿ ಶೀಲಾಗೆ ಅವಕಾಶ ಸಿಕ್ಕಿತ್ತು. ಆದರೆ ಅವಳ ನಿಜವಾದ ಚಿಂತೆ ದಾವೂದ್‌ನನ್ನು ಭೇಟಿಯಾಗಲಿಲ್ಲ. ಈ ಸಂದರ್ಭದಲ್ಲಿ ದಾವೂದ್‌ನನ್ನು ಭೇಟಿ ಮಾಡುವುದಕ್ಕಿಂತ ಟಿಕೆಟ್‌ಗೆ (3,500 ರೂ.) ಖರ್ಚು ಮಾಡಿದ ಹಣದ ಬಗ್ಗೆ ನಾನು ಹೆಚ್ಚು ಚಿಂತೆ ಮಾಡುತ್ತಿದ್ದೆ ಎಂದು ಅವರು ಹೇಳಿದರು. ತನಗೆ ಯಾವುದೇ ಭಯವಿರಲ್ಲಿಲ್ಲ. ಈ ಹಿಂದೆ ಭೂಗತನ ಜಗತ್ತಿನ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಛೋಟಾ ರಾಜನ್, ವರದರಾಜನ್ ಮುದಲಿಯಾರ್, ಯೂಸುಫ್ ಪಟೇಲ್, ಹಾಜಿ ಅಂಥವರನ್ನು ಸಂದರ್ಶಿಸಿದ್ದೆ ಎಂದು ಶೀಲಾ ಮಾಹಿತಿ ಹೊರ ಹಾಕಿದ್ದಾರೆ

ದುಬೈನಲ್ಲಿ ಮೊದಲ ದಿನ ಹಾಗೂ ಎರಡನೇ ದಿನ ಸಂದರ್ಶನಕ್ಕೆ ದಾವೂದ್ ಅವಕಾಶ ಮಾಡಿ ಕೊಡಲ್ಲಿಲ್ಲ. 'ಅವರು ನನ್ನ ಡೈರಿಯನ್ನು ನೋಡಿದರು ಮತ್ತು ಅದನ್ನು ತೆಗೆದುಕೊಂಡರು. ನಂತರ ಅವರು ಅಲಮ್ಜೇಬ್ ಸೇರಿದಂತೆ ಮೂರು ಕೊಲೆಗಳ ಬಗ್ಗೆ ಮಾತನಾಡಿದರು. 'ನಾನು ಅವನನ್ನು ಕೊಲ್ಲದಿದ್ದರೆ ಅವನು ನನ್ನನ್ನು ಕೊಲ್ಲುತ್ತಿದ್ದನು. ನೀವು ಹೇಳಿ, ಶೀಲಾ ಜೀ, ನಾನು ಅವನನ್ನು ಕೊಲ್ಲಬಾರದಿತ್ತೇ' ಎಂದು ನನ್ನನ್ನು ಪ್ರಶ್ನಿಸಿದರು. ಆದರೆ ನಾನು ಏನೂ ಉತ್ತರಿಸಲ್ಲಿಲ್ಲ' ಎಂದು ಶೀಲಾ ಹೇಳಿದರು. 'ನಾನು ವಿಷಯಗಳನ್ನು ಹಾಗೆಯೇ ಬರೆಯುತ್ತೇನೆ ಮತ್ತು ಅವನ ಮಾತುಗಳನ್ನು ತಿರುಚುವುದಿಲ್ಲ ಎಂಬ ನಂಬಿಕೆ ಅವನಿಗೆ ಇತ್ತು' ಎಂದು ಶೀಲಾ ತಿಳಿಸಿದರು.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹಲವರು ಶೀಲಾ ಭಟ್ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.